ಒಂದು ವಿವರಣೆ – My AI ಮತ್ತು ಸ್ಥಳ ಹಂಚಿಕೊಳ್ಳುವಿಕೆ

ಏಪ್ರಿಲ್ 25, 2023

ಕಳೆದ ವಾರ ನಾವು ನಮ್ಮ AI ಸಂಚಾಲಿತ ಚಾಟ್‌ಬಾಟ್ ಆದ My AI, ನಮ್ಮ Snapchat ಸಮುದಾಯಕ್ಕೆ ಬಿಡುಗಡೆಯಾಗಲಿದೆ ಎಂದು ಪ್ರಕಟಿಸಿದ್ದೆವು. Snapchatter ಗಳ ಆರಂಭಿಕ ಪ್ರತಿಕ್ರಿಯೆಗಳನ್ನು ವೀಕ್ಷಿಸಲು ರೋಮಾಂಚನಕಾರಿಯಾಗಿದೆ ಮತ್ತು My AI ಅನ್ನು ಇನ್ನಷ್ಟು ಸುಧಾರಿಸಲು ಅವರ ಪ್ರತಿಕ್ರಿಯೆಗಾಗಿ ನಾವು ಕೃತಜ್ಞರಾಗಿದ್ದೇವೆ. My AI, Snapchatter ಗಳ ಸ್ಥಳ ಮಾಹಿತಿಯನ್ನು ಬಳಸಬಹುದಾದ ವಿಧಾನಗಳ ಕುರಿತು ನಾವು ಸ್ಪಷ್ಟನೆ ನೀಡಲು ಬಯಸಿದ್ದೇವೆ.
Snapchatter ಗಳಿಂದ My AI ಯಾವುದೇ ಹೊಸ ಸ್ಥಳದ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ನಮ್ಮ ಬೆಂಬಲ ಪುಟದಲ್ಲಿ ವಿವರಿಸಿರುವಂತೆ, Snapchatter ಗಳು ಈಗಾಗಲೇ Snapchat ಗೆ ಅನುಮತಿ ನೀಡಿದ್ದರೆ ಮಾತ್ರ ಚಾಟ್‌ಬಾಟ್ ಅವರ ಸ್ಥಳಕ್ಕೆ ಪ್ರವೇಶ ಹೊಂದಿರುತ್ತದೆ (ಇದು Snap ಮ್ಯಾಪ್‌ನಲ್ಲೂ ಅವರ ಸ್ಥಳವನ್ನು ಹಂಚಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸುತ್ತದೆ). ನಮ್ಮ ಸಮುದಾಯಕ್ಕೆ ಇನ್ನಷ್ಟು ಪಾರದರ್ಶಕತೆ ಒದಗಿಸಲು, ನಮ್ಮ ತಂಡವು My AI ಗೆ ಅಪ್‌ಡೇಟ್‌ಗಳನ್ನು ಮಾಡಿದ್ದು, ಅದಕ್ಕೆ Snapchatter ಗಳ ಸ್ಥಳ ಯಾವಾಗ ತಿಳಿದಿರುತ್ತದೆ ಮತ್ತು ಯಾವಾಗ ತಿಳಿದಿರುವುದಿಲ್ಲ ಎನ್ನುವ ಕುರಿತು ಸ್ಪಷ್ಟಪಡಿಸುತ್ತದೆ.  
Snapchat ನಲ್ಲಿ ಸ್ಥಳ ಹಂಚಿಕೊಳ್ಳುವುದು
ಗೌಪ್ಯತೆಯು ನಮಗೆ ಮೂಲಭೂತ ಮೌಲ್ಯವಾಗಿದೆ — ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ದೃಶ್ಯರೂಪದಲ್ಲಿ ಸಂವಹನ ನಡೆಸಲು ಸಹಾಯ ಮಾಡುವ ನಮ್ಮ ಮೂಲಭೂತ ಬಳಕೆಯ ಸನ್ನಿವೇಶಕ್ಕೆ ನಿರ್ಣಾಯಕವಾಗಿದೆ. ನಮ್ಮ ಆ್ಯಪ್‌ನಾದ್ಯಂತ ನಾವು ಸಂಗ್ರಹಿಸುವ ಡೇಟಾದ ಪ್ರಮಾಣವನ್ನು ಕನಿಷ್ಟಗೊಳಿಸಲು ನಾವು ಪ್ರಯತ್ನಿಸುತ್ತೇವೆ ಮತ್ತು ನಮ್ಮ ಪ್ರತಿ ಉತ್ಪನ್ನಗಳು ನಮ್ಮ ಸಮುದಾಯದ ಡೇಟಾವನ್ನು ಹೇಗೆ ಬಳಸುತ್ತವೆ ಎನ್ನುವ ಕುರಿತು ಅವರೊಂದಿಗೆ ಸಾಧ್ಯವಾದಷ್ಟು ಪಾರದರ್ಶಕವಾಗಿರುವ ಗುರಿ ಹೊಂದಿದ್ದೇವೆ.
ಎಲ್ಲ Snapchatter ಗಳಿಗೆ ನಿಖರ ಸ್ಥಳ ಹಂಚಿಕೊಳ್ಳುವಿಕೆ ಡೀಫಾಲ್ಟ್ ಆಗಿ ಆಫ್ ಆಗಿರುತ್ತದೆ ಮತ್ತು ನೀವು ಅದನ್ನು ಹಂಚಿಕೊಳ್ಳಲು ಸಮ್ಮತಿಸಿದರೆ ಮಾತ್ರ Snapchat ನಿಮ್ಮ ಸ್ಥಳವನ್ನು ಪ್ರವೇಶಿಸಬಹುದು. Snapchat ಜೊತೆಗೆ ನಿಮ್ಮ ಸ್ಥಳವನ್ನು ಹಂಚಿಕೊಳ್ಳುವುದನ್ನು ಲೆನ್ಸ್‌ಗಳು, ಹುಡುಕಾಟ ಮತ್ತು ಜಾಹೀರಾತುಗಳಂತಹ ಭೌಗೋಳಿಕವಾಗಿ ಪ್ರಸ್ತುತವಾಗಿರುವ ವೈಶಿಷ್ಟ್ಯಗಳೊಂದಿಗಿನ Snapchat ಅನುಭವವನ್ನು ಸುಧಾರಿಸುವುದಕ್ಕಾಗಿ ಬಳಸಬಹುದು.
ನಮ್ಮ Snap ಮ್ಯಾಪ್ ಬಳಕೆದಾರರಿಗೆ ತಮ್ಮ ಪ್ರಸ್ತುತ ಇರುವ ಸ್ನೇಹಿತರೊಂದಿಗೆ ಮಾತ್ರ ತಮ್ಮ ಸ್ಥಳವನ್ನು ಹಂಚಿಕೊಳ್ಳುವ ಹಾಗೂ Snapchat ನಲ್ಲಿ ಈಗಾಗಲೇ ಪರಸ್ಪರ ಸ್ನೇಹಿತರಾಗಿಲ್ಲದ ಸಂಪರ್ಕಗಳೊಂದಿಗೆ ಸ್ಥಳವನ್ನು ಹಂಚಿಕೊಳ್ಳದೆ ಇರುವ ಆಯ್ಕೆಯ ಅವಕಾಶವನ್ನು ಒದಗಿಸುತ್ತದೆ.
ಇದು My AI ಗೆ ಹೇಗೆ ಅನ್ವಯಿಸುತ್ತದೆ
ಒಬ್ಬ Snapchatter ಮೊದಲ ಬಾರಿಗೆ My AI ಅನ್ನು ಬಳಸಿದಾಗ, ಪ್ರತಿಕ್ರಿಯೆಗಳನ್ನು ವೈಯಕ್ತಿಕಗೊಳಿಸಲು Snapchat ಜೊತೆಗೆ ಅವರು ಹಂಚಿಕೊಳ್ಳುವ ಮಾಹಿತಿಯನ್ನು ಅದು ಬಳಸಬಹುದು ಎನ್ನುವುದನ್ನು ವಿವರಿಸುವ ಸೂಚನೆಯನ್ನು ಅವರು ಸ್ವೀಕರಿಸುತ್ತಾರೆ. ನೀವು Snapchat ಜೊತೆಗೆ ನಿಮ್ಮ ಸ್ಥಳ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರೆ ಮಾತ್ರ ನಿಮ್ಮ ವಿನಂತಿಗಳಿಗೆ ಪ್ರತಿಕ್ರಿಯೆಯಾಗಿ My AI ನಿಮ್ಮೊಂದಿಗೆ ವೈಯಕ್ತಿಕಗೊಳಿಸಿದ ಸ್ಥಳ ಶಿಫಾರಸುಗಳನ್ನು ಹಂಚಿಕೊಳ್ಳುತ್ತದೆ. 
ನೀವು Snapchat ಜೊತೆಗೆ ನಿಮ್ಮ ಸ್ಥಳವನ್ನು ಹಂಚಿಕೊಳ್ಳಲು ಆಯ್ಕೆ ಮಾಡಿದರೆ, ನೀವು ಕೇಳಿದಾಗ ನಿಮಗೆ ಉಪಯುಕ್ತ ಸ್ಥಳ ಶಿಫಾರಸುಗಳನ್ನು ಒದಗಿಸಲು, ನೀವು ಎಲ್ಲಿದ್ದೀರಿ ಎನ್ನುವ ಮತ್ತು ನಿಮ್ಮ ಸುತ್ತಲಿನ ಪ್ರದೇಶಗಳ ಕುರಿತ Snapchat ನ ಜ್ಞಾನವನ್ನು ಬಳಸಿಕೊಳ್ಳುವ ಸಾಮರ್ಥ್ಯ My AI ಗೆ ಇದೆ. ಉದಾಹರಣೆಗೆ — ಒಂದು ವೇಳೆ ನೀವು Snapchat ಜೊತೆಗೆ ನಿಮ್ಮ ಸ್ಥಳ ಹಂಚಿಕೊಂಡಿದ್ದರೆ ಮತ್ತು My AI ಅನ್ನು "ನನ್ನ ಸಮೀಪದಲ್ಲಿರುವ ಉತ್ತಮ ಇಟಾಲಿಯನ್ ರೆಸ್ಟೊರಂಟ್‌ಗಳು ಯಾವುವು?" ಎಂದು ಪ್ರಶ್ನೆ ಕೇಳಿದರೆ, ಅದು Snap ಮ್ಯಾಪ್‌ನಿಂದ ಸಮೀಪದ ಸಲಹೆಗಳನ್ನು ನೀಡಬಲ್ಲದು. 
ಒಂದು ವೇಳೆ Snapchatter ಗಳು Snapchat ಜೊತೆಗೆ ತಮ್ಮ ಸ್ಥಳ ಹಂಚಿಕೊಳ್ಳುವುದನ್ನು ನಿಲ್ಲಿಸಿದರೆ, My AI ನಲ್ಲಿ ಅದು ಜಾರಿಗೆ ಬರುವುದಕ್ಕೆ ಒಂದಿಷ್ಟು ಸಮಯ ತೆಗೆದುಕೊಳ್ಳಬಹುದು. My AI ಕುರಿತು ನಮ್ಮೊಂದಿಗೆ ಪ್ರತಿಕ್ರಿಯೆ ಹಂಚಿಕೊಳ್ಳುವುದನ್ನು ಮತ್ತು ಯಾವುದೇ ತಪ್ಪಾದ ಪ್ರತಿಕ್ರಿಯೆಗಳ ಕುರಿತು ನಮ್ಮ ತಂಡಕ್ಕೆ ವರದಿ ಮಾಡುವುದನ್ನು ಮುಂದುವರಿಸುಂತೆ ನಾವು Snapchatter ಗಳನ್ನು ಪ್ರೋತ್ಸಾಹಿಸುತ್ತೇವೆ — ಇದರಿಂದಾಗಿ ನಾವು My AI ಅನ್ನು ಇನ್ನಷ್ಟು ನಿಖರ, ವಿನೋದಮಯ ಮತ್ತು ಉಪಯುಕ್ತವಾಗಿಸುವ ನಿಟ್ಟಿನಲ್ಲಿ ಕೆಲಸ ಮುಂದುವರಿಸಬಹುದು. 
ಸುದ್ದಿಗೆ ಹಿಂತಿರುಗಿ