ಹೊಸ ಸಂಶೋಧನೆ: ಡಿಜಿಟಲ್ ಯೋಗಕ್ಷೇಮ ವರ್ಧನೆಯಾದಂತೆ 2025 ರಲ್ಲಿ ಹೆಚ್ಚು ನವಪೀಳಿಗೆಯವರು ಆನ್‌ಲೈನ್‌ನಲ್ಲಿ ಅಭಿವೃದ್ಧಿ ಹೊಂದಿದರು
ಫೆಬ್ರವರಿ 9, 2026
2025 ರಲ್ಲಿ ನವಪೀಳಿಗೆಯ 10 ಸದಸ್ಯರಲ್ಲಿ ಸುಮಾರು ಆರು ಮಂದಿ "ಅಧಿಕ" ಅಥವಾ "ಅತ್ಯಂತ ಅಧಿಕ" ಡಿಜಿಟಲ್ ಯೋಗಕ್ಷೇಮವನ್ನು ಆನಂದಿಸಿದರು ಮತ್ತು ಆನ್‌ಲೈನ್‌ನಲ್ಲಿ "ಸಮೃದ್ಧಿ ಹೊಂದುತ್ತಿರುವವರು" 10 ರಲ್ಲಿ ಒಂದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆದರು – ಇದು ಅಧ್ಯಯನ ಆರಂಭವಾದಾಗಿನಿಂದ ಅತ್ಯಧಿಕ ಗುರಿಯನ್ನು ತಲುಪಿದ ಅತಿಹೆಚ್ಚಿನ ಶೇಕಡಾವಾರು ಆಗಿದೆ ಎಂದು ಹೊಸ ಸಂಶೋಧನೆಯಿಂದ ತಿಳಿದುಬಂದಿದೆ.
ಕಳೆದ ವರ್ಷ ನವಪೀಳಿಗೆಯ ನಲವತ್ತೈದು ಪ್ರತಿಶತ ಪ್ರತಿಕ್ರಿಯಾದಾರರು ಆನ್‌ಲೈನ್‌ನಲ್ಲಿ "ಅಭಿವೃದ್ಧಿ ಹೊಂದುತ್ತಿದ್ದರು" ಮತ್ತು 13% "ಸಮೃದ್ಧಿ ಹೊಂದುತ್ತಿದ್ದರು". ಇದು ಹಿಂದಿನ ವರ್ಷದ ಫಲಿತಾಂಶಗಳ ಹೋಲಿಕೆಯಲ್ಲಿ ಅನುಕ್ರಮವಾಗಿ, ಒಂದು ಮತ್ತು ಮೂರು ಪ್ರತಿಶತಗಳಷ್ಟು ಏರಿಕೆಯಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಅಂಕವು ಒಟ್ಟಾರೆಯಾಗಿ "ಅತ್ಯಂತ ಸಕಾರಾತ್ಮಕ" ಆನ್‌ಲೈನ್ ಅನುಭವಗಳನ್ನು ಸೂಚಿಸುತ್ತದೆ, ಇದೇ ವೇಳೆ ಸಮೃದ್ಧವಾಗುತ್ತಿರುವ ವರ್ಗವು ಅತ್ಯಂತ ಸಕಾರಾತ್ಮಕ ಸಂವಹನಗಳು ಮತ್ತು ಚಟುವಟಿಕೆಗಳನ್ನು ಸೂಚಿಸುತ್ತದೆ. ಮೂರನೇ ಒಂದಕ್ಕಿಂತ ಸ್ವಲ್ಪ ಹೆಚ್ಚು (36%) ಸಾಧಾರಣ ಅಥವಾ ಮಧ್ಯ ಶ್ರೇಣಿಯ ಅನುಭವಗಳನ್ನು ನೋಂದಾಯಿಸಿಕೊಂಡಿದ್ದಾರೆ ಮತ್ತು 6% ಅನ್ನು ಪ್ರಯಾಸ ಪಡುತ್ತಿರುವವರು ಎಂದು ಪರಿಗಣಿಸಲಾಗಿದೆ, ಅಂದರೆ ಅವರು ನಿರಂತರವಾಗಿ ನಕಾರಾತ್ಮಕ ಆನ್‌ಲೈನ್ ಅನುಭವಗಳು ಮತ್ತು ಫಲಿತಾಂಶಗಳನ್ನು ಎದುರಿಸಿದ್ದಾರೆ ಎಂದು ವರದಿ ಮಾಡಿದ್ದಾರೆ. ಮಧ್ಯಮ ಮತ್ತು ಪ್ರಯಾಸ ಪಡುತ್ತಿರುವವರ ವಿಭಾಗಗಳು 2024 ರಿಂದ ಅನುಕ್ರಮವಾಗಿ ಮೂರು ಮತ್ತು ಒಂದು ಶೇಕಡಾ ಅಂಕಗಳಷ್ಟು ಕಡಿಮೆಯಾಗಿವೆ.
"ನಿರಂತರ ಸವಾಲುಗಳು ಮತ್ತು ಸಾಮಾನ್ಯ 'ನಿರಾಶಾವಾದ' ಹೇಳಿಕೆಗಳ ಹೊರತಾಗಿಯೂ ಹೆಚ್ಚು ಯುವಜನರು ಆನ್‌ಲೈನ್‌ನಲ್ಲಿ ಸಮೃದ್ಧಿ ಹೊಂದುತ್ತಿರುವುದು ಪ್ರೇರಣೆಯಾಗುತ್ತಿದೆ" ಎಂದು ConnectSafely ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲ್ಯಾರಿ ಮ್ಯಾಗಿಡ್ ಹೇಳಿದ್ದಾರೆ. “ಆಸಕ್ತಿಯ ವಿಷಯವೆಂದರೆ, ಅಭಿವೃದ್ಧಿ ಹೊಂದುತ್ತಿರುವವರು ಆಗಾಗ್ಗೆ ಡಿಜಿಟಲ್ ಜೀವನದಲ್ಲಿ ಹೆಚ್ಚು ಆಳವಾಗಿ ತೊಡಗಿಸಿಕೊಳ್ಳುತ್ತಾರೆ ಎಂದು ಸಂಶೋಧನೆಯು ತೋರಿಸುತ್ತದೆ. ಹದಿಹರೆಯದವರು ಮತ್ತು ಪೋಷಕರ ನಡುವೆ ಸರಿಯಾದ ಬೆಂಬಲ ಮತ್ತು ಮುಕ್ತ ಸಂಭಾಷಣೆಯೊಂದಿಗೆ, ಯುವಜನರು ಈ ಸ್ಥಳಗಳಲ್ಲಿ ಜವಾಬ್ದಾರಿಯುತವಾಗಿ ಸಂಚರಿಸಬಹುದು ಮತ್ತು ತಮ್ಮ ಆನ್‌ಲೈನ್ ಸಂವಹನಗಳನ್ನು ಸಕಾರಾತ್ಮಕ, ಆರೋಗ್ಯಕರ ಅನುಭವಗಳಾಗಿ ಪರಿವರ್ತಿಸಬಹುದು."
ಕಳೆದ ನಾಲ್ಕು ವರ್ಷಗಳಿಂದ, Snap ಡಿಜಿಟಲ್ ಯೋಗಕ್ಷೇಮದ ಕುರಿತು ವಿವಿಧ ವೇದಿಕೆಗಳ ಸಂಶೋಧನೆಯನ್ನು ನಡೆಸಿದೆ ಮತ್ತು ಸುರಕ್ಷಿತ ಅಂತರ್ಜಾಲ ದಿನ (SID) ಕುರಿತು ಪೂರ್ಣ ಸಂಶೋಧನಾ ವರದಿಗಳನ್ನು ಬಿಡುಗಡೆ ಮಾಡಿದೆ. ಫಲಿತಾಂಶಗಳು ಒಟ್ಟಾರೆ ತಂತ್ರಜ್ಞಾನ ಪರಿಸರ ವ್ಯವಸ್ಥೆಗೆ ನಮ್ಮ ಪ್ರಾಥಮಿಕ ಕೊಡುಗೆಯಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಸ್ಪಷ್ಟವಾದ ನೆಲೆಗೆ ಸೇರಿಸುತ್ತವೆ, ಇದು ಎಲ್ಲರಿಗೂ ಸುರಕ್ಷಿತ, ಆರೋಗ್ಯಕರ ಮತ್ತು ಹೆಚ್ಚು ಸಕಾರಾತ್ಮಕ ಡಿಜಿಟಲ್ ಅನುಭವಗಳನ್ನು ರಚಿಸಲು ಸಹಾಯ ಮಾಡಲು ನಮ್ಮೆಲ್ಲರಿಗೂ ನೆರವಾಗುತ್ತದೆ. Snap ಈ ನಿರ್ದಿಷ್ಟ ಅಧ್ಯಯನವನ್ನು ಇನ್ನೂ ಒಂದು ವರ್ಷ (2026) ಕೈಗೊಳ್ಳುತ್ತದೆ ಮತ್ತು SID 2027 ಕುರಿತು ಐದನೇ ಮತ್ತು ಅಂತಿಮ ವರ್ಷದ ಸಂಶೋಧನಾ ವರದಿಗಳನ್ನು ಬಿಡುಗಡೆ ಮಾಡುತ್ತದೆ. ಸಂಶೋಧನೆಯು Snapchat ಮೇಲೆ ನಿರ್ದಿಷ್ಟ ಗಮನವಿಲ್ಲದೆ, ಎಲ್ಲ ವೇದಿಕೆಗಳು, ಸೇವೆಗಳು ಮತ್ತು ಸಾಧನಗಳಲ್ಲಿ ನವಪೀಳಿಗೆಯ ಹದಿಹರೆಯದವರು ಮತ್ತು ಯುವಜನರ ಅನುಭವಗಳನ್ನು ಒಳಗೊಳ್ಳುತ್ತದೆ.
ಸಾಮಾಜಿಕ ಮಾಧ್ಯಮ: ಸಮೃದ್ಧವಾಗುತ್ತಿರುವವರ ನಡುವೆ ಒಂದು ಸಾಮಾನ್ಯತೆ
ಹೆಚ್ಚಿನ ಡಿಜಿಟಲ್ ಯೋಗಕ್ಷೇಮ ಹೊಂದಿರುವ ನವಪೀಳಿಗೆಯವರು ಆನ್‌ಲೈನ್ ಅಪಾಯವನ್ನು ನಿರ್ವಹಿಸಲು ಮತ್ತು ಪರಿಹರಿಸಲು ಹೆಚ್ಚು ಪ್ರವೀಣರಾಗಿದ್ದಾರೆ ಎಂದು ಫಲಿತಾಂಶಗಳು ತೋರಿಸುತ್ತವೆ. ಉದಾಹರಣೆಗೆ, ಸಮೃದ್ಧಿ ಹೊಂದುತ್ತಿರುವ ವರ್ಗದಲ್ಲಿರುವ 74% ಜನರು ಕಳೆದ ವರ್ಷ ಕೆಲವು ಆನ್‌ಲೈನ್ ಅಪಾಯಕ್ಕೆ ಒಡ್ಡಿಕೊಂಡಿದ್ದಾರೆ ಎಂದು ವರದಿ ಮಾಡಿದ್ದಾರೆ, ಇದೇ ವೇಳೆ ಪ್ರಯಾಸ ಪಡುತ್ತಿರುವವರ ಪೈಕಿ ಸುಮಾರು 10 ರಲ್ಲಿ 9 ಜನರು (88%) ಕೆಲವು ಆನ್‌ಲೈನ್ ಅಪಾಯವನ್ನು ಎದುರಿಸಿದ್ದಾರೆ ಎಂದು ವರದಿ ಮಾಡಿದ್ದಾರೆ - ಇದು 14 ಶೇಕಡಾ ಅಂಕಗಳ ವ್ಯತ್ಯಾಸವಾಗಿದೆ. ಆನ್‌ಲೈನ್‌ನಲ್ಲಿ ಸಂಭಾವ್ಯ ಲೈಂಗಿಕ ಸುಲಿಗೆ ಪರಿಗಣಿಸುವಾಗ ಆ ಅಂತರವು 16-ಪ್ರತಿಶತ ಅಂಕಗಳಿಗೆ ವಿಸ್ತರಣೆಯಾಗಿದೆ. ಕೆಳಗಿನ ನಕ್ಷೆ, ಈ ಎರಡು ವರ್ಗಗಳಲ್ಲಿರುವವರು ಮತ್ತು ಹ್ಯಾಕಿಂಗ್, ಲೈಂಗಿಕ ಉದ್ದೇಶಗಳಿಗಾಗಿ ಆನ್‌ಲೈನ್ ಸ್ನೇಹದ ಜಾಲ ಮತ್ತು ಸುಳ್ಳು ಗುರುತಿನ ಮೋಸದಂತಹ ಮುಂತಾದ ಲೈಂಗಿಕ ಸುಲಿಗೆಯ ಸಂಭಾವ್ಯ ಹಾದಿಗಳು ಎಂದು ತಿಳಿದಿರುವ ಅಪಾಯಕಾರಿ ನಡವಳಿಕೆಗಳಿಗೆ ಸಂಬಂಧಿಸಿದ ಅವರ ಅನುಭವವನ್ನು ತೋರಿಸುತ್ತದೆ.
ಇದರ ಜೊತೆಗೆ, ಆನ್‌ಲೈನ್‌ನಲ್ಲಿ ಸಮೃದ್ಧಿ ಹೊಂದುತ್ತಿರುವವರ ನಡುವೆ ಸಾಮಾಜಿಕ ಮಾಧ್ಯಮದ ಜೊತೆಗೆ "ಆಳವಾದ ಒಳಗೊಳ್ಳುವಿಕೆ" ಒಂದು ಪ್ರಮುಖ ಲಕ್ಷಣವಾಗಿದೆ ಎಂದು ಸಂಶೋಧನೆಗಳು ತೋರಿಸುತ್ತವೆ. ಸಮೃದ್ಧಿ ಹೊಂದುತ್ತಿರುವವರ ವರ್ಗದಲ್ಲಿ ಮುಕ್ಕಾಲು ಭಾಗದಷ್ಟು ಪ್ರತಿಕ್ರಿಯಾದಾರರು ತಮ್ಮ ಕಳೆದ ಸಮಯ, ಭಾಗವಹಿಸುವಿಕೆಯ ಮಟ್ಟ ಮತ್ತು ತಮ್ಮ ಜೀವನದಲ್ಲಿ ಸಾಮಾಜಿಕ ಮಾಧ್ಯಮದ ಒಟ್ಟಾರೆ ಪ್ರಾಮುಖ್ಯತೆ ಸೇರಿದಂತೆ, ಸಾಮಾಜಿಕ ಮಾಧ್ಯಮದ ಜೊತೆಗೆ ಹೆಚ್ಚು ತೊಡಗಿಸಿಕೊಂಡಿರುವುದಾಗಿ ವರದಿ ಮಾಡಿದ್ದಾರೆ. ಪ್ರಯಾಸ ಪಡುತ್ತಿರುವವರು ಎಂದು ಗುರುತಿಸಲ್ಪಟ್ಟವರಿಗೆ ಸಂಬಂಧಿಸಿದಂತೆ, ಕೇವಲ ಕಾಲು (25%) ಭಾಗದಷ್ಟು ಜನರು ಸಾಮಾಜಿಕ ಮಾಧ್ಯಮದ ಜೊತೆಗೆ ಆಳವಾಗಿ ತೊಡಗಿಸಿಕೊಂಡಿರುವುದಾಗಿ ಹೇಳಿದ್ದಾರೆ. ಈ ಫಲಿತಾಂಶಗಳನ್ನು ಕೆಳಗಿನ ರೇಖಾಚಿತ್ರದಲ್ಲಿ ಕೂಡ ಚಿತ್ರಿಸಲಾಗಿದೆ.

ಫಲಿತಾಂಶಗಳು, ನವಪೀಳಿಗೆಯ ಡಿಜಿಟಲ್ ಯೋಗಕ್ಷೇಮಕ್ಕೆ ಸಂಬಂಧಿಸಿದ Snap ನ ನಿರಂತರ ಸಂಶೋಧನೆ ಮತ್ತು ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಭಾರತ, U.K. ಮತ್ತು U.S. ಈ ಆರು ದೇಶಗಳಲ್ಲಿ ಹದಿಹರೆಯದವರು (13-17 ವಯಸ್ಸಿನವರು) ಮತ್ತು ಯುವಜನರು (18-24 ವಯಸ್ಸಿನವರು) ಹೇಗೆ ವರ್ತಿಸುತ್ತಿದ್ದಾರೆ ಎನ್ನುವ ಮಾಪನವಾದ ನಮ್ಮ ಡಿಜಿಟಲ್ ಯೋಗಕ್ಷೇಮ ಸೂಚ್ಯಂಕದ(DWBI) ಇತ್ತೀಚಿನ ಕಂತಿನ ಭಾಗವಾಗಿವೆ. ಆನ್‌ಲೈನ್ ಅಪಾಯದ ಕುರಿತು 13 ರಿಂದ 19 ವರ್ಷ ವಯಸ್ಸಿನವರ ಪೋಷಕರನ್ನು ಕೂಡ ನಾವು ಸಮೀಕ್ಷೆ ಮಾಡಿದ್ದೇವೆ. ಈ ಇತ್ತೀಚಿನ ಸಮೀಕ್ಷೆಯನ್ನು ಏಪ್ರಿಲ್ 29 ಮತ್ತು ಮೇ 10, 2025 ರ ನಡುವೆ ನಡೆಸಲಾಗಿದೆ ಮತ್ತು ಮೂರು ವಯೋಮಾನದ ಜನರನ್ನು ಮತ್ತು ಆರು ಭೌಗೋಳಿಕ ಪ್ರದೇಶಗಳಾದ್ಯಂತ 9,037 ಪ್ರತಿಕ್ರಿಯಾದಾರರನ್ನು ಸಮೀಕ್ಷೆ ನಡೆಸಲಾಗಿದೆ.
4 ನೇ ವರ್ಷದ ಕೆಲವು ಹೆಚ್ಚುವರಿ ಉನ್ನತ ಮಟ್ಟದ ಸಂಶೋಧನೆಗಳು ಈ ಕೆಳಗಿವೆ:
ಆರು ದೇಶಗಳಾದ್ಯಂತ, ನವಪೀಳಿಗೆಯಲ್ಲಿ 10 ಪ್ರತಿಕ್ರಿಯಾದಾರರಲ್ಲಿ ಎಂಟು ಮಂದಿ (81%) ತಾವು ಒಂದು ಬಗೆಯ ಅಪಾಯವನ್ನು ಅನುಭವಿಸಿದ್ದಾಗಿ ಹೇಳುವ ಮೂಲಕ 2025 ರಲ್ಲಿ ಆನ್‌ಲೈನ್ ಅಪಾಯಕ್ಕೆ ಒಡ್ಡಿಕೊಳ್ಳುವಿಕೆ ತುಸು ಹೆಚ್ಚಾಗಿದೆ ಎಂದು ತಿಳಿಯುತ್ತದೆ – ಇದು 2024 ಕ್ಕಿಂತ (80%) ಒಂದು ಪ್ರತಿಶತ ಅಂಕ ಹೆಚ್ಚಾಗಿದೆ ಮತ್ತು 2022 ರಲ್ಲಿ ಈ ಸಂಶೋಧನೆ ಆರಂಭವಾದಾಗಿನಿಂದ (76%) ಐದು ಪ್ರತಿಶತ ಅಂಕಗಳಷ್ಟು ಹೆಚ್ಚಾಗಿದೆ.
ಸುಳ್ಳು ಸುದ್ದಿಗಳಿಗೆ ಒಡ್ಡಿಕೊಳ್ಳುವುದು 1ಹಿಂದಿನ ಮೂರು ವರ್ಷದ ಫಲಿತಾಂಶಗಳಂತೆಯೇ 2025 ರಲ್ಲಿ /ತಪ್ಪು ಮಾಹಿತಿ (54%), ಹಿಂಸೆಯ ಬೆದರಿಕೆ (47%) ಮತ್ತು ಅನಪೇಕ್ಷಿತ ಸಂಪರ್ಕ (35%) ಮೂರು ಅತಿ ಹೆಚ್ಚು ಅನುಭವಿಸಿದ ಡಿಜಿಟಲ್ ಅಪಾಯಗಳಾಗಿವೆ. ಆನ್‌ಲೈನ್ ಸೋಗುಹಾಕುವಿಕೆ (30%) ಮತ್ತು ಲೈಂಗಿಕ ಅಪಾಯಗಳು (29%) ಐದು ಅತಿ ಹೆಚ್ಚು ಅನುಭವಿಸಿದ ಅಪಾಯಗಳಲ್ಲಿ ಸೇರಿವೆ.
ಅಧ್ಯಯನ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ, ಸ್ಥಳೀಯ ಗುಂಪು ನೇಮಕಾತಿ ಮತ್ತು ಸಿಬ್ಬಂದಿ ಜೊತೆಗೆ ಯಾವುದಾದರೂ ಮುಖಾಮುಖಿಯಾಗಿದೆಯೇ ಎಂದು ನಾವು ನವಪೀಳಿಗೆಯವರನ್ನು ಕೇಳಿದೆವು. ಆರು ದೇಶಗಳಾದ್ಯಂತ ಪ್ರತಿಕ್ರಿಯಿಸಿದವರಲ್ಲಿ ನಾಲ್ಕು ಪ್ರತಿಶತ ಜನರು ಈ ಅಪಾಯವನ್ನು ಎದುರಿಸಿದ್ದಾರೆ ಎಂದು ಹೇಳಿದ್ದಾರೆ, ಇದು ಅಧ್ಯಯನದಲ್ಲಿ ಸೇರಿಸಲಾದ 15 ರಲ್ಲಿ ಅತ್ಯಂತ ಕಡಿಮೆ ಅಪಾಯದ ವಿಧವಾಗಿದೆ.
ಪ್ರೋತ್ಸಾಹದಾಯಕ ವಿಷಯವೆಂದರೆ, ಆನ್‌ಲೈನ್ ಅಪಾಯವನ್ನು ಎದುರಿಸಿದ ನಂತರ ಹಿಂದೆಂದಿಗಿಂತ ಹೆಚ್ಚು ಹದಿಹರೆಯದವರು ಸಹಾಯಕ್ಕಾಗಿ ಸಂಪರ್ಕಿಸಿದ್ದಾರೆ. 10 ರಲ್ಲಿ ಏಳಕ್ಕಿಂತ ಹೆಚ್ಚು (71%) ಜನರು ತಾವು ಯಾರೊಂದಿಗಾದರೂ ಮಾತನಾಡಿದ್ದಾಗಿ ಅಥವಾ ಸಹಾಯ ಕೋರಿರುವುದಾಗಿ ಹೇಳಿದ್ದಾರೆ, ಇದು 2024ರ ಶೇ. 68ಕ್ಕೆ ಹೋಲಿಸಿದರೆ ಹೆಚ್ಚಳ ಕಂಡಿದೆ ಮತ್ತು 2023ರ ಕನಿಷ್ಠ ಮಟ್ಟವಾದ ಶೇ. 59ಕ್ಕಿಂತ ಗಣನೀಯವಾಗಿ ಏರಿಕೆಯಾಗಿದೆ. 10 ಪೋಷಕರಲ್ಲಿ ಸುಮಾರು ಒಂಬತ್ತು ಮಂದಿ (88%) ತಮ್ಮ ಹದಿಹರೆಯದವರು ಅಪಾಯಕಾರಿ ಘಟನೆಯ ಕುರಿತು ತಮಗೆ ಹೇಳಿದ್ದಾರೆ ಎಂದು ಹೇಳಿದರು, ಇದು ಕಳೆದ ಮೂರು ವರ್ಷಗಳ(ಶೇ. 86) ಪ್ರತಿಯೊಂದು ವರ್ಷದ ಅಂಕಿಅಂಶಕ್ಕೆ ಹೋಲಿಸಿದರೆ ಶೇಕಡಾ ಎರಡರಷ್ಟು ಹೆಚ್ಚಾಗಿದೆ. ಅದಾಗ್ಯೂ, ಸ್ವಯಂ ಹಾನಿ ಮತ್ತು ಹಿಂಸಾತ್ಮಕ ತೀವ್ರವಾದಿ ಅಥವಾ ಭಯೋತ್ಪಾದಕ ವಿಷಯಕ್ಕೆ ಒಡ್ಡಿಕೊಳ್ಳುವಂತಹ ಗಂಭೀರ ಅಪಾಯಗಳ ಕುರಿತು ಚರ್ಚಿಸಲು ಹದಿಹರೆಯದವರು ಮುಂದೆ ಬರುವ ಪ್ರಮಾಣ ಇನ್ನೂ ಕಡಿಮೆಯೇ ಇದೆ. (ಈ ಗಮನಾರ್ಹ ಅಪಾಯಗಳ ಜೊತೆಗೆ ಹದಿಹರೆಯದವರ ಅನುಭವದಲ್ಲಿ ಮೂಲತಃ ಯಾವುದೇ ಬದಲಾವಣೆಗಳಿಲ್ಲ.)
ಹಿಂದಿನ ಅಧ್ಯಯನಗಳಂತೆಯೇ, ಹೆಚ್ಚಿನ ಬೆಂಬಲ ಸ್ವತ್ತುಗಳ ಲಭ್ಯತೆಯೊಂದಿಗೆ ನವಪೀಳಿಗೆಯವರು ಪ್ರಬಲ ಡಿಜಿಟಲ್ ಯೋಗಕ್ಷೇಮದ ಭಾವನೆಯನ್ನು ಹೊಂದುತ್ತಾರೆ ಎಂಬುದನ್ನು ಇತ್ತೀಚಿನ ಫಲಿತಾಂಶಗಳು ತೋರಿಸುತ್ತಿವೆ. ಬೆಂಬಲ ಸ್ವತ್ತನ್ನು ಮನೆ, ಶಾಲೆ, ಕೆಲಸ ಅಥವಾ ವಿಸ್ತಾರವಾದ ಸಮುದಾಯದಲ್ಲಿರುವ ಯಾರಾದರೂ, ಅಂದರೆ ಯುವಜನರು ಸಮಸ್ಯೆ ಅಥವಾ ಕಳವಳದೊಂದಿಗೆ ಯಾರನ್ನು ಸಂಪರ್ಕಿಸಬಹುದು, ಅವರ ಮಾತನ್ನು ಯಾರು ಆಲಿಸುತ್ತಾರೆ, ಅಥವಾ ಯುವಜನರು ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಎಂದು ಯಾರು ಭಾವಿಸುತ್ತಾರೋ ಅವರು ಎಂದು ವ್ಯಾಖ್ಯಾನಿಸಲಾಗಿದೆ. ಒಂಬತ್ತು ಮತ್ತು 12 ಬೆಂಬಲ ಸ್ವತ್ತುಗಳನ್ನು (ಅತಿ ಹೆಚ್ಚು ಶ್ರೇಣಿ) ಹೊಂದಿರುವ ನವಪೀಳಿಗೆಯವರ ಪೈಕಿ, ಸುಮಾರು ಮೂರನೇ ಎರಡರಷ್ಟು ಜನರು ಸಮೃದ್ಧಿ ಹೊಂದಿರುವ ವರ್ಗದವರಾಗಿದ್ದಾರೆ (64%). ಸೊನ್ನೆಯಿಂದ ನಾಲ್ಕು ಬೆಂಬಲ ಸ್ವತ್ತುಗಳನ್ನು ಹೊಂದಿರುವವರಲ್ಲಿ (ಅತಿ ಕಡಿಮೆ ಶ್ರೇಣಿ), ಮುಕ್ಕಾಲು ಭಾಗಕ್ಕಿಂತ ಹೆಚ್ಚು (77%) ಜನರು ಪ್ರಯಾಸ ಪಡುತ್ತಿರುವವರ ಗುಂಪಿನಲ್ಲಿದ್ದರು.
ಹೆಚ್ಚಿನ ಅಪಾಯಕ್ಕೆ ಒಡ್ಡಿಕೊಳ್ಳುವಿಕೆಯ ಹೊರತಾಗಿಯೂ, ಹಲವು ನವಪೀಳಿಗೆಯವರು ಹೆಚ್ಚು ಚೇತರಿಕೆಯ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾರೆ ಮತ್ತು ಆನ್‌ಲೈನ್ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನೆರವು ಪಡೆಯುವುದಕ್ಕಾಗಿ ವಿವಿಧ ಪರಿಕರಗಳು ಮತ್ತು ಸಂಪನ್ಮೂಲಗಳನ್ನು ಬಳಸುತ್ತಿದ್ದಾರೆ ಎಂದು ಕೆಲವು ಸಂಶೋಧನೆಗಳು ಸೂಚಿಸುತ್ತಿರುವಂತೆ ಕಾಣುತ್ತಿದೆ. ಈ ಸಂಕೇತಗಳು, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಸಾಕ್ಷರತೆಗಾಗಿನ ನಿರಂತರ ಅಗತ್ಯವನ್ನು ಮತ್ತು ವಿಶ್ಲೇಷಣಾತ್ಮಕ ಮತ್ತು ವಿಮರ್ಶಾತ್ಮಕ ಚಿಂತನೆಗೆ ಇನ್ನಷ್ಟು ಮಹತ್ವ ಮತ್ತು ಬಲ ತುಂಬುವ ಅಗತ್ಯವನ್ನು ಒತ್ತಿಹೇಳುತ್ತವೆ.
DWBIನ 4ನೇ ವರ್ಷ
ಡಿಜಿಟಲ್ ಯೋಗಕ್ಷೇಮ ಸೂಚ್ಯಂಕವು ಭಾವನಾತ್ಮಕ ಹೇಳಿಕೆಗಳ ಶ್ರೇಣಿಗೆ ಸಂಬಂಧಿಸಿದ ಅವರ ಒಪ್ಪಿಗೆಯನ್ನು ಆಧರಿಸಿ ಪ್ರತಿ ಪ್ರತಿಕ್ರಿಯಾದಾರನಿಗೆ 0 ಮತ್ತು 100 ನಡುವಿನ ಅಂಕವನ್ನು ನಿಯೋಜಿಸುತ್ತದೆ. ವೈಯಕ್ತಿಕ ಪ್ರತಿಕ್ರಿಯಿಸುವವರ ಅಂಕಗಳು ನಂತರ ನಿರ್ದಿಷ್ಟ ದೇಶದ ಅಂಕಗಳನ್ನು ಮತ್ತು ಆರು ದೇಶಗಳ ಸರಾಸರಿಯನ್ನು ಉತ್ಪಾದಿಸುತ್ತವೆ. ಎಲ್ಲ ಆರು ಭೌಗೋಳಿಕ ಪ್ರದೇಶಗಳ ಸರಾಸರಿಯನ್ನು ನೋಡಿದಾಗ, 2024 ರಲ್ಲಿ 63 ಇದ್ದ DWBI 2025 ರಲ್ಲಿ ಒಂದು ಅಂಕದಷ್ಟು ಏರಿಕೆಯಾಗಿ 64 ರಲ್ಲಿದೆ. ಎಲ್ಲ ವಿಷಯಗಳನ್ನು ಪರಿಗಣಿಸಿದಾಗ, ಇದು ಸಾಧಾರಣ ಅಂಕವಾಗಿದೆ, ಆದರೆ ಹದಿಹರೆಯದವರಿಗೆ ಅಪಾಯದ ಏರಿಕೆಯನ್ನು ಗಮನಿಸಿದರೆ ನಿವ್ವಳ ಸಕಾರಾತ್ಮಕವಾಗಿದೆ. (ಹಿಂದಿನ ವರ್ಷದ 73% ಗೆ ಹೋಲಿಸಿದರೆ 2025 ರಲ್ಲಿ ಮುಕ್ಕಾಲು ಭಾಗದಷ್ಟು (76%) ಹದಿಹರೆಯದವರು ಅಪಾಯವನ್ನು ಎದುರಿಸಿದ್ದಾರೆ ಎಂದು ವರದಿ ಮಾಡಿದ್ದಾರೆ; ಏತನ್ಮಧ್ಯೆ, ಯುವಜನರ ಅಪಾಯಕ್ಕೆ ಒಡ್ಡಿಕೊಳ್ಳುವಿಕೆಯು 2024 ರಲ್ಲಿನ 87% ನಿಂದ 86% ಗೆ ಇಳಿಕೆಯಾಗಿದೆ.)
ಸತತ ನಾಲ್ಕನೇ ವರ್ಷದಲ್ಲಿ, ಭಾರತವು 69 ಅಂಕಗಳ ಅತಿ ಹೆಚ್ಚು DWBI ಅನ್ನು ನೋಂದಾಯಿಸಿದೆ, ಇದು 2024 ಕ್ಕಿಂತ ಎರಡು ಅಂಕಗಳಷ್ಟು ಹೆಚ್ಚಾಗಿದೆ ಮತ್ತು ಇಲ್ಲಿಯವರೆಗೆ ಯಾವುದೇ ದೇಶ ದಾಖಲಿಸಿದ ಅತಿ ಹೆಚ್ಚಿನ ಅಂಕವಾಗಿದೆ. ಭಾರತದ ಸತತ ದೃಢವಾದ DWBI ಅಂಕಿಅಂಶಗಳಿಗೆ, ಪೋಷಕರ ಸಕ್ರಿಯ ಮತ್ತು ಗಮನ ಹರಿಸುವ ಬೆಂಬಲದ ಸಂಸ್ಕೃತಿಯೇ ಪ್ರಮುಖ ಕಾರಣವಾಗಿದೆ U.S. DWBI 67 ರವರೆಗೆ ತಲುಪಿದ್ದು, ಇದು ಅಧ್ಯಯನ ಆರಂಭವಾದಾಗಿನಿಂದ ಆ ದೇಶಕ್ಕೆ ಗರಿಷ್ಠ ಅಂಕ ಮತ್ತು 2024 ರಿಂದ ಎರಡು ಅಂಕಗಳ ಏರಿಕೆಯಾಗಿದೆ. ಎಲ್ಲ ದೇಶಗಳ ಅಂಕಗಳು ಹಿಂದಿನ ವರ್ಷಕ್ಕಿಂತ ತುಸು ಹೆಚ್ಚಾಗಿವೆ. U.K., ಫ್ರಾನ್ಸ್ ಮತ್ತು ಜರ್ಮನಿಯ DWBI ಗಳು ಅನುಕ್ರಮವಾಗಿ 64, 60, ಮತ್ತು 61 ಆಗಿವೆ. 2024 ರಲ್ಲಿ ಕಡಿಮೆ ಅಂಕವನ್ನು ಹೊಂದಿದ ಏಕೈಕ ದೇಶವಾಗಿದ್ದ ಆಸ್ಟ್ರೇಲಿಯಾದ DWBI ಈ ಬಾರಿ ತುಸು ಹೆಚ್ಚಿ 63 ಅಂಕಗಳಿಗೆ ಏರಿದೆ.
ಸೂಚ್ಯಂಕವು PERNA ಮಾದರಿಯನ್ನು ಬಳಸುತ್ತದೆ, ಇದು ಸ್ಥಾಪಿತ ಯೋಗಕ್ಷೇಮ ಸಿದ್ಧಾಂತದ ಅಳವಡಿಕೆಯಾಗಿದ್ದು 2, ಐದು ವಿಭಾಗಗಳಾದ್ಯಂತ 20 ಭಾವನಾತ್ಮಕ ಹೇಳಿಕೆಗಳನ್ನು ಒಳಗೊಂಡಿದೆ: ಸಕಾರಾತ್ಮಕ ಭಾವನೆ, ತೊಡಗಿಸಿಕೊಳ್ಳುವಿಕೆ, ಸಂಬಂಧಗಳು, ನಕಾರಾತ್ಮಕ ಭಾವನೆ ಮತ್ತು ಸಾಧನೆ. ಹಿಂದಿನ ಮೂರು ತಿಂಗಳುಗಳಲ್ಲಿ Snapchat ಮಾತ್ರವಲ್ಲದೆ - ಯಾವುದೇ ಸಾಧನ ಅಥವಾ ಅಪ್ಲಿಕೇಶನ್‌ನಲ್ಲಿ ಅವರ ಎಲ್ಲಾ ಆನ್‌ಲೈನ್ ಅನುಭವಗಳನ್ನು ಗಣನೆಗೆ ತೆಗೆದುಕೊಂಡು, ಪ್ರತಿಕ್ರಿಯಿಸಿದವರನ್ನು 20 ಹೇಳಿಕೆಗಳಲ್ಲಿ ಪ್ರತಿಯೊಂದಕ್ಕೂ ತಮ್ಮ ಒಪ್ಪಂದದ ಮಟ್ಟವನ್ನು ನೋಂದಾಯಿಸಲು ಕೇಳಲಾಯಿತು. ಉದಾಹರಣೆಗೆ, ಸಕಾರಾತ್ಮಕ ಭಾವನೆ ವಿಭಾಗದಲ್ಲಿ “ಸಾಮಾನ್ಯವಾಗಿ ನಾನು ಆನ್‌ಲೈನ್‌ನಲ್ಲಿ ಮಾಡಿದ್ದು ಮೌಲ್ಯಯುತ ಮತ್ತು ಯೋಗ್ಯವಾದುದಾಗಿದೆ ಎಂದು ಭಾವಿಸಿದೆ“ ಎಂಬುದು ಮತ್ತು ಸಂಬಂಧಗಳ ಅಡಿಯಲ್ಲಿ "ನಾನು ಆನ್‌ಲೈನ್‌ನಲ್ಲಿ ಏನಾದರೂ ಹೇಳಬೇಕಾದಾಗ ನಿಜವಾಗಿಯೂ ನನ್ನ ಮಾತನ್ನು ಕೇಳುವ ಸ್ನೇಹಿತರನ್ನು ಹೊಂದಿರುವೆ" ಎಂಬುದು. (20 DWBI ಭಾವನೆಯ ಹೇಳಿಕೆಗಳಿಗಾಗಿ ಇಲ್ಲಿ ನೋಡಿ.)
U.S. ನಲ್ಲಿ ಹದಿಹರೆಯದವರು: ಡಿಜಿಟಲ್ ಯೋಗಕ್ಷೇಮಕ್ಕಾಗಿ ನಮ್ಮ ಪರಿಷತ್‌ನ ಎರಡನೇ ಸಮೂಹಕ್ಕೆ ಸೇರಲು ಅರ್ಜಿ ಸಲ್ಲಿಸಿ
ಎರಡು ವರ್ಷಗಳ ಹಿಂದೆ, ಈ ಸಂಶೋಧನೆಗೆ ಚೈತನ್ಯ ತುಂಬಲು ಮತ್ತು ಹದಿಹರೆಯದವರ ಕುರಿತು ನಮ್ಮ ನಿರಂತರ ಬದ್ಧತೆಯನ್ನು ಮುಂದುವರಿಸಲು ನಾವು ಎರಡು ವರ್ಷಗಳ ಹಿಂದೆ ಅಮೆರಿಕಾದಲ್ಲಿ 13-16 ವರ್ಷ ವಯಸ್ಸಿನ ಹದಿಹರೆಯದವರಿಗಾಗಿ ಡಿಜಿಟಲ್ ಯೋಗಕ್ಷೇಮಕ್ಕಾಗಿ ನಮ್ಮ ಆರಂಭಿಕ ಪರಿಷತ್ (CDWB) ಎಂಬ ಪ್ರಾಯೋಗಿಕ ಕಾರ್ಯಕ್ರಮವನ್ನು ಪ್ರಾರಂಭಿಸಿದೆವು. ನಾವು ಅನ್ನು ಆರಂಭಿಸಿದ್ದೇವೆ. ಕಳೆದ ಆಗಸ್ಟ್‌ನಲ್ಲಿ ನಾವು ಆ ಉದ್ಘಾಟನಾ ಮಂಡಳಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆವು. ಅದರ ಯಶಸ್ಸಿನ ಫಲವಾಗಿ, ಆಸ್ಟ್ರೇಲಿಯಾ ಹಾಗೂ ಯುರೋಪ್ ಮತ್ತು UKಯಾದ್ಯಂತ ಪ್ರಸ್ತುತ ಸಕ್ರಿಯವಾಗಿರುವ ಎರಡು 'ಸಹೋದರಿ' (sister) ಮಂಡಳಿಗಳು ಅಸ್ತಿತ್ವಕ್ಕೆ ಬಂದವು. U.S. ನಲ್ಲಿ ನಾವು ಎರಡನೇ ಸಮೂಹಕ್ಕಾಗಿ ಉತ್ಸುಕರಾಗಿದ್ದೇವೆ, ಆದ್ದರಿಂದ ನಾವು ಕಳೆದ ತಿಂಗಳು ಆ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಎಲ್ಲರಿಗೂ ಡಿಜಿಟಲ್ ಅನುಭವಗಳನ್ನು ಉತ್ತಮಗೊಳಿಸುವ ಬಗ್ಗೆ ಆಸಕ್ತಿ ಹೊಂದಿರುವ ಹದಿಹರೆಯದವರು ನೀವಾಗಿದ್ದರೆ ಅಥವಾ ಅಂತಹವರು ನಿಮಗೆ ತಿಳಿದಿದ್ದರೆ, ದಯವಿಟ್ಟು ಅರ್ಜಿಯನ್ನು ಸಲ್ಲಿಸುವುದನ್ನು ಪರಿಗಣಿಸಿ! ವಿವರಗಳನ್ನು ಇಲ್ಲಿ ನೋಡಬಹುದು.
ಅಂತಿಮವಾಗಿ, ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿ ಈ ವರ್ಷದ ರಾಷ್ಟ್ರೀಯ ಕಾರ್ಯಕ್ರಮದಲ್ಲಿ U.S. ನಲ್ಲಿ SID ಯ ಅಧಿಕೃತ ಸಂಘಟಕ ConnectSafely ಜೊತೆಗೆ ಮತ್ತೆ ಕೈಜೋಡಿಸಲು Snap ಸಂತೋಷಪಡುತ್ತದೆ. 100 ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುವ SID ಯುವಜನರು ಮತ್ತು ವಯಸ್ಕರಿಗೆ ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ, ಗೌರವದೊಂದಿಗೆ, ವಿಮರ್ಶಾತ್ಮಕವಾಗಿ ಮತ್ತು ಸೃಜನಶೀಲವಾಗಿ ಬಳಸಲು ಸಬಲೀಕರಣಗೊಳಿಸುವ ಕುರಿತು ಮತ್ತು ಜಾಗತಿಕ ಸಂಭಾಷಣೆಯನ್ನು ತಿಳಿಸಲು ನೆರವಾಗುವಂತೆ ನಾವು ಈ ಇತ್ತೀಚಿನ ಸಂಶೋಧನಾ ಫಲಿತಾಂಶಗಳನ್ನು ಹಂಚಿಕೊಳ್ಳಲು ಯೋಜಿಸಿದ್ದೇವೆ.
ಇತ್ತೀಚಿನ DWBI ಮತ್ತು ಸಂಶೋಧನೆಯ ಕುರಿತು ಇನ್ನಷ್ಟು ವಿವರಕ್ಕಾಗಿ, ನಮ್ಮ ವೆಬ್‌ಸೈಟ್, ಪರಿಷ್ಕೃತ ವಿವರಣೆ, ಪೂರ್ಣ ಸಂಶೋಧನಾ ಫಲಿತಾಂಶಗಳು ಮತ್ತು ಸ್ಥಳೀಯ ಭಾಷೆಗೆ ಅನುವಾದಿಸಿರುವ ಆರು ದೇಶಗಳ ಮಾಹಿತಿಚಿತ್ರಣವನ್ನು ನೋಡಿ: ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಭಾರತ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್.
— ಜಾಕ್ವೆಲಿನ್ ಬೌಚೆರೆ, ವೇದಿಕೆ ಸುರಕ್ಷತೆಯ ಜಾಗತಿಕ ಮುಖ್ಯಸ್ಥರು