ಡೇಟಾ ಗೌಪ್ಯತೆ ದಿನ: ಗೌಪ್ಯತೆ ಮತ್ತು ಖಾತೆ ಭದ್ರತೆಗೆ ನಮ್ಮ ನಿರಂತರ ಬದ್ಧತೆ

ಜನವರಿ 26, 2024

ಗೌಪ್ಯತೆಯು ಯಾವಾಗಲೂ Snap ಹೇಗೆ ಕಾರ್ಯಾಚರಿಸುತ್ತದೆ ಎನ್ನುವುದರ ಕೇಂದ್ರಭಾಗವಾಗಿದೆ ಮತ್ತು ಗೌಪ್ಯತೆಗೆ ಸಂಬಂಧಿಸಿದ ನಮ್ಮ ವಿಧಾನ ಸರಳವಾಗಿದೆ: ಬಿಚ್ಚುಮನಸ್ಸಿನಿಂದಿರಿ, ಆಯ್ಕೆಗಳನ್ನು ನೀಡಿ ಮತ್ತು ನಮ್ಮ ಸಮುದಾಯಕ್ಕೆ ಮೊದಲ ಆದ್ಯತೆ ಎನ್ನುವುದನ್ನು ಎಂದಿಗೂ ಮರೆಯಬೇಡಿ. ಆರಂಭದಿಂದಲೂ, ಖಾಸಗಿ ಸಂಭಾಷಣೆಯ ಮೂಲಕ ತಮ್ಮ ಆತ್ಮೀಯ ಸ್ನೇಹಿತರೊಂದಿಗೆ ಸಂಪರ್ಕಗೊಳ್ಳಲು ಜನರಿಗೆ ಸಹಾಯ ಮಾಡುವುದರ ಮೇಲೆ Snapchat ಗಮನ ಕೇಂದ್ರೀಕರಿಸಿದ್ದು, ಇದು ತಮ್ಮನ್ನು ಅಭಿವ್ಯಕ್ತಪಡಿಸಲು Snapchatter ಗಳಿಗೆ ಹೆಚ್ಚು ಹಿತಕರ ಭಾವನೆ ಹೊಂದುವುದಕ್ಕೆ ಸಹಾಯ ಮಾಡುತ್ತದೆ ಎಂದು ನಮಗೆ ತಿಳಿದಿದೆ.
ಡೇಟಾ ಗೌಪ್ಯತೆಯ ದಿನದ ಗೌರವಾರ್ಥ, ನಮ್ಮ ಪರಿಷ್ಕೃತ ಗೌಪ್ಯತಾ ನೀತಿಯನ್ನು ಹಂಚಿಕೊಳ್ಳಲು, ಪೋಷಕರಿಗಾಗಿ ನಮ್ಮ ಸಂಪನ್ಮೂಲಗಳನ್ನು ಹೈಲೈಟ್ ಮಾಡಲು ಮತ್ತು ಖಾತೆ ಭದ್ರತೆ ಕುರಿತು ಸಲಹೆಗಳನ್ನು ಒದಗಿಸಲು ನಾವು ರೋಮಾಂಚಿತರಾಗಿದ್ದೇವೆ.
Snapchatter ಡೇಟಾವನ್ನು ನಾವು ಹೇಗೆ ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ ಎನ್ನುವ ಕುರಿತು ಇನ್ನಷ್ಟು ಸ್ಪಷ್ಟ ಮತ್ತು ಪಾರದರ್ಶಕವಾಗುವ ನಿಟ್ಟಿನಲ್ಲಿ ನಾವು ನಮ್ಮ ಗೌಪ್ಯತಾ ನೀತಿಯನ್ನು ಮರುರೂಪಿಸಿದ್ದೇವೆ. ಗೌಪ್ಯತೆ ನೀತಿಗಳು ಎಲ್ಲರಿಗೂ – ಹದಿಹರೆಯದವರು ಮತ್ತು ವಯಸ್ಕರು ಇಬ್ಬರಿಗೂ ಒಂದೇ ರೀತಿಯಲ್ಲಿ ಓದಲು ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗಿರಬೇಕು ಎಂದು ನಾವು ನಂಬಿದ್ದೇವೆ. ಆದಕಾರಣ ನಾವು ಸಂಕೀರ್ಣ ಗೋಜಲುಪದಗಳನ್ನು ಬಳಸುವುದಿಲ್ಲ, ತಾಂತ್ರಿಕ ಪದಗಳು ಅಗತ್ಯವಿರುವಲ್ಲಿ ವ್ಯಾಖ್ಯಾನಗಳನ್ನು ಒದಗಿಸುತ್ತೇವೆ ಮತ್ತು ಪ್ರತಿ ವಿಭಾಗದ ಮೇಲ್ಭಾಗದಲ್ಲಿ ಸಾರಾಂಶಗಳನ್ನು ತೋರಿಸುತ್ತೇವೆ. ವೈಯಕ್ತಿಕ ಡೇಟಾದ ಮೇಲಿನ ನಿಯಂತ್ರಣವನ್ನು – ಉದಾಹರಣೆಗೆ ಅದನ್ನು ಪ್ರವೇಶಿಸುವುದು, ಡೌನ್‌ಲೋಡ್ ಮಾಡುವುದು ಮತ್ತು ಅಳಿಸುವುದು ಹೇಗೆ ಎಂಬುದನ್ನು – ನಾವು ಸುಲಭವಾಗಿಸಲು ಬಯಸುತ್ತೇವೆ, ಆದಕಾರಣ ನಮ್ಮ ಗೌಪ್ಯತಾ ನೀತಿ ಈಗ Snapchatter ಗಳು ತಮ್ಮ ಮಾಹಿತಿಯನ್ನು ನಿಯಂತ್ರಿಸಬಹುದಾದ ಹಲವು ವಿಧಾನಗಳಿಗೆ ಮಾಹಿತಿ ಒದಗಿಸುತ್ತದೆ. ಒಮ್ಮೆ ಅದನ್ನು ಓದಿ! 
ಗೌಪ್ಯತೆ ಮಾಹಿತಿಗೆ ಇನ್ನೊಂದು ಅದ್ಭುತ ಸಂಪನ್ಮೂಲ ಎಂದರೆ ನಮ್ಮ ಗೌಪ್ಯತೆ ಮತ್ತು ಸುರಕ್ಷತೆ ಹಬ್ – ಇದು ನಮ್ಮ ನೀತಿಗಳು, ಸಂಪನ್ಮೂಲಗಳು ಮತ್ತು ಟೂಲ್‌ಗಳನ್ನು ಜನರು ಸುಲಭವಾಗಿ ಅರ್ಥಮಾಡಿಕೊಳ್ಳಲು, Snapchatter ಗಳ ವೈಯಕ್ತಿಕ ಡೇಟಾವನ್ನು ಸುರಕ್ಷಿತವಾಗಿಡುವುದಕ್ಕಾಗಿ ನಾವು ಹೇಗೆ ಕೆಲಸ ಮಾಡುತ್ತೇವೆ ಎನ್ನುವುದನ್ನು ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಅವರು ಏನು ಮಾಡಬಹುದು ಎನ್ನುವುದನ್ನು ತಿಳಿದುಕೊಳ್ಳಲು ಅನುವು ಮಾಡಿಕೊಡುವ ಒಂದು ನಿಲುಗಡೆಯ ತಾಣವಾಗಿದೆ. ನಮ್ಮ Snapchat ಗೆ ಪೋಷಕರ ಮಾರ್ಗದರ್ಶಿ ಸೇರಿದಂತೆ ನಮ್ಮ ಸಮರ್ಪಿತ ಪೋಷಕರ ಮೇಲೆ ಗಮನಕೇಂದ್ರಿತ ವೆಬ್‌ಸೈಟ್‌ಗೆ ಪೋಷಕರು ಭೇಟಿ ನೀಡಬಹುದು ಮತ್ತು ನಮ್ಮ ಪೋಷಕರ ನಿಯಂತ್ರಣ ಟೂಲ್ ಕೌಟುಂಬಿಕ ಕೇಂದ್ರವನ್ನುಸಕ್ರಿಯಗೊಳಿಸುವುದು ಹೇಗೆ ಎಂದು ತಿಳಿದುಕೊಳ್ಳಬಹುದು. ಶೀಘ್ರದಲ್ಲಿ, My AI ಪ್ರೊಫೈಲ್ ಪುಟದ ಮೂಲಕ ಗೌಪ್ಯತೆ ಮತ್ತು ಸುರಕ್ಷತೆ ಹಬ್ ಅನ್ನು ನೇರವಾಗಿ ಪ್ರವೇಶಿಸಬಹುದು ಮತ್ತು ಈ ವರ್ಷದಲ್ಲಿ, ಪೋಷಕರು ಕೌಟುಂಬಿಕ ಕೇಂದ್ರದಲ್ಲಿ My AI ಅನ್ನು ನಿಷ್ಕ್ರಿಯಗೊಳಿಸಲೂಬಹುದು. 
ಬಳಕೆದಾರರ ಗೌಪ್ಯತೆಗೆ ನಿರ್ಣಾಯಕವಾಗಿರುವ, ಖಾತೆ ಭದ್ರತೆಗಾಗಿ ಮೀಸಲಾಗಿರುವ ಕೆಲವು ಸಂಪನ್ಮೂಲಗಳನ್ನು ಕೂಡ ನಾವು ಇತ್ತೀಚೆಗೆ ಬಿಡುಗಡೆ ಮಾಡಿದ್ದೇವೆ. ಈ ವಾರ, ನಮ್ಮ ಗೌಪ್ಯತೆ ಮತ್ತು ಸುರಕ್ಷತೆ ಹಬ್‌ನಲ್ಲಿ ನಮ್ಮ ಸಮುದಾಯಕ್ಕೆ ಭದ್ರತೆಯ ಮೂಲಕ ಗೌಪ್ಯತೆಯ ಕುರಿತು ಸಲಹೆಗಳನ್ನು ಒದಗಿಸುವ ಒಂದು ಮೀಸಲಾದ ಪುಟ, Snapchat ನಲ್ಲಿ ನಿಮ್ಮ ಇಮೇಲ್ ಮತ್ತು ಫೋನ್ ಸಂಖ್ಯೆಯನ್ನು ಪರಿಶೀಲಿಸುವುದು ಹೇಗೆ ಎನ್ನುವ ಕುರಿತು ಸೂಚನೆಗಳನ್ನು ಒಳಗೊಂಡ ಒಂದು ಸುರಕ್ಷತಾ ಸ್ನ್ಯಾಪ್‌ಶಾಟ್ ಸಂಚಿಕೆ ಮತ್ತು ಅಂತರ್ನಿರ್ಮಿತ ಸುರಕ್ಷತಾ ಸಲಹೆಗಳ ಜೊತೆಗೆ ಒಂದು ವಿಶಿಷ್ಟ ಡೇಟಾ ಗೌಪ್ಯತೆ ದಿನದ ಲೆನ್ಸ್ ಅನ್ನು ಬಿಡುಗಡೆ ಮಾಡಿದ್ದೇವೆ. ಪ್ರಮುಖ ಗೌಪ್ಯತೆ ಸಂಸ್ಥೆ Future Privacy Forum (FPF) ಜೊತೆಗೆ ಸಹ-ರಚನೆ ಮಾಡಲಾಗಿರುವ ಲೆನ್ಸ್, Snapchatter ಗಳಿಗೆ ಆನ್‌ಲೈನ್‌ನಲ್ಲಿ ತಮ್ಮ ಗೌಪ್ಯತೆಯನ್ನು ರಕ್ಷಿಸಿಕೊಳ್ಳಲು ಅತ್ಯುತ್ತಮ ಅಭ್ಯಾಸಗಳನ್ನು ಒದಗಿಸುತ್ತದೆ.
ಇಂದು ನಿಮ್ಮ ಸೆಟ್ಟಿಂಗ್‌ಗಳನ್ನು ವಿಮರ್ಶಿಸಲು ತುಸು ಸಮಯ ತೆಗೆದುಕೊಳ್ಳಿ, ನಿಮ್ಮ ಖಾತೆ ಭದ್ರತೆಯನ್ನು ಬಲಪಡಿಸಿ ಮತ್ತು ನಿಮ್ಮ ಆತ್ಮೀಯ ಸ್ನೇಹಿತರು ಮತ್ತು ಕುಟುಂಬದವರ ಜೊತೆಗೆ ನಮ್ಮ ಗೌಪ್ಯತೆ ಲೆನ್ಸ್ ಮತ್ತು ಸ್ಟಿಕ್ಕರ್‌ಗಳನ್ನು ಹಂಚಿಕೊಳ್ಳಿ! 
ಡೇಟಾ ಗೌಪ್ಯತೆ ದಿನದ ಶುಭಾಶಯಗಳು!
ಸುದ್ದಿಗೆ ಹಿಂತಿರುಗಿ