ನಮ್ಮ ಆ್ಯಪ್‌ನಲ್ಲಿನ ಪೋಷಕರ ಟೂಲ್‌ಗಳನ್ನು ವಿಸ್ತರಿಸುತ್ತಿದ್ದೇವೆ

ಜನವರಿ 11, 2024

Snap ನಲ್ಲಿ, ಪೋಷಕರಿಗೆ ಅವರ ಹದಿಹರೆಯದ ಮಕ್ಕಳು Snapchat ಅನ್ನು ಸುರಕ್ಷಿತವಾಗಿ ಬಳಸುವುದನ್ನು ಬೆಂಬಲಿಸಲು ಸಹಾಯ ಮಾಡುವುದಕ್ಕಾಗಿ ಹೆಚ್ಚುವರಿ ಟೂಲ್‌ಗಳು ಮತ್ತು ಸಂಪನ್ಮೂಲಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ. 

2022 ರಲ್ಲಿ, ಕೌಟುಂಬಿಕ ಕೇಂದ್ರವನ್ನು ನಾವು ಆರಂಭಿಸಿದೆವು, ಇದು ಪೋಷಕರು ತಮ್ಮ ಹದಿಹರೆಯದ ಮಕ್ಕಳು Snapchat ನಲ್ಲಿ ಯಾವ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾರೆ ಎಂದು ನೋಡಲು, ಯಾವುದೇ ಕಳವಳಗಳನ್ನು ಗೌಪ್ಯವಾಗಿ ವರದಿ ಮಾಡಲು ಮತ್ತು ಕಂಟೆಂಟ್ ನಿಯಂತ್ರಣಗಳನ್ನು ಹೊಂದಿಸಲು ಅನುವು ಮಾಡಿಕೊಡುವ ನಮ್ಮ ಪೋಷಕರ ಟೂಲ್‌ಗಳ ಗುಚ್ಛ - ಇವೆಲ್ಲವನ್ನೂ Snapchat ನಲ್ಲಿ ಹದಿಹರೆಯದವರನ್ನು ಸುರಕ್ಷಿತವಾಗಿ ಇರಿಸಲು ವಿನ್ಯಾಸಗೊಳಿಸಲಾಗಿದೆ. 

ಆಫ್‌ಲೈನ್‌ನಲ್ಲಿ ಜನರು ತಮ್ಮ ಸ್ನೇಹಿತರೊಂದಿಗೆ ಸಂವಹನ ನಡೆಸುವ ರೀತಿಯಲ್ಲೇ ಸಂವಹನ ನಡೆಸಲು ಸಹಾಯ ಮಾಡುವುದಕ್ಕಾಗಿ Snapchat ಅನ್ನು ನಿರ್ಮಿಸಲಾಗಿದೆ ಮತ್ತು ಕೌಟುಂಬಿಕ ಕೇಂದ್ರವು ಪೋಷಕರು ಮತ್ತು ಹದಿಹರೆಯದ ಮಕ್ಕಳ ನಡುವಿನ ನೈಜ-ಜಗತ್ತಿನ ಸಂಬಂಧವನ್ನು ಬಿಂಬಿಸುತ್ತದೆ, ಇಲ್ಲಿ ತಮ್ಮ ಹದಿಹರೆಯದ ಮಕ್ಕಳು ಯಾರೊಂದಿಗೆ ಸಮಯ ಕಳೆಯುತ್ತಿದ್ದಾರೆ ಎನ್ನುವ ಕುರಿತ ಒಳನೋಟಗಳನ್ನು ಪೋಷಕರು ಪಡೆಯುತ್ತಾರೆ, ಇದೇ ವೇಳೆ ಮಕ್ಕಳ ವೈಯಕ್ತಿಕ ಸಂವಹನಗಳ ಗೌಪ್ಯತೆಯನ್ನು ಗೌರವಿಸುತ್ತಾರೆ. ಕೌಟುಂಬಿಕ ಕೇಂದ್ರವನ್ನು ಅಭಿವೃದ್ಧಿಪಡಿಸಲು ನಾವು ಕುಟುಂಬಗಳು ಮತ್ತು ಆನ್‌ಲೈನ್ ಸುರಕ್ಷತಾ ತಜ್ಞರೊಂದಿಗೆ ನಿಕಟವಾಗಿ ಕೆಲಸ ಮಾಡಿದೆವು ಮತ್ತು ನಿಯಮಿತ ಆಧಾರದಲ್ಲಿ ಅದನ್ನು ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಅಪ್‌ಡೇಟ್ ಮಾಡಲು ಅವರ ಪ್ರತಿಕ್ರಿಯೆಯನ್ನು ಬಳಸಿಕೊಳ್ಳುತ್ತೇವೆ. 

ಪೋಷಕರಿಗೆ ಇನ್ನಷ್ಟು ಗೋಚರತೆಯನ್ನು ಒದಗಿಸಲು ಹಾಗೂ ಆನ್‌ಲೈನ್ ಸುರಕ್ಷತೆಯ ಕುರಿತು ಫಲಪ್ರದ ಸಂಭಾಷಣೆಗಳನ್ನು ನಡೆಸುವುದಕ್ಕಾಗಿ ಅವರನ್ನು ಇನ್ನಷ್ಟು ಸಬಲಗೊಳಿಸಲು ಇಂದು ನಾವು ವಿಸ್ತರಿತ ಕೌಟುಂಬಿಕ ಕೇಂದ್ರ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದ್ದೇವೆ. ಮುಂಬರುವ ವಾರಗಳಲ್ಲಿ, ನಾವು ಇವುಗಳನ್ನು ಬಿಡುಗಡೆ ಮಾಡಲಿದ್ದೇವೆ: 

ತಮ್ಮ ಹದಿಹರೆಯದ ಮಕ್ಕಳ ಸೆಟ್ಟಿಂಗ್‌ಗಳಿಗೆ ಗೋಚರತೆ: ಹದಿಹರೆಯದವರಿಗಾಗಿ ಪ್ರಮುಖ ಸುರಕ್ಷತೆ ಮತ್ತು ಗೌಪ್ಯತೆಯ ಸೆಟ್ಟಿಂಗ್‌ಗಳನ್ನು ಡೀಫಾಲ್ಟ್ ಆಗಿ ಕಟ್ಟುನಿಟ್ಟಾದ ಮಾನದಂಡಕ್ಕೆ ನಾವು ನಿಗದಿಪಡಿಸುತ್ತೇವೆ. ಈಗ, ಪೋಷಕರಿಗೆ ಇವುಗಳನ್ನು ನೋಡಲು ಸಾಧ್ಯವಾಗುತ್ತದೆ: 

  • ತಮ್ಮ ಹದಿಹರೆಯದ ಮಕ್ಕಳ ಕಥೆ ಸೆಟ್ಟಿಂಗ್‌ಗಳು: ಹದಿಹರೆಯದ ಮಕ್ಕಳು ತಮ್ಮ ಕಥೆಯನ್ನು ತಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳುವ ಅಥವಾ ಆತ್ಮೀಯ ಸ್ನೇಹಿತರು ಮತ್ತು ಕುಟುಂಬದವರ ಸಣ್ಣ ಗುಂಪಿನೊಂದಿಗೆ ಹಂಚಿಕೊಳ್ಳುವುದನ್ನು ಆಯ್ಕೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. 

  • ತಮ್ಮ ಹದಿಹರೆಯದ ಮಕ್ಕಳ ಸಂಪರ್ಕ ಸೆಟ್ಟಿಂಗ್‌ಗಳು: Snapchatter ಗಳು ಸ್ನೇಹಿತರು ಎಂದು ಸೇರಿಸಿರುವ ಜನರು ಅಥವಾ ಐಚ್ಛಿಕವಾಗಿ, ಅವರ ಫೋನ್ ಸಂಪರ್ಕಗಳು ಮಾತ್ರ ಅವರನ್ನು ಸಂಪರ್ಕಿಸಬಹುದು. 

  • ಅವರ ಹದಿಹರೆಯದ ಮಕ್ಕಳು Snap ಮ್ಯಾಪ್‌ನಲ್ಲಿ ತಮ್ಮ ಸ್ಥಳವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದಾರೆಯೇ: Snap ಮ್ಯಾಪ್ Snapchatter ಗಳಿಗೆ ತಮ್ಮ ಸ್ನೇಹಿತರು ಎಲ್ಲಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡಲು, ಆಸಕ್ತಿದಾಯಕ ಸ್ಥಳಗಳನ್ನು ಅನ್ವೇಷಿಸಲು ಮತ್ತು ಪ್ರಪಂಚದಾದ್ಯಂತ Snapchatterಗಳು ಸಲ್ಲಿಸಿದ ಕಂಟೆಂಟ್ ಅನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. Snapchatter ಗಳು ತಮ್ಮ ಸ್ಥಳ ಹಂಚಿಕೊಳ್ಳುವುದನ್ನು ಆಯ್ಕೆ ಮಾಡಿಕೊಳ್ಳಬೇಕು – ಮತ್ತು ಸ್ನೇಹಿತರೊಂದಿಗೆ ಮಾತ್ರ ತಮ್ಮ ಸ್ಥಳ ಹಂಚಿಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ. 

AI ಗಾಗಿ ಪೋಷಕರ ನಿಯಂತ್ರಣ: ನಮ್ಮ AI-ಸಂಚಾಲಿತ ಚಾಟ್‌ಬಾಟ್, My AI ತಮ್ಮ ಹದಿಹರೆಯದ ಮಕ್ಕಳ ಚಾಟ್‌ಗಳಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ನಿರ್ಬಂಧಿಸಲು ಈಗ ಪೋಷಕರಿಗೆ ಸಾಧ್ಯವಾಗುತ್ತದೆ. ಅನುಚಿತ ಅಥವಾ ಹಾನಿಕಾರಕ ಪ್ರತಿಕ್ರಿಯೆಗಳ ವಿರುದ್ಧ ರಕ್ಷಣೆ, ಒಂದು ವೇಳೆ Snapchatter ಗಳು ಪದೇಪದೆ ಸೇವೆಯ ದುರ್ಬಳಕೆ ಮಾಡಿದರೆ ತಾತ್ಕಾಲಿಕ ಬಳಕೆಯ ನಿರ್ಬಂಧಗಳು ಮತ್ತು ವಯಸ್ಸಿನ ಕುರಿತ ಅರಿವು ಸೇರಿದಂತೆ My AI ನಲ್ಲಿ ಈಗಾಗಲೇ ಅಳವಡಿಸಲಾಗಿರುವ ಸುರಕ್ಷತಾ ಕ್ರಮಗಳನ್ನು ಈ ವೈಶಿಷ್ಟ್ಯವು ಇನ್ನಷ್ಟು ಹೆಚ್ಚಿಸುತ್ತದೆ.

ಕೌಟುಂಬಿಕ ಕೇಂದ್ರಕ್ಕೆ ಸುಲಭ ಪ್ರವೇಶ: Snapchat ಕುರಿತು ತಿಳಿಯದೆ ಇರುವ ಪೋಷಕರಿಗಾಗಿ, ಕೌಟುಂಬಿಕ ಕೇಂದ್ರವನ್ನು ಹುಡುಕುವುದನ್ನು ನಾವು ಸುಲಭವಾಗಿಸುತ್ತಿದ್ದೇವೆ. ಈಗ, ಪೋಷಕರು ತಮ್ಮ ಪ್ರೊಫೈಲ್‌ನಿಂದಲೇ ಅಥವಾ ಪೋಷಕರ ಪ್ರೊಫೈಲ್‌ನ ಮೇಲ್ಭಾಗದ ಬಲ ಮೂಲೆಯಲ್ಲಿ ಇರುವ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ಕೌಟುಂಬಿಕ ಕೇಂದ್ರವನ್ನು ಪ್ರವೇಶಿಸಬಹುದು. Snapchat ಗೆ ಹೊಸಬರಾಗಿರಬಹುದಾದ ಪೋಷಕರು ಮತ್ತು ಹದಿಹರೆಯದವರು ಇಬ್ಬರಿಗೂ ಕೌಟುಂಬಿಕ ಕೇಂದ್ರವನ್ನು ಸುಲಭವಾಗಿ ಕಂಡುಕೊಳ್ಳಲು ಮತ್ತು ಸೇರಲು ಸಹಾಯ ಮಾಡುವುದು ನಮ್ಮ ಗುರಿಯಾಗಿದೆ. 

ನಮ್ಮ ಸಂಪೂರ್ಣ ಸಮುದಾಯಕ್ಕೆ Snapchat ಅನ್ನು ವಿನೋದಮಯ ಮತ್ತು ಸುರಕ್ಷಿತ ವಾತಾವರಣವಾಗಿಸಲು ಸಹಾಯ ಮಾಡುವುದಕ್ಕಾಗಿ ಪೋಷಕರು ಮತ್ತು ಆನ್‌ಲೈನ್ ಸುರಕ್ಷತಾ ತಜ್ಞರೊಂದಿಗೆ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದನ್ನು ನಾವು ಎದುರು ನೋಡುತ್ತೇವೆ.

ಸುದ್ದಿಗಳಿಗೆ ಹಿಂತಿರುಗಿ