Snap Values

ವಿಶ್ವ ಕರುಣೆಯ ದಿನದಂದು ಆನ್‌ಲೈನ್‌ನಲ್ಲಿ ಕರುಣೆಯಿಂದ ನಡೆದುಕೊಳ್ಳುವುದು

ನವೆಂಬರ್ 10, 2022

ಭಾನುವಾರ ವಿಶ್ವ ಕರುಣೆಯ ದಿನವಾಗಿದ್ದು, ನೈಜ ಬದುಕಿನಲ್ಲಿ ಮತ್ತು ಆನ್‌ಲೈನ್‌ನಲ್ಲಿ – ಕರುಣೆಯನ್ನು ಆರಿಸಿಕೊಳ್ಳಲು ಜನರಿಗೆ ತಿಳುವಳಿಕೆ ಮತ್ತು ಸ್ಫೂರ್ತಿ ನೀಡುವುದಕ್ಕಾಗಿ ಮೀಸಲಾದ ದಿನವಾಗಿದೆ. Snap ನಲ್ಲಿ, ಕರುಣೆಯು ನಮ್ಮ ಮೂಲ ಮೌಲ್ಯಗಳಲ್ಲಿ ಒಂದಾಗಿದೆ ಮತ್ತು ಅದು ದಿನವೂ ಪ್ರದರ್ಶಿತವಾಗುತ್ತದೆ. ಕರುಣೆಯನ್ನು ಹೊಂದಿರುವುದು ಮತ್ತು ತೋರುವುದು ಸುರಕ್ಷತೆಯೊಂದಿಗೂ ಕೂಡ ಜೊತೆಗೂಡುತ್ತದೆ, ಏಕೆಂದರೆ ವಿಚಾರಶೂನ್ಯ ಅಥವಾ ಒರಟು ನಡವಳಿಕೆಯಿಂದಾಗಿ ಹಲವು ಆನ್‌ಲೈನ್ ಸುರಕ್ಷತೆಯ ಸಮಸ್ಯೆಗಳು ಉದ್ಭವಿಸುತ್ತವೆ.

ಈ ವರ್ಷ, ಈ ಹಿಂದಿನ ಮೂರು ತಿಂಗಳುಗಳ ಅವಧಿಯಲ್ಲಿ ಕನಿಷ್ಟ ಒಮ್ಮೆ ಆನ್‌ಲೈನ್ ಅಪಾಯಕ್ಕೆ ಒಡ್ಡಿಕೊಂಡಿರುವುದಾಗಿ ಮುಕ್ಕಾಲು ಭಾಗ ನವಪೀಳಿಗೆಯ ಪ್ರತಿಕ್ರಿಯಾದಾರರು ವರದಿ ಮಾಡಿರುವುದು ಹೊಸ Snap ಸಂಶೋಧನಾ ಪ್ರದರ್ಶನದಲ್ಲಿ ಕಂಡುಕೊಂಡ ಅಂಶಗಳಿಂದ ತಿಳಿದುಬಂದಿದೆ. ಮೂರರಲ್ಲಿ
ಎರಡು ಭಾಗಕ್ಕಿಂತ ಹೆಚ್ಚಿನ ಹದಿಹರೆಯದವರು (68%) ಮತ್ತು 83% ಯುವಜನರು ಕೆಲವು ಡಿಜಿಟಲ್ ಅಪಾಯಗಳಿಗೆ ತಾವು ಸ್ವತಃ ಸಂತ್ರಸ್ತರಾಗಿರುವುದಾಗಿ ಹೇಳಿಕೊಂಡಿದ್ದಾರೆ. ಸುಮಾರು ಐದರಲ್ಲಿ ಒಬ್ಬ ಹದಿಹರೆಯದವರು (19%) ಆನ್‌ಲೈನ್ ನಿಂದನೆ ಅಥವಾ ಕಿರುಕುಳವನ್ನು ಅಪಾಯ ಎಂದು ಉಲ್ಲೇಖಿಸಿದ್ದಾರೆ ಮತ್ತು ಯುವಜನರಲ್ಲಿ ಆ ಪ್ರತಿಶತ ಇನ್ನೂ 22% ಹೆಚ್ಚಾಗಿದೆ. ಎರಡೂ ವಯಸ್ಸಿನ ಸಮುದಾಯಗಳಲ್ಲಿ ಇತರ ವೈಯಕ್ತಿಕ ಅಪಾಯಗಳು ದ್ವೇಷ ಭಾಷಣ ಮತ್ತು ವಿವಿಧ ಲೈಂಗಿಕ ಅಪಾಯಗಳನ್ನು ಒಳಗೊಂಡಿದ್ದವು.

“ಸೈಬರ್ ನಿಂದನೆ ಆನ್‌ಲೈನ್ ಜಗತ್ತನ್ನು ಸವೆಸುತ್ತಿದೆ,” ಎಂದು Snap ನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಆರಂಭದಿಂದಲೂ ಆನ್‌ಲೈನ್ ಕರುಣೆಯನ್ನು ಕಲಿಸಲು ಜಾಗತಿಕ ಕಾರ್ಯಕ್ರಮವನ್ನು ಬಿಡುಗಡೆ ಮಾಡುತ್ತಿರುವ ಲಾಭರಹಿತ ಸಂಸ್ಥೆಯಾದ Power of Zero ದ CEO ನಿಕೋಲಾಸ್ ಕಾರ್ಲೈಲ್ ಹೇಳಿದ್ದಾರೆ. "ಇದು ಕೆಲವರಿಗೆ ಆನ್‌ಲೈನ್ ಸಂಭಾಷಣೆಯನ್ನು ತ್ಯಜಿಸಲು, ಇನ್ನು ಕೆಲವರಿಗೆ ಹೆಚ್ಚಿಸಲು ಕಾರಣವಾಗುತ್ತದೆ ಮತ್ತು ಸಂಪರ್ಕ, ಸಹಭಾಗಿತ್ವ ಮತ್ತು ಸೃಜನಶೀಲತೆಯ ಇಂಟರ್‌ನೆಟ್‌ನ ಮೂಲ ಭರವಸೆಯ ಹಾದಿಗೆ ಅಡ್ಡಗಾಲಾಗುತ್ತದೆ. ಇದಕ್ಕೆ ಇರುವ ಮದ್ದೆಂದರೆ ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ಆನ್‌ಲೈನ್ ಸಂಭಾಷಣೆಯಲ್ಲಿ ಕರುಣೆಗೆ ಹಾಗೂ ನಿಂದನೆಯನ್ನು ನಿರ್ಬಂಧಿಸಲು, ವರದಿ ಮಾಡಲು ಮತ್ತು ಸಹಾಯ ಪಡೆಯಲು ನಮ್ಮ ಸಾಮಾಜಿಕ ಮಾಧ್ಯಮಗಳು ಒದಗಿಸುವ ಸಾಧನಗಳನ್ನು ಬಳಸಲು ಪಟ್ಟುಬಿಡದ ಬದ್ಧತೆಯನ್ನು ಹೊಂದುವುದಾಗಿದೆ."

ನಿಂದನೆ ಮತ್ತು ಕಿರುಕುಳದ ವಿರುದ್ಧ ಹೋರಾಡುವುದು

ನಿಂದನೆಯನ್ನು ಯಾರೂ ಕೂಡ, ವೈಯಕ್ತಿಕವಾಗಿ ಅಥವಾ ಆನ್‌ಲೈನ್‌ನಲ್ಲಿ ಅನುಭವಿಸಬಾರದು. Snapchat ನ ಕಮ್ಯುನಿಟಿ ಮಾರ್ಗಸೂಚಿಗಳು ನಿಂದನೆ, ಬೆದರಿಸುವಿಕೆ ಮತ್ತು ಯಾವುದೇ ಬಗೆಯ ಕಿರುಕುಳವನ್ನು ಸ್ಪಷ್ಟವಾಗಿ ಮತ್ತು ಸುವ್ಯಕ್ತ ರೀತಿಯಲ್ಲಿ ನಿಷೇಧಿಸುತ್ತವೆ. ವೇದಿಕೆಯಲ್ಲಿ ಅದು ನಮಗೆ ಬೇಕಾಗಿಲ್ಲ; Snapchat ಅನ್ನು ಏಕೆ ರಚಿಸಲಾಗಿದೆ ಮತ್ತು ವಿನ್ಯಾಸಗೊಳಿಸಲಾಗಿದೆ ಎಂಬುದಕ್ಕೆ ಅದು ಹೊಂದಾಣಿಕೆಯಾಗುವುದಿಲ್ಲ. ಒಂದು ವೇಳೆ ಯಾರಾದರೂ ನಿಂದನೆ ಅಥವಾ ಕಿರುಕುಳ ಸೇರಿದಂತೆ ನಮ್ಮ ನೀತಿಗಳ ಸಂಭಾವ್ಯ ಉಲ್ಲಂಘನೆಯನ್ನು ಅನುಭವಿಸುತ್ತಿದ್ದರೆ ಅಥವಾ ಕಾಣುತ್ತಿದ್ದರೆ, ಅದನ್ನು ತಕ್ಷಣವೇ ನಮಗೆ ವರದಿ ಮಾಡುವಂತೆ ನಾವು ಅವರನ್ನು ಪ್ರೋತ್ಸಾಹಿಸುತ್ತೇವೆ.

ಜನರು ನಿರ್ದಿಷ್ಟ Snap ಗಳನ್ನು (ಫೋಟೋಗಳು ಅಥವಾ ವೀಡಿಯೊಗಳು) ಮತ್ತು ಖಾತೆಗಳನ್ನು ವರದಿ ಮಾಡಬಹುದಾದ ಆ್ಯಪ್‌ನಲ್ಲಿನ ವರದಿ ಮಾಡುವಿಕೆ ಸಾಧನಗಳನ್ನು ನಾವು ಹೊಂದಿದ್ದೇವೆ. Snapchatter ಗಳು ಒಂದು ಕಂಟೆಂಟ್ ತುಣುಕನ್ನು ನಮಗೆ ವರದಿ ಮಾಡಲು ಸರಳವಾಗಿ ಅದರ ಮೇಲೆ ಒತ್ತಿ ಹಿಡಿಯಬಹುದು ಅಥವಾ ನಮ್ಮ ಬೆಂಬಲ ಸೈಟ್‌ನಲ್ಲಿ ಈ ಆನ್‌ಲೈನ್ ಫಾರ್ಮ್ ಭರ್ತಿ ಮಾಡಬಹುದು. ಅವರು Snapchat ಅಕೌಂಟ್ ಹೊಂದಿದ್ದಾರೆಯೇ ಇಲ್ಲವೇ ಎನ್ನುವುದನ್ನು ಪರಿಗಣಿಸದೆ ಫಾರ್ಮ್ ಅನ್ನು ಯಾರು ಬೇಕಿದ್ದರೂ ಸಲ್ಲಿಸಬಹುದು. (Snapchat ನಲ್ಲಿ ವರದಿ ಮಾಡುವಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವ ಕುರಿತು ಇಲ್ಲಿ ಇನ್ನಷ್ಟು ತಿಳಿದುಕೊಳ್ಳಿ.) 24/7 ಗಂಟೆ ಕಾರ್ಯಾಚರಣೆ ಮಾಡುವ Snap ನ ವಿಶ್ವಾಸ ಮತ್ತು ಸುರಕ್ಷತಾ ತಂಡಗಳು, ವರದಿಗಳನ್ನು ಪರಿಶೀಲಿಸುತ್ತವೆ ಮತ್ತು ಕ್ರಮ ತೆಗೆದುಕೊಳ್ಳುತ್ತವೆ. ಜಾರಿ ಮಾಡುವ ಕ್ರಮಗಳಲ್ಲಿ ತಪ್ಪೆಸಗಿದವರಿಗೆ ಎಚ್ಚರಿಕೆ ನೀಡುವುದು, ಖಾತೆಯನ್ನು ಅಮಾನತುಗೊಳಿಸುವುದು ಅಥವಾ ಖಾತೆಯನ್ನು ಸಂಪೂರ್ಣವಾಗಿ ಸಮಾಪ್ತಿಗೊಳಿಸುವುದು ಸೇರಿವೆ.

"ಸ್ನೇಹವನ್ನು ನಿರ್ವಹಿಸಿ" ಶೀರ್ಷಿಕೆ ಸೇರಿದಂತೆ, ಒಂದು ಮೆನು ಕಾಣಿಸುವವರೆಗೆ ವ್ಯಕ್ತಿಯ ಹೆಸರಿನ ಮೇಲೆ ಒತ್ತಿ ಹಿಡಿದುಕೊಳ್ಳುವ ಮೂಲಕ ತಪ್ಪೆಸಗಿದವರನ್ನು ನಿರ್ಬಂಧಿಸುವ ಅಥವಾ ತೆಗೆದುಹಾಕುವ ಸಾಮರ್ಥ್ಯವೂ ಇಲ್ಲಿದೆ. ಆ ಡ್ರಾಪ್‌ಡೌನ್‌ನಲ್ಲಿ ವರದಿ ಮಾಡಿ, ನಿರ್ಬಂಧಿಸಿ ಮತ್ತು ಸ್ನೇಹಿತರನ್ನು ತೆಗೆದುಹಾಕಿ, ಆಯ್ಕೆಗಳು ಕೆಂಪು ಬಣ್ಣದಲ್ಲಿ ಗೋಚರಿಸುತ್ತವೆ. ಬೆದರಿಸುವಿಕೆ ಅಥವಾ ಯಾವುದೇ ಸ್ವಾಗತಾರ್ಹವಲ್ಲದ ನಡವಳಿಕೆ ನಡೆಯುತ್ತಿರುವ ಯಾವುದೇ ಗುಂಪು ಚಾಟ್ ಅನ್ನು ಬಿಟ್ಟು, ತಕ್ಷಣವೇ Snap ಗೆ ವರದಿ ಮಾಡಲು ನಾವು ಸಲಹೆ ನೀಡುತ್ತೇವೆ. ನಿಂದನೆಯ ಅಥವಾ ಹಾನಿಕಾರಕ ವಿಷಯ ಮತ್ತು ನಡವಳಿಕೆಗಳ ಕುರಿತು ನಮಗೆ ಹೇಳುವುದರಿಂದ ಎಲ್ಲರಿಗೂ ಸಮುದಾಯ ಅನುಭವವನ್ನು ಸುಧಾರಿಸಲು ನಮಗೆ ಸಹಾಯ ಮಾಡುತ್ತದೆ.

Snapchat ನ ಹೊಸ ಕೌಟುಂಬಿಕ ಕೇಂದ್ರ ವೈಶಿಷ್ಟ್ಯವನ್ನು ಬಳಸಿಕೊಂಡು ತಮ್ಮ ಹದಿಹರೆಯದವರೊಂದಿಗೆ ಸಂಪರ್ಕ ಸಾಧಿಸುವ ಪೋಷಕರು, ಆರೈಕೆದಾರರು ಮತ್ತು ಇತರ ನಂಬಿಕಸ್ಥ ವಯಸ್ಕರು, ತಮಗೆ ಆತಂಕಕಾರಿ ಎನಿಸುವ ಖಾತೆಗಳನ್ನು ವರದಿ ಮಾಡಬಹುದು - ಮತ್ತು ಅವರು ಅದನ್ನು ನೇರವಾಗಿ ಅಪ್ಲಿಕೇಶನ್‌ನಲ್ಲಿ ಮಾಡಬಹುದು. ಕೌಟುಂಬಿಕ ಕೇಂದ್ರಕ್ಕೆ ಭವಿಷ್ಯದ ಅಪ್‌ಡೇಟ್‌ಗಳು ಹದಿಹರೆಯದವರು ತಮ್ಮ ವಯಸ್ಕ ಪೋಷಕರಿಗೆ Snap ಗೆ ವರದಿ ಮಾಡಿರುವುದಾಗಿ ತಿಳಿಸುವ ಸಾಮರ್ಥ್ಯವನ್ನು ಸಹ ಒಳಗೊಂಡಿರುತ್ತವೆ.

ಇನ್ನಷ್ಟು ಸಂಶೋಧನಾ ಒಳನೋಟಗಳು

ಹೊಸ Snap ಸಂಶೋಧನೆಯು ಒಟ್ಟಾರೆ ಡಿಜಿಟಲ್ ಯೋಗಕ್ಷೇಮಕ್ಕೆ ಕೊಡುಗೆ ನೀಡುವ ಆನ್‌ಲೈನ್ ಜೀವನದ ವಿವಿಧ ಆಯಾಮಗಳನ್ನು ಪರಿಶೀಲಿಸುತ್ತದೆ. ಅಧ್ಯಯನದಲ್ಲಿ 2022 ರ ಏಪ್ರಿಲ್ 22 ಮತ್ತು ಮೇ 10 ರ ನಡುವೆ ಆಸ್ಟ್ರೇಲಿಯಾ, ಫ್ರಾನ್ಸ್, ಭಾರತ, ಬ್ರಿಟನ್ ಮತ್ತು ಅಮೆರಿಕದಲ್ಲಿ ಹದಿಹರೆಯದವರು, ಯುವಜನರು ಮತ್ತು 13-19 ವಯಸ್ಸಿನ ಹದಿಹರೆಯದವರ ಪೋಷಕರ ಸಮೀಕ್ಷೆ ನಡೆಸಲಾಯಿತು. ಆನ್‌ಲೈನ್ ಸಂಭಾಷಣೆಗಳಿಗಾಗಿ ಅವರ ಪ್ರತಿಕ್ರಿಯೆಗಳು ಅಂದಾಜು ಫೆಬ್ರವರಿಯಿಂದ ಏಪ್ರಿಲ್‌ವರೆಗೆ ವ್ಯಾಪಿಸಿದ್ದವು.

ಈ ಸಂಶೋಧನೆಯಲ್ಲಿ 9003 ವ್ಯಕ್ತಿಗಳು ಭಾಗವಹಿಸಿದರು ಮತ್ತು ಪೂರ್ಣ ಫಲಿತಾಂಶಗಳನ್ನು* ಫೆಬ್ರವರಿ 7 ರಂದು 2023 ರ ಸುರಕ್ಷಿತ ಇಂಟರ್‌ನೆಟ್ ದಿನದಂದು ಬಿಡುಗಡೆ ಮಾಡಲಾಗುತ್ತದೆ. ಅದಾಗ್ಯೂ, ವಿಶ್ವ ಕರುಣೆಯ ದಿನದಂದು, Snapchat ಮತ್ತು ಸಾಮಾಜಿಕ ಮಾಧ್ಯಮಗಳಾದ್ಯಂತ ಇನ್ನಷ್ಟು ಸಹಾನುಭೂತಿ ಮತ್ತು ಗೌರವಯುತ ಸಂವಹನಗಳನ್ನು ಪ್ರೋತ್ಸಾಹಿಸಲು ಕೆಲವು ಅಂಕಿಅಂಶಗಳನ್ನು ನಾವು ಹಂಚಿಕೊಳ್ಳುತ್ತಿದ್ದೇವೆ.

ಪ್ರತಿ ದೇಶ ಮತ್ತು ಎಲ್ಲ ಆರು ದೇಶಗಳಿಗಾಗಿ ನಮ್ಮ ಮೊದಲ ಡಿಜಿಟಲ್ ಯೋಗಕ್ಷೇಮ ಸೂಚ್ಯಂಕ ಸೇರಿದಂತೆ, ಪೂರ್ಣ ಫಲಿತಾಂಶಗಳನ್ನು ಮುಂದಿನ ವರ್ಷದ ಆರಂಭದಲ್ಲಿ ಹಂಚಿಕೊಳ್ಳಲು ನಾವು ಕಾತುರರಾಗಿದ್ದೇವೆ.

ಅಲ್ಲಿಯವರೆಗೆ, ವಿಶ್ವ ಕರುಣೆಯ ದಿನದ ಶುಭಾಶಯಗಳು ಮತ್ತು ನವೆಂಬರ್ 13 ರಂದು ಮಾತ್ರವಲ್ಲ ವರ್ಷದುದ್ದಕ್ಕೂ ಕರುಣೆಯನ್ನು ಹೊಂದುವ ಗುರಿಯನ್ನು ಹಾಕಿಕೊಳ್ಳೋಣ.

- ಜಾಕ್ವೆಲಿನ್ ಬ್ಯೂಚೆರ್, Snap ನ ವೇದಿಕೆ ಸುರಕ್ಷತೆಯ ಜಾಗತಿಕ ಮುಖ್ಯಸ್ಥೆ

** Snapchat ಬಳಸುತ್ತಿದ್ದೇವೆ ಎಂದು ಗುರುತಿಸಿಕೊಂಡ 4,654 ಜನರು ಸೇರಿದಂತೆ, ಹದಿಹರೆಯದವರು ಮತ್ತು ಯುವಜನರ ಮಾದರಿ ಗಾತ್ರವು 6,002 ಆಗಿತ್ತು. ಒಟ್ಟು 6,087 ಪ್ರತಿಕ್ರಿಯೆದಾರರು Snapchat ಬಳಕೆದಾರ ಎಂದು ಗುರುತಿಸಿಕೊಂಡರು (ಪೋಷಕರು ಸೇರಿದಂತೆ). ಪ್ರಶ್ನೆಗಳು ನಿರ್ದಿಷ್ಟವಾಗಿ ಯಾವುದೇ ಒಂದು ಸಾಮಾಜಿಕ ಮಾಧ್ಯಮ ವೇದಿಕೆಯ ಬಳಕೆದಾರರ ಮೇಲೆ ಗಮನ ಕೇಂದ್ರೀಕರಿಸಿರಲಿಲ್ಲ ಬದಲಾಗಿ ಆನ್‌ಲೈನ್ ಸಂವಹನಗಳ ಕುರಿತು ಸಾಮಾನ್ಯವಾಗಿ ಕೇಳಿದವಾಗಿದ್ದವು.

ಸುದ್ದಿಗಳಿಗೆ ಹಿಂತಿರುಗಿ