2023 ರ ಪ್ರಥಮಾರ್ಧಕ್ಕೆ ನಮ್ಮ ಪಾರದರ್ಶಕತೆಯ ವರದಿ

ಅಕ್ಟೋಬರ್ 25, 2023

ಇಂದು ನಾವು ನಮ್ಮ ಇತ್ತೀಚಿನ ಪಾರದರ್ಶಕತೆಯ ವರದಿಯನ್ನು ಬಿಡುಗಡೆ ಮಾಡುತ್ತಿದ್ದು, ಇದು 2023 ರ ಪ್ರಥಮಾರ್ಧವನ್ನು ಒಳಗೊಂಡಿದೆ. 

ಜನರು ತಮ್ಮನ್ನು ಅಭಿವ್ಯಕ್ತಪಡಿಸಲು, ಆ ಕ್ಷಣದಲ್ಲಿ ಜೀವಿಸಲು, ಜಗತ್ತಿನ ಕುರಿತು ತಿಳಿದುಕೊಳ್ಳಲು ಮತ್ತು ಜೊತೆಯಾಗಿ ವಿನೋದಿಸಲು ಅವರಿಗೆ ಅವಕಾಶ ಕಲ್ಪಿಸುವುದು ನಮ್ಮ ಧ್ಯೇಯವಾಗಿದೆ. ಆ ಪ್ರತಿಯೊಂದು ಕೆಲಸವನ್ನು ಮಾಡುವಾಗಲೂ Snapchatter ಗಳು ಆರಾಮದಾಯಕ ಭಾವನೆಯನ್ನು ಹೊಂದುವುದಕ್ಕೆ ಸಹಾಯ ಮಾಡಲು ನಮ್ಮ ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮ ಅವಶ್ಯಕವಾಗಿದೆ. ನಮ್ಮನ್ನು ಉತ್ತರದಾಯಿಯಾಗಿ ಇರಿಸಿಕೊಳ್ಳಲು ಮತ್ತು ನಮ್ಮ ವೇದಿಕೆಯಲ್ಲಿ ಉಲ್ಲಂಘನೆ ಮಾಡುವ ಕಂಟೆಂಟ್ ಮತ್ತು ಖಾತೆಗಳ ವಿರುದ್ಧ ಹೋರಾಡುವ ನಮ್ಮ ಪ್ರಯತ್ನಗಳ ಕುರಿತು ಮಾಹಿತಿ ಮತ್ತು ಅಪ್‌ಡೇಟ್‌ಗಳನ್ನು ಹಂಚಿಕೊಳ್ಳಲು ನಮ್ಮ ಅರ್ಧವಾರ್ಷಿಕ ಪಾರದರ್ಶಕತೆಯ ವರದಿಗಳು ಪ್ರಮುಖ ಸಾಧನವಾಗಿದೆ.

ಪ್ರತಿ ಪಾರದರ್ಶಕತೆಯ ವರದಿಯಂತೆ, ನಾವು ಸುಧಾರಣೆಗಳನ್ನು ಮಾಡಲು ಶ್ರಮಿಸಿದ್ದೇವೆ ಹಾಗಾಗಿ ಈ ವರದಿಯು ನಮ್ಮ ಸಮುದಾಯ ಮತ್ತು ಪಾಲುದಾರರಿಗೆ ಇನ್ನಷ್ಟು ಉಪಯುಕ್ತವಾಗಿದೆ. ಈ ವರದಿಯಲ್ಲಿ, ನಾವು ಹಲವಾರು ಹೊಸ ಡೇಟಾ ಪಾಯಿಂಟ್‌ಗಳನ್ನು ಸೇರಿಸಿದ್ದೇವೆ, ಕೆಲವು ನಿರ್ದಿಷ್ಟವಾಗಿ ಯುರೋಪಿಯನ್ ಡಿಜಿಟಲ್ ಸೇವೆಗಳ ಕಾಯ್ದೆಗೆ ಸಂಬಂಧಿಸಿವೆ, ಈ ಕೆಳಗಿನವು ಸೇರಿದಂತೆ: 

ಖಾತೆ ಮೇಲ್ಮನವಿಗಳು

ಖಾತೆ ಮೇಲ್ಮನವಿಗಳ ನಮ್ಮ ಆರಂಭಿಕ ಬಿಡುಗಡೆಗೆ ಸಂಬಂಧಿಸಿದಂತೆ ನಾವು ಮಾಹಿತಿಯನ್ನು ಸೇರಿಸಿದ್ದೇವೆ. ಆರಂಭಿನ ನಿರ್ಧಾರದಲ್ಲಿ ತಪ್ಪಾಗಿದೆ ಎಂದು ನಮ್ಮ ಮಾಡರೇಷನ್ ತಂಡವು ನಿರ್ಧರಿಸಿದರೆ, ತಮ್ಮ ಖಾತೆಯಿಂದ ಲಾಕ್ ಔಟ್ ಆಗಿರುವ Snapchatter ಗಳಿಗೆ ಪ್ರವೇಶವನ್ನು ಮರುಪಡೆಯಲು ಖಾತೆ ಮೇಲ್ಮನವಿಗಳು ಅವಕಾಶ ಕಲ್ಪಿಸುತ್ತವೆ. ಭವಿಷ್ಯದ ಪಾರದರ್ಶಕತೆಯ ವರದಿಗಳಲ್ಲಿ ಇನ್ನಷ್ಟು ಕೆಟಗರಿಗಳಾದ್ಯಂತ ಮೇಲ್ಮನವಿಗಳೊಂದಿಗೆ ನಾವು ಈ ವಿಭಾಗವನ್ನು ಇನ್ನಷ್ಟು ಸುಧಾರಿಸುತ್ತಾವೆ.

ಜಾಹೀರಾತು ನೀಡುವಿಕೆ ಮಾಡರೇಷನ್ ಕ್ರಮಗಳು

ಯುರೋಪಿಯನ್ ಒಕ್ಕೂಟದ ಕಂಟೆಂಟ್‌ಗಾಗಿ ನಮ್ಮ ಜಾಹೀರಾತು ನೀಡುವಿಕೆ ಮಾಡರೇಷನ್ ಪ್ರಯತ್ನಗಳ ಪಾರದರ್ಶಕತೆಯನ್ನು ನಾವು ವಿಸ್ತರಿಸುತ್ತಿದ್ದೇವೆ. ನಮ್ಮ Snapchat ಜಾಹೀರಾತುಗಳ ಗ್ಯಾಲರಿ (EU ಗೆ ನಿರ್ದಿಷ್ಟವಾಗಿದೆ) ಬಿಡುಗಡೆ ಜೊತೆಗೆ, ಈಗ ನಾವು Snapchat ನಿಂದ ತೆಗೆದುಹಾಕಿದ ಜಾಹೀರಾತುಗಳ ಸಂಖ್ಯೆಯನ್ನು ಪ್ರಸ್ತುತಪಡಿಸಿದ್ದೇವೆ. ನಮ್ಮ ಪಾರದರ್ಶಕತೆಯ ವರದಿಯಲ್ಲಿ, Snapchat ಗೆ ವರದಿ ಮಾಡಲಾದ ಒಟ್ಟು ಜಾಹೀರಾತುಗಳ ಸಂಖ್ಯೆ ಹಾಗೂ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ವೇದಿಕೆಯಿಂದ ತೆಗೆದುಹಾಕಲಾದ ಒಟ್ಟು ಜಾಹೀರಾತುಗಳ ಸಂಖ್ಯೆಯನ್ನು ನಾವು ವಿವರಿಸಿದ್ದೇವೆ.

ಡಿಜಿಟಲ್ ಸೇವೆಗಳ ಕಾಯ್ದೆ ಪಾರದರ್ಶಕತೆ

ನಮ್ಮ DSA ಬಾಧ್ಯತೆಗಳೊಂದಿಗೆ ಅನುಸರಣೆ ಮಾಡುವುದಕ್ಕಾಗಿ ಮೊದಲ ಬಾರಿಗೆ ಸೇರಿಸಲಾಗಿದ್ದ, ನಮ್ಮ ಯುರೋಪಿಯನ್ ಒಕ್ಕೂಟ ಪುಟವನ್ನು ನಮ್ಮ ಮಾಡರೇಷನ್ ಅಭ್ಯಾಸಗಳು ಮತ್ತು EU-ಸಂಬಂಧಿತವಾದ ಮಾಹಿತಿಯ ಹೆಚ್ಚುವರಿ ಮಾಹಿತಿ ಹಾಗೂ ಒಳನೋಟಗಳೊಂದಿಗೆ ನಾವು ಪರಿಷ್ಕರಿಸಿದ್ದೇವೆ. ಉದಾಹರಣೆಗೆ, ಕಂಟೆಂಟ್ ವಿಮರ್ಶೆ ಮಾಡುವಾಗ ನಮ್ಮ ಮಾಡರೇಟರ್‌ಗಳು ಬೆಂಬಲಿಸುವ ಭಾಷೆಗಳ ಕುರಿತ ವಿವರವನ್ನು ನಾವು ಸೇರಿಸಿದ್ದೇವೆ. ಇತರವುಗಳ ಜೊತೆಗೆ, ನಮ್ಮ ಸ್ವಯಂಚಾಲಿತ ಕಂಟೆಂಟ್ ಮಾಡರೇಷನ್ ಟೂಲ್‌ಗಳು, ಕಂಟೆಂಟ್ ಮಾಡರೇಷನ್ ಸುರಕ್ಷತಾಕ್ರಮಗಳು ಮತ್ತು EU ನಲ್ಲಿ ನಮ್ಮ Snapchat ಆ್ಯಪ್‌ನ ಸರಾಸರಿ ಮಾಸಿಕ ಸಕ್ರಿಯ ಸ್ವೀಕೃತಿದಾರರ ಕುರಿತು ನಾವು ಇನ್ನಷ್ಟು ವಿವರಗಳನ್ನು ಒದಗಿಸಿದ್ದೇವೆ.

ವಿವರಿಸುವ ಮಾರ್ಗದರ್ಶಿ ಮತ್ತು ಪದಕೋಶ

ಪಾಲುದಾರರಿಗೆ ಸಾಕಷ್ಟು ಮಾಹಿತಿಯನ್ನು ಒದಗಿಸುವುದು ಈ ವರದಿಗಳಿಗೆ ಸಂಬಂಧಿಸಿದಂತೆ ನಮ್ಮ ಮುಖ್ಯ ಉದ್ದೇಶವಾಗಿರುವುದರಿಂದ, ನಮ್ಮ ಪಾರದರ್ಶಕತೆಯ ವರದಿಗಳು ತುಂಬಾ ಉದ್ದವಾಗಿರಬಹುದು ಎಂದು ನಮಗೆ ತಿಳಿದಿದೆ. ಇದನ್ನು ಸುಲಭವಾಗಿಸಲು, ನಾವು "Snap ನ ಪಾರದರ್ಶಕತೆಯ ವರದಿಗಳಿಗೆ ಒಂದು ಮಾರ್ಗದರ್ಶಿ"ಸೇರಿಸುವುದನ್ನು ಮುಂದುವರಿಸಿದ್ದೇವೆ ಮತ್ತು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಕುರಿತು ಇನ್ನಷ್ಟು ಮಾಹಿತಿ ಮತ್ತು ವಿವರಣೆಯನ್ನು ಒಳಗೊಳ್ಳಲು ಒಂದು ಪದಕೋಶವನ್ನು ಸೇರಿಸಿದ್ದೇವೆ. ಪ್ರತಿ ಕೆಟಗರಿಯ ಕಂಟೆಂಟ್‌ನ ಅರ್ಥವೇನು ಎನ್ನುವುದು ಸೇರಿದಂತೆ, ಪಾರದರ್ಶಕತೆಯ ವರದಿಗಳನ್ನು ಇನ್ನಷ್ಟು ಉತ್ತಮವಾಗಿ ವ್ಯಾಖ್ಯಾನಿಸುವುದು ಹೇಗೆ ಎಂದು ಅರ್ಥಮಾಡಿಕೊಳ್ಳಲು ಹಾಗೂ ನಮ್ಮ ಹಿಂದಿನ ವರದಿಗಳ ಹೋಲಿಕೆಯಲ್ಲಿ ಹೊಸತೇನಿದೆ ಎಂದು ಸುಲಭವಾಗಿ ಹೋಲಿಸಲು ಈ ಮಾಹಿತಿಯು ಪೋಷಕರು, ಆರೈಕೆ ಮಾಡುವವರು, ನಮ್ಮ ಸಮುದಾಯದ ಸದಸ್ಯರು ಮತ್ತು ನಮ್ಮ ಪಾಲುದಾರರಿಗೆ ಅವಕಾಶ ಕಲ್ಪಿಸುತ್ತದೆ. ಈಗ, ವರದಿಯಲ್ಲಿನ ತ್ವರಿತ ವ್ಯಾಖ್ಯಾನಕ್ಕಿಂತ ತುಸು ಹೆಚ್ಚಿನದನ್ನು ಅನ್ವೇಷಿಸಲು ಜನರು ಬಯಸಿದರೆ, ಇನ್ನಷ್ಟು ಮಾಹಿತಿಗಾಗಿ ಕ್ಲಿಕ್ ಮಾಡುವ ಮೂಲಕ ಅವರು ತ್ವರಿತವಾಗಿ ಇನ್ನಷ್ಟು ಮಾಹಿತಿಯನ್ನು ಪಡೆಯಬಹುದು.

ನಮ್ಮ ಸಮುದಾಯದ ಮತ್ತು ಪಾಲುದಾರರ ವಿಶ್ವಾಸ ಗಳಿಸಲು ಮತ್ತು ಉಳಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ನಮ್ಮ ಸಮುದಾಯವನ್ನು ಸುರಕ್ಷಿತವಾಗಿ ಇರಿಸಲು, ನಮ್ಮ ಪ್ರಗತಿಯ ಕುರಿತು ವರದಿ ಮಾಡಲು ಮತ್ತು ನಮ್ಮನ್ನು ಉತ್ತರದಾಯಿಗಳನ್ನಾಗಿ ಇರಿಸಲು ಸಹಾಯ ಮಾಡುವುದಕ್ಕಾಗಿ ಕೆಲಸ ಮಾಡುವುದನ್ನು ನಾವು ಮುಂದುವರಿಸುತ್ತೇವೆ.

ಸುದ್ದಿಗಳಿಗೆ ಹಿಂತಿರುಗಿ