Snap Values

Snapchat, ಗೌಪ್ಯತೆ ಮತ್ತು ಸುರಕ್ಷತೆ: ಮೂಲಭೂತ ಸಂಗತಿಗಳು

ಏಪ್ರಿಲ್ 21, 2021

ಸುರಕ್ಷತೆ ಮತ್ತು ಪ್ರಭಾವ ಬ್ಲಾಗ್‌ಗೆ ಸ್ವಾಗತ! ನಾನು ಜೆನ್ ಸ್ಟೌಟ್, ಸಾರ್ವಜನಿಕ ನೀತಿಯ ಉಪಾಧ್ಯಕ್ಷ, ನಮ್ಮ ವಿಧಾನದ ಕುರಿತು ವಿವರವಾಗಿ ತಿಳಿಸುವ ಈ ಪೋಸ್ಟ್‌ನೊಂದಿಗೆ ಇವಾನ್‌ ಅವರ ಪ್ರಸ್ತಾವನೆಯನ್ನು ಫಾಲೋ ಮಾಡಲು ನಾನು ರೋಮಾಂಚಿತನಾಗಿದ್ದೇನೆ.

ಏಕೆಂದರೆ Snapchat ಸ್ವಾಭಾವಿಕವಾಗಿ ಒಂದು ಭಿನ್ನ ವೇದಿಕೆಯಾಗಿದೆ, ಒಂದು ವೇಳೆ ನೀವು ಸ್ವತಃ ಎಂದಿಗೂ ಅದನ್ನು ಬಳಸಿಲ್ಲದಿದ್ದರೆ ಮತ್ತು ಬಳಸಲು ಯೋಜಿಸದಿದ್ದರೆ (ಅದು ಪರವಾಗಿಲ್ಲ!) ಅದನ್ನು ಅರ್ಥಮಾಡಿಕೊಳ್ಳುವುದು ವಿಶೇಷವಾಗಿ ಕಷ್ಟಕರ ಅನಿಸಬಹುದು ಎಂದು ನಮಗೆ ತಿಳಿದಿದೆ. ಯುವಜನರು ನಮ್ಮ ಉತ್ಪನ್ನವನ್ನು ಹೇಗೆ ಅನುಭವಿಸುತ್ತಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಬಯಸುವ ಯಾರಿಗಾದರೂ ಅಥವಾ ಸುರಕ್ಷತೆ ಮತ್ತು ನಂಬಿಕೆ ಕುರಿತ ನಿರ್ಣಾಯಕ ಸಮಸ್ಯೆಗಳನ್ನು ನಾವು ಹೇಗೆ ನಿಭಾಯಿಸುತ್ತೇವೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಅಪೇಕ್ಷಿಸುವ ಹಲವು ಪಾಲುದಾರರು ಮತ್ತು ವಕೀಲರಿಗೆ ಈ ಬ್ಲಾಗ್ ಉಪಯುಕ್ತ ಸಂಪನ್ಮೂಲವಾಗುತ್ತದೆ ಎಂದು ನಾವು ಆಶಿಸುತ್ತೇವೆ.

ನಮಗೆ ನಮ್ಮ Snapchat ಸಮುದಾಯದ ಸುರಕ್ಷತೆಗಿಂತ ಹೆಚ್ಚು ಮುಖ್ಯವಾದುದು ಯಾವುದೂ ಇಲ್ಲ ಮತ್ತು ನಮ್ಮ ಸಮುದಾಯ, ನಮ್ಮ ಉತ್ಪನ್ನಗಳನ್ನು ಬಳಸುವಾಗ ಅದರ ಭದ್ರತೆ, ಗೌಪ್ಯತೆ ಮತ್ತು ಯೋಗಕ್ಷೇಮವನ್ನು ರಕ್ಷಿಸಿಕೊಳ್ಳುವುದು ಹೇಗೆ ಎನ್ನುವ ಕುರಿತು ತಿಳಿದುಕೊಳ್ಳಲು ಸಹಾಯ ಮಾಡುವ ಜವಾಬ್ದಾರಿಯನ್ನು ನಾವು ಹೊಂದಿದ್ದೇವೆ ಎಂದು ನಾವು ಯಾವಾಗಲೂ ನಂಬಿದ್ದೇವೆ. ಇಂದಿನವರೆಗೆ ನಾವಿದನ್ನು ಆನ್‌ಲೈನ್ ಸಂಪನ್ಮೂಲಗಳು ಮತ್ತು ಆ್ಯಪ್‌ನಲ್ಲಿನ ಅರಿವು ಮೂಡಿಸುವ ಪ್ರಯತ್ನಗಳು ಎರಡರ ಮೂಲಕವೂ ಮಾಡಿದ್ದೇವೆ ಮತ್ತು ಈ ವರ್ಷದ ಆರಂಭದಲ್ಲಿ ಈ ಪ್ರಯತ್ನಗಳನ್ನು ದುಪ್ಪಟ್ಟುಗೊಳಿಸಲು ಇನ್ನಷ್ಟು ವಿಸ್ತಾರವಾದ ಡಿಜಿಟಲ್ ಸಾಕ್ಷರತೆ ಅಭಿಯಾನಗಳನ್ನು ಆರಂಭಿಸಿದೆವು. Snapchatter ಗಳನ್ನು ಇನ್ನಷ್ಟು ಉತ್ತಮವಾಗಿ ಬೆಂಬಲಿಸಲು ನಾವು ತೀವ್ರ ಗಮನ ಕೇಂದ್ರೀಕರಿಸಿದ್ದೇವೆ ಮತ್ತು ಅವರ ಬೆಂಬಲ ವ್ಯವಸ್ಥೆಗಳಾದ: ಪೋಷಕರು, ಕುಟುಂಬ ಸದಸ್ಯರು, ಮಾರ್ಗದರ್ಶಕರು ಮತ್ತು ಅವರ ಕುರಿತು ತೀವ್ರ ಕಾಳಜಿ ವಹಿಸುವ ಅವರ ಬದುಕಿನಲ್ಲಿನ ಇತರ ಜನರ ಜೊತೆ ಮಾತನಾಡುವ ಉತ್ತಮ ಕೆಲಸ ಮಾಡಲು ನಾವು ಬಯಸುತ್ತೇವೆ.

ಆರಂಭಿಸಲು, ಸಾಂಪ್ರದಾಯಿಕ ಸಾಮಾಜಿಕ ಮಾಧ್ಯಮ ವೇದಿಕೆಗಳಿಗಿಂತ ಭಿನ್ನವಾಗಿ Snapchat ವಿನ್ಯಾಸಗೊಳಿಸಲಾಗಿರುವ ವಿಧಾನಗಳ ನಿರ್ದಿಷ್ಟತೆಗಳ ಕುರಿತು ನಾವು ಇನ್ನಷ್ಟು ವಿವರಗಳನ್ನು ಒದಗಿಸುತ್ತೇವೆ. ಇವಾನ್ ವಿವರಿಸಿದಂತೆ, ಆರೋಗ್ಯಕರ, ಸುರಕ್ಷಿತ ಮತ್ತು ವಿನೋದಮಯ ವಾತಾವರಣದಲ್ಲಿ ನೈಜ ಸ್ನೇಹವನ್ನು ಪೋಷಿಸುವ ಮತ್ತು ಬೆಂಬಲಿಸುವ ಉತ್ಪನ್ನಗಳನ್ನು ವಿನ್ಯಾಸಗೊಳಿಸುವುದು ಮತ್ತು ತಂತ್ರಜ್ಞಾನಗಳನ್ನು ನಿರ್ಮಿಸುವುದು ನಮ್ಮ ಉದ್ದೇಶವಾಗಿದೆ. ನಮ್ಮ ವೇದಿಕೆಯನ್ನು ನಾವು ಹೇಗೆ ಸಂರಚನೆ ಮಾಡುತ್ತೇವೆ ಮತ್ತು ಕಾರ್ಯಾಚರಿಸುತ್ತೇವೆ ಮತ್ತು ಹೊಸ ಉತ್ಪನ್ನಗಳನ್ನು ಹೇಗೆ ಅಭಿವೃದ್ಧಿಪಡಿಸುತ್ತೇವೆ ಎಂಬ ಕುರಿತ ನಿರ್ಧಾರಗಳನ್ನು, ನಾವು ಭವಿಷ್ಯದ ಬಗ್ಗೆ ಮತ್ತು ಅಂತಿಮವಾಗಿ ತಂತ್ರಜ್ಞಾನ ವಲಯದಲ್ಲಿ ನಮ್ಮ ಪಾತ್ರದ ಬಗ್ಗೆ ಹೇಗೆ ಯೋಚಿಸುತ್ತೇವೆ ಎನ್ನುವುದನ್ನು ಈ ಗುರಿಯು ಮುನ್ನಡೆಸುತ್ತದೆ. 

Snapchat ನ ಸ್ವರೂಪ

  • ಗೌಪ್ಯತೆ, ಸುರಕ್ಷತೆಯನ್ನು ಹಾಗೂ ವಿನ್ಯಾಸ ಪ್ರಕ್ರಿಯೆಯ ಮುಂಚೂಣಿಯಲ್ಲಿರುವ ಹೊಸ ವೈಶಿಷ್ಟ್ಯದ ನೈತಿಕ ಪರಿಣಾಮಗಳನ್ನು ಪರಿಗಣಿಸುವ ಉತ್ಪನ್ನ ಅಭಿವೃದ್ಧಿ ಪ್ರಕ್ರಿಯೆಗಳನ್ನು ನಾವು ಬಳಸುತ್ತೇವೆ -- ಮತ್ತು ನಾವು ನಮ್ಮ ತೀವ್ರ ಪರಿಶೀಲನೆಯಲ್ಲಿ ತೇರ್ಗಡೆಯಾಗದ ಉತ್ಪನ್ನಗಳನ್ನು ನಾವು ಬಿಡುಗಡೆ ಮಾಡುವುದಿಲ್ಲ. 

  • ಇಡೀ ಜಗತ್ತಿಗೆ ಯಾರು ಬೇಕಿದ್ದರೂ ಪರಿಶೀಲಿಸದೆ ಇರುವ ವಿಷಯವನ್ನು ಪ್ರಸಾರ ಮಾಡಬಹುದಾದ ಮುಕ್ತ ನ್ಯೂಸ್‌ಫೀಡ್ ಅನ್ನು ನಾವು ಹೊಂದಿಲ್ಲ. ವಾಸ್ತವದಲ್ಲಿ ನೀವು ಮೊದಲ ಬಾರಿ ಆ್ಯಪ್ ಅನ್ನು ಪ್ರಯತ್ನಿಸಿದಾಗ Snapchat ಭಿನ್ನವಾಗಿ ಕಾಣಿಸುತ್ತದೆ ಏಕೆಂದರೆ ಅದು ಕ್ಯಾಮೆರಾಗೆ -- ಮೂಲಭೂತವಾಗಿ ಖಾಲಿ ಕ್ಯಾನ್ವಾಸ್‌ಗೆ -- ತೆರೆಯುತ್ತದೆ ಹೊರತು ಸ್ಕ್ರಾಲ್ ಮಾಡಬಹುದಾದ ಫೀಡ್‌ಗೆ ಅಲ್ಲ. 

  • Snapchat ನಲ್ಲಿ ಪರಿಶೀಲಿಸದೆ ಇರುವ ವಿಷಯ ವೈರಲ್ ಆಗಲು ನಾವು ಅವಕಾಶ ನೀಡುವುದಿಲ್ಲ. ನಮ್ಮ ಕಂಟೆಂಟ್ ಪ್ಲಾಟ್‌ಫಾರ್ಮ್, Discover, ಕೇವಲ ಪರಿಶೀಲಿಸಿದ ಮಾಧ್ಯಮ ಪ್ರಕಾಶಕರು ಮತ್ತು ಕಂಟೆಂಟ್ ಕ್ರಿಯೇಟರ್‌ಗಳಿಂದ ಮಾತ್ರ ಕಂಟೆಂಟ್ ಅನ್ನು ಪ್ರದರ್ಶಿಸುತ್ತದೆ. ಬೃಹತ್ ಪ್ರೇಕ್ಷಕರಿಗೆ ವಿಷಯ ತಲುಪುವುದಕ್ಕೆ ಮುನ್ನ, ನಮ್ಮ ಮನರಂಜನೆಯ ವೇದಿಕೆ, ಸ್ಪಾಟ್‌ಲೈಟ್ ಅನ್ನು ಮಾನವರ ಪರಿಶೀಲನೆ ಬಳಸಿಕೊಂಡು ಪೂರ್ವಭಾವಿಯಾಗಿ ಮಾಡರೇಟ್ ಮಾಡಲಾಗುತ್ತದೆ. 

  • Snapchat ನಲ್ಲಿ, ಗುಂಪು ಚಾಟ್‌ಗಳು ಗಾತ್ರದಲ್ಲಿ ಸೀಮಿತವಾಗಿವೆ. ಈಗಾಗಲೇ ಸದಸ್ಯರಾಗದೆ ಇರುವವರಿಗೆ ನಮ್ಮ ವೇದಿಕೆಯಲ್ಲಿ ಈ ಗುಂಪುಗಳನ್ನು ಹುಡುಕಲು ಆಗುವುದಿಲ್ಲ. ಮುಖಾಮುಖಿ ಚಾಟ್‌ಗಳಂತೆಯೇ, ಒಂದು ಗುಂಪಿನಲ್ಲಿ ನೀವು ಈಗಾಗಲೇ ಯಾರೊಂದಿಗಾದರೂ ಸ್ನೇಹಿತರಾಗಿರದಿದ್ದಲ್ಲಿ ಗುಂಪು ಚಾಟ್ ಸೇರಲು ನಿಮಗೆ ಸಾಧ್ಯವಾಗುವುದಿಲ್ಲ. 

ಸುರಕ್ಷತೆ ಮತ್ತು ಗೌಪ್ಯತೆ

  • Snapchat ಸಾರ್ವಜನಿಕ ಕಾಮೆಂಟ್‌ಗಳನ್ನು ಅಥವಾ ಬ್ರೌಸ್‌ ಮಾಡಬಹುದಾದ ಪ್ರೊಫೈಲ್ ಫೋಟೋಗಳನ್ನು ಹೊಂದಿಲ್ಲ -- ಆ್ಯಪ್‌ನಲ್ಲಿ ಅಪರಿಚಿತರು ಸಂಪರ್ಕಿಸಬಾರದ ಜನರನ್ನು ತಲುಪಲು ನಾವು ಉದ್ದೇಶಪೂರ್ವಕವಾಗಿ ಇನ್ನಷ್ಟು ಕಷ್ಟಕರವಾಗಿಸುವ ವಿಧಾನಗಳಲ್ಲಿ ಇದು ಒಂದಾಗಿದೆ. ನಿರ್ದಿಷ್ಟವಾಗಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ Snapchatter ಗಳನ್ನು ರಕ್ಷಿಸಲು ನೆರವಾಗುವುದಕ್ಕೆ, ಅವರು ಸಾರ್ವಜನಿಕ ಪ್ರೊಫೈಲ್‌ಗಳನ್ನು ರಚಿಸಲು ನಾವು ಅವಕಾಶ ನೀಡುವುದಿಲ್ಲ ಮತ್ತು Snap ನಲ್ಲಿ ಹೊಸ ಸ್ನೇಹಿತರಿಗಾಗಿ ಹುಡುಕುವಾಗ ನಾವು ಕೇವಲ ಬಳಕೆದಾರರ bitmoji ಅವತಾರ್ ಅನ್ನು ಪ್ರದರ್ಶಿಸುತ್ತೇವೆ, ಅವರ ನೈಜ ಫೋಟೋವನ್ನಲ್ಲ. 

  • ಇನ್ನೊಬ್ಬ ಬಳಕೆದಾರನಿಗೆ ನೀವು ಚಾಟ್ ಕಳುಹಿಸುವುದಕ್ಕೆ ಮುನ್ನ ಡಿಫಾಲ್ಟ್ ಆಗಿ ಎರಡು-ಮಾರ್ಗದ ಸಂಪರ್ಕ ದೃಢೀಕರಣವನ್ನು ನಾವು ಯಾವಾಗಲೂ ಅಗತ್ಯವಾಗಿಸಿದ್ದೇವೆ, ಏಕೆಂದರೆ ಸ್ನೇಹ ಅನ್ನುವುದು ಪರಸ್ಪರ ಮತ್ತು ಭದ್ರವಾದುದು ಎಂದು ನಾವು ನಂಬಿದ್ದೇವೆ. ಇದು ಒಬ್ಬ ವ್ಯಕ್ತಿ ಇನ್ನೊಬ್ಬರನ್ನು ಅನುಸರಿಸುವುದಲ್ಲ ಅಥವಾ ಅನುಮತಿ ಅಥವಾ ಆಹ್ವಾನವಿಲ್ಲದೆ ಯಾರೋ ಅಪರಿಚಿತರು ನಮ್ಮ ಬದುಕಿಗೆ ಪ್ರವೇಶಿಸುವುದಲ್ಲ. ನಮ್ಮ Snap ಮ್ಯಾಪ್‌ನಂತಹ Snapchat ನಲ್ಲಿನ ಇತರ ವೈಶಿಷ್ಟ್ಯಗಳ ವಿಷಯದಲ್ಲೂ ಇದು ನಿಜವಾಗಿದೆ -- ನೀವು ಪರಸ್ಪರ ಸ್ನೇಹಿತರಾಗಿರದ ಹೊರತು ಮತ್ತು ನಿಮ್ಮ ಸ್ಥಳವನ್ನು ಹಂಚಿಕೊಳ್ಳಲು ಸ್ಪಷ್ಟವಾಗಿ ಆಯ್ಕೆ ಮಾಡಿರದ ಹೊರತು ಮ್ಯಾಪ್‌ನಲ್ಲಿ ನೀವು ಯಾರನ್ನೂ ನೋಡಲಾಗದು ಮತ್ತು ಅವರು ನಿಮ್ಮನ್ನು ನೋಡಲಾಗದು.

  • ನಮ್ಮ ವೈಶಿಷ್ಟ್ಯಗಳನ್ನು ಡಿಫಾಲ್ಟ್ ಆಗಿ ಖಾಸಗಿ ಆಗಿಸಲು ನಾವು ಗಮನ ಕೇಂದ್ರೀಕರಿಸುತ್ತೇವೆ, ಏಕೆಂದರೆ ನೈಜ ಬದುಕಿನಂತೆ, ಯಾವ ಮಾಹಿತಿಯನ್ನು ಹಂಚಿಕೊಳ್ಳಬೇಕು ಮತ್ತು ಯಾವಾಗ ಎನ್ನುವ ಆಯ್ಕೆಯನ್ನು ವೈಯಕ್ತಿಕ ಬಳಕೆದಾರರು ಮಾಡಬೇಕು ಎಂದು ನಾವು ಯೋಚಿಸುತ್ತೇವೆ. ಉದಾಹರಣೆಗೆ, ನಮ್ಮ Snap ಮ್ಯಾಪ್ ಅನ್ನು ಮೊದಲ ಬಾರಿ ಬಳಸಿದಾಗ ಎಲ್ಲ ಬಳಕೆದಾರರಿಗೆ ಸ್ಥಳ ಹಂಚಿಕೊಳ್ಳುವಿಕೆ ಡಿಫಾಲ್ಟ್ ಆಗಿ ಆಫ್ ಆಗಿರುತ್ತದೆ. ತಮ್ಮ ಸ್ನೇಹಿತರೊಂದಿಗೆ ಅದನ್ನು ಹಂಚಿಕೊಳ್ಳುವ ಆಯ್ಕೆಯನ್ನು ಅವರು ಹೊಂದಿರುತ್ತಾರೆ -- ಆದರೆ ಎಂದಿಗೂ ಅಪರಿಚಿತರೊಂದಿಗೆ ಹಂಚಿಕೊಳ್ಳಲಾಗದು. 

  • ನಮ್ಮ ಬಳಕೆದಾರರಿಂದ ಕಡಿಮೆ ಡೇಟಾ ಸಂಗ್ರಹಿಸುವ ಮತ್ತು ಡೇಟಾವನ್ನು ಕಡಿಮೆ ಅವಧಿಗೆ ಉಳಿಸಿಕೊಳ್ಳುವ ಗುರಿಯೊಂದಿಗೆ ನಾವು ನಮ್ಮ ಉತ್ಪನ್ನಗಳನ್ನು ವಿನ್ಯಾಸಗೊಳಿಸುತ್ತೇವೆ - ಏಕೆಂದರೆ ಉಚಿತವಾಗಿ ನಮ್ಮ ಸೇವೆಯನ್ನು ಒದಗಿಸಲು ಜಾಹೀರಾತು ಅಗತ್ಯವಾಗಿದ್ದರೂ ಸಹ, ಜನರ ಸ್ನೇಹದ ಗೌಪ್ಯತೆಯನ್ನು ಗೌರವಿಸುವ ಮತ್ತು ಅವರ ಸ್ನೇಹವನ್ನು ನಾವು ಸರಕುಗಳಾಗಿ ಪರಿವರ್ತಿಸುತ್ತಿದ್ದೇವೆ ಎನ್ನುವ ಭಾವನೆಯನ್ನು ಅವರಿಗೆ ಮೂಡಿಸದೆ ವ್ಯವಹಾರ ಪಾಲುದಾರರಿಗೆ ನಾವು ಮೌಲ್ಯವನ್ನು ಒದಗಿಸಬಹುದು ಎನ್ನುವುದನ್ನು ಕಂಡುಕೊಂಡಿದ್ದೇವೆ.

  • ಬಳಕೆದಾರರಿಗೆ ಕಳವಳ ಅಥವಾ ಚಿಂತೆ ಉಂಟುಮಾಡುವ ವಿಷಯವನ್ನು ನಮ್ಮ ಆ್ಯಪ್‌ನಲ್ಲಿನ ವಿಧಾನಗಳನ್ನು ಬಳಸಿಕೊಂಡು ನಮಗೆ ನೇರವಾಗಿ ವರದಿ ಮಾಡಲು ನಾವು ವೇಗ ಮತ್ತು ಸುಲಭವಾದ ವಿಧಾನವನ್ನು ಒದಗಿಸುತ್ತೇವೆ, ಇದರಿಂದಾಗಿ ನಮ್ಮ ನಂಬಿಕೆ ಮತ್ತು ಸುರಕ್ಷತಾ ತಂಡವು ತನಿಖೆ ಮಾಡಬಹುದು ಮತ್ತು ಕ್ರಮ ತೆಗೆದುಕೊಳ್ಳಬಹುದು. 

ನಮ್ಮ ಮಾರ್ಗಸೂಚಿಗಳು ಮತ್ತು ಕ್ರಮ ಜಾರಿಗೊಳಿಸುವಿಕೆ

  • ಮೊದಲ ದಿನದಿಂದಲೂ, ಹಾನಿಕಾರಕ ವಿಷಯ ಹರಡಲು ಹೊಂಚುಹಾಕುತ್ತಿರುವವರಿಗೆ ಪ್ರೋತ್ಸಾಹಕಗಳನ್ನು ತಪ್ಪಿಸುವ ರೀತಿ ನಾವು Snapchat ಅನ್ನು ವಿನ್ಯಾಸಗೊಳಿಸಿದ್ದೇವೆ. ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಬಹಳ ಹಿಂದಿನಿಂದಲೇ ಬೆದರಿಕೆ, ದ್ವೇಷ ಭಾಷಣ ಮತ್ತು ಪಿತೂರಿ ಸಿದ್ಧಾಂತಗಳು, ಸುಳ್ಳು ವೈದ್ಯಕೀಯ ದಾವೆಗಳು ಮತ್ತು ನಾಗರಿಕ ಪ್ರಕ್ರಿಯೆಗಳನ್ನು ಕಡೆಗಣಿಸುವ ಪ್ರಯತ್ನಗಳು ಸೇರಿದಂತೆ, ಹಾನಿ ಉಂಟುಮಾಡಬಹುದಾದ ಸುಳ್ಳು ಮಾಹಿತಿ ಹರಡುವಿಕೆಯನ್ನು ನಿಷೇಧಿಸಿವೆ. 

  • ನಮ್ಮ ವೇದಿಕೆಯ ದುರ್ಬಳಕೆಯನ್ನು ನಾವು ಸಹಿಸುವುದಿಲ್ಲ ಮತ್ತು ನಮ್ಮ ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ವಿನ್ಯಾಸಗೊಳಿಸಲು ಮತ್ತು ಜಾರಿಗೊಳಿಸಲು ನಾವು ಮೀಸಲಾದ ಮೂಲಭೂತ ಸೌಕರ್ಯವನ್ನು ಹೊಂದಿದ್ದೇವೆ. ಇದನ್ನು ನಾವು ಮಾಡುವ ಒಂದು ವಿಧಾನ ಸರಳವಾಗಿದೆ: ನಮ್ಮ ನೀತಿಗಳನ್ನು ಉಲ್ಲಂಘಿಸಲು ಪ್ರಯತ್ನಗಳನ್ನು ಮಾಡಿದಾಗ, ನಾವು ವಿಷಯವನ್ನು ತೆಗೆದುಹಾಕುತ್ತೇವೆ. ಮನನೋಯಿಸುವ ವಿಷಯವನ್ನು ನಾವು ಲೇಬಲ್ ಮಾಡುವುದಿಲ್ಲ ಅಥವಾ ಪ್ರಸಿದ್ಧ ವ್ಯಕ್ತಿಗಳಿಗೆ ವಿನಾಯಿತಿ ನೀಡುವುದಿಲ್ಲ -- ನಮ್ಮ ಮಾರ್ಗಸೂಚಿಗಳು ಎಲ್ಲ Snapchatter ಗಳಿಗೂ ಸಮಾನವಾಗಿ ಅನ್ವಯಿಸುತ್ತವೆ. 

  • ಒಂದು ವೇಳೆ ಉಲ್ಲಂಘಿಸುವ ವಿಷಯ ಅಪ್ರಾಪ್ತರನ್ನು ಒಳಗೊಂಡಿದ್ದರೆ ಅದನ್ನು ನಾವು ಕಾಣೆಯಾದ ಮತ್ತು ದೌರ್ಜನ್ಯಕ್ಕೊಳಗಾದ ಮಕ್ಕಳ ರಾಷ್ಟ್ರೀಯ ಕೇಂದ್ರಕ್ಕೆ (NCMEC) ವರದಿ ಮಾಡುತ್ತೇವೆ ಮತ್ತು ಕಾನೂನು ಜಾರಿ ಏಜೆನ್ಸಿಗಳೊಂದಿಗೆ ಕೆಲಸ ಮಾಡಲು ಮತ್ತು ಅವರನ್ನು ಬೆಂಬಲಿಸಲು ನಿರ್ದಿಷ್ಟ ಪ್ರಕ್ರಿಯೆಗಳನ್ನು ಹೊಂದಿದ್ದೇವೆ. 

ಇದು ನಮ್ಮನ್ನು ಪರಿಪೂರ್ಣಗೊಳಿಸುವುದಿಲ್ಲ ಮತ್ತು ಸಂವಹನವನ್ನು ಕಲ್ಪಿಸುವ ಯಾವುದೇ ಆ್ಯಪ್ ದುರ್ಬಳಕೆಯಾಗುವ ಸಂಭಾವ್ಯತೆ ಇದೆ. Snapchat ನ ಸುರಕ್ಷತೆಯನ್ನು ನಿರ್ವಹಿಸುವ ಮತ್ತು ಸುಧಾರಿಸುವ ಸಲುವಾಗಿ ನಾವು ನಮ್ಮ ಟೂಲ್‌ಗಳು ಮತ್ತು ತಂತ್ರಗಳನ್ನು ನಿರಂತರವಾಗಿ ಸುಧಾರಿಸಬೇಕು. ನಮ್ಮ ಸಮುದಾಯವನ್ನು ಇನ್ನಷ್ಟು ಉತ್ತಮವಾಗಿ ರಕ್ಷಿಸಲು ಅಪಾಯಗಳ ಕುರಿತು ಮತ್ತು ನಮ್ಮ ತಾಂತ್ರಿಕ ಸಾಮರ್ಥ್ಯಗಳು ಮತ್ತು ಅಭ್ಯಾಸಗಳನ್ನು ನಾವು ಹೇಗೆ ಸುಧಾರಿಸಬಹುದು ಎನ್ನುವ ಕುರಿತು ನಾವು ನಿರಂತರವಾಗಿ ಯೋಚಿಸುತ್ತೇವೆ. ಈ ಪ್ರಯತ್ನಗಳ ಭಾಗವಾಗಿ, ಕೆಟ್ಟವರಿಂದ ನಾವು ಒಂದು ಹೆಜ್ಜೆ ಹೇಗೆ ಮುಂದಿರಬಹುದು ಎನ್ನುವ ಮಾರ್ಗಗಳ ಕುರಿತು ಭದ್ರತೆ, ಗುಪ್ತಚರ ಮತ್ತು ಸುರಕ್ಷತಾ ತಜ್ಞರಿಂದ ನಾವು ನಿಯಮಿತವಾಗಿ ಮಾರ್ಗದರ್ಶನ ಕೋರುತ್ತೇವೆ.  ಈ ಬ್ಲಾಗ್‌ನಲ್ಲಿ ಇವುಗಳಲ್ಲಿ ಹಲವು ವಿಷಯಗಳ ಕುರಿತು ನಾವು ವಿಸ್ತೃತವಾಗಿ ವಿವರಿಸಲು ಯೋಜನೆ ಮಾಡಿದ್ದೇವೆ, ಇದರಿಂದಾಗಿ ಈ ಸಮಸ್ಯೆಗಳ ಕುರಿತು ನಾವು ಹೇಗೆ ಯೋಚಿಸುತ್ತೇವೆ ಮತ್ತು ಅವುಗಳನ್ನು ಪರಿಹರಿಸಲು ಹೇಗೆ ಕಾರ್ಯನಿರ್ವಹಿಸುತ್ತೇವೆ ಎನ್ನುವುದನ್ನು ನೀವು ಅರ್ಥಮಾಡಿಕೊಳ್ಳಬಹುದು.

ಸ್ವತಃ ಪೋಷಕನಾಗಿರುವುದರಿಂದ ನನ್ನ ಸ್ವಂತ ಮಕ್ಕಳೊಂದಿಗೆ, ತಮ್ಮ ಮಕ್ಕಳ ಬದುಕಿನಲ್ಲಿ ತಂತ್ರಜ್ಞಾನ ಮತ್ತು ವೇದಿಕೆಗಳ ಪಾತ್ರದ ಕುರಿತು ಚಿಂತಿತರಾಗಿರುವ ನನ್ನ ಸ್ನೇಹಿತರೊಂದಿಗೆ ಮತ್ತು Snap ನಲ್ಲಿ ನಮ್ಮ ಕೆಲಸದ ಭಾಗವಾಗಿ ನಾವು ಮಾತನಾಡುವ ಹಲವು ಪಾಲುದಾರರೊಂದಿಗೆ ಈ ಸಂಭಾಷಣೆಗಳನ್ನು ನಡೆಸುತ್ತ ನಾನು ಬಹಳಷ್ಟು ಸಮಯವನ್ನು ಕಳೆಯುತ್ತೇನೆ. ಕೆಲವು ಮೂಲಭೂತ ಸಂಗತಿಗಳ ಕುರಿತು ಈ ಪೋಸ್ಟ್ ಒಳನೋಟವನ್ನು ಒದಗಿಸುತ್ತದೆ, ಹಾಗೂ ನಮ್ಮ ಪ್ರತಿ ಉತ್ಪನ್ನಗಳು ಹಾಗೂ Snapchatter ಗಳು ಆರೋಗ್ಯಕರ, ಸುರಕ್ಷಿತ ಮತ್ತು ವಿನೋದಮಯ ವಾತಾವರಣದಲ್ಲಿ ಸಂಪರ್ಕ ಹೊಂದಲು ಸಹಾಯ ಮಾಡುವುದಕ್ಕಾಗಿನ ಹೆಚ್ಚುವರಿ ಸಂಪನ್ಮೂಲಗಳ ವಿಸ್ತೃತವಾದ ವಿವರಣೆಗಾಗಿ ನಮ್ಮ ಪೋಷಕರ ಮಾರ್ಗದರ್ಶಿ ಪರಿಶೀಲಿಸಲು ಪೋಷಕರು ಮತ್ತು ಕುಟುಂಬ ಸದಸ್ಯರನ್ನು ಉತ್ತೇಜಿಸುತ್ತದೆ ಎಂದು ನಾನು ಆಶಿಸುತ್ತೇನೆ. 


ಜೆನ್

ಸುದ್ದಿಗಳಿಗೆ ಹಿಂತಿರುಗಿ