Snap Values

4ನೇ ವಾರ್ಷಿಕ ಶೃಂಗಸಭೆಯೊಂದಿಗೆ ಕಾನೂನು ಜಾರಿ ಸಂಸ್ಥೆಗಳೊಂದಿಗೆ Snapchat ಸಹಯೋಗ ಮುಂದುವರಿದಿದೆ

ಡಿಸೆಂಬರ್ 18, 2024

ಡಿಸೆಂಬರ್ 11 ರಂದು, ನಾವು ನಮ್ಮ ನಾಲ್ಕನೆಯ ವಾರ್ಷಿಕ U.S. ಕಾನೂನು ಜಾರಿ ಸಂಸ್ಥೆಗಳ ಶೃಂಗಸಭೆಯನ್ನು ಆಯೋಜಿಸುವ ಮೂಲಕ ಕಾನೂನು ಜಾರಿ ಸಂಸ್ಥೆಗಳ ತನಿಖೆಗಳನ್ನು Snap ಹೇಗೆ ಬೆಂಬಲಿಸುತ್ತದೆ ಮತ್ತು Snapchatter ಗಳನ್ನು ಸುರಕ್ಷಿತವಾಗಿರಿಸಲು ಹೇಗೆ ಕೆಲಸ ಮಾಡುತ್ತದೆ ಎನ್ನುವ ಕುರಿತು ಇನ್ನಷ್ಟು ತಿಳಿದುಕೊಳ್ಳಲು ದೇಶದಾದ್ಯಂತದ ಸ್ಥಳೀಯ, ರಾಜ್ಯ ಮತ್ತು ಕೇಂದ್ರ ಕಾನೂನು ಜಾರಿ ಸಂಸ್ಥೆಗಳ ಅಧಿಕಾರಿಗಳನ್ನು ಜೊತೆಗೂಡಿಸಿದೆವು. U.S. ಕಾನೂನು ಜಾರಿ ಸಂಸ್ಥೆಗಳ ಸಮುದಾಯದ 6,500 ಕ್ಕೂ ಅಧಿಕ ಸದಸ್ಯರು ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡರು.

U.S. ಕಾನೂನು ಜಾರಿ ಸಂಸ್ಥೆಗಳ ಸಮುದಾಯದ ಪ್ರಮುಖ ಧ್ಯೇಯವನ್ನು ಗುರುತಿಸುತ್ತ, ಜೊತೆಯಾಗಿ ಕೆಲಸ ಮಾಡುವ Snap ನ ಬದ್ಧತೆಯ ಕುರಿತು ತಿಳಿಸುತ್ತ ಮತ್ತು Snapchat ಗಾಗಿ ತಮ್ಮ ದೂರದೃಷ್ಟಿಯನ್ನು ಹಂಚಿಕೊಳ್ಳುತ್ತ ನಮ್ಮ CEO ಇವಾನ್ ಸ್ಪೀಗೆಲ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.    

ಎರಡು ಗಂಟೆಗಳ ಶೃಂಗಸಭೆಯ ಸಂದರ್ಭ, ನಮ್ಮ ಸಮುದಾಯವನ್ನು ರಕ್ಷಿಸಲು ಕಾನೂನು ಜಾರಿ ಸಂಸ್ಥೆಗಳು ಬಳಸಬಹುದಾದ ಕಾರ್ಯಾಚರಣೆಯ ಟೂಲ್‌ಗಳು ಮತ್ತು ಸಂಪನ್ಮೂಲಗಳನ್ನು ಹಂಚಿಕೊಳ್ಳುವ ಕುರಿತು ನಾವು ಗಮನ ಕೇಂದ್ರೀಕರಿಸಿದೆವು. Snap ತಂಡದ ಸದಸ್ಯರು ಇವುಗಳನ್ನು ಚರ್ಚಿಸಿದರು 1) ನಾವು ಹೊಂದಿರುವ ಸಂಪನ್ಮೂಲಗಳು ಮತ್ತು ಪ್ರಕ್ರಿಯೆಗಳು, 2) Snapchat ಅನ್ನು ಸುರಕ್ಷಿತವಾಗಿಸುವುದಕ್ಕಾಗಿ 2024 ರಲ್ಲಿ ನಾವು ಮಾಡಿದ ಉತ್ಪನ್ನ ಸುಧಾರಣೆಗಳು ಮತ್ತು 3) ವಲಯಗಳಾದ್ಯಂತದ ನಮ್ಮ ಪಾಲುದಾರಿಕೆಗಳು. 

ಶೃಂಗಸಭೆಯ ಮೂಲಕ, U.S. ಕಾನೂನು ಜಾರಿ ಸಂಸ್ಥೆಗಳ ಸಮುದಾಯದ ಸಾಧ್ಯವಿರುವಷ್ಟು ವಿಶಾಲವಾದ ವಿವಿಧ ವಿಭಾಗಗಳನ್ನು ತಲುಪಲು, ಹೊಸ ಸಂಬಂಧಗಳನ್ನು ಬೆಳೆಸಿಕೊಳ್ಳಲು ಮತ್ತು ನಮ್ಮ ನೀತಿಗಳು, ಪ್ರಕ್ರಿಯೆಗಳು ಮತ್ತು ಸುರಕ್ಷತಾ ಟೂಲ್‌ಗಳ ಕುರಿತು ವಾಸ್ತವಿಕ ಮಾಹಿತಿಯನ್ನು ಒದಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ.  

ನಮ್ಮ ಸುರಕ್ಷತಾ ಕಾರ್ಯಾಚರಣೆಯ ತಂಡಗಳು 

ನಮ್ಮ ಸಮುದಾಯವನ್ನು ರಕ್ಷಿಸಲು ನೆರವಾಗುವುದಕ್ಕಾಗಿ ನಾವು ಹೊಂದಿರುವ ತಂಡದ ಕೆಲವು ಸದಸ್ಯರು ಮತ್ತು ಸಂಪನ್ಮೂಲಗಳನ್ನು ನಾವು ಭಾಗಿಗಳಿಗೆ ಪರಿಚಯಿಸಿದೆವು. ನಮ್ಮ ಸುರಕ್ಷತಾ ಕಾರ್ಯಾಚರಣೆಗಳ ತಂಡವು ವಿಶ್ವಾಸ ಮತ್ತು ಸುರಕ್ಷತೆ ಹಾಗೂ ಕಾನೂನು ಜಾರಿ ಕಾರ್ಯಾಚರಣೆಗಳನ್ನು ಒಳಗೊಂಡಿದ್ದು, ಇವೆರಡೂ ಕಾನೂನು ಜಾರಿ ಸಂಸ್ಥೆಗಳೊಂದಿಗೆ ತೊಡಗಿಸಿಕೊಳ್ಳುತ್ತವೆ ಮತ್ತು Snapchatter ಗಳು ಹಾಗೂ ತೃತೀಯ ಪಕ್ಷದ ವರದಿಗಾರರ ಸುರಕ್ಷತಾ ಕಳವಳಗಳ ವರದಿಗಳಿಗೆ ಪ್ರತಿಸ್ಪಂದಿಸುತ್ತವೆ. 

ಕಾನೂನು ಜಾರಿ ಸಂಸ್ಥೆಗಳು, ಸರ್ಕಾರ ಮತ್ತು ಕಾಣೆಯಾಗಿರುವ ಮತ್ತು ಶೋಷಣೆಗೊಳಗಾಗಿರುವ ಮಕ್ಕಳಿಗಾಗಿನ ರಾಷ್ಟ್ರೀಯ ಕೇಂದ್ರದ ಸದಸ್ಯರನ್ನು ಒಳಗೊಂಡಿರುವ — ವಿಶ್ವಾಸ ಮತ್ತು ಸುರಕ್ಷತೆ ತಂಡವು — ವರದಿಗಳನ್ನು ತನಿಖೆ ಮಾಡುವ ಮೂಲಕ ಮತ್ತು ಅಕ್ರಮ ಕಂಟೆಂಟ್ ಅನ್ನು ಪೂರ್ವಭಾವಿಯಾಗಿ ಪತ್ತೆ ಮಾಡಲು ಮೆಷಿನ್ ಲರ್ನಿಂಗ್‌ನಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವ ಮೂಲಕ Snapchat ನಲ್ಲಿ ದುಷ್ಕರ್ಮಿಗಳನ್ನು ತಡೆಗಟ್ಟಲು ಮತ್ತು ತೆಗೆದುಹಾಕಲು ಮೀಸಲಿಡಲಾಗಿದೆ.

LEO ಎಂದೂ ಕರೆಯಲಾಗುವ ಕಾನೂನು ಜಾರಿ ಕಾರ್ಯಾಚರಣೆಗಳ ತಂಡವು, ಕಾನೂನು ಜಾರಿ ಸಂಸ್ಥೆಗಳೊಂದಿಗೆ ಅತ್ಯಂತ ನಿಕಟವಾಗಿ ತೊಡಗಿಸಿಕೊಳ್ಳುವ ತಂಡವಾಗಿದೆ. ಕಾನೂನು ಜಾರಿ ಸಂಸ್ಥೆಗಳ ಕಾನೂನು ವಿನಂತಿಗಳಿಗೆ ಪ್ರತಿಸ್ಪಂದಿಸಲು, ತುರ್ತು ಸನ್ನಿವೇಶಗಳಲ್ಲಿ ಕಾನೂನು ಜಾರಿ ಸಂಸ್ಥೆಗಳಿಗೆ ಡೇಟಾವನ್ನು ಬಹಿರಂಗಪಡಿಸಲು ಮತ್ತು Snapchat ನಲ್ಲಿ ಸುರಕ್ಷತೆಯ ಕುರಿತು ಕಾನೂನು ಜಾರಿ ಸಂಸ್ಥೆಗಳ ಜೊತೆ ಸಾಮಾನ್ಯವಾಗಿ ಸಂವಹನ ನಡೆಸಲು ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸಲು LEO ಮೀಸಲಾಗಿದೆ. 

ಜಗತ್ತಿನಾದ್ಯಂತ ಇರುವ ತಂಡದ ಸದಸ್ಯರೊಂದಿಗೆ Snapchat ನ ಸುರಕ್ಷತಾ ಕಾರ್ಯಾಚರಣೆಗಳು 24/7 ಕೆಲಸ ಮಾಡುತ್ತದೆ. ಕೇವಲ ಕಳೆದ ಐದು ವರ್ಷಗಳಲ್ಲಿ ನಮ್ಮ ಸಮುದಾಯದ ಅಗತ್ಯಗಳಿಗೆ ನಾವು ಇನ್ನಷ್ಟು ತ್ವರಿತವಾಗಿ ಪ್ರತಿಸ್ಪಂದಿಸಲು ಸಾಧ್ಯವಾಗುವುದಕ್ಕಾಗಿ ನಮ್ಮ ಕಾನೂನು ಜಾರಿ ಸಂಸ್ಥೆ ಕಾರ್ಯಾಚರಣೆಗಳ ತಂಡವು ಮೂರು ಪಟ್ಟಾಗಿದೆ ಹಾಗೂ ನಮ್ಮ ವಿಶ್ವಾಸ ಮತ್ತು ಸುರಕ್ಷತಾ ತಂಡವು ಸುಮಾರು 150% ನಷ್ಟು ಬೆಳೆದಿದೆ.  

ಹೊಸ ಸುರಕ್ಷತಾ ವೈಶಿಷ್ಟ್ಯಗಳು 

ನಾವು ಬಲಿಷ್ಠವಾದ ಅಂತರ್ನಿರ್ಮಿತ ರಕ್ಷಣೆಗಳನ್ನು ಹೊಂದಿದ್ದೇವಾದರೂ ಸಹ, ನಮ್ಮ ಪ್ಲ್ಯಾಟ್‌ಫಾರ್ಮ್ ಅನ್ನು ಇನ್ನಷ್ಟು ಸುರಕ್ಷಿತವಾಗಿಸಲು ನಾವು ನಿರಂತರವಾಗಿ ಹೊಸ ವಿಧಾನಗಳಿಗಾಗಿ ಹುಡುಕುತ್ತಿರುತ್ತೇವೆ. ಈಗಾಗಲೇ, ಸಾಮಾಜಿಕ ಒತ್ತಡವನ್ನು ಕಡಿಮೆ ಮಾಡಲು ನಾವು ನಮ್ಮ ಸ್ನೇಹಿತರ ಪಟ್ಟಿಯನ್ನು ಖಾಸಗಿಯಾಗಿಸುತ್ತಿದ್ದೇವೆ. ಈಗಾಗಲೇ ಸ್ನೇಹಿತರಾಗಿ ಸೇರಿಸಿಲ್ಲದ ಅಥವಾ ಅವರ ಫೋನ್ ಸಂಪರ್ಕಗಳಲ್ಲಿ ಇಲ್ಲದ ಯಾರೋ ಒಬ್ಬರು ಯಾರಿಗೂ ನೇರವಾಗಿ ಸಂದೇಶ ಕಳುಹಿಸಲು ನಾವು ಅನುಮತಿಸುವುದಿಲ್ಲ. ಮತ್ತು ಸ್ಥಳ ಹಂಚಿಕೊಳ್ಳುವಿಕೆ ಸೇರಿದಂತೆ ಪ್ರಮುಖ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಡಿಫಾಲ್ಟ್ ಆಗಿ ಕಟ್ಟುನಿಟ್ಟಿನ ಮಾನದಂಡಗಳಿಗೆ ಹೊಂದಿಸಲಾಗಿದೆ. 

ಈ ವರ್ಷ, ನಾವು ಹದಿಹರೆಯದವರಿಗಾಗಿ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಬಿಡುಗಡೆ ಮಾಡಿದ್ದು, ಅದನ್ನು ಶೃಂಗಸಭೆಯಲ್ಲಿ ಹೈಲೈಟ್ ಮಾಡಿದ್ದೇವೆ. ಹದಿಹರೆಯದವರೊಂದಿಗೆ ಅಪರಿಚಿತರು ಸಂವಹನ ನಡೆಸುವುದನ್ನು ಇನ್ನಷ್ಟು ಕಠಿಣವಾಗಿಸಲು ಬ್ಲಾಕಿಂಗ್ ಟೂಲ್‌ಗಳು ಮತ್ತು ಆ್ಯಪ್‌ನಲ್ಲಿನ ಎಚ್ಚರಿಕೆಗಳಲ್ಲಿ ನಾವು ಸುಧಾರಣೆಗಳನ್ನು ಮಾಡಿದ್ದೇವೆ. ನಮ್ಮ ಆ್ಯಪ್‌ನಲ್ಲಿನ ಎಚ್ಚರಿಕೆಗಳು ಈಗ ಹೊಸ ಮತ್ತು ಸುಧಾರಿತ ಸಂಕೇತಗಳನ್ನು ಒಳಗೊಂಡಿವೆ. ಉದಾಹರಣೆಗೆ, ಬ್ಲಾಕ್ ಮಾಡಲಾಗಿರುವ ಅಥವಾ ಇತರರರಿಂದ ವರದಿ ಮಾಡಲಾಗಿರುವ ಒಬ್ಬರಿಂದ ಅಥವಾ ಹದರಿಹರೆಯದವರ ನೆಟ್‌ವರ್ಕ್ ಸಾಮಾನ್ಯವಾಗಿ ಇಲ್ಲದ ಒಂದು ಸ್ಥಳದಿಂದ ಚಾಟ್ ಅನ್ನು ಸ್ವೀಕರಿಸಿದರೆ, ಹದಿಹರೆಯದವರು ಎಚ್ಚರಿಕೆ ಸಂದೇಶವನ್ನು ಸ್ವೀಕರಿಸಬಹುದು.

ಪೋಷಕರ ಟೂಲ್‌ಗಳು ಮತ್ತು ಸಂಪನ್ಮೂಲಗಳನ್ನು ಒದಗಿಸುವ Snapchat ನ ಆ್ಯಪ್‌ನಲ್ಲಿನ ಹಬ್ ಆಗಿರುವ ಕೌಟುಂಬಿಕ ಕೇಂದ್ರಕ್ಕೆ ಹೊಸ ಸ್ಥಳ ಹಂಚಿಕೊಳ್ಳುವಿಕೆ ವೈಶಿಷ್ಟ್ಯಗಳನ್ನು ಕೂಡ ನಾವು ಪ್ರಕಟಿಸಿದ್ದೇವೆ. ಇತರ ಅಪ್‌ಡೇಟ್‌ಗಳ ಜೊತೆಗೆ, ಪೋಷಕರು ಈಗ Snap ಮ್ಯಾಪ್‌ನಲ್ಲಿ ಸ್ಥಳ ಹಂಚಿಕೊಳ್ಳುವಂತೆ ತಮ್ಮ ಹದಿಹರೆಯದ ಮಕ್ಕಳನ್ನು ಕೇಳಬಹುದಾಗಿದೆ.

ಪಾಲುದಾರಿಕೆಗಳು

ಕಾನೂನು ಜಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದರ ಜೊತೆಗೆ, Snapchatter ಗಳನ್ನು ಸಾಧ್ಯವಾಷ್ಟು ಮಟ್ಟಿಗೆ ಸುರಕ್ಷಿತ ಮತ್ತು ಮಾಹಿತಿಯುಕ್ತವಾಗಿ ಇರಿಸಲು, ಬಹು-ವಲಯದ, ಪಾಲುದಾರಿಕೆ ಆಧರಿತ ಮಾರ್ಗವು ಪರಿಣಾಮಕಾರಿ ವಿಧಾನವಾಗಿದೆ ಎಂದು ನಾವು ನಂಬಿದ್ದೇವೆ. ಶೃಂಗಸಭೆಯ ಸಂದರ್ಭ, ಶಿಕ್ಷಕರ ಟೂಲ್‌ಕಿಟ್ ಅನ್ನು ಅಭಿವೃದ್ಧಿಪಡಿಸಲು ನಾವು ಸುರಕ್ಷಿತ ಮತ್ತು ಉತ್ತಮ ಶಾಲೆಗಳೊಂದಿಗಿನ ನಮ್ಮ ಪಾಲುದಾರಿಕೆಗಳ ಕುರಿತು ಮತ್ತು ಆನ್‌ಲೈನ್ ಸುರಕ್ಷತೆಯ ಕುರಿತು ಹದಿಹರೆಯದವರಿಗೆ ಸಹಾಯ ಮಾಡಲು “Know2Protect” ಅಭಿಯಾನದ ಕುರಿತು ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಅವರೊಂದಿಗೆ ಚರ್ಚಿಸಿದೆವು. ನಮ್ಮ ಸಮುದಾಯಕ್ಕೆ ತಿಳುವಳಿಕೆ ನೀಡಲು ಮತ್ತು ಅವರನ್ನು ರಕ್ಷಿಸಲು ವಲಯಗಳಾದ್ಯಂತದ ಪಾಲುದಾರರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುವುದನ್ನು ನಾವು ಎದುರು ನೋಡುತ್ತೇವೆ.

2025 ರತ್ತ ಮುನ್ನೋಟ ಬೀರಿದಂತೆ, ಮುಂದೆ ಇನ್ನೂ ಹೆಚ್ಚು ಕೆಲಸ ಮಾಡಬೇಕಿದೆ ಎಂದು ನಮಗೆ ತಿಳಿದಿದೆ. ನಮ್ಮ ಸಮುದಾಯವನ್ನು ರಕ್ಷಿಸಲು ಜಗತ್ತಿನಾದ್ಯಂತದ ಕಾನೂನು ಜಾರಿ ಅಧಿಕಾರಿಗಳೊಂದಿಗೆ ನಾವು ಫಲಪ್ರದ ಸಂಬಂಧವನ್ನು ಬೆಳೆಸಿಕೊಳ್ಳುತ್ತಿರುವುದನ್ನು ಮುಂದುವರಿಸುತ್ತಿರುವಂತೆ ಶೃಂಗಸಭೆಯ ಪಾಲುದಾರರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ತೊಡಗಿಸಿಕೊಳ್ಳುವಿಕೆಗಾಗಿ ನಮ್ಮ ಧನ್ಯವಾದಗಳು. 

– ರೇ
ಚಲ್ ಹೊಕೌಸರ್
, ಸುರಕ್ಷತಾ ಕಾರ್ಯಾಚರಣೆಗಳ ಸಂಚಾಲನಾ ಮುಖ್ಯಸ್ಥರು

ಸುದ್ದಿಗಳಿಗೆ ಹಿಂತಿರುಗಿ