ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯದ ವಿರುದ್ಧ ಹೋರಾಡಲು ಈ ರೀತಿಯ ಮೊತ್ತಮೊದಲ ಅಭಿಯಾನ
ಏಪ್ರಿಲ್ 17, 2024
ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯದ ವಿರುದ್ಧ ಹೋರಾಡಲು ಈ ರೀತಿಯ ಮೊತ್ತಮೊದಲ ಅಭಿಯಾನ
ಏಪ್ರಿಲ್ 17, 2024
ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯವು ಕಾನೂನುಬಾಹಿರ, ನೀಚ ಮತ್ತು ವಿನಮ್ರ ಸಂಭಾಷಣೆಯ ವಿಷಯವಾಗಿ, ಬಹುತೇಕ ಬಹಿಷ್ಕೃತವಾದುದಾಗಿದೆ. ಆದರೆ, ಈ ಭಯಾನಕ ಅಪರಾಧಗಳನ್ನು ನಿರ್ಲಕ್ಷಿಸಲಾಗದು. ಅವುಗಳ ಕುರಿತು ಸರ್ಕಾರದ ಶಾಸನಸಭೆಗಳಲ್ಲಿ, ಕಚೇರಿಗಳ ಆಡಳಿತ ಮಂಡಳಿಗಳಲ್ಲಿ ಮತ್ತು ಅಡುಗೆ ಮನೆಯ ಊಟದ ಮೇಜಿನಲ್ಲಿ ಚರ್ಚಿಸಬೇಕಾದ ಅಗತ್ಯವಿದೆ. ಹದಿಹರೆಯದವರಿಗೆ ಆನ್‌ಲೈನ್ ಲೈಂಗಿಕ ಅಪಾಯಗಳ ಕುರಿತು ತಿಳಿಹೇಳಬೇಕು ಮತ್ತು ವಯಸ್ಕರು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು, ಇದರಿಂದ ಅವರು ಬಿಕ್ಕಟ್ಟಿನ ಸಂದರ್ಭ ಹದಿಹರೆಯದವರಿಗೆ ಸಹಾಯ ಮಾಡಬಹುದು. ಆದ ಕಾರಣ U.S. ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ (DHS) ಇಂದು ಆರಂಭಿಸಿರುವ ಈ ರೀತಿಯ ಮೊತ್ತಮೊದಲ ಸಾರ್ವಜನಿಕ ಜಾಗೃತಿ ಅಭಿಯಾನ “Know2Protect” ನ ಸ್ಥಾಪಕ ಬೆಂಬಲಿಗ ಆಗಿರುವ ಕುರಿತು Snap ಹೆಮ್ಮೆ ಹೊಂದಿದೆ.
ನಿಷಿದ್ಧ ಚಿತ್ರಣಗಳ ಸೃಷ್ಟಿ ಮತ್ತು ವಿತರಣೆಯಿಂದ ಹಿಡಿದು ಲೈಂಗಿಕ ಉದ್ದೇಶಗಳಿಗಾಗಿ ಹಾಗೂ ಹಣಕಾಸಿನ ದುರಾಸೆಯಿಂದ ಕೂಡಿದ "ಲೈಂಗಿಕ ಸುಲಿಗೆ" ಗಾಗಿ ಮಕ್ಕಳನ್ನು ಗ್ರೂಮಿಂಗ್ ಮಾಡುವುದರವರೆಗೆ, ಮಕ್ಕಳು ಮತ್ತು ಹದಿಹರೆಯದವರ ಮೇಲೆ ಪರಿಣಾಮ ಬೀರುತ್ತಿರುವ ಹಲವು ಲೈಂಗಿಕ ಅಪಾಯಗಳ ಕುರಿತು Know2Protect ಬೆಳಕು ಚೆಲ್ಲಲಿದೆ. ಈ ಅಪರಾಧಗಳನ್ನು ತಡೆಯಲು ಮತ್ತು ಅವುಗಳ ವಿರುದ್ಧ ಹೋರಾಡಲು ಸಹಾಯ ಮಾಡುವುದಕ್ಕಾಗಿ ಈ ಅಭಿಯಾನವು ಯುವಜನರು, ಪೋಷಕರು, ವಿಶ್ವಾಸಾರ್ಹ ವಯಸ್ಕರು ಮತ್ತು ನೀತಿನಿರೂಪಕರಿಗೆ ಅರಿವು ಮೂಡಿಸಲಿದೆ ಮತ್ತು ಅವರನ್ನು ಸಬಲೀಕರಿಸಲಿದೆ.
DHS ಜೊತೆಗೆ Snap ಆರಂಭಿಕ ಸಹಯೋಗಿಯಾಗಿದೆ ಮತ್ತು ದೇಶದಾದ್ಯಂತ ಮತ್ತು ವಿಶ್ವದಾದ್ಯಂತ ಈ ಶ್ರೇಣಿಯ ಪ್ರೇಕ್ಷಕರಿಗೆ ಒಂದೇ ಧ್ವನಿಯ, ಪ್ರೇರಣಾದಾಯಕ ಸಂದೇಶ ನೀಡುವ ಅಗತ್ಯವಿದೆ ಎನ್ನುವುದನ್ನು ಒಪ್ಪುತ್ತದೆ. ಬೆಂಬಲಕ್ಕಾಗಿ, Snapchat ನಲ್ಲಿ ಶೈಕ್ಷಣಿಕ ಸಾಮಗ್ರಿಯನ್ನು ಪೋಸ್ಟ್ ಮಾಡಲು Know2Protect ಗಾಗಿ ಜಾಹೀರಾತು ನೀಡುವಿಕೆ ಸ್ಥಳವನ್ನು ನಾವು ದೇಣಿಗೆ ನೀಡಿದ್ದು, ಹದಿಹರೆಯದವರು ಇರುವಲ್ಲಿಯೇ ಅವರನ್ನು ತಲುಪಲು ನೆರವಾಗಿದ್ದೇವೆ ಮತ್ತು ಅಭಿಯಾನವನ್ನು ನಾವು ನಮ್ಮ ವೇದಿಕೆಯಲ್ಲಿ ಮತ್ತು ನಮ್ಮ ಗೌಪ್ಯತೆ ಮತ್ತು ಸುರಕ್ಷತಾ ಹಬ್‌ನಲ್ಲಿ ಪ್ರದರ್ಶಿಸುತ್ತೇವೆ.
ಇದರ ಜೊತೆಗೆ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯದ (CSEA) ವಿವಿಧ ಆಯಾಮಗಳ ಕುರಿತು U.S. ನಲ್ಲಿ ಹದಿಹರೆಯದವರು (13-17 ವಯಸ್ಸಿನವರು) ಮತ್ತು ಯುವಜನರೊಂದಿಗೆ (18-24 ವಯಸ್ಸಿನವರು) ನಾವು ಸಮೀಕ್ಷೆಯನ್ನು ನಡೆಸುತ್ತಿದ್ದು, ಇದು ಅಭಿಯಾನಕ್ಕೆ ಮತ್ತು ವೇದಿಕೆಗಳಾದ್ಯಂತ ಮತ್ತು ಸೇವೆಗಳಾದ್ಯಂತ ಈ ಭಯಾನಕ ದೌರ್ಜನ್ಯದ ವಿರುದ್ಧ ಹೋರಾಟ ಮುಂದುವರಿಸುವ ನಮ್ಮ ಸ್ವಂತ ಪ್ರಯತ್ನಗಳಿಗೆ ಇನ್ನಷ್ಟು ಮಾಹಿತಿ ಒದಗಿಸಲು ನೆರವಾಗಲಿದೆ.
ಸಂಶೋಧನೆಯ ಫಲಿತಾಂಶಗಳು
ಮಾರ್ಚ್ 28, 2024 ರಿಂದ ಏಪ್ರಿಲ್ 1, 2024 ರವರೆಗೆ, ನಾವು U.S. ನಲ್ಲಿ ನೆಲೆಸಿರುವ 1,037 ಹದಿಹರೆಯದವರು ಮತ್ತು ಯುವಜನರನ್ನು ಸಂದರ್ಶಿಸಿದ್ದು, ಅಪ್ರಾಪ್ತರ ವಿದುದ್ಧ ವಿವಿಧ ಆನ್‌ಲೈನ್ ಲೈಂಗಿಕ ಅಪರಾಧಗಳಿಗೆ ಅವರ ಒಡ್ಡಿಕೊಳ್ಳುವಿಕೆ ಮತ್ತು ತಿಳುವಳಿಕೆಯ ಕುರಿತು ಕೇಳಿದೆವು. ಭಾಗಿಗಳು ಕೇವಲ Snapchat ಮಾತ್ರವಲ್ಲ, ವಿವಿಧ ಆನ್‌ಲೈನ್ ವೇದಿಕೆಗಳು ಮತ್ತು ಸೇವೆಗಳಲ್ಲಿ ತಮ್ಮ ಅನುಭವಗಳನ್ನು ಉಲ್ಲೇಖಿಸಿ ಪ್ರತಿಸ್ಪಂದಿಸಿದರು. ಕಂಡುಕೊಂಡ ಕೆಲವು ಆರಂಭಿಕ ಪ್ರಮುಖ ಅಂಶಗಳಲ್ಲಿ ಇವು ಸೇರಿವೆ:
ಹಲವು ಹದಿಹರೆಯದವರು ಮತ್ತು ಯುವಜನರಿಗೆ ಲೈಂಗಿಕ-ಸಂಬಂಧಿತ ಆನ್‌ಲೈನ್ ಅಪರಾಧಗಳು ಸ್ಥಳೀಯವಾಗಿದ್ದು, ಮೂರರಲ್ಲಿ ಎರಡಕ್ಕಿಂತ ಹೆಚ್ಚು ಮಂದಿ (68%) ತಾವು ಖಾಸಗಿ ಚಿತ್ರಣಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾಗಿ ಅಥವಾ "ಗ್ರೂಮಿಂಗ್"1 ಅಥವಾ "ಕ್ಯಾಟ್‌ಫಿಶಿಂಗ್"2 ನಡವಳಿಕೆಗಳನ್ನು ಅನುಭವಿಸಿದ್ದಾಗಿ ಹೇಳಿದರು.
ನಕಲಿ ವ್ಯಕ್ತಿಗಳು ಆನ್‌ಲೈನ್‌ನಲ್ಲಿ ವ್ಯಾಪಕವಾಗಿದ್ದಾರೆ ಮತ್ತು ಡಿಜಿಟಲ್ ಅಪಾಯಕ್ಕೆ ಒಡ್ಡಿಕೊಳ್ಳುವಿಕೆಗೆ ಪ್ರಮುಖ ಚಾಲಕರಾಗಿದ್ದಾರೆ. ಖಾಸಗಿ ಚಿತ್ರಗಳನ್ನು ಹಂಚಿಕೊಂಡವರಲ್ಲಿ ಅಥವಾ ಗ್ರೂಮಿಂಗ್ ಅಥವಾ ಕ್ಯಾಟ್‌ಫಿಶಿಂಗ್ ನಡವಳಿಕೆಗಳನ್ನು ಅನುಭವಿಸಿದವರಲ್ಲಿ, ಹತ್ತರಲ್ಲಿ ಒಂಬತ್ತು ಮಂದಿ (90%) ಎದುರಿನ ವ್ಯಕ್ತಿ ತಮ್ಮ ಗುರುತಿನ ಕುರಿತು ಸುಳ್ಳು ಹೇಳಿದರು ಎಂದು ತಿಳಿಸಿದರು.
ಖಾಸಗಿ ಚಿತ್ರಣಗಳನ್ನು ಹಂಚಿಕೊಳ್ಳುವುದು ಮತ್ತು ಕ್ಯಾಟ್‌ಫಿಶಿಂಗ್ ಆನ್‌ಲೈನ್ "ಲೈಂಗಿಕ ಸುಲಿಗೆಗೆ" ಅಧಿಕ ಅಪಾಯದ ಗೇಟ್‌ವೇಗಳಾಗಿದ್ದು,3 ಖಾಸಗಿ ಚಿತ್ರಣಗಳನ್ನು ಹಂಚಿಕೊಂಡ ಸುಮಾರು ಅರ್ಧದಷ್ಟು ಜನರಿಗೆ ಲೈಂಗಿಕ ಸುಲಿಗೆಯೊಂದಿಗೆ ಬೆದರಿಕೆಗಳು ಬಂದಿವೆ. ಪುರುಷರು ಮಹಿಳೆಯರಿಗಿಂತ ಹೆಚ್ಚು ಲೈಂಗಿಕ ಸುಲಿಗೆಗೆ ಒಳಗಾಗುತ್ತಾರೆ (51% ವರ್ಸಸ್ 42%) ಮತ್ತು ಹಣಕಾಸಿನ ಲೈಂಗಿಕ ಸುಲಿಗೆ – ಅಂದರೆ ಸಂತ್ರಸ್ತರಿಂದ ಹಣ, ಉಡುಗೊರೆ ಕಾರ್ಡ್‌ಗಳು ಅಥವಾ ಮೌಲ್ಯಯುತವಾದ ಬೇರೆ ಯಾವುದಕ್ಕಾದರೂ ಬೇಡಿಕೆ ಇಡುವುದು – ಪುರುಷರಲ್ಲಿ ಹೆಚ್ಚು ಸಾಮಾನ್ಯವಾಗಿತ್ತು (34% ವರ್ಸಸ್ 9%). ಅಂತಹ ಸನ್ನಿವೇಶಗಳಲ್ಲಿ, ಮಹಿಳೆಯರಲ್ಲಿ ಸಾಮಾನ್ಯವಾಗಿ ಇನ್ನಷ್ಟು ಲೈಂಗಿಕ ಚಿತ್ರಣಗಳಿಗಾಗಿ ಕೇಳಲಾಗುತ್ತದೆ (57% ವರ್ಸಸ್ 37%).
ದುರದೃಷ್ಟವಶಾತ್, ಆದರೆ ಬಹುಶಃ ಆಶ್ಚರ್ಯಕರವಲ್ಲದ ವಿಷಯವೆಂದರೆ, ಈ ಮೂರು ಅಪಾಯಗಳಲ್ಲಿ ಒಂದನ್ನು ಅನುಭವಿಸಿದ ಗಮನಾರ್ಹ ಪ್ರಮಾಣದ ಹದಿಹರೆಯದವರು ಮತ್ತು ಯುವಜನರು (41%) ಆ ಕುರಿತು ಬೇರೆ ಯಾರಿಗೂ ತಿಳಿಸಲಿಲ್ಲ. ಕೇವಲ 37% ಜನರು, ಆನ್‌ಲೈನ್ ಪ್ಲ್ಯಾಟ್‌ಫಾರ್ಮ್, ಕಾನೂನು ಜಾರಿ ಸಂಸ್ಥೆ ಮತ್ತು / ಅಥವಾ ಹಾಟ್‌ಲೈನ್‌ಗೆ ಗ್ರೂಮಿಂಗ್ ಕುರಿತು ವರದಿ ಮಾಡಿದರು. ಖಾಸಗಿ ಚಿತ್ರಣ ಮಾತ್ರ ಗುರಿಪಡಿಸಿದವರಲ್ಲಿ 63% ಸಂತ್ರಸ್ತರು ಸಮಸ್ಯೆಯನ್ನು ವರದಿ ಮಾಡಿದ ಅಪಾಯವಾಗಿತ್ತು; ಅರ್ಧಕ್ಕಿಂತ ಹೆಚ್ಚು ಮಂದಿ (56%) ಕ್ಯಾಟ್‌ಫಿಶಿಂಗ್ ಮೂಲಕ ಸಂಭವಿಸಿದ ಹಣಕ್ಕಾಗಿ
ನ ಲೈಂಗಿಕ ಸುಲಿಗೆಯನ್ನು ವರದಿ ಮಾಡಿದ್ದಾಗಿ ಹೇಳಿದರು.
ಈ ಇತ್ತೀಚಿನ ತಿಳುವಳಿಕೆಗಳು Snap ನ ಡಿಜಿಟಲ್ ಯೋಗಕ್ಷೇಮದ ಚಾಲ್ತಿಯಲ್ಲಿರುವ ಅಧ್ಯಯನವನ್ನು ಇನ್ನಷ್ಟು ಮುಖ್ಯವಾಗಿಸುತ್ತವೆ, ಕಳೆದ ವರ್ಷ ಈ ಅಧ್ಯಯನದಲ್ಲಿ ಹದಿಹರೆಯದವರು ಮತ್ತು ಯುವಜನರಲ್ಲಿ ಆನ್‌ಲೈನ್ ಲೈಂಗಿಕ ಸುಲಿಗೆಯ ಕುರಿತು ಇನ್ನಷ್ಟು ಆಳವಾದ ವಿವರವನ್ನು ಒಳಗೊಂಡಿತ್ತು.
ದೇಶದಾದ್ಯಂತ ಹದಿಹರೆಯದವರು ಮತ್ತು ಯುವಜನರ ಮೇಲೆ Know2Protect ಅಭಿಯಾನದ ಪರಿಣಾಮವನ್ನು ಅಳೆಯುವುದಕ್ಕೆ ನೆರವಾಗಲು ಈ ವರ್ಷ ಈ ಅಧ್ಯಯನವನ್ನು ಪುನರಾವರ್ತಿಸಲು ನಾವು ಯೋಜನೆ ಮಾಡಿದ್ದೇವೆ.
ಆನ್‌ಲೈನ್ ಲೈಂಗಿಕ ದೌರ್ಜನ್ಯದ ವಿರುದ್ಧ Snap ನ ಕೆಲಸ
ಸಂಭಾವ್ಯ ಹಾನಿಗಳ ಕುರಿತು ಜಾಗೃತಿ ಹೆಚ್ಚಿಸುವುದರ ಜೊತೆಗೆ, ನಮ್ಮ ಸೇವೆಯಿಂದ ಈ ವಿಷಯ ಮತ್ತು ನಡವಳಿಕೆಯನ್ನು ನಿರ್ಮೂಲನೆ ಮಾಡಲು ನಾವು ಬದ್ಧರಾಗಿದ್ದೇವೆ.
ಕಾನೂನುಬಾಹಿರ ಚಟುವಟಿಕೆಗೆ Snapchat ಅನ್ನು ಪ್ರತಿಕೂಲ ವಾತಾವರಣವನ್ನಾಗಿಸಲು ನಾವು ದೃಢನಿರ್ಧಾರ ಮಾಡಿದ್ದೇವೆ ಮತ್ತು ಅಪ್ರಾಪ್ತರ ವಿರುದ್ಧ ಲೈಂಗಿಕ ದುರ್ನಡತೆಯನ್ನು ಒಳಗೊಂಡ ಯಾವುದೇ ವಿಷಯ ಅಥವಾ ವರ್ತನೆಯ ಬಗ್ಗೆ ಶೂನ್ಯ-ಸಹಿಷ್ಣುತೆ ನೀತಿಯನ್ನು ಹೊಂದಿದ್ದೇವೆ. ನಾವು ಉಲ್ಲಂಘಿಸುವ ವಿಷಯವನ್ನು ತ್ವರಿತವಾಗಿ ತೆಗೆದುಹಾಕುತ್ತೇವೆ, ಅಪರಾಧಿತ ವಿಷಯದ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಮತ್ತು ವಿಷಯ ಜಗತ್ತಿನ ಎಲ್ಲಿ ಕಂಡುಬಂದಿದೆ ಎನ್ನುವುದನ್ನು ಪರಿಗಣಿಸದೆ, ಅವುಗಳನ್ನು U.S. ಕಾಣೆಯಾದ ಮತ್ತು ಶೋಷಣೆಗೊಳಗಾದ ಮಕ್ಕಳ ರಾಷ್ಟ್ರೀಯ ಕೇಂದ್ರಕ್ಕೆ (NCMEC) ವರದಿ ಮಾಡುತ್ತೇವೆ. ಉಲ್ಲಂಘಿಸುವ ವಿಷಯವನ್ನು ಪೂರ್ವಭಾವಿಯಾಗಿ ಪತ್ತೆಮಾಡಲು ನಾವು ಸುಧಾರಿತ ತಂತ್ರಜ್ಞಾನವನ್ನು ಬಳಸುತ್ತೇವೆ ಮತ್ತು ನಮಗೆ ಮತ್ತು ಸ್ಥಳೀಯ ಕಾನೂನು ಜಾರಿ ಸಂಸ್ಥೆಗೆ ಸಮಸ್ಯೆಗಳನ್ನು ವರದಿ ಮಾಡುವಂತೆ Snapchat ಸಮುದಾಯ ಹಾಗೂ ಅವರ ಸ್ನೇಹಿತರು ಮತ್ತು ಆ್ಯಪ್ ಬಳಸದೆ ಇರಬಹುದಾದ ಕುಟುಂಬ ಸದಸ್ಯರನ್ನು ನಾವು ಪ್ರೋತ್ಸಾಹಿಸುತ್ತೇವೆ. ನಮ್ಮನ್ನು ಸಂಪರ್ಕಿಸುವ ಮೂಲಕ ನಮ್ಮ ಸಮುದಾಯದ ಸದಸ್ಯರು ಸಂಭಾವ್ಯ ಹಾನಿಯಿಂದ ಇತರರನ್ನು ರಕ್ಷಿಸುವ ಅದ್ಭುತ ಸೇವೆಯನ್ನು ಮಾಡುತ್ತಾರೆ. ನಾವು NCMEC ನ Take It Down ಉಪಕ್ರಮದಲ್ಲೂ ಕೂಡ ಪಾಲ್ಗೊಳ್ಳುತ್ತೇವೆ ಮತ್ತು ಅದರ ಕುರಿತು ಇನ್ನಷ್ಟು ತಿಳಿದುಕೊಳ್ಳುವಂತೆ ಮತ್ತು ಅಗತ್ಯವಿದ್ದಲ್ಲಿ, ಪ್ರೊಗ್ರಾಂನಲ್ಲಿ ಭಾಗವಹಿಸುವಂತೆ ಯುವಜನರನ್ನು ಪ್ರೋತ್ಸಾಹಿಸುತ್ತೇವೆ. (ವಯಸ್ಕರಿಗೂ ಇದಕ್ಕೆ ಸಮನಾದುದು ಇದೆ ಮತ್ತು Snap ಕೂಡ ಕಳೆದ ವರ್ಷ ಇದಕ್ಕೆ ಸೇರಿದ್ದು, ಅದನ್ನು StopNCII ಎಂದು ಕರೆಯಲಾಗುತ್ತದೆ.)
ನಾವು ಜಗತ್ತಿನಾದ್ಯಂತದ ಇತರ ತಜ್ಞರೊಂದಿಗೆ ಕೂಡ ತೊಡಗಿಕೊಳ್ಳುತ್ತೇವೆ, ಏಕೆಂದರೆ ಈ ಸಮಸ್ಯೆಗಳಿಗೆ ಸಂಬಂಧಿಸಿ ಯಾವುದೇ ಒಂದು ಘಟಕ ಅಥವಾ ಸಂಸ್ಥೆ ಒಬ್ಬಂಟಿಯಾಗಿ ಭೌತಿಕ ಪ್ರಭಾವ ಬೀರಲಾಗದು. WeProtect Global Alliance ನ ಅಂತಾರಾಷ್ಟ್ರೀಯ ನೀತಿ ಮಂಡಳಿಯಲ್ಲಿ ಸಮಗ್ರ ಉದ್ಯಮವನ್ನು Snap ಪ್ರತಿನಿಧಿಸುತ್ತದೆ; ನಾವು INHOPE ನ ಸಲಹಾ ಪರಿಷತ್‌ನ ಮತ್ತು UK ಇಂಟರ್‌ನೆಟ್ ವಾಚ್ ಫೌಂಡೇಷನ್‌ನ ಫಂಡಿಂಗ್ ಕೌನ್ಸಿಲ್‌ನ ಸದಸ್ಯರಾಗಿದ್ದೇವೆ; ಮತ್ತು ಕಳೆದ ವರ್ಷ ತಂತ್ರಜ್ಞಾನ ಸಹಭಾಗಿತ್ವದ ನಿರ್ದೇಶಕರ ಮಂಡಳಿಯ ಕಾರ್ಯಕಾರಿ ಸಮಿತಿಯಲ್ಲಿ ನಾವು ಎರಡು ವರ್ಷ ಪೂರೈಸಿದ್ದೇವೆ. ಈ ಎಲ್ಲ ಸಂಸ್ಥೆಗಳು ಆನ್‌ಲೈನ್ CSEA ನಿರ್ಮೂಲನೆಯನ್ನು ತಮ್ಮ ಧ್ಯೇಯವಾಗಿ ಹೊಂದಿವೆ.
U.S. ನಲ್ಲಿ ಮಕ್ಕಳ ಆನ್‌ಲೈನ್ ಸುರಕ್ಷತೆ ಕಾಯ್ದೆ, REPORT ಕಾಯ್ದೆ ಮತ್ತು SHIELD ಕಾಯ್ದೆಯಂತಹ ಶಾಸನಾತ್ಮಕ ಪರಿಹಾರಗಳನ್ನು ನಾವು ಬೆಂಬಲಿಸುತ್ತೇವೆ ಮತ್ತು ದೌರ್ಜನ್ಯ ಎಸಗುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕಾನೂನು ಜಾರಿ ಸಂಸ್ಥೆಗಳಿಗೆ ಅವರ ತನಿಖೆಗಳಲ್ಲಿ ಸಹಕಾರ ನೀಡುತ್ತೇವೆ. ಆ್ಯಪ್‌ನಲ್ಲಿ ಮತ್ತು ನಮ್ಮ ವೆಬ್‌ಸೈಟ್‌ನಲ್ಲಿ ಎರಡೂ ಕಡೆ ಶೈಕ್ಷಣಿಕ ಸಂಪನ್ಮೂಲಗಳಲ್ಲೂ ಕೂಡ ನಾವು ಹೂಡಿಕೆ ಮಾಡುತ್ತೇವೆ ಮತ್ತು ಕಳೆದ ವರ್ಷ ವಿವಿಧ ಲೈಂಗಿಕ ಅಪಾಯಗಳ ಕುರಿತು ನಾಲ್ಕು ಹೊಸ ಸಣ್ಣ ಅವಧಿಯ ವೀಡಿಯೊಗಳನ್ನು ಸೇರಿಸಿದ್ದೇವೆ.
Know2Protect ಅನ್ನು ಬೆಂಬಲಿಸುವುದು ಹಲವು ವರ್ಷಗಳಿಂದ Snap ತೊಡಗಿಸಿಕೊಂಡಿರುವ ಕೆಲಸದ ವಿಸ್ತರಣೆಯಾಗಿದೆ. ಇಂದಿನ ಬಿಡುಗಡೆಯ ಕುರಿತು ನಾವು DHS ಅನ್ನು ಅಭಿನಂದಿಸುತ್ತೇವೆ ಮತ್ತು ಸಂಪೂರ್ಣ ತಂತ್ರಜ್ಞಾನ ಪರಿಸರವ್ಯವಸ್ಥೆಯಾದ್ಯಂತ ಈ ಹೇಯ ಹಾನಿಗಳನ್ನು ನಿರ್ಮೂಲನೆ ಮಾಡಲು ನೆರವಾಗುವಲ್ಲಿ ನಮ್ಮಲ್ಲಿ ಪ್ರತಿಯೊಬ್ಬರೂ ವಹಿಸುವ ಪಾತ್ರದ ಪ್ರಾಮುಖ್ಯತೆಯ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವ ಅದರ ಪ್ರಯತ್ನಗಳನ್ನು ಶ್ಲಾಘಿಸುತ್ತೇವೆ.
— ಜಾಕ್ವೆಲಿನ್ ಬೌಚೆರೆ, ಸುರಕ್ಷತಾ ವೇದಿಕೆಯ ಜಾಗತಿಕ ಮುಖ್ಯಸ್ಥೆ