2024 ರ ಚುನಾವಣೆಗಳಿಗೆ ಯೋಜನೆ
ಜನವರಿ 23, 2024
Snap ನಲ್ಲಿ ನಾವು ನಾಗರೀಕರ ಸ್ವಯಂ ಅಭಿವ್ಯಕ್ತಿಯು ಅತ್ಯಂತ ಶಕ್ತಿಶಾಲಿ ವಿಧಾನವಾಗಿದೆ ಎಂದು ನಾವು ಯಾವಾಗಲೂ ನಂಬಿದ್ದೇವೆ. ಜನರಿಗೆ ತಮ್ಮನ್ನು ತಾವು ಅಭಿವ್ಯಕ್ತಿಗೊಳಿಸಲು ಒಂದು ವೇದಿಕೆಯಾಗಿ ಹಾಗೂ ಮೊದಲ ಬಾರಿಗೆ ಮತದಾನ ಮಾಡುತ್ತಿರುವವರೊಂದಿಗೆ ಹೆಚ್ಚಿನ ಸಂಪರ್ಕ ಹೊಂದಿದ್ದೇವೆ. ಇದರಿಂದಾಗಿ ನಾವು ನಮ್ಮ ಸಮುದಾಯಕ್ಕೆ ನೈಜವಾದ ಮತ್ತು ನಂಬಿಕಸ್ಥ ಮಾಹಿತಿ ಮತ್ತು ಸುದ್ದಿಯನ್ನು ತಲುಪಿಸುವುದನ್ನು ಆದ್ಯತೆಯನ್ನಾಗಿರಿಸಿಕೊಂಡಿದ್ದೇವೆ. ಅಲ್ಲದೆ ವಿಶ್ವಾದ್ಯಂತ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳು ಮತ್ತು ತಮ್ಮ ಸ್ಥಳೀಯ ಚುನಾವಣೆಯಲ್ಲಿ ಹೇಗೆ ಮತದಾನ ಮಾಡಬಹುದು ಎನ್ನುವುದನ್ನು ಕೂಡ ತಿಳಿಸುತ್ತೇವೆ. ಸುಮಾರು 50 ಕ್ಕೂ ಹೆಚ್ಚು ದೇಶಗಳಲ್ಲಿ 2024 ರಲ್ಲಿ ಚುನಾವಣೆ ಸಜ್ಜಾಗುತ್ತಿವೆ. ಮುಂದಿನ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಸೂಕ್ತ ಬೆಳವಣಿಗೆಗಳ ಮೇಲ್ವಿಚಾರಣೆ ನಡೆಸಲು ನಾವು ನಮ್ಮ ದೀರ್ಘಕಾಲದ ಚುನಾವಣಾ ತಂಡವನ್ನು ಮರುಸ್ಥಾಪಿಸಿಕೊಳ್ಳುತ್ತಿದ್ದೇವೆ. ಇದರಲ್ಲಿ ತಪ್ಪು ಮಾಹಿತಿ, ರಾಜಕೀಯ ಜಾಹೀರಾತು, ಮತ್ತು ಸೈಬರ್ ಸೆಕ್ಯೂರಿಟಿ ತಜ್ಞರು ಒಳಗೊಂಡಿದ್ದು ಮುಂಬರುವ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಸೂಕ್ತ ಬೆಳವಣಿಗೆಗಳನ್ನು ವೀಕ್ಷಿಸಲು ಸಜ್ಜಾಗುತ್ತಿದ್ದಾರೆ. ಅವರುಗಳ ಮುಖ್ಯ ಕೆಲಸದ ಜೊತೆಗೆ, ನಾವು ಈ ವರ್ಷದ ಚುನಾವಣೆಗಳಿಗೆ ಸಂಬಂದಿಸಿದಂತೆ ನಮ್ಮ ಯೋಜನೆಯನ್ನು ಹಂಚಿಕೊಳ್ಳಲು ಬಯಸುತ್ತೇವೆ.
ತಪ್ಪು ಮಾಹಿತಿ ಹರಡುವಿಕೆಯನ್ನು ತಪ್ಪಿಸಲು ಸಹಾಯಕವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ
ನಮ್ಮ ಸಂಸ್ಥಾಪಕರು ಆರಂಭಿಕ ದಿನಗಳಿಂದಲೂ ಇತರ ಸಾಮಾಜಿಕ ಮಾಧ್ಯಮ ಪ್ಲ್ಯಾಟ್‌ಫಾರ್ಮ್ಸ್ ಗಳಿಗಿಂತ Snapchat ಬಹಳ ಭಿನ್ನವಾಗಿರುವ ರೀತಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. Snapchat ಇದು ಪರಿಶೀಲನೆಗೆ ಒಳಪಡದ ಯಾವುದೇ ಸಾಮಗ್ರಿಯನ್ನು ನಿರಂತರವಾಗಿ ಫೀಡ್ ಮಾಡಲು ಅವಕಾಶ ನೀಡುವುದಿಲ್ಲ ಮತ್ತು ಜನರು ಲೈವ್ ಸ್ಟ್ರೀಮ್ ಮಾಡಲು ಅವಕಾಶ ನೀಡುವುದಿಲ್ಲ. ತಪ್ಪು ಮಾಹಿತಿಯನ್ನು ಸಮರ್ಥಿಸುವಂತೆ ನಾವು ನಮ್ಮ ಕಂಪ್ಯೂಟರ್ ಪ್ರೊಗ್ರಾಂ ಅನ್ನು ಯಾವುದೇ ಕಾರಣಕ್ಕೂ ಪ್ರೊಗ್ರಾಂ ಮಾಡಿರುವುದಿಲ್ಲ ಮತ್ತು ನಾವು ಗ್ರೂಪ್ಗಳನ್ನು ಶಿಫಾರಸ್ಸು ಮಾಡುವುದಿಲ್ಲ. ಬದಲಾಗಿ, ಇದನ್ನು ಹೆಚ್ಚು ಪ್ರೇಕ್ಷಕರಿಗೆ ತಲುಪಿಸುವ ಮೊದಲು ನಾವು ಇದನ್ನು ಬದಲಾಯಿಸುತ್ತೇವೆ. ನಾವು ವಿಶ್ವದಾದ್ಯಂತ ಸುದ್ದಿಗಳನ್ನು ಯಾವತ್ತೂ ನಂಬಿಗಸ್ಥ ಮಾಧ್ಯಮ ಪಾಲುದಾರರಿಂದ ಪಡೆದುಕೊಳ್ಳುತ್ತೇವೆ. ಉದಾಹರಣೆಗೆ ಯುಎಸ್ ನಲ್ಲಿ ವಾಲ್ ಸ್ಟ್ರೀಟ್ ಜರ್ನಲ್, ಫ್ರಾನ್ಸ್ ನಲ್ಲಿ ಲೆ ಮೊಂಡೆ ಹಾಗೂ ಭಾರತದಲ್ಲಿ ಟೈಮ್ಸ್ ನೌ.
ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು, Snapchat ನ ಎಲ್ಲ ಖಾತೆಗಳಿಗೆ ಸಮಾನವಾಗಿ ಅನ್ವಯಿಸುತ್ತದೆ. ಇದು ಯಾವಾಗಲೂ ತಪ್ಪು ಮಾಹಿತಿ ಮತ್ತು ಉದ್ದೇಶಪೂರ್ವಕವಾಗಿ ತಪ್ಪು ದಾರಿಗೆ ಸಾಗುವಂತೆ ಮಾಡುವ ವಿಷಯಗಳಿಗೆ, ಉದಹಾರಣೆಗೆ ಡೀಪ್ ಫೇಕ್ಸ್, ಇಲ್ಲವೇ ಚುನಾವಣೆಯ ಸಮಗ್ರತೆಗೆ ಕುಂದುಂಟು ಮಾಡುವ ವಿಷಯ ಸೇರಿದಂತೆ ಇತರ ಅಂಶಗಳನ್ನು ನಿಷೇಧಿಸುತ್ತದೆ. ಸಾರ್ವಜನಿಕ ವಿಷಯಗಳನ್ನು ನೋಡಬಹುದಾದ ಸ್ನಾಪ್ ಚಾಟರ್ಸ್ ಆ್ಯಪ್ ವಿಭಾಗದಲ್ಲಿ ನಾವು ಹೆಚ್ಚಿನ ಗುಣಮಟ್ಟದ ಅಂಶಗಳನ್ನು ನಾವು ಹೊಂದಿದ್ದೇವೆ. ತಂತ್ರಜ್ಞಾನಗಳು ಅಭಿವೃದ್ದಿ ಹೊಂದಿದಂತೆ ನಾವು ಎಲ್ಲ ವಿಷಯ ಸ್ವರೂಪಗಳನ್ನು ಒಳಗೊಳ್ಳಲು ನಮ್ಮ ನೀತಿಗಳನ್ನು ಪರಿಷ್ಕರಿಸಿದ್ದೇವೆ. ಇದು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲ್ಪಟ್ಟ ವಿಷಯಗಳಾಗಿರಬಹುದು ಅಥವಾ ಮಾನವ ನಿರ್ಮಿತವಾಗಿರಬಹುದು. ಈ ರೀತಿಯ ವಿಷಯ ಸಕ್ರಿಯವಾಗಿ ಕಂಡುಬಂದರೆ ಅಥವಾ ನಮಗೆ ಈ ಕುರಿತು ಯಾರಾದರೂ ವರದಿ ಮಾಡಿದರೆ, ನಾವು ಅಂತಹ ವಿಷಯವನ್ನು ತಕ್ಷಣ ತೆಗೆಡುಹಾಕುವ ಮೂಲಕ Snapchat ಅಥವಾ ಇತರ ಪ್ಲ್ಯಾಟ್‌ಫಾರ್ಮ್ಸ್ ಗಳಲ್ಲಿ ಇದು ಹರಡದಂತೆ ತಡೆಯುತ್ತೇವೆ.
ಹಲವು ವರ್ಷಗಳಿಂದ, ನಮ್ಮ ವಿವಿಧ ಪ್ಲಾಟ್ಫಾರ್ಮ್ ವಿನ್ಯಾಸಗಳು ನಕಲಿ ಸುದ್ದಿ ಮತ್ತು ಒಳಸಂಚಿನ ಸಿದ್ಧಾಂತಗಳು ಗುಲ್ಲೆಬ್ಬಿಸುವ ಮೊದಲೇ ಅದನ್ನು ತಡೆಯಲು ಅನುಕೂಲವಾಗುವಂತೆ ಸಹಾಯ ಮಾಡಿವೆ. ಉದಾಹರಣೆಗೆ 2022ರಲ್ಲಿ ಕಳೆದ ಅಮೇರಿಕಾದ ಮಧ್ಯಂತರ ಚುನಾವಣೆ ಸಂದರ್ಭದಲ್ಲಿ, ಕೇವಲ 1,000 ಕ್ಕೂ ಹೆಚ್ಚು ಸುಳ್ಳು ಮಾಹಿತಿಯನ್ನು ಜಾಗತಿಕವಾಗಿ ತೆಗೆದುಹಾಕಲಾಯಿತು, ಇದನ್ನು ನಮ್ಮ ತಂಡಗಳು ಕೇವಲ ಒಂದು ಗಂಟೆಯೊಳಗೆ ಸಾಮಾನ್ಯವಾಗಿ ಕ್ರಮ ಕೈಗೊಂಡವು. ಈ ಪ್ರಮಾಣವನ್ನು 2024 ರಲ್ಲಿ ಇನ್ನಷ್ಟು ಕಡಿಮೆಗೊಳಿಸುವುದು ನಮ್ಮ ಗುರಿಯಾಗಿದೆ.
ರಾಜಕೀಯ ಜಾಹೀರಾತು ನೀಡುವಿಕೆ ಹೆಚ್ಚುವರಿ ಸುರಕ್ಷತಾ ಕ್ರಮ
ಚುನಾವಣೆ ಮತ್ತು ತಪ್ಪು ಮಾಹಿತಿ ವಿರುದ್ಧ ರಕ್ಷಣೆಗಾಗಿ ನಾವು ರಾಜಕೀಯ ಜಾಹೀರಾತುಗಳಿಗೆ ವಿಶಿಷ್ಟ ವಿಧಾನವನ್ನು ಕೈಗೊಂಡಿದ್ದೇವೆ. ರಾಜಕೀಯ ಜಾಹೀರಾತುಗಳನ್ನು ಪರಿಶೀಲಿಸಲು ನಾವು ನುರಿತವರನ್ನೇ ಬಳಸುತ್ತೇವೆ. ಪಾರದರ್ಶಕತೆ ಮತ್ತು ನಿಖರತೆಯಲ್ಲಿ ನಮ್ಮ ಗುಣಮಟ್ಟವನ್ನು ದೃಢಪಡಿಸುವ ಸಂಸ್ಥೆಗಳನ್ನೇ ನಾವು ಬಳಸುತ್ತೇವೆ. ನಮ್ಮ ಪರಿಶೀಲನಾ ಪ್ರಕ್ರಿಯೆಯು ಎಐ ನಿರ್ಮಿತ ಚಿತ್ರಗಳು ಅಥವಾ ವಿಷಯಗಳನ್ನು ಪರಿಶೀಲಿಸಲು ವಿವರವಾದ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ.
ಜಾಹೀರಾತುಗಳನ್ನು ಪ್ರಕಟಿಸಲು ಜಾಹೀರಾತುಗಳ ಪ್ರಕಟಣೆಗೆ ಯಾರು ಹಣ ಪಾವತಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು. ಚುನಾವಣೆ ನಡೆಯುತ್ತಿರುವ ದೇಶದ ಹೊರಗಿನ ವಿದೇಶಿ ಸರ್ಕಾರಗಳು ಅಥವಾ ಯಾವುದೇ ವ್ಯಕ್ತಿಗಳಿಗೆ ನಾವು ಜಾಹೀರಾತುಗಳನ್ನು ಪ್ರಕಟಿಸಲು ಅವಕಾಶ ನೀಡುವುದಿಲ್ಲ. ಯಾವ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸಲು ಅನುಮತಿಸಲಾಗಿದೆ ಎಂಬುದು ಮತ್ತು ಅವುಗಳನ್ನು ಸಾರ್ವಜನಿಕರು ತಿಳಿದುಕೊಳ್ಳಲು ಸಹಾಯಕವಾಗುವಂತೆ ರಾಜಕೀಯ ಜಾಹೀರಾತು ಲೈಬ್ರರಿಯಲ್ಲಿಇರಿಸುವಂತೆ ಕೇಳಿಕೊಳ್ಳುವುದನ್ನು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ನಂಬಿದ್ದೇವೆ.
Snapchat ಯಾವತ್ತೂ ಜವಾಬ್ದಾರಿಯುತ, ನಿಖರ ಮತ್ತು ಸಹಾಯಕವಾಗುವಂತಹ ಸುದ್ದಿ ಮತ್ತು ಮಾಹಿತಿ ಪಡೆಯಲು ಸೂಕ್ತ ಎಂಬುದನ್ನು ನಾವು ಖಾತ್ರಿಗೊಳಿಸಿಕೊಳ್ಳಲು ಬದ್ಧವಾಗಿದ್ದೇವೆ. ಸ್ಥಳೀಯ ಚುನಾವಣೆಗಳಲ್ಲಿ ಭಾಗವಹಿಸಲು ನಮ್ಮ ಸಮುದಾಯವನ್ನು ಸಬಲೀಕರಣಗೊಳಿಸುವುದನ್ನು ಮುಂದುವರಿಸಲು ನಾವು ಬಯಸುತ್ತೇವೆ ಮತ್ತು ಮುಂದಿನ ತಿಂಗಳುಗಳಲ್ಲಿ ಮತದಾನ ಮಾಡಲು ಸ್ನಾಪ್ ಚಾಟರ್ಗಳಿಗೆ ಸಹಾಯ ಮಾಡಲು ನಮ್ಮ ಯೋಜನೆಗಳ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುತ್ತೇವೆ.