ನಮ್ಮ ಕಾನೂನು ಜಾರಿ ಕಾರ್ಯಾಚರಣೆಗಳಲ್ಲಿ ಹೂಡಿಕೆ ಮಾಡುವುದು ಮತ್ತು ವಿಸ್ತರಿಸುವುದು

ಡಿಸೆಂಬರ್ 2, 2021

ನಾವು ಈ ಬ್ಲಾಗ್ ಅನ್ನು ಮೊದಲು ಪ್ರಾರಂಭಿಸಿದಾಗ, ನಮ್ಮ ಸಮುದಾಯದ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಆಳವಾಗಿ ಕಾಳಜಿವಹಿಸುವ ಅನೇಕ ಪಾಲುದಾರರೊಂದಿಗೆ ಅಂದರೆ ಪೋಷಕರು ಮತ್ತು ಇತರ ಕುಟುಂಬ ಸದಸ್ಯರು, ತಿಳುವಳಿಕೆ ನೀಡುವವರು ಮತ್ತು ಮಾರ್ಗದರ್ಶಕರು, ಸುರಕ್ಷತಾ ವಕೀಲರು ಮತ್ತು ಕಾನೂನು ಜಾರಿ ಇಲಾಖೆಗಳೊಂದಿಗೆ ಮಾತನಾಡುವ ಉತ್ತಮ ಕೆಲಸವನ್ನು ಮಾಡುವುದು ನಮ್ಮ ಗುರಿಗಳಲ್ಲಿ ಒಂದಾಗಿದೆ ಎಂದು ನಾವು ವಿವರಿಸಿದ್ದೇವೆ. ಈ ಪೋಸ್ಟ್ನಲ್ಲಿ, ಕಾನೂನು ಜಾರಿ ಸಮುದಾಯದೊಂದಿಗೆ ಉತ್ತಮ ಸಂವಹನಗಳಿಗೆ ಅವಕಾಶ ನೀಡಲು ನಾವು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿಯನ್ನು ನಾವು ಒದಗಿಸಲು ನಾವು ಬಯಸುತ್ತೇವೆ.
ನಮ್ಮ ವೇದಿಕೆಯಲ್ಲಿ ಅಕ್ರಮ ಅಥವಾ ಹಾನಿಕಾರಕ ಚಟುವಟಿಕೆಯನ್ನು ಹತ್ತಿಕ್ಕುವ ನಮ್ಮ ಪ್ರಯತ್ನದಲ್ಲಿ ಕಾನೂನು ಜಾರಿ ಸಮುದಾಯಗಳು ಪ್ರಮುಖ ಪಾಲುದಾರರಾಗಿರುತ್ತಾರೆ. ನಮ್ಮ ಸಮುದಾಯವನ್ನು ಸುರಕ್ಷಿತವಾಗಿರಿಸಲು ನಮ್ಮ ಪ್ರಸ್ತುತ ಕೆಲಸದ ಭಾಗವಾಗಿ, ನಾವು ಅವರ ತನಿಖೆಗಳಿಗೆ ಸಂಬಂಧಿಸಿದ ದತ್ತಾಂಶಗಳಿಗೆ ಕಾನೂನು ಜಾರಿ ವಿನಂತಿಗಳನ್ನು ಪರಿಶೀಲಿಸಲು ಮತ್ತು ಪ್ರತಿಕ್ರಿಯಿಸಲು ಮೀಸಲಾಗಿರುವ ನಮ್ಮದೇ ಕಾನೂನು ಜಾರಿ ಕಾರ್ಯಾಚರಣೆ ತಂಡವನ್ನು ಹೊಂದಿದ್ದೇವೆ. ಉದಾಹರಣೆಗೆ:
  • Snapchat ಅಲ್ಲಿರುವ ವಿಷಯವು ಅಲ್ಪಕಾಲಿಕವಾಗಿದ್ದರೂ, ಸ್ನೇಹಿತರ ನಡುವಿನ ನಿಜ ಜೀವನದ ಸಂಭಾಷಣೆಯ ಸ್ವರೂಪವನ್ನು ಪ್ರತಿಬಿಂಬಿಸಲು ವಿನ್ಯಾಸಗೊಳಿಸಲಾಗಿದೆ, ಮಾನ್ಯವಾದ ಕಾನೂನು ವಿನಂತಿಗಳಿಗೆ ಪ್ರತಿಕ್ರಿಯೆಯಾಗಿ ಅನ್ವಯವಾಗುವ ಕಾನೂನುಗಳಿಗೆ ಅನುಗುಣವಾಗಿ ಲಭ್ಯವಿರುವ ಖಾತೆ ಮಾಹಿತಿ ಮತ್ತು ಕಾನೂನು ಜಾರಿ ವಿಷಯವನ್ನು ಸಂರಕ್ಷಿಸುವ ಸಾಮರ್ಥ್ಯ ಹೊಂದಿರುವ ಕಾನುನೂ ಜಾರಿ ಏಜೆನ್ಸಿಯನ್ನು ನಾವು ಬಹಳ ಹಿಂದೆಯೇ ಹೊಂದಿದ್ದೇವೆ.
  • ಜೀವಕ್ಕೆ ಸನ್ನಿಹಿತ ಬೆದರಿಕೆಗಳನ್ನು ಒಳಗೊಂಡಿರುವ ಯಾವುದೇ ವಿಷಯವನ್ನು ನಾವು ಯಾವಾಗಲೂ ಪೂರ್ವಭಾವಿಯಾಗಿ ಕಾನೂನು ಜಾರಿ ಅಧಿಕಾರಿಗಳಿಗೆ ತಿಳಿಸುತ್ತೇವೆ.
  • Snapchat ಖಾತೆಯ ದಾಖಲೆಗಳ ಕುರಿತಂತೆ ನಮಗೆ ಮಾನ್ಯ ಕಾನೂನು ಕೋರಿಕೆ ಬಂದರೆ, ನಾವು ಅನ್ವಯಿಸುವ ಕಾನೂನು ಮತ್ತು ಗೌಪ್ಯತೆ ಅಗತ್ಯಗಳ ಅನುಸರಣೆಯಲ್ಲಿ ಪ್ರತಿಕ್ರಿಯೆಯನ್ನು ನೀಡುತ್ತೇವೆ.
ಕಳೆದ ಕೆಲವು ವರ್ಷಗಳಲ್ಲಿ, ನಾವು ಈ ತಂಡವನ್ನು ಬೆಳೆಸಲು ಹೂಡಿಕೆ ಮಾಡುತ್ತಿದ್ದೇವೆ ಮತ್ತು ಮಾನ್ಯ ಕಾನೂನು ಜಾರಿ ವಿನಂತಿಗಳಿಗೆ ಸಮಯೋಚಿತವಾಗಿ ಪ್ರತಿಕ್ರಿಯಿಸಲು ಅದರ ಸಾಮರ್ಥ್ಯ ಸುಧಾರಣೆ ಮಾಡುವುದನ್ನು ಮುಂದುವರಿಸುತ್ತಿದ್ದೇವೆ. ಈ ತಂಡವು 74% ರಷ್ಟು ವಿಸ್ತರಿಸಿದ್ದು, ತಂಡಕ್ಕೆ ಅನೇಕ ಹೊಸ ಸದಸ್ಯರುಗಳು ಎಲ್ಲಾ ಹಂತಗಳಲ್ಲಿ ಸೇರಿದ್ದಾರೆ. ಇವರಲ್ಲಿ ಕೆಲವರು ಪ್ರಾಸಿಕ್ಯೂಟರ್‌ ವೃತ್ತಿ ಮಾಡುತ್ತಿದ್ದವರು ಮತ್ತು ಯುವ ಸುರಕ್ಷತೆಯಲ್ಲಿ ಅನುಭವ ಹೊಂದಿರುವ ಕಾನೂನು ಜಾರಿ ಅಧಿಕಾರಿಗಳು ಕೂಡಾ ಸೇರಿದ್ದಾರೆ. ಈ ಹೂಡಿಕೆಗಳ ಫಲವಾಗಿ, ಕಾನೂನು ಜಾರಿ ತನಿಖೆಗೆ ನಾವು ನಮ್ಮ ಪ್ರತಿಕ್ರಿಯೆಯ ಸಮಯವನ್ನು ಕಳೆದ ಕೆಲವು ವರ್ಷದಲ್ಲಿ 85% ಪ್ರಮಾಣದಷ್ಟು ಗಣನೀಯವಾಗಿ ಸುಧಾರಿಸಲು ನಮಗೆ ಸಾಧ್ಯವಾಗುತ್ತಿದೆ. ತುರ್ತು ಬಹಿರಂಗಪಡಿಸುವಿಕೆಯ ವಿನಂತಿಯ ಸಂದರ್ಭದಲ್ಲಿ ಅಂದರೆ ಸಾವಿನ ಸನ್ನಿಹಿತ ಅಪಾಯ ಅಥವಾ ಗಂಭೀರ ದೈಹಿಕ ಗಾಯವನ್ನು ಒಳಗೊಂಡಿರುವ ಕೆಲವು ನಿರ್ಣಾಯಕ ವಿನಂತಿಯ ಸಂದರ್ಭದಲ್ಲಿ ಸಾಮಾನ್ಯವಾಗಿ ನಮ್ಮ 24/7 ತಂಡವು 30 ನಿಮಿಷಗಳಲ್ಲಿ ಪ್ರತಿಕ್ರಿಯೆ ನೀಡುತ್ತದೆ. Snap ಗೆ ಬರುವ ಕಾನೂನು ಜಾರಿ ವಿನಂತಿಗಳ ಪ್ರಕಾರಗಳು ಮತ್ತು ವಿನಂತಿಗಳ ಪರಿಮಾಣದ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಈ ಪ್ರಮುಖ ಒಳನೋಟಗಳನ್ನು ಸಾರ್ವಜನಿಕರಿಗೆ ಒದಗಿಸಲು ನಾವು ಪ್ರತಿ ಆರು ತಿಂಗಳಿಗೊಮ್ಮೆ ಪಾರದರ್ಶಕತೆ ವರದಿಯನ್ನು ಪ್ರಕಟಿಸುತ್ತೇವೆ. ನೀವು 2021ರ ಮೊದಲಾರ್ಧದ ಪ್ರಸ್ತುತ ವರದಿಯನ್ನು, ಇಲ್ಲಿ ಓದಬಹುದು. 
Snapchat ಅನ್ನು ಸಾಂಪ್ರದಾಯಿಕ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗಿಂತ ವಿಭಿನ್ನವಾಗಿ ನಿರ್ಮಿಸಲಾಗಿದೆ ಮತ್ತು ನಮ್ಮ ಉತ್ಪನ್ನಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಅವರ ಕೆಲಸವನ್ನು ಬೆಂಬಲಿಸಲು ನಾವು ಯಾವ ಸಾಮರ್ಥ್ಯಗಳನ್ನು ಹೊಂದಿದ್ದೇವೆ ಎಂಬುದರ ಬಗ್ಗೆ ಕಾನೂನು ಜಾರಿಯ ಅನೇಕ ಸದಸ್ಯರಿಗೆ ತಿಳುವಳಿಕೆ ಇಲ್ಲದಿರುವುದನ್ನು ನಾವು ಕಂಡುಕೊಂಡಿದ್ದೇವೆ. ಅವರ ಕೆಲಸಕ್ಕೆ ಸಹಾಯಕವಾಗುವಂತೆ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು ನಮ್ಮ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಹಾಗು ಅದು ಜಾರಿಯಲ್ಲಿದೆ. ನಮ್ಮ ಸೇವೆ ಮತ್ತು ಪ್ರಕ್ರಿಯೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಕಲಿಯಲು ಈ ಸಮುದಾಯಕ್ಕೆ ಸಹಾಯ ಮಾಡಲು ಶೈಕ್ಷಣಿಕ ಸಂಪನ್ಮೂಲಗಳನ್ನು ನಾವು ನಿರ್ಮಿಸಿದ್ದೇವೆ. ಈ ಬೃಹತ್ ಗಮನದ ಭಾಗವಾಗಿ ನಾವು ಇತ್ತೀಚೆಗೆ ಎರಡು ಪ್ರಮುಖ ಕ್ರಮಗಳನ್ನು ಮುಂದಿಟ್ಟಿದ್ದೇವೆ.
ಮೊದಲನೆಯದಾಗಿ, ಕಾನೂನು ಜಾರಿ ಔಟ್ ರೀಚ್ ಮೊದಲ ಮುಖ್ಯಸ್ಥರಾಗಿ ಸೇವೆ ಸಲ್ಲಿಸಲು ನಾವು ರಾಹುಲ್ ಗುಪ್ತಾ ಅವರನ್ನು ಸ್ವಾಗತಿಸುತ್ತೇವೆ. ಸೈಬರ್ ಕ್ರೈಮ್, ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸಾಕ್ಷ್ಯದಲ್ಲಿ ಪರಿಣತಿಯೊಂದಿಗೆ ಕ್ಯಾಲಿಫೋರ್ನಿಯಾದಲ್ಲಿ ಸ್ಥಳೀಯ ಪ್ರಾಸಿಕ್ಯೂಟರ್ ಆಗಿ ಪ್ರಸಿದ್ಧ ವೃತ್ತಿಜೀವನದ ಹಿನ್ನೆಲೆ ಇರುವ ರಾಹುಲ್ ಈಗ ಸೇರಿದ್ದಾರೆ. ಈ ಜವಾಬ್ದಾರಿಯಲ್ಲಿ ರಾಹುಲ್ ಅವರು, ಕಾನೂನು ಡೇಟಾ ವಿನಂತಿಗಳಿಗೆ ಸ್ಪಂದಿಸಲು Snap ನ ನೀತಿಗಳ ಕುರಿತು ಜಾಗೃತಿ ಮೂಡಿಸಲು ಜಾಗತಿಕ ಕಾನೂನು ಜಾರಿ ಪ್ರೊಗ್ರಾಂ ಅನ್ನು ಅಭಿವೃದ್ಧಿಪಡಿಸುತ್ತಾರೆ. ಅವರು ಕಾನೂನು ಜಾರಿ ಸಂಸ್ಥೆಗಳ ಜೊತೆಗೆ ಸಂಬಂಧವನ್ನು ನಿರ್ಮಿಸುವುದರ ಜೊತೆಗೆ ಸುಧಾರಣೆಗಾಗಿ ಕ್ಷೇತ್ರಗಳನ್ನು ಗುರುತಿಸುವುದನ್ನು ಮುಂದುವರಿಸಲು ನಿರಂತರ ಪ್ರತಿಕ್ರಿಯೆ ಪಡೆಯುತ್ತಾರೆ.

ಎರಡನೆಯದಾಗಿ, ಅಕ್ಟೋಬರ್‌ನಲ್ಲಿ, ನಮ್ಮ ಸೇವೆಗಳನ್ನು ಬಲವಾದ ಸಂಪರ್ಕಗಳನ್ನು ನಿರ್ಮಿಸಲು ಮತ್ತು U.S. ಕಾನೂನು ಜಾರಿ ಅಧಿಕಾರಿಗಳಿಗೆ ವಿವರಿಸುವ ಸಲುವಾಗಿ ನಾವು ನಮ್ಮ ಮೊದಲ Snap ಕಾನೂನು ಜಾರಿ ಶೃಂಗಸಭೆಯನ್ನು ನಡೆಸಿದ್ದೇವೆ. 1,700 ಕ್ಕೂ ಹೆಚ್ಚು ಕಾನೂನು ಜಾರಿ ಅಧಿಕಾರಿಗಳು ಫೆಡರಲ್, ರಾಜ್ಯ ಮತ್ತು ಸ್ಥಳೀಯ ಏಜೆನ್ಸೀಗಳಿಂದ ಭಾಗವಹಿಸಿದ್ದರು.
ನಮ್ಮ ಈ ಕಾರ್ಯಕ್ರಮವು ಎಷ್ಟು ಉಪಯುಕ್ತವಾಗಿದೆ ಎಂಬುದನ್ನು ತಿಳಿಯಲು ಮತ್ತು ಅವಕಾಶಗಳಿರುವ ಪ್ರದೇಶಗಳನ್ನು ಗುರುತಿಸಲು ಸಹಾಯ ಮಾಡಲು, ಶೃಂಗಸಭೆಯ ಮೊದಲು ಮತ್ತು ನಂತರ ನಾವು ಇದರಲ್ಲಿ ಪಾಲ್ಗೊಳ್ಳುವವರ ಸಮೀಕ್ಷೆ ಮಾಡಿದ್ದೇವೆ. ಶೃಂಗಸಭೆಯ ಮೊದಲು, ನಾವು ಈ ಕೆಳಗಿನ ಅಂಶಗಳನ್ನು ಕಂಡುಕೊಂಡಿದ್ದೇವೆ:
  • Snapchat ಹೊಂದಿರುವ ಸುರಕ್ಷತಾ ಅಂಶಗಳ ಕುರಿತು ನಾವು ಸರ್ವೇ ಮಾಡಿದ ಶೇ.27 ರಷ್ಟು ಜನರಿಗೆ ಮಾತ್ರ ತಿಳುವಳಿಕೆ ಇತ್ತು;
  • 88% ಭಾಗೀದಾರರು ತಮ್ಮ ತನಿಖೆಯ ಬೆಂಬಲವಾಗಿ Snapchat ಯಾವ ರೀತಿಯ ಡೇಟಾ ಒದಗಿಸಬಹುದು ಎಂಬುದನ್ನು ತಿಳಿಯಲು ಬಯಸಿದರು; ಮತ್ತು
  • 72% ಭಾಗೀದಾರರು Snapchat ನೊಂದಿಗೆ ಕಾರ್ಯನಿರ್ವಹಿಸಲು ಯಾವುದು ಎಷ್ಟು ಅತ್ಯುತ್ತಮ ಪ್ರಕ್ರಿಯೆ ಎಂಬುದನ್ನು ತಿಳಿಯಲು ಬಯಸಿದರು.
ಶೃಂಗಸಭೆಯ ನಂತರ:
  • ಕಾನೂನು ಜಾರಿ ಪಾಲುದಾರರೊಂದಿಗೆ ನಮ್ಮ ಕೆಲಸದ ಬಗ್ಗೆ ಉತ್ತಮ ತಿಳಿವಳಿಕೆಯನ್ನು ಹೊಂದಲು ಇದು ಸಹಾಯವಾಯಿತು ಎಂದು 86% ಭಾಗಿದಾರರು ಹೇಳಿದರು;
  • ಡೇಟಾ ಕುರಿತು ಕಾನೂನಾತ್ಮಕ ವಿನಂತಿಗಳನ್ನು ಸಲ್ಲಿಸಲು ಇರುವ ಪ್ರಕ್ರಿಯೆಯ ಉತ್ತಮ ತಿಳಿವಳಿಕೆಯನ್ನು ಪಡೆದುಕೊಂಡರು ಎಂದು 85% ಜನರು ಹೇಳಿದ್ದಾರೆ; ಮತ್ತು
  • 78% ಭಾಗಿದಾರರು ಮುಂದಿನ Snap ಕಾನೂನು ಜಾರಿ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬಯಸುತ್ತಾರೆ ಎಂದು ಹೇಳಿದರು.
ಶೃಂಗಸಭೆಯಲ್ಲಿ ಭಾಗವಹಿಸಿದ ಮತ್ತು ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ನಾವು ಕೃತಜ್ಞರಾಗಿರುತ್ತೇವೆ. ನಾವು Snap ಕಾನೂನು ಜಾರಿ ಶೃಂಗಸಭೆಯನ್ನು U.S. ನ ಹೊರಭಾಗದಲ್ಲಿ ಕೆಲವು ದೇಶಗಳಲ್ಲಿ ಕಾನೂನು ಜಾರಿ ಏಜೆನ್ಸಿಗಳಿಗೆ ವಾರ್ಷಿಕ ಕಾರ್ಯಕ್ರಮವನ್ನಾಗಿ ತಯಾರಿಸುವ ಯೋಜನೆ ಮಾಡುತ್ತಿದ್ದೇವೆ ಎಂದು ತಿಳಿಸುತ್ತಿದ್ದೇವೆ.
ವಿಶ್ವದರ್ಜೆಯ ಕಾನೂನು ಜಾರಿ ಕಾರ್ಯಾಚರಣೆ ತಂಡವನ್ನು ಹೊಂದುವುದು ನಮ್ಮ ದೀರ್ಘಾವಧಿಯ ಗುರಿಯಾಗಿದೆ ಮತ್ತು ಇದನ್ನು ಸಾಧಿಸಲು ನಾವು ಅರ್ಥಪೂರ್ಣ ಸುಧಾರಣೆಗಳನ್ನು ಮಾಡುವುದನ್ನು ಮುಂದುವರಿಸಬೇಕು ಎಂಬುದು ಕೂಡಾ ನಮಗೆ ತಿಳಿದಿದೆ. ನಮ್ಮ ಕಲ್ಪನೆಯ ಪ್ರಗತಿಯನ್ನು ಸಾಧಿಸಲು ಹೇಗೆ ಮುಂದುವರಿಯಬಹುದು ಎಂಬುದರ ಕುರಿತು ನಮ್ಮ ಉದ್ಘಾಟನಾ ಶೃಂಗಸಭೆಯು ಕಾನೂನು ಜಾರಿ ಬಾಧ್ಯಸ್ಥರೊಂದಿಗೆ ಮಹತ್ವದ ಮಾತುಕತೆಯ ಪ್ರಾರಂಭವಾಗಿದೆ ಎಂದು ನಾವು ಭಾವಿಸುತ್ತೇವೆ ಮತ್ತು Snapchatter ಗಳನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡಲು ಇದು ಸಹಾಯಕ ಎಂಬುದನ್ನು ನಾವು ನಂಬಿದ್ದೇವೆ.
ಸುದ್ದಿಗೆ ಹಿಂತಿರುಗಿ