2024 ರ ಪ್ರಥಮಾರ್ಧಕ್ಕಾಗಿ ನಮ್ಮ ಪಾರದರ್ಶಕತೆಯ ವರದಿ
ಡಿಸೆಂಬರ್ 4, 2024
ಇಂದು ನಾವು 2024 ರ ಪ್ರಥಮಾರ್ಧವನ್ನು ಒಳಗೊಂಡಿರುವ ನಮ್ಮ ಇತ್ತೀಚಿನ ಪಾರದರ್ಶಕತೆಯ ವರದಿಯನ್ನು ಬಿಡುಗಡೆ ಮಾಡುತ್ತಿದ್ದೇವೆ.
Snapchat ನಲ್ಲಿ, ನಮ್ಮ ಅಗ್ರ ಆದ್ಯತೆಯಾದ: Snapchatter ಗಳ ಸುರಕ್ಷತೆಯತ್ತ ನಮ್ಮ ಪ್ರಗತಿಯನ್ನು ಹಂಚಿಕೊಳ್ಳಲು ಪಾರದರ್ಶಕತೆಯ ವರದಿಗಳು ನಿರ್ಣಾಯಕವಾಗಿವೆ. ಪ್ರತಿ ವರದಿಯೊಂದಿಗೆ, ನಮ್ಮ ಟೂಲ್‌ಗಳು ಮತ್ತು ಸದೃಢವಾದ ಸುರಕ್ಷತಾ ಪ್ರಯತ್ನಗಳ ಕುರಿತು ನಮ್ಮ ಸಮುದಾಯಕ್ಕೆ ಹೆಚ್ಚಿನ ತಿಳುವಳಿಕೆ ಮೂಡಿಸುವುದನ್ನು ನಾವು ನಿರೀಕ್ಷಿಸುತ್ತೇವೆ.
ನಾವು ಜಾರಿಗೊಳಿಸಿದ ಕ್ರಮಗಳಲ್ಲಿ ಗಮನಾರ್ಹ ಪ್ರಮಾಣವು ನಾವು ಸ್ವೀಕರಿಸಿದ ವರದಿಗಳಿಂದ ಪ್ರೇರಿತವಾಗಿರುತ್ತದೆಯಾದರೂ, ಮೆಷಿನ್ ಲರ್ನಿಂಗ್ ಮತ್ತು ಕೀವರ್ಡ್ ಪತ್ತೆಯಂತಹ ಟೂಲ್‌ಗಳ ಸಹಾಯದೊಂದಿಗೆ Snapchat ನ ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳನ್ನು ಪತ್ತೆ ಮಾಡಲು ಮತ್ತು ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ನಾವು ಪೂರ್ವಭಾವಿ ಕ್ರಮಗಳನ್ನು ಕೂಡ ಕೈಗೊಳ್ಳುತ್ತೇವೆ. ಈ ವರದಿಯೊಂದಿಗೆ ಆರಂಭಿಸಿ, ಆ ಸಕ್ರಿಯ ಪ್ರಯತ್ನಗಳಿಗೆ ಸಂಬಂಧಿಸಿ, ಜಾಗತಿಕ ಮತ್ತು ದೇಶದ-ಮಟ್ಟ ಎರಡರಲ್ಲೂ ನಾವು ಹೆಚ್ಚು ವಿವರವಾದ ಡೇಟಾವನ್ನು ಹಂಚಿಕೊಳ್ಳಲಿದ್ದು, ಪೂರ್ವಭಾವಿ ಕ್ರಮ ಜಾರಿಗೊಳಿಸುವಿಕೆಯ ಒಟ್ಟು ಸಂಖ್ಯೆ, ಕ್ರಮ ಜಾರಿಗೊಳಿಸಲಾದ ವಿಶಿಷ್ಟ ಖಾತೆಗಳು ಮತ್ತು ಆ ಕ್ರಮ ಜಾರಿಗೊಳಿಸುವಿಕೆಗೆ ತೆಗೆದುಕೊಂಡ ಸರಾಸರಿ ಸಮಯದ ಕುರಿತು ಒಳನೋಟಗಳನ್ನು ಒದಗಿಸಲಿದ್ದೇವೆ. ಈ ವರದಿಯಲ್ಲಿ ಹೇಳಿರುವಂತೆ, ಈ ಟೂಲ್‌ಗಳ ಸಹಾಯದೊಂದಿಗೆ 2024 ರ ಪ್ರಥಮಾರ್ಧದಲ್ಲಿ ನಾವು 3.4 ಮಿಲಿಯನ್‌ಗೂ ಅಧಿಕ ಪೂರ್ವಭಾವಿ ಕ್ರಮ ಜಾರಿಗೊಳಿಸುವಿಕೆಯನ್ನು ಕೈಗೊಂಡಿದ್ದೇವೆ.
ವರದಿಯ ಮೇಲ್ಭಾಗದಲ್ಲಿ ನಾವು ಹೊಸ ವಿಭಾಗವನ್ನು ಕೂಡ ಸೇರಿಸಿದ್ದು, ಇದು ನಮ್ಮ ಪೂರ್ವಭಾವಿ ಮತ್ತು ಪ್ರತಿಕ್ರಿಯಾತ್ಮಕ ಎರಡೂ ಪ್ರಯತ್ನಗಳ ಸಂಯೋಜಿತ ಅವಲೋಕನವನ್ನು ಒದಗಿಸುತ್ತದೆ. ನಮ್ಮ ಪ್ರತಿಕ್ರಿಯಾತ್ಮಕ ಮತ್ತು ಪೂರ್ವಭಾವಿ ಕ್ರಮ ಜಾರಿಗೊಳಿಸುವಿಕೆಗಳ ಕುರಿತ ಆ ವರದಿಗೆ ಮೀಸಲಾದ ವಿಭಾಗಗಳಿಗೆ ಈ ಹೊಸ ವಿಭಾಗವು ಪೂರಕವಾಗಿದ್ದು ಹೆಚ್ಚು ವಿವರವಾಗಿದೆ.
Snapchat ನಲ್ಲಿ, ನಮ್ಮ ಸಮುದಾಯದ ಸುರಕ್ಷತೆಯು ಅಗ್ರ ಆದ್ಯತೆಯಾಗಿದೆ ಮತ್ತು ದ್ವೈ-ವಾರ್ಷಿಕ ಪಾರದರ್ಶಕತೆಯ ವರದಿಗಳೊಂದಿಗೆ ಈ ಕ್ಷೇತ್ರದಲ್ಲಿನ ಪ್ರಗತಿಯನ್ನು ಹಂಚಿಕೊಳ್ಳುವುದನ್ನು ನಾವು ಮುಂದುವರಿಸುತ್ತೇವೆ.