Snap Values

ಆನ್‌ಲೈನ್ ಅಪಾಯವನ್ನು ಎದುರಿಸಿದ ಬಳಿಕ ಹೆಚ್ಚು ಹದಿಹರೆಯದವರು ದನಿ ಎತ್ತುತ್ತಿದ್ದಾರೆ ಎಂದು ಹೊಸ ಸಂಶೋಧನೆಯಲ್ಲಿ ಕಂಡುಬಂದಿದೆ

ನವೆಂಬರ್ 13, 2025

ಹೊಸ ಸಂಶೋಧನೆಯ ಪ್ರಕಾರ ಬಹುತೇಕ ಹದಿಹರೆಯದವರು ತಮ್ಮ ಪೋಷಕರು, ಸ್ನೇಹಿತರು, ಒಡಹುಟ್ಟಿದವರು ಮತ್ತು ತಮ್ಮ ಜೀವನದಲ್ಲಿನ ಇತರ ವಿಶ್ವಾಸಾರ್ಹ ಜನರನ್ನು ಸಂಪರ್ಕಿಸುತ್ತಿದ್ದಾರೆ ಎಂದು ತಿಳಿದುಬಂದಿದೆ – ಇದು ಬಹಳ ಸಕಾರಾತ್ಮಕ ಬೆಳವಣಿಗೆಯಾಗಿದೆ. ಆದರೆ ಲೈಂಗಿಕ ಅಪಾಯಗಳು ಮತ್ತು ಸ್ವಯಂ-ಹಾನಿ ಸೇರಿದಂತೆ, ಆನ್‌ಲೈನ್‌ನಲ್ಲಿ ಹೆಚ್ಚು ವೈಯಕ್ತಿಕ ಸವಾಲುಗಳನ್ನು ಎದುರಿಸಿದಾಗ ಹದಿಹರೆಯದವರು ಮುಂದೆ ಬರಲು ಹಿಂಜರಿಯುತ್ತಾರೆ ಎಂಬ ಅಂಶ ಕೂಡ ಕಂಡುಬಂದಿದೆ.   

ಆರು ದೇಶಗಳಲ್ಲಿನ 13 ರಿಂದ 17 ವರ್ಷ ವಯಸ್ಸಿನ 10 ರಲ್ಲಿ ಏಳು (71%) ಹದಿಹರೆಯದವರು, ಅನಪೇಕ್ಷಿತ ಸಂಪರ್ಕ ಅಥವಾ ಆನ್‌ಲೈನ್ ಬೆದರಿಸುವಿಕೆಯಂತಹ ಆನ್‌ಲೈನ್ ಅಪಾಯಕ್ಕೆ ಎದುರಾದಾಗ ಯಾವು ಬೇರೊಬ್ಬರ ಸಹಾಯ ಕೋರಿರುವುದಾಗಿ ಅಥವಾ ಅವರೊಂದಿಗೆ ಮಾತನಾಡಿರುವುದಾಗಿ ಹೇಳಿದರು. ಇದಕ್ಕೆ ಹೋಲಿಸಿದರೆ, ಕಳೆದ ವರ್ಷ 68% ಜನರು ಆನ್‌ಲೈನ್ ಘಟನೆಯ ಬಳಿಕ ಸಹಾಯಕ್ಕಾಗಿ ಸಂಪರ್ಕಿಸಿದ್ದರು, 2023 ರಲ್ಲಿ ಈ ಸಂಖ್ಯೆ ಕೇವಲ 59% ಇತ್ತು. ಮತ್ತು ಎದುರಿಸಿದ ಅಪಾಯವು ಕ್ಯಾಟ್‌ಫಿಶಿಂಗ್ ಹಾಗೂ ಗ್ರೂಮಿಂಗ್‌ನಂತಹ, ಇತರರಿಂದ 1 ಬೆದರಿಕೆಗಳನ್ನು ಒಳಗೊಂಡಿದ್ದಾಗ 2, ಇನ್ನೂ ಹೆಚ್ಚಿನ ಪ್ರಮಾಣದ ಹದಿಹರೆಯದವರು (84%) ತಾವು ಒಬ್ಬರೊಂದಿಗೆ ಮಾತನಾಡಿದ್ದಾಗಿ ಹೇಳಿದ್ದು, ಇದು 2024 ಕ್ಕಿಂತ 10-ಪ್ರತಿಶತ ಏರಿಕೆಯಾಗಿದೆ. ಅಷ್ಟೇ ಅಲ್ಲದೆ, 13 ರಿಂದ 19 ವರ್ಷದ ಒಳಗಿನ 10 ಪೋಷಕರಲ್ಲಿ ಸುಮಾರು ಒಂಬತ್ತು ಮಂದಿ (88%), ಡಿಜಿಟಲ್ ಸವಾಲುಗಳ ಕುರಿತಾಗಿ ತಮ್ಮ ಹದಿಹರೆಯದ ಮಕ್ಕಳು ತಮ್ಮನ್ನು ನೇರವಾಗಿ ಸಂಪರ್ಕಿಸಿದರು ಎಂದು ಹೇಳಿದರು, ಇದು ಕಳೆದ ಮೂರು ವರ್ಷಗಳ 86% ನಿಂದ ತುಸು ಏರಿಕೆಯಾಗಿದೆ. ಅದಾಗ್ಯೂ, ಲೈಂಗಿಕ ಅಪಾಯಗಳು, ಹಿಂಸಾತ್ಮಕ ತೀವ್ರವಾದಿ ವಿಷಯ ಮತ್ತು ಸ್ವಯಂ-ಹಾನಿಯನ್ನು ಎದುರಿಸಿದಾಗ, ಕಡಿಮೆ ಹದಿಹರೆಯದವರು ತಮ್ಮ ಪೋಷಕರನ್ನು ಸಂಪರ್ಕಿಸಿದರು, ಇದರಿಂದ ಹದಿಹರೆಯದವರ ಈ ರೀತಿಯ ತೊಂದರೆಗಳನ್ನು ಪೋಷಕರು ಸ್ವತಃ ಕಂಡುಕೊಳ್ಳಬೇಕಾಯಿತು ಅಥವಾ ಬೇರೊಬ್ಬರಿಂದ ಕೇಳಿ ತಿಳಿದುಕೊಳ್ಳಬೇಕಾಯಿತು. 

ಕಂಡುಬಂದಿರುವ ಈ ಅಂಶಗಳು ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಭಾರತ, UK ಮತ್ತು U.S. ನಲ್ಲಿ ನವಪೀಳಿಗೆಯವರಲ್ಲಿ ಡಿಜಿಟಲ್ ಯೋಗಕ್ಷೇಮದ ಕುರಿತು Snap ಕೈಗೊಂಡಿರುವ ಐದು ವರ್ಷಗಳ ಅಧ್ಯಯನದ ಭಾಗವಾಗಿವೆ. ಯುವ ಜನರು ಆನ್‌ಲೈನ್ ಅಪಾಯಕ್ಕೆ ಒಡ್ಡಿಕೊಳ್ಳುವಿಕೆಯ ಕುರಿತು ನಾವು ಹದಿಹರೆಯದವರು (13-17 ವಯಸ್ಸಿನವರು), ಯುವಜನರು (18-24 ವಯಸ್ಸಿನವರು) ಮತ್ತು 13 ರಿಂದ 19 ವರ್ಷ ವಯಸ್ಸಿನ ಮಕ್ಕಳ ಪೋಷಕರ ಅಭಿಪ್ರಾಯ ಸಂಗ್ರಹಿಸಿದ್ದೇವೆ. 2025 ರ ಸಮೀಕ್ಷೆಯನ್ನು ಏಪ್ರಿಲ್ 29 ಮತ್ತು ಮೇ 1 ರ ನಡುವೆ ನಡೆಸಲಾಗಿದೆ ಮತ್ತು ಸಮೀಕ್ಷೆಯು ಆರು ಭೌಗೋಳಿಕ ಪ್ರದೇಶಗಳಲ್ಲಿ ಮೂರು ವಯೋಮಾನದ 9,037 ಪ್ರತಿಕ್ರಿಯಾದಾರರನ್ನು ಒಳಗೊಂಡಿತ್ತು. Snap ಪ್ರತಿ ವರ್ಷ ಈ ಸಂಶೋಧನೆಯನ್ನು ನಡೆಸುತ್ತದೆ, ಆದರೆ ಇದು Snapchat ಮೇಲೆ ನಿರ್ದಿಷ್ಟ ಗಮನವಿಲ್ಲದೆ, ಎಲ್ಲ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳು ಮತ್ತು ಸೇವೆಗಳಾದ್ಯಂತ ನವಪೀಳಿಗೆಯವರ ಅನುಭವಗಳನ್ನು ಒಳಗೊಳ್ಳುತ್ತದೆ.

ಪೋಷಕರು, ಆರೈಕೆದಾರರು ಮತ್ತು ಇತರ ವಿಶ್ವಾಸಾರ್ಹ ವಯಸ್ಕರು ತಮ್ಮ ಬದುಕಿನಲ್ಲಿ ನವಪೀಳಿಗೆಯವರೊಂದಿಗೆ ನಿಯಮಿತವಾಗಿ ಡಿಜಿಟಲ್ ಮೇಲ್ವಿಚಾರಣೆಯನ್ನು ನಡೆಸಲು ಪ್ರೋತ್ಸಾಹಿಸುವುದಕ್ಕಾಗಿ ವಿಶ್ವ ಕರುಣೆಯ ದಿನ 2025 ರ ಸಂದರ್ಭ ಈ ಫಲಿತಾಂಶಗಳನ್ನು ನಾವು ಬಿಡುಗಡೆ ಮಾಡುತ್ತಿದ್ದೇವೆ. ಆನ್‌ಲೈನ್ ಸ್ನೇಹಿತರು ಮತ್ತು ಚಟುವಟಿಕೆಗಳ ಕುರಿತು ಪ್ರಶ್ನೆಗಳನ್ನು ಕೇಳಿ; ಉತ್ತಮ ಡಿಜಿಟಲ್ ಹವ್ಯಾಸಗಳು ಮತ್ತು ಅಭ್ಯಾಸಗಳನ್ನು ಮುಖ್ಯವಾಗಿರಿಸಿಕೊಂಡು ಸಂಭಾಷಣೆಗಳನ್ನು ನಡೆಸಿ; The Keys ಎಂಬ Snap ನ ಹೊಸ, ಸಂವಾದಾತ್ಮಕ ಆನ್‌ಲೈನ್ ಸುರಕ್ಷತೆಯ ಕಲಿಕೆಯ ಕೋರ್ಸ್ ಅನ್ನು ಅನ್ವೇಷಿಸಿ; ಮತ್ತು, ನಿರ್ದಿಷ್ಟವಾಗಿ ಹದಿಹರೆಯದವರ ಆನ್‌ಲೈನ್ ಚಟುವಟಿಕೆಗಳ ಮೇಲ್ವಿಚಾರಣೆ ಮಾಡಲು ಸಹಾಯ ಪಡೆದುಕೊಳ್ಳುವುದಕ್ಕಾಗಿ, Snapchat ನ ಕೌಟುಂಬಿಕ ಕೇಂದ್ರ ಕ್ಕೆ ಸೈನ್ ಅಪ್ ಮಾಡಿ.  

The Keys: ಡಿಜಿಟಲ್ ಸುರಕ್ಷತೆಗೆ ಮಾರ್ಗದರ್ಶಿ 

ಈ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿರುವ, The Keys ಸಂವಾದಾತ್ಮಕ ಆನ್‌ಲೈನ್ ಸುರಕ್ಷತಾ ಕಲಿಕಾ ಪ್ರೊಗ್ರಾಂ ಆಗಿದ್ದು ನಿರ್ದಿಷ್ಟವಾಗಿ ಹದಿಹರೆಯದವರು ಮತ್ತು ಅವರ ಪೋಷಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಪ್ರೊಗ್ರಾಂ ಅನ್ನು ವಿಶಿಷ್ಟವಾಗಿಸುವ ಅಂಶವೆಂದರೆ, ಅದು ಜಾಗೃತಿ ಮೂಡಿಸುವಿಕೆಯ ವ್ಯಾಪ್ತಿಯನ್ನು ಮೀರುತ್ತದೆ ಮತ್ತು ಬೆದರಿಕೆ ಕಿರುಕುಳ, ಅಕ್ರಮ ಮಾದಕಪದಾರ್ಥ ಚಟುವಟಿಕೆ, ನಗ್ನ ಚಿತ್ರಗಳು ಮತ್ತು ಖಾಸಗಿ ಚಿತ್ರಣ ಹಾಗೂ ಲೈಂಗಿಕ ಸುಲಿಗೆಯಂತಹ - ಆವರು ಆನ್‌ಲೈನ್‌ನಲ್ಲಿ ಎದುರಿಸಬಹುದಾದಂತಹ ಕೆಲವು ಅತ್ಯಂತ ಸವಾಲಿನ ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸಲು ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಹದಿಹರೆಯದವರಿಗೆ ನೆರವಾಗುತ್ತದೆ.

ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಹದಿಹರೆಯದವರು ಕೋರ್ಸ್ ಅನ್ನು ಅಧ್ಯಯನ ಮಾಡಬೇಕು ಮತ್ತು ಸ್ವತಃ ತಮಗಾಗಿ ಹಾಗೂ ಇತರರಿಗಾಗಿ ಸ್ಮಾರ್ಟ್ ಆಯ್ಕೆಗಳನ್ನು ಮಾಡುವ ಪ್ರತಿಜ್ಞೆ ಮಾಡಬೇಕು ಎಂಬುದು The Keys ನ ಗುರಿಯಾಗಿದೆ. ಆದರ್ಶವಾಗಿ, ಅರ್ಥಪೂರ್ಣ ಸಂಭಾಷಣೆಯನ್ನು ಆರಂಭಿಸಲು ಮತ್ತು ಕೆಲವು ಸಂವೇದನಾಶೀಲ ಸಮಸ್ಯೆಗಳನ್ನು ಜೊತೆಯಾಗಿ ಚರ್ಚಿಸಲು ಅವರು ತಮ್ಮ ಪೋಷಕರು, ಆರೈಕೆದಾರರು ಅಥವಾ ಇತರ ವಿಶ್ವಾಸಾರ್ಹ ವಯಸ್ಕರ ಜೊತೆಗೆ ಕೋರ್ಸ್ ಅಧ್ಯಯನ ಮಾಡಬೇಕು. ಅಪಾಯಗಳನ್ನು ಗುರುತಿಸಲು ಜ್ಞಾನ ಮತ್ತು ಕೌಶಲ್ಯಗಳನ್ನು ಹರಿಹರೆಯದವರಿಗೆ ಒದಗಿಸಲು ಮತ್ತು ತಮ್ಮನ್ನು ರಕ್ಷಿಸಿಕೊಳ್ಳಲು ಕ್ರಮ ತೆಗೆದುಕೊಳ್ಳುವುದಕ್ಕಾಗಿ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿಸಲು ನಾವು ಬಯಸುತ್ತೇವೆ. thekeys.snapchat.com ಎಂಬಲ್ಲಿ ಇನ್ನಷ್ಟು ತಿಳಿದುಕೊಳ್ಳಿ. 

ಕೌಟುಂಬಿಕ ಕೇಂದ್ರ

ಕೌಟುಂಬಿಕ ಕೇಂದ್ರವು Snapchat ನ ಪೋಷಕರ ಟೂಲ್ಸ್ ಆಗಿದ್ದು, ಪೋಷಕರು, ಆರೈಕೆದಾರರು ಮತ್ತು ಇತರ ವಿಶ್ವಾಸಾರ್ಹ ವಯಸ್ಕರಿಗೆ Snapchat ನಲ್ಲಿ ಅವರ ಹದಿಹರೆಯದ ಮಕ್ಕಳ ನೈಜ ಸಂದೇಶಗಳನ್ನು ಖಾಸಗಿಯಾಗಿ ಇರಿಸುವುದರೊಂದಿಗೆ, ಹದಿಹರೆಯದವರ ಸ್ನೇಹಿತರು ಮತ್ತು ಚಟುವಟಿಕೆಗಳ ಕುರಿತು ಒಳನೋಟಗಳನ್ನು ಒದಗಿಸುತ್ತದೆ. 2022 ರಲ್ಲಿ ಪ್ರಾರಂಭಿಸಲಾದ, ಕೌಟುಂಬಿಕ ಕೇಂದ್ರವು, ಯುವ ಜನರ ಸಂದೇಶದ ಕಂಟೆಂಟ್ ಅನ್ನು ಬಹಿರಂಗಪಡಿಸದೆ, Snapchat ನಲ್ಲಿ ತಮ್ಮ ಹದರಿಹರೆಯದ ಮಕ್ಕಳು ಯಾರೊಂದಿಗೆ ಸ್ನೇಹಿತರಾಗಿದ್ದಾರೆ ಮತ್ತು ಕಳೆದ ಏಳು ದಿನಗಳಲ್ಲಿ ಅವರು ಯಾರೊಂದಿಗೆ ಸಂವಹನ ನಡೆಸುತ್ತಿದ್ದಾರೆ ಎಂಬುದನ್ನು ನೋಡಲು ಪೋಷಕರಿಗೆ ಅವಕಾಶ ಕಲ್ಪಿಸುತ್ತದೆ. ಸಮತೋಲನವು ಕೌಟುಂಬಿಕ ಕೇಂದ್ರದ ಪ್ರಮುಖ ಗುರಿಯಾಗಿದೆ – ಅಂದರೆ ತಮ್ಮ ಹದಿಹರೆಯದ ಮಕ್ಕಳ Snapchat ಸ್ನೇಹಿತರು ಮತ್ತು ಸಂವಹನಗಳ ನವೀನತೆಯ ಕುರಿತು ಪೋಷಕರಿಗೆ ಒಳನೋಟಗಳನ್ನು ಒದಗಿಸುವುದರ ಜೊತೆಗೆ, ಹದಿಹರೆಯದವರ ವೈಯಕ್ತಿಕ ಬೆಳವಣಿಗೆಯಲ್ಲಿ ನಿರ್ಣಾಯಕ ಘಟ್ಟವಾಗಿರುವ ಅವರ ಗೌಪ್ಯತೆಗಾಗಿನ ಅಗತ್ಯವನ್ನು ಸಮತೋಲನ ಮಾಡುವುದಾಗಿದೆ. 

ಕೌಟುಂಬಿಕ ಕೇಂದ್ರವನ್ನು ಬಿಡುಗಡೆ ಮಾಡಿದಾಗಿನಿಂದ, Snapchat ನ ಸಂಭಾಷಣಾತ್ಮಕ ಚಾಟ್‌ಬಾಟ್ ಆದ My AI ಜೊತೆಗೆ ತೊಡಗಿಸಿಕೊಳ್ಳುವ ಹದಿಹರೆಯದವರ ಸಾಮರ್ಥ್ಯವನ್ನು ನಿಷ್ಕ್ರಿಯಗೊಳಿಸಲು ವಯಸ್ಕರಿಗೆ ಅವಕಾಶ ನೀಡುವುದು; Snap ಮ್ಯಾಪ್‌ನಲ್ಲಿ ಹದಿಹರೆಯದವರ ಸ್ಥಳವನ್ನು ವಿನಂತಿಸುವುದು ಮತ್ತು ನೋಡುವುದು; ಮತ್ತು Snapchat ಗಾಗಿ ಹದಿಹರೆಯದವರು ನೋಂದಾಯಿಸಿಕೊಂಡಾಗ ಅವರು ನಮೂದಿಸಿದ ಜನ್ಮದಿನಾಂಕ ಮತ್ತು ಜನ್ಮದ ವರ್ಷವನ್ನು ನೋಡುವುದು ಸೇರಿದಂತೆ, ಹೊಸ ವೈಶಿಷ್ಟ್ಯಗಳು ಮತ್ತು ಕಾರ್ಯವೈಶಿಷ್ಟ್ಯವನ್ನು ಸೇರಿಸುವುದನ್ನು ಮುಂದುವರಿಸಿದ್ದೇವೆ. Snapchat ನಲ್ಲಿ ಹದಿಹರೆಯದವರೊಂದಿಗೆ ಸಂಪರ್ಕ ಹೊಂದಲು ಒಬ್ಬ ವಯಸ್ಕರಿಗೆ ಕನಿಷ್ಠ ವಯಸ್ಸನ್ನು ಕೂಡ ನಾವು 18 ಕ್ಕೆ ಇಳಿಸಿದ್ದೇವೆ, ಈ ಮೂಲಕ ಸೋದರ-ಸೋದರಿಯರು, ಸೋದರ ಸಂಬಂಧಿಗಳು ಮತ್ತು ಇತರ ಕುಟುಂಬದ ಸದಸ್ಯರು (Snapchat ನಲ್ಲಿ ಹೆಚ್ಚು ಅನುಕೂಲ ಹೊಂದಿರಬಹುದಾದವರು) ಆ್ಯಪ್‌ನಲ್ಲಿ "ಹದಿಹರೆಯದವರಿಗೆ ಬೆಂಬಲವಾಗಿ ಇರಲು" ದಾರಿ ಮಾಡಿಕೊಟ್ಟಿದ್ದೇವೆ. 

ವಿಶ್ವ ಕರುಣೆಯ ದಿನದಿಂದ ಸುರಕ್ಷಿತ ಇಂಟರ್‌ನೆಟ್ ದಿನಕ್ಕೆ

ಮೂರು ತಿಂಗಳುಗಳಿಗಿಂತ ಕಡಿಮೆ ಅವಧಿಯಲ್ಲಿ, ನಾವು 22ನೆಯ ಅಂತಾರಾಷ್ಟ್ರೀಯ ಸುರಕ್ಷಿತ ಇಂಟರ್‌ನೆಟ್ ದಿನ (SID) ವನ್ನು ಆಚರಿಸಲಿದ್ದೇವೆ. SID 2026 ರಲ್ಲಿ, ನಾವು ನಮ್ಮ 2025 ರ ಡಿಜಿಟಲ್ ಯೋಗಕ್ಷೇಮ ಅಧ್ಯಯನದ ಪೂರ್ಣ ಫಲಿತಾಂಶವನ್ನು ಬಿಡುಗಡೆ ಮಾಡುತ್ತೇವೆ. ಅಲ್ಲಿಯವರೆಗೆ, Snapchat ಮತ್ತು ಡಿಜಿಟಲ್ ಸ್ಪೇಸ್‌ಗಳಾದ್ಯಂತ ಆನ್‌ಲೈನ್ ಸುರಕ್ಷತೆ, ಸೃಜನಶೀಲತೆ ಮತ್ತು ಸಂಪರ್ಕದ ಜಾಗತಿಕ ಸಂಸ್ಕೃತಿಯನ್ನು ಪೋಷಿಸಲು - ಆ್ಯಪ್‌ನಲ್ಲಿ ಮತ್ತು ಆನ್‌ಲೈನ್‌ನಲ್ಲಿ – ನಾವು ಒದಗಿಸುವ ಟೂಲ್‌ಗಳು ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳುವಂತೆ ಹದಿಹರೆಯದವರು, ಪೋಷಕರು ಮತ್ತು ಇತರ ವಯಸ್ಕರನ್ನು ನಾವು ಪ್ರೋತ್ಸಾಹಿಸುತ್ತೇವೆ. 

-ಜಾಕ್ವೆಲಿನ್ ಬ್ಯುಷೆರ್, ಪ್ಲ್ಯಾಟ್‌ಫಾರ್ಮ್ ಸುರಕ್ಷತೆಯ ಜಾಗತಿಕ ಮುಖ್ಯಸ್ಥೆ

ಸುದ್ದಿಗಳಿಗೆ ಹಿಂತಿರುಗಿ