logoSnap Values

ಮಕ್ಕಳ ರಕ್ಷಣೆಯ ಮುಂದುವರಿಕೆಯನ್ನು ಖಚಿತಪಡಿಸಲು EU ಶಾಸಕರು ತ್ವರಿತವಾಗಿ ಕಾರ್ಯನಿರ್ವಹಿಸಬೇಕು

19 ಮಾರ್ಚ್ 2026

ಮಾರ್ಚ್ 19 ರಂದು, Snapchat ಸಂಸ್ಥೆಯು EU ಇ-ಗೋಪ್ಯತೆಯ ನ್ಯೂನಗೊಳಿಸುವಿಕೆಯವಿಸ್ತರಣೆಗಾಗಿ ಕರೆ ನೀಡಲು Google, LinkedIn, Meta, Microsoft ಮತ್ತು TikTok ಜೊತೆಗೆ ಕೈಜೋಡಿಸಿತು.

ತಂತ್ರಜ್ಞಾನ ಸಂಸ್ಥೆಗಳಾಗಿ, ಅಪ್ರಾಪ್ತವಯಸ್ಕರಿಗೆ ಮಕ್ಕಳ ಲೈಂಗಿಕ ಶೋಷಣೆಯಿಂದ ಮುಂದೆಯೂ ರಕ್ಷಣೆಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಜಾರಿಯಲ್ಲಿದ್ದ EU ಸಂಧಾನ ಮಾತುಕತೆಗಳ ಕುಸಿತದ ಕುರಿತು ನಾವು ತೀವ್ರವಾಗಿ ಕಳವಳಗೊಂಡಿದ್ದೇವೆ. 2021 ರಿಂದ ಜಾರಿಯಲ್ಲಿರುವ ಇ-ಗೋಪ್ಯತೆಯ ನ್ಯೂನಗೊಳಿಸುವಿಕೆಯ ಕಾನೂನಾತ್ಮಕ ಆಧಾರದ ಅವಧಿಯು ಅಂತ್ಯಗೊಳ್ಳಲು ಅವಕಾಶ ಮಾಡಿಕೊಡುವುದು ಬೇಜವಾಬ್ದಾರಿತನವಾಗಿದೆ. ಅದನ್ನು ವಿಸ್ತರಿಸಬೇಕಾಗಿದೆ.

ಕ್ರಮ ಕೈಗೊಳ್ಳಲು ವಿಫಲವಾದರೆ, ಸುಮಾರು 20 ವರ್ಷಗಳಿಂದ ಪರಸ್ಪರ ಸಂವಹನ ಸೇವೆಗಳಲ್ಲಿ ತಿಳಿದಿರುವ ಮಕ್ಕಳ ಲೈಂಗಿಕ ದೌರ್ಜನ್ಯದ ವಿಷಯಗಳನ್ನು (CSAM) ಸ್ವಯಂಪ್ರೇರಣೆಯಿಂದ ಪತ್ತೆಹಚ್ಚಲು ಮತ್ತು ವರದಿ ಮಾಡಲು ಸಂಸ್ಥೆಗಳಿಗೆ ಅನುವು ಮಾಡಿಕೊಟ್ಟಿರುವ ಕಾನೂನಾತ್ಮಕ ಸ್ಪಷ್ಟತೆಯನ್ನು ದುರ್ಬಲಗೊಳಿಸುತ್ತದೆ, ಹಾಗೂ ಆ ಮೂಲಕ ಯುರೋಪ್ ಮತ್ತು ಪ್ರಪಂಚದಾದ್ಯಂತದ ಮಕ್ಕಳಿಗೆ ಲಭ್ಯವಿದ್ದ ರಕ್ಷಣೆಯನ್ನು ಮೊದಲಿಗಿಂತ ಕಡಿಮೆ ಮಟ್ಟಕ್ಕೆ ಇಳಿಸುತ್ತದೆ.

ಹ್ಯಾಶ್ ಹೊಂದಾಣಿಕೆ ಮೂಲಕ CSAM ಗಳನ್ನು ಸ್ವಯಂಪ್ರೇರಣೆಯಿಂದ ಪತ್ತೆಮಾಡುವುದು ಕಾನೂನು ಜಾರಿ ತನಿಖೆಗಳ ಪ್ರಮುಖ ಸ್ಥಾಪಿತ ಸಾಧನವಾಗಿದೆ, ಏಕೆಂದರೆ ಇದು ಚಾಲ್ತಿಯಲ್ಲಿರುವ ಮಕ್ಕಳ ಮೇಲಿನ ದೌರ್ಜನ್ಯಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಹಾಗೂ ಹೆಚ್ಚು ಹಾನಿಕಾರಕ ಮತ್ತು ಕಾನೂನುಬಾಹಿರ ವಿಷಯಗಳ ಪ್ರಸಾರವನ್ನು ತಡೆಯುತ್ತದೆ.

ದೀರ್ಘಕಾಲದಿಂದ ಉದ್ಯಮದಾದ್ಯಂತ ಚಾಲ್ತಿಯಲ್ಲಿರುವ ಹ್ಯಾಶ್ ಹೊಂದಾಣಿಕೆ ಪ್ರಕ್ರಿಯೆಯು ತಿಳಿದಿರುವ CSAM ಗಳನ್ನು ಗುರುತಿಸಲು ಅಪರಾವರ್ತ ಡಿಜಿಟಲ್ ಬೆರಳಚ್ಚನ್ನು ಬಳಸುತ್ತದೆ. ಈ ಹಿಂದೆ ಗುರುತಿಸಲಾದ ವಿಷಯಗಳ ಭದ್ರ ದತ್ತಸಂಚಯದ ವಿರುದ್ಧ ಈ ವಿಶಿಷ್ಟ ಹ್ಯಾಶ್‌ಗಳನ್ನು ಹೊಂದಿಸುವ ಮೂಲಕ, ಈ ವ್ಯವಸ್ಥೆಯು ಗೌಪ್ಯತೆ ತತ್ವಗಳಿಗೆ ಬದ್ಧವಾಗಿದ್ದೂ ಸಹ ಉನ್ನತ-ನಿಖರತೆಯ ಪತ್ತೆಹಚ್ಚುವಿಕೆಯನ್ನು ಖಚಿತಪಡಿಸುತ್ತದೆ. 

ಈ ಕಡುಕೆಟ್ಟ ವಿಷಯದ ಪತ್ತೆಮಾಡುವಿಕೆಗೆ ಅಡ್ಡಿಪಡಿಸುವುದರಿಂದ ಮಕ್ಕಳನ್ನು ರಕ್ಷಿಸಲು ಉದ್ಯಮಕ್ಕೆ ಲಭ್ಯವಿರುವ ಸಾಧನಗಳನ್ನು ಕಡಿಮೆ ಮಾಡುತ್ತದೆ ಹಾಗೂ ಈ ಅಸಹ್ಯಕರ ಅಪರಾಧದ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲವಾಗುವ ಅಪಾಯವನ್ನು ಸೃಷ್ಟಿಸುತ್ತದೆ. 

ಅಂತರ್ವೈಯಕ್ತಿಕ ಸಂವಹನ ಸೇವೆಗಳಲ್ಲಿ ಸ್ವಯಂಪ್ರೇರಿತ CSAM ಗಳ ಪತ್ತೆಹಚ್ಚುವಿಕೆಗಾಗಿ ಮುಂದಿನ ಕ್ರಮಗಳ ಕುರಿತು ತ್ವರಿತವಾಗಿ ಒಮ್ಮತಕ್ಕೆ ಬರುವಂತೆ ಹಾಗೂ ಅಪ್ರಾಪ್ತ ವಯಸ್ಕರನ್ನು ರಕ್ಷಿಸಲು ಸ್ಥಾಪಿತ ಸಾಧನಗಳ ಮುಂದುವರಿಯುವಿಕೆಯನ್ನು ಸಾಧ್ಯವಾಗಿಸುವಂತೆ ನಾವು ಯುರೋಪ್‌ನಲ್ಲಿನ ಶಾಸಕರನ್ನು ಒತ್ತಾಯಿಸುತ್ತೇವೆ. ಹಾಗೆ ಮಾಡಲು ವಿಫಲವಾಗುವುದು ಬೇಜವಾಬ್ದಾರಿತನವಾಗುತ್ತದೆ. 

ಸುದ್ದಿಗಳಿಗೆ ಹಿಂತಿರುಗಿ