Snap ಮ್ಯಾಪ್‌ನಲ್ಲಿ ಸ್ನೇಹಿತರಿಗಾಗಿ ಹುಡುಕುವುದು

ಫೆಬ್ರವರಿ 18, 2022

Snap ನಲ್ಲಿ, ಸ್ನೇಹಿತರು ಎಲ್ಲೇ ಇರಲಿ ಸಂಪರ್ಕಿತರಾಗಿರಲು ನಾವು ಸಹಾಯ ಮಾಡುತ್ತೇವೆ ಮತ್ತು ತಮ್ಮ ಸುತ್ತಲಿನ ಜಗತ್ತನ್ನು ಸುರಕ್ಷಿತವಾಗಿ ಹುಡುಕಲು ನಮ್ಮ ಸಮುದಾಯಕ್ಕೆ ಇನ್ನೂ ಹೆಚ್ಚಿನ ಸಲಕರಣೆಗಳನ್ನು ಒದಗಿಸಲು ನಾವು ಬಯಸುತ್ತೇವೆ. ಹಾಗಾಗಿ ಇಂದು ನಾವು, Snapchatter ಗಳು ಭೇಟಿಯಾಗಲು ತೆರಳುತ್ತಿರುವಾಗ ಅಥವಾ ರಾತ್ರಿ ವೇಳೆ ಮನೆಗೆ ಮರಳುತ್ತಿರುವಾಗ, ಇರುವಲ್ಲಿಂದಲೇ ಒಬ್ಬರನ್ನೊಬ್ಬರು ಹುಡುಕಲು ಅವರಿಗೆ ಸಹಾರ ಮಾಡುವ Snap ಮ್ಯಾಪ್‌ಗಾಗಿನ ಹೊಸ ಸುರಕ್ಷತಾ ವೈಶಿಷ್ಟ್ಯವನ್ನು ನಾವು ಪರಿಚಯಿಸುತ್ತಿದ್ದೇವೆ.
2017 ರಿಂದ, Snap ಮ್ಯಾಪ್‌ನಲ್ಲಿ ತಮ್ಮ ಸ್ನೇಹಿತರೊಂದಿಗೆ ತಮ್ಮ ಸ್ಥಳ ಹಂಚಿಕೊಳ್ಳುವುದನ್ನು ಆಯ್ಕೆ ಮಾಡಲು Snapchatter ಗಳಿಗೆ ಸಾಧ್ಯವಾಗುತ್ತಿದೆ, ಆದರೆ ಈವರೆಗೆ ಅವರ ಸ್ಥಳ ಅಪ್‌ಡೇಟ್ ಆಗಲು ಆ್ಯಪ್ ತೆರೆದಿರಬೇಕಾಗಿತ್ತು. ಈ ಹೊಸ ಟೂಲ್ Snapchatter ಗಳಿಗೆ ಅವರ ಆ್ಯಪ್ ಮುಚ್ಚಿದ್ದಾಗಲೂ ಸಹ ತಮ್ಮ ಆತ್ಮೀಯ ಸ್ನೇಹಿತರೊಂದಿಗೆ ಅವರ ನೈಜ-ಸಮಯದ ಸ್ಥಳವನ್ನು ಹಂಚಿಕೊಳ್ಳುವ ಆಯ್ಕೆಯನ್ನು ನೀಡಲಿದೆ. ಈ ಹೊಸ ಸ್ನೇಹಮಯ ವ್ಯವಸ್ಥೆಯೊಂದಿಗೆ, Snapchatter ಗಳು ಫೋನ್ ಅನ್ನು ತಮ್ಮ ಕಿಸೆಯಲ್ಲಿ ಇರಿಸಿಕೊಂಡು ಹೊರಹೋಗಬಹುದು, ಹಾಗೂ ತಾವು ಪ್ರಯಾಣದಲ್ಲಿರುವಾಗ ಅತ್ಯಂತ ಭರವಸೆ ಇಟ್ಟಿರುವ ಜನರು ತಮ್ಮ ಮೇಲೆ ನಿಗಾ ಇರಿಸಿರುತ್ತಾರೆ ಎನ್ನುವ ಆತ್ಮವಿಶ್ವಾಸವನ್ನು ಹೊಂದಬಹುದು.
Snap ಮ್ಯಾಪ್‌ನಲ್ಲಿ ಸ್ಥಳ ಹಂಚಿಕೊಳ್ಳುವಿಕೆ ಡಿಫಾಲ್ಟ್ ಆಗಿ ಯಾವಾಗಲೂ ಆಫ್ ಆಗಿತ್ತು ಮತ್ತು ಆಫ್ ಆಗಿಯೇ ಮುಂದುವರಿಯಲಿದೆ, ಅಂದರೆ ತಾವು ಎಲ್ಲಿದ್ದೇವೆ ಅನ್ನುವುದನ್ನು ಹಂಚಿಕೊಳ್ಳಲು Snapchatter ಗಳು ಪೂರ್ವಭಾವಿಯಾಗಿ ಆಯ್ಕೆ ಮಾಡಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ತಮ್ಮ ಅಸ್ತಿತ್ವದಲ್ಲಿರುವ Snapchat ಸ್ನೇಹಿತರೊಂದಿಗೆ ಮಾತ್ರ ತಾವಿರುವ ಸ್ಥಳವನ್ನು Snapchatter ಗಳು ಹಂಚಿಕೊಳ್ಳಬಹುದು – ವಿಶಾಲ Snapchat ಸಮುದಾಯಕ್ಕೆ ಅವರ ಸ್ಥಳ ಪ್ರಸಾರ ಮಾಡುವ ಆಯ್ಕೆ ಇಲ್ಲ. 
ಆತ್ಮೀಯ ಸ್ನೇಹಿತರೊಂದಿಗೆ ಸಂವಹನ ನಡೆಸುವುದಕ್ಕೆ ನಿರ್ಮಿಸಿದ ವೇದಿಕೆಯಾಗಿ, ಯುವಜನರು ಸಂಪರ್ಕಿತ ಮತ್ತು ಸುರಕ್ಷಿತವಾಗಿರಲು ಸ್ಥಳ ಹಂಚಿಕೊಳ್ಳುವಿಕೆ ಸುಲಭ ಮತ್ತು ಪರಿಣಾಮಕಾರಿ ವಿಧಾನವಾಗಬಹುದು ಎನ್ನುವುದು ನಮಗೆ ತಿಳಿದಿದೆ. ವಾಸ್ತವದಲ್ಲಿ, ನಮ್ಮ ಸಮುದಾಯದ ಪ್ರತಿಕ್ರಿಯೆ ಅನುಸಾರ, Snap ಮ್ಯಾಪ್‌ನಲ್ಲಿ ಸ್ನೇಹಿತರನ್ನು ನೋಡಿದಾಗ Snapchatter ಗಳು ಇನ್ನಷ್ಟು ಸಂಪರ್ಕಿತರಾದ ಭಾವನೆಯನ್ನು ಹೊಂದುತ್ತಾರೆ ಮತ್ತು ಸಂಪರ್ಕಿತರಾಗಿ ಇರಲು ಸುರಕ್ಷಿತ ಮತ್ತು ವಿನೋದದ ವಿಧಾನ ಎಂದು ಭಾವಿಸುವುದರಿಂದ ಸ್ನೇಹಿತರೊಂದಿಗೆ ತಮ್ಮ ಸ್ಥಳ ಹಂಚಿಕೊಳ್ಳಲು ಪ್ರೇರಿತರಾಗಿರುತ್ತಾರೆ. 
Snapchatter ಗಳಿಗೆ ಒಂದು ಆತ್ಮೀಯ ವ್ಯವಸ್ಥೆಯನ್ನು ಒದಗಿಸಲು ನಾವು ಈ ಹೊಸ ಟೂಲ್ ಅನ್ನು ನಿರ್ಮಿಸಿದ್ದೇವೆ ಮತ್ತು ಆರಂಭದಿಂದಲೂ ಹಲವು ಸುರಕ್ಷತಾ ಅಂಶಗಳನ್ನು ನಾವು ಸೇರಿಸಿದ್ದೇವೆ, ಅವುಗಳಲ್ಲಿ ಇವು ಸೇರಿವೆ:
  • ಸಕ್ರಿಯಗೊಳಿಸಲು ವೇಗ ಮತ್ತು ಸ್ಪಷ್ಟವಾದ ವಿಧಾನ, ಇದರಿಂದಾಗಿ Snapchatter ಗಳಿಗೆ ಅಸುರಕ್ಷಿತ ಭಾವನೆ ಉಂಟಾದಲ್ಲಿ ತಮ್ಮ ನೈಜ-ಸಮಯದ ಸ್ಥಳವನ್ನು ತಕ್ಷಣವೇ ಹಂಚಿಕೊಳ್ಳಬಹುದು.
  • ಸೀಮಿತ ಸಮಯದ ಹಂಚಿಕೊಳ್ಳುವಿಕೆ ಮತ್ತು ಅಧಿಸೂಚನೆ ರಹಿತ ವಿರಾಮಗೊಳಿಸುವಿಕೆ ಇದರಿಂದ Snapchatter ಗಳು ತಮ್ಮ ಗಮ್ಯಸ್ಥಾನವನ್ನು ತಲುಒಇದಾಗ ಇದನ್ನು ಸುಲಭವಾಗಿ ಆಫ್ ಮಾಡಬಹುದು. ಜೊತೆಗೆ, ನಿರಂತರವಾಗಿ ಹಂಚಿಕೊಳ್ಳಲು ಯಾವುದೇ ಅನಗತ್ಯ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ. 
  • ಪರಸ್ಪರ ಸ್ನೇಹ ಅಗತ್ಯವಿದೆ ಅಂದರೆ ನಮ್ಮ ಪ್ರಸ್ತುತ ಇರುವ Snap ಮ್ಯಾಪ್ ನೀತಿಗಳಿಗೆ ಅನುಸಾರವಾಗಿ, Snapchat ನಲ್ಲಿ ಪರಸ್ಪರರನ್ನು ಸ್ನೇಹಿತರನ್ನಾಗಿ ಸೇರಿಸಿಕೊಂಡಿರುವವರಿಗೆ ಮಾತ್ರ ತಮ್ಮ ಸ್ಥಳ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. 
  • ಸುರಕ್ಷತಾ ಸೂಚನೆ Snapchatter ಗಳು ಮೊದಲ ಬಾರಿಗೆ ವೈಶಿಷ್ಟ್ಯವನ್ನು ಬಳಸಿದಾಗ ಪಾಪ್ ಅಪ್ ಆಗುತ್ತದೆ, ಈ ಮೂಲಕ ಇದನ್ನು ಆತ್ಮೀಯ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಮಾತ್ರ ಬಳಸಬೇಕು ಎಂದು ನಮ್ಮ ಸಮುದಾಯ ತಿಳಿದಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತದೆ.
  • ಅಲ್ಟ್ರಾ ಕ್ಲಿಯರ್ ವಿನ್ಯಾಸ ಇದರಿಂದ Snapchatter ಗಳು ಯಾವಾಗಲೂ ತಮ್ಮ ಸೆಟ್ಟಿಂಗ್ ಆಯ್ಕೆಗಳು ಮತ್ತು ಅವರ ಸ್ಥಳವನ್ನು ಯಾರು ನೋಡಬಹುದು ಎನ್ನುವುದನ್ನು ಯಾವಾಗಲೂ ಅರ್ಥಮಾಡಿಕೊಳ್ಳುತ್ತಾರೆ.
ಹೊರಗೆ ಸುತ್ತಾಡುವ ಮತ್ತು ಜಗತ್ತಿನಲ್ಲಿ ವಿಹರಿಸುವ -- ವಿಶೇಷವಾಗಿ Snapchat ಅನ್ನು ವ್ಯಾಪಕವಾಗಿ ಬಳಸಲಾಗುವ ಕಾಲೇಜ್‌ ಕ್ಯಾಂಪಸ್‌ಗಳಲ್ಲಿ ಸುತ್ತಾಡುವ ಹೊಸ ಮಾರ್ಗಗಳಿಗೆ ನಾವೆಲ್ಲರೂ ಹೊಂದಿಕೊಳ್ಳುತ್ತಿದ್ದೇವೆ. ದೂರಸ್ಥ ಅಥವಾ ಹೈಬ್ರಿಡ್ ಕಲಿಕೆಯ ಹೊರತಾಗಿಯೂ ತಮ್ಮ ಸ್ನೇಹಿತರ ಜೊತೆಗೂಡಲು ಹಲವು ವಿದ್ಯಾರ್ಥಿಗಳು ಕ್ಯಾಂಪಸ್‌ಗೆ ಮರಳಿದ್ದಾರೆ, ಆದರೆ ಶಾಲೆಗಳಲ್ಲಿ ಕಡಿಮೆ ಚಟುವಟಿಕೆಯ ನಿರೀಕ್ಷೆಯಿರುವ ಕಾರಣ, ಸಾಮಾನ್ಯ ಭದ್ರತೆ ಮತ್ತು ಸುರಕ್ಷತಾಕ್ರಮಗಳಲ್ಲಿ ಕೊರತೆಯಿರಬಹುದು. ಆದ್ದರಿಂದ ನಾವು, ಕ್ಯಾಂಪಸ್ ಜಾಗೃತಿ ಮತ್ತು ತಡೆಗಟ್ಟುವಿಕೆ ಅರಿವು ಕಾರ್ಯಕ್ರಮಗಳ ಮೂಲಕ ಕ್ಯಾಂಪಸ್ ಲೈಂಗಿಕ ದೌರ್ಜನ್ಯಗಳ ವಿರುದ್ಧ ಹೋರಾಟ ನಡೆಸಲು ಮೀಸಲಾಗಿರುವ ರಾಷ್ಟ್ರೀಯ ಲಾಭರಹಿತ ಸಂಸ್ಥೆ It’s On Us ಜೊತೆ ಪಾಲುದಾರಿಕೆಯೊಂದಿಗೆ ಈ ಹೊಸ ಟೂಲ್ ಅನ್ನು ಬಿಡುಗಡೆಗೊಳಸುತ್ತಿದ್ದೇವೆ. ಇಂದಿನಿಂದ ಆರಂಭಿಸಿ, It’s On Us ನಿಂದ ಪರಸ್ಪರರ ಕಾಳಜಿ ವಹಿಸಲು ನಮ್ಮ ಸಮುದಾಯವನ್ನು ಪ್ರೇರೇಪಿಸುವ, ಹೊಸ PSA ನಮ್ಮ ಆ್ಯಪ್‌ನಲ್ಲಿ ಆರಂಭವಾಗಲಿದೆ.
ಮ್ಯಾಪ್ ಹೇಗೆ ಕಾರ್ಯನಿರ್ವಹಿಸುತ್ತದೆ, Snapchatter ಗಳ ಸ್ಥಳಗಳನ್ನು ಯಾರು ನೋಡಬಹುದು (ಒಂದು ವೇಳೆ ಅವರು ಅವುಗಳನ್ನು ಹಂಚಿಕೊಳ್ಳಲು ಆಯ್ಕೆ ಮಾಡಿದರೆ) ಮತ್ತು ನಾವು ಜಾರಿಗೊಳಿಸಿರುವ ನೀತಿಗಳು ಮತ್ತು ಟೂಲ್‌ಗಳ ಕುರಿತು ಹಲವು ಪೋಷಕರು ಪ್ರಶ್ನೆಗಳನ್ನು ಹೊಂದಿರಬಹುದು ಎನ್ನುವುದು ನಮಗೆ ತಿಳಿದಿದೆ. ಹಾಗಾಗಿ, Snap ಮ್ಯಾಪ್‌ನ ಪ್ರಮುಖ ಸುರಕ್ಷತೆ ಮತ್ತು ಗೌಪ್ಯತೆ ವೈಶಿಷ್ಟ್ಯಗಳ ಕುರಿತು ಇನ್ನಷ್ಟು ಮಾಹಿತಿಯನ್ನು ಹಂಚಿಕೊಳ್ಳಲು ನಾವು ಬಯಸಿದೆವು:
  • ಸ್ಥಳ ಹಂಚಿಕೊಳ್ಳುವಿಕೆಯು ಡಿಫಾಲ್ಟ್ ಆಗಿ ಆಫ್ ಆಗಿರುತ್ತದೆ ಮತ್ತು ಕೇವಲ ಸ್ನೇಹಿತರಿಗಾಗಿ ಇದೆ: ಎಲ್ಲ Snapchatter ಗಳಿಗೆ, ಸ್ಥಳ ಹಂಚಿಕೊಳ್ಳುವಿಕೆ ಡಿಫಾಲ್ಟ್ ಆಗಿ ಆಫ್ ಆಗಿರುತ್ತದೆ ಮತ್ತು ಸಂಪೂರ್ಣ ಐಚ್ಛಿಕವಾಗಿರುತ್ತದೆ. Snap ಮ್ಯಾಪ್ ಮೇಲ್ಭಾಗದಲ್ಲಿರುವ ಸೆಟ್ಟಿಂಗ್‌ಗಳ ಗಿಯರ್ ಅನ್ನು ಟ್ಯಾಪ್ ಮಾಡುವ ಮೂಲಕ ಯಾವುದೇ ಸಮಯದಲ್ಲಿ Snapchatter ಗಳು ತಮ್ಮ ಸ್ಥಳ ಹಂಚಿಕೊಳ್ಳುವಿಕೆ ಆದ್ಯತೆಗಳನ್ನು ಹಂಚಿಕೊಳ್ಳಬಹುದು. ಅಲ್ಲಿ, ಪ್ರಸ್ತುತ ಇರುವ ಯಾವ ಸ್ನೇಹಿತರು ಅವರ ಸ್ಥಳ ನೋಡಬಹುದು ಎನ್ನುವುದನ್ನು ಅವರು ಆರಿಸಬಹುದು ಅಥವಾ 'ಗೋಸ್ಟ್ ಮೋಡ್‌'ನೊಂದಿಗೆ ತಮ್ಮನ್ನು ಸಂಪೂರ್ಣ ಮರೆಮಾಡಿಕೊಳ್ಳಬಹುದು. ಮ್ಯಾಪ್‌ನಲ್ಲಿ ತಮ್ಮ ಸ್ಥಳವನ್ನು ಹಂಚಿಕೊಳ್ಳಲು ನಿರ್ಧರಿಸುವ Snapchatter ಗಳು ಅವರು ಆಯ್ಕೆ ಮಾಡಿದವರಿಗೆ ಮಾತ್ರ ಕಾಣಿಸುತ್ತಾರೆ -- ಪೂರ್ವಭಾವಿಯಾಗಿ ಮತ್ತು ಪರಸ್ಪರ ಸ್ನೇಹಿತರನ್ನಾಗಿ ಸೇರಿಸದೆ ಇರುವ ಜನರೊಂದಿಗೆ ಅವರ ಸಾರ್ವಜನಿಕವಾಗಿ ಸ್ಥಳ ಹಂಚಿಕೊಳ್ಳುವ ಆಯ್ಕೆಯನ್ನು ನಾವು ಯಾರಿಗೂ ಒದಗಿಸುವುದಿಲ್ಲ. 
  • ಶಿಕ್ಷಣ ಮತ್ತು ಜ್ಞಾಪನೆಗಳು: Snapchatter ಗಳು ಮೊದಲ ಬಾರಿ Snap ಮ್ಯಾಪ್ ಬಳಸಿದಾಗ ಅವರಿಗೆ ಟ್ಯುಟೋರಿಯಲ್ ಮೂಲಕ ಮಾಹಿತಿ ನೀಡಲಾಗುತ್ತದೆ. ಇಲ್ಲಿ ಅವರು ಸ್ಥಳ ಹಂಚಿಕೊಳ್ಳುವಿಕೆಗೆ ಸಮ್ಮತಿಸುವುದು ಹೇಗೆ, ಹಂಚಿಕೊಳ್ಳಲು ಸ್ನೇಹಿತರನ್ನು ಆಯ್ಕೆ ಮಾಡುವುದು ಹೇಗೆ ಮತ್ತು ಯಾವುದೇ ಸಮಯದಲ್ಲಿ ಸೆಟ್ಟಿಂಗ್‌ಗಳನ್ನು ಅಪ್‌ಡೇಟ್ ಮಾಡುವುದು ಹೇಗೆ ಎನ್ನುವುದನ್ನು ಕಲಿಯಬಹುದು. ತಮ್ಮ ಸ್ನೇಹಿತರೊಂದಿಗೆ ತಮ್ಮ ಸ್ಥಳ ಹಂಚಿಕೊಳ್ಳಲು ಆಯ್ಕೆ ಮಾಡುವ Snapchatter ಗಳು, ತಮ್ಮ ಸೆಟ್ಟಿಂಗ್‌ಗಳೊಂದಿಗೆ ತಾವು ಈಗಲೂ ಹಿತಕರ ಅನುಭವ ಹೊಂದಿದ್ದೇವೆ ಎಂಬುದನ್ನು ದೃಢೀಕರಿಸುವಂತೆ ಅವರನ್ನು ಕೇಳುವ ನಿಯತಕಾಲಿಕ ಜ್ಞಾಪನೆಗಳನ್ನು ಸ್ವೀಕರಿಸುತ್ತಾರೆ ಮತ್ತು ಅವರಿಗೆ ಹಿತಕರ ಅನ್ನಿಸದಿದ್ದರೆ, ಇತರ ಬಳಕೆದಾರರಿಗೆ ಸುಳಿವು ನೀಡದೆ ಸ್ಥಳ ಹಂಚಿಕೊಳ್ಳುವಿಕೆಯನ್ನು ಸುಲಭವಾಗಿ ಸ್ವಿಚ್ ಆಫ್ ಮಾಡಬಹುದು.
  • ಹೆಚ್ಚುವರಿ ಗೌಪ್ಯತಾ ಸುರಕ್ಷೆಗಳು: Snap ಮ್ಯಾಪ್‌ಗೆ ಪೂರ್ವಭಾವಿಯಾಗಿ ಸಲ್ಲಿಸಿರುವ ಕಂಟೆಂಟ್ ಮಾತ್ರ ಅದರಲ್ಲಿ ಕಾಣಿಸುತ್ತದೆ; ಸ್ನೇಹಿತರ ನಡುವಿನ Snap ಗಳು ಖಾಸಗಿಯಾಗಿ ಉಳಿಯುತ್ತವೆ. ನಮ್ಮ ಡಿಫಾಲ್ಟ್ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಉಳಿಸಿಕೊಳ್ಳುವ Snapchatter ಗಳಿಗೆ, ಮ್ಯಾಪ್‌ನಲ್ಲಿ ತೋರಿಸುವ ಕಂಟೆಂಟ್ ಅನ್ನು ಸ್ವಯಂಚಾಲಿತವಾಗಿ ಅನಾಮಧೇಯಗೊಳಿಸಲಾಗುತ್ತದೆ, ಇದರಿಂದಾಗಿ ಮ್ಯಾಪ್‌ನತ್ತ ನೋಡುವ ಯಾರಿಗೂ ಹಂಚಿಕೊಂಡ ವ್ಯಕ್ತಿಯ ಹೆಸರು, ಸಂಪರ್ಕ ಮಾಹಿತಿ ಅಥವಾ ನಿಖರ ಸ್ಥಳ ನೋಡಲಾಗುವುದಿಲ್ಲ. ನಾವು ಮ್ಯಾಪ್‌ನಲ್ಲಿ ಸೂಕ್ಷ್ಮ ವ್ಯವಹಾರ ಮತ್ತು ಸ್ಥಳಗಳನ್ನು ಕೂಡ ರಕ್ಷಿಸುತ್ತೇವೆ.
ಮೊಬೈಲ್ ಸ್ಥಳ ಹಂಚಿಕೊಳ್ಳುವಿಕೆ ಸೂಕ್ಷ್ಮವಾದುದು ಮತ್ತು ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ ಎನ್ನುವುದು ನಮಗೆ ತಿಳಿದಿದೆ, ಆದರೆ ಸೂಕ್ತ ಸುರಕ್ಷತಾ ಕ್ರಮಗಳು ಜಾರಿಯಲ್ಲಿದ್ದರೆ, ಕೇವಲ ಸಂಪರ್ಕಿತರಾಗಿ ಇರಲಷ್ಟೇ ಅಲ್ಲ, ಜೊತೆಗೆ ಪರಸ್ಪರರನ್ನು ಸುರಕ್ಷಿತವಾಗಿರಿಸುವುದಕ್ಕೂ ಕೂಡ ಇದು ಪರಿಣಾಮಕಾರಿ ಮಾರ್ಗ ಎಂದು ನಾವು ನಂಬಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನಮ್ಮ ಬೆಂಬಲ ಪುಟಕ್ಕೆ ಭೇಟಿ ನೀಡುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.
ಸುದ್ದಿಗೆ ಹಿಂತಿರುಗಿ