ಚುನಾವಣಾ ಸಮಗ್ರತೆಯ ಕುರಿತು ನಾಗರಿಕ ಸಮಾಜದ ಗುಂಪುಗಳಿಗೆ ನಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಳ್ಳುವುದು

ಏಪ್ರಿಲ್ 22, 2024

ಈ ತಿಂಗಳ ಆರಂಭದಲ್ಲಿ, Snap ಹಾಗೂ ಇತರ ಪ್ರಮುಖ ತಂತ್ರಜ್ಞಾನ ಕಂಪನಿಗಳು 2024 ರಲ್ಲಿನ ಚುನಾವಣೆಗಳ ಸಮಗ್ರತೆಯನ್ನು ಕಾಪಾಡಲು ನಮ್ಮ ಪ್ರಯತ್ನಗಳನ್ನು ಹೆಚ್ಚಿಸುವಂತೆ ಒತ್ತಾಯಿಸಿ 200 ಕ್ಕೂ ಅಧಿಕ ನಾಗರಿಕ ಸಮಾಜದ ಸಂಘಟನೆಗಳು, ಸಂಶೋಧಕರು ಮತ್ತು ಪತ್ರಕರ್ತರಿಂದ ಪತ್ರವನ್ನು ಸ್ವೀಕರಿಸಿದವು. ನಾವು ಅವರ ಪ್ರತಿಪಾದನೆಯನ್ನು ಶ್ಲಾಘಿಸುತ್ತೇವೆ ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ನೆರವಾಗುವುದಕ್ಕೆ ನಾವು ಮಾಡಬಹುದಾದುದೆಲ್ಲವನ್ನೂ ಮಾಡುತ್ತ, ಜಗತ್ತಿನಾದ್ಯಂತದ ಜನರು ಅವರ ಚುನಾವಣೆಯಲ್ಲಿ ಪಾಲ್ಗೊಳ್ಳಬಹುದು ಎಂದು ಖಚಿತಪಡಿಸಿಕೊಳ್ಳಲು ಸಮಾನವಾದ ಬದ್ಧತೆಯನ್ನು ಹೊಂದಿದ್ದೇವೆ.

ಈ ವಿಷಯಗಳ ಪ್ರಾಮುಖ್ಯತೆ ಮತ್ತು ತಮ್ಮ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಸಂವಹನ ನಡೆಸಲು ಮತ್ತು ನಮ್ಮ ವಿಷಯದ ಮೂಲಕ ಜಗತ್ತಿನ ಕುರಿತು ತಿಳಿದುಕೊಳ್ಳಲು Snapchat ಅನ್ನು ಬಳಸುವ ಲಕ್ಷಾಂತರ ಜನರೆಡೆಗೆ ನಾವು ಹೊಂದಿರುವ ಜವಾಬ್ದಾರಿಯ ಭಾವನೆಯನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಪ್ರತಿಕ್ರಿಯೆಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದು ಮುಖ್ಯವಾಗಿದೆ ಎಂದು ನಮಗೆ ಅನಿಸಿದೆ. ನೀವು ನಮ್ಮ ಪತ್ರವನ್ನು ಕೆಳಗೆ ಓದಬಹುದು ಮತ್ತು ಈ ವರ್ಷದ ಚುನಾವಣೆಗೆ ನಮ್ಮ ಯೋಜನೆಗಳ ಕುರಿತು ಇಲ್ಲಿ ಇನ್ನಷ್ಟು ತಿಳಿದುಕೊಳ್ಳಬಹುದು.

***

ಏಪ್ರಿಲ್ 21, 2024

ಆತ್ಮೀಯ ನಾಗರಿಕ ಸಮಾಜ ಸಂಘಟನೆಗಳಿಗೆ
:

ವಿಶ್ವಾದ್ಯಂತ ಈ ವರ್ಷ ಹಿಂದೆಂದೂ ಕಾಣದಂತಹ ಚುನಾವಣಾ ಚಟುವಟಿಕೆಯ ನಿಮ್ಮ ನಿರಂತರ ನಿಗಾ ಮತ್ತು ವಕಾಲತ್ತಿಗಾಗಿ ಧನ್ಯವಾದಗಳು. ಈ ವಾತಾವರಣದಲ್ಲಿ ನಮ್ಮ ಜವಾಬ್ದಾರಿಗಳನ್ನು Snap ಹೇಗೆ ನಿಭಾಯಿಸುತ್ತಿದೆ ಮತ್ತು ಈ ಪ್ರಯತ್ನಗಳು ನಮ್ಮ ಕಂಪನಿಯ ಸುದೀರ್ಘ ಮೌಲ್ಯಗಳಿಗೆ ಹೇಗೆ ಹೊಂದಾಣಿಕೆಯಾಗುತ್ತವೆ ಎನ್ನುವ ಕುರಿತು ಇನ್ನಷ್ಟು ಹಂಚಿಕೊಳ್ಳುವ ಅವಕಾಶಕ್ಕಾಗಿ ನಾವು ಕೃತಜ್ಞತೆ ವ್ಯಕ್ತಪಡಿಸುತ್ತೇವೆ. 

Snapchat ವಿಧಾನದ ಅವಲೋಕನ

ಚುನಾವಣಾ-ಸಂಬಂಧಿತ ವೇದಿಕೆಯ ಸಮಗ್ರತೆಗೆ ನಮ್ಮ ವಿಧಾನವು ಹಂತಗಳನ್ನು ಒಳಗೊಂಡಿದೆ. ಮೇಲಿನ ಹಂತದಲ್ಲಿ, ಮೂಲ ಅಂಶಗಳಲ್ಲಿ ಇವು ಸೇರಿವೆ:

  • ಉದ್ದೇಶಪೂರ್ವಕ ಉತ್ಪನ್ನ ಸುರಕ್ಷತಾ ಕ್ರಮಗಳು;

  • ಸ್ಪಷ್ಟ ಮತ್ತು ವಿಚಾರಪೂರ್ಣ ನೀತಿಗಳು; 

  • ರಾಜಕೀಯ ಜಾಹೀರಾತುಗಳಿಗೆ ಕಾರ್ಯನಿಷ್ಠ ವಿಧಾನ;

  • ಸಹಭಾಗಿತ್ವದ, ಸಮನ್ವಯದ ಕಾರ್ಯಾಚರಣೆಗಳು; ಮತ್ತು

  • Snapchatter ಗಳನ್ನು ಸಬಲಗೊಳಿಸಲು ಟೂಲ್‌ಗಳು ಮತ್ತು ಸಂಪನ್ಮೂಲಗಳನ್ನು ಒದಗಿಸುವುದು.


ಜೊತೆಯಾಗಿ ಪರಿಗಣಿಸಿದಾಗ, ವಿಶ್ವಾದ್ಯಂತ ಪ್ರಜಾತಂತ್ರ ಪ್ರಕ್ರಿಯೆಗಳಲ್ಲಿ ಭಾಗವಹಿಸುವಿಕೆಯನ್ನು ಬೆಂಬಲಿಸುವ ಟೂಲ್‌ಗಳು ಮತ್ತು ಮಾಹಿತಿಗೆ Snapchatter ಗಳು ಪ್ರವೇಶ ಹೊಂದಿದ್ದಾರೆ ಎಂದು ಖಚಿತಪಡಿಸುವ ಜೊತೆಗೆ, ಚುನಾವಣಾ-ಸಂಬಂಧಿತ ಅಪಾಯಗಳ ವಿಶಾಲ ಶ್ರೇಣಿಯನ್ನು ನಿವಾರಿಸಲು ನಮ್ಮ ವಿಧಾನವನ್ನು ಈ ಆಧಾರಸ್ತಂಭಗಳು ಎತ್ತಿಹಿಡಿಯುತ್ತವೆ. 

1. ಉದ್ದೇಶಪೂರ್ವಕ ಉತ್ಪನ್ನ ಸುರಕ್ಷತಾ ಕ್ರಮಗಳು

ಆರಂಭದಿಂದಲೂ, Snapchat ಅನ್ನು ಸಾಂಪ್ರದಾಯಿಕ ಸಾಮಾಜಿಕ ಮಾಧ್ಯಮಗಳಿಗಿಂತ ಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ. Snapchat ಕೊನೆಯಿಲ್ಲದ, ಪರಿಶೀಲಿಸದ ವಿಷಯದ ಫೀಡ್‌ಗೆ ತೆರೆದುಕೊಳ್ಳುವುದಿಲ್ಲ ಮತ್ತು ಅದು ಜನರು ಲೈವ್ ಸ್ಟ್ರೀಮ್ ಮಾಡಲು ಅನುಮತಿಸುವುದಿಲ್ಲ. 

ಹಾನಿಕಾರಕ ಡಿಜಿಟಲ್ ಸುಳ್ಳುಮಾಹಿತಿಯ ಅತಿದೊಡ್ಡ ಬೆದರಿಕೆಗಳು, ಕೆಲವು ಡಿಜಿಟಲ್ ವೇದಿಕೆಗಳು ಆ ಸುಳ್ಳನ್ನು ಹರಡಲು ಅವಕಾಶ ಕಲ್ಪಿಸುವ ವೇಗ ಮತ್ತು ಪ್ರಮಾಣದಿಂದ ಉದ್ಭವಿಸುತ್ತವೆ ಎನ್ನುವುದನ್ನು ನಾವು ಬಹಳ ಹಿಂದೆಯೇ ಗುರುತಿಸಿದ್ದೇವೆ.
ಪರಿಶೀಲಿಸದ ಅಥವಾ ಮಾಡರೇಟ್ ಮಾಡದೆ ಇರುವ ವಿಷಯ ಪರಿಶೀಲಿತವಾಗದೆ ಅಗಾಧವಾಗಿ ಹರಡುವುದಕ್ಕೆ ನಮ್ಮ ವೇದಿಕೆಯ ನೀತಿಗಳು ಮತ್ತು ಸಂರಚನೆಯು ಅವಕಾಶಗಳನ್ನು ಮಿತಿಗೊಳಿಸುತ್ತದೆ. ಬದಲಾಗಿ, ಬೃಹತ್ ಪ್ರಮಾಣದ ಪ್ರೇಕ್ಷಕರಿಗೆ ಅದನ್ನು ತಲುಪಿಸುವ ಮೊದಲು ನಾವು ವಿಷಯವನ್ನು ಮುಂಚಿತವಾಗಿ ಪರಿಶೀಲಿಸಿ ಸುಸಂಗತಗೊಳಿಸುತ್ತೇವೆ, ಹಾಗೂ ವಿಶ್ವಾಸಾರ್ಹ ಪ್ರಕಾಶಕರು ಮತ್ತು ರಚನಾಕಾರರಿಂದ (ಉದಾಹರಣೆಗಾಗಿ, US ನಲ್ಲಿನ ದಿ ವಾಲ್‌ ಸ್ಟ್ರೀಟ್ ಜರ್ನಲ್ ಮತ್ತು ದಿ ವಾಷಿಂಗ್ಟನ್ ಪೋಸ್ಟ್, ಫ್ರಾನ್ಸ್‌ನಲ್ಲಿನ ಲ ಮೊಂಡೆ ಹಾಗೂ ಭಾರತದಲ್ಲಿನ ಟೈಮ್ಸ್ ನೌ ಸೇರಿದಂತೆ) ಪಡೆಯುವ ವಿಷಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸುದ್ದಿ ಮತ್ತು ರಾಜಕೀಯದ ಮಾಹಿತಿಯ ವಿತರಣೆಯನ್ನು ವಿಸ್ತೃತವಾಗಿ ಮಿತಗೊಳಿಸುತ್ತೇವೆ. 

ಕಳೆದ ವರ್ಷದಲ್ಲಿ, Snapchat ನಲ್ಲಿ ಜನರೇಟಿವ್ AI ವೈಶಿಷ್ಟ್ಯಗಳ ಬಿಡುಗಡೆ ಕೂಡ ಅದೇ ಮಟ್ಟದ ಉದ್ದೇಶದೊಂದಿಗೆ ಮಿತಿಗೊಳಿಸಲಾಗಿದೆ. ನಾಗರಿಕ ಪ್ರಕ್ರಿಯೆಗಳನ್ನು ಕಡೆಗಣಿಸಲು ಅಥವಾ ಮತದಾರರನ್ನು ವಂಚಿಸಲು ಬಳಸಬಹುದಾದ ವಿಷಯ ಅಥವಾ ಚಿತ್ರಣವನ್ನು ರಚಿಸುವ ನಮ್ಮ AI ಉತ್ಪನ್ನದ ಸಾಮರ್ಥ್ಯಗಳನ್ನು ನಾವು ಮಿತಿಗೊಳಿಸುತ್ತೇವೆ. ಉದಾಹರಣೆಗೆ, ನಮ್ಮ ಚಾಟ್‌ಬಾಟ್ My AI ರಾಜಕೀಯ ಘಟನೆಗಳ ಕುರಿತ ಮಾಹಿತಿಯನ್ನು ಅಥವಾ ಸಾಮಾಜಿಕ ಸಮಸ್ಯೆಗಳ ಸುತ್ತಲಿನ ಸನ್ನಿವೇಶವನ್ನು ಒದಗಿಸಬಹುದು; ರಾಜಕೀಯ ಅಭ್ಯರ್ಥಿಗಳ ಕುರಿತು ಅಭಿಪ್ರಾಯಗಳನ್ನು ಒದಗಿಸದಂತೆ ಅಥವಾ ನಿರ್ದಿಷ್ಟ ಫಲಿತಾಂಶಕ್ಕಾಗಿ ಮತದಾನ ಮಾಡಲು Snapchatter ಗಳನ್ನು ಪ್ರೋತ್ಸಾಹಿಸದಂತೆ ಅದನ್ನು ಪ್ರೋಗ್ರಾಂ ಮಾಡಲಾಗಿದೆ. ಮತ್ತು ನಮ್ಮ ಪಠ್ಯದಿಂದ ಚಿತ್ರ ವೈಶಿಷ್ಟ್ಯಗಳಲ್ಲಿ, ಪರಿಚಿತ ರಾಜಕೀಯ ವ್ಯಕ್ತಿಗಳ ಸಾಮ್ಯತೆ ಸೇರಿದಂತೆ, ಅಪಾಯಕಾರಿ ವಿಷಯ ವರ್ಗಗಳ ಉತ್ಪಾದನೆಯ ಮೇಲೆ ನಾವು ಸಿಸ್ಟಂ-ಮಟ್ಟದ ನಿರ್ಬಂಧಗಳನ್ನು ಅಳವಡಿಸಿಕೊಂಡಿದ್ದೇವೆ. 

ಈಗ ಒಂದು ದಶಕಕ್ಕಿಂತ ಹೆಚ್ಚು ಸಮಯದಿಂದ ಮತ್ತು ಬಹು ಚುನಾವಣೆಗಳಾದ್ಯಂತ, ನಾಗರಿಕ ಪ್ರಕ್ರಿಯೆಗಳಿಗೆ ಅಡ್ಡಿಪಡಿಸಲು ಅಥವಾ ಮಾಹಿತಿ ವಾತಾವರಣವನ್ನು ಕಡೆಗಣಿಸಲು ಕೆಲಸ ಮಾಡುತ್ತಿರುವ ವ್ಯಕ್ತಿಗಳಿಗಾಗಿ ಆಶ್ರಯ ಕಲ್ಪಿಸದಿರುವ ವಾತಾವರಣವನ್ನು ಸೃಷ್ಟಿಸುವಲ್ಲಿ ನಮ್ಮ ಉತ್ಪನ್ನ ಸಂರಚನೆಯು ಕೇಂದ್ರ ಭೂಮಿಕೆಯನ್ನು ವಹಿಸಿದೆ. ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಾಕ್ಷ್ಯಗಳು ಸೂಚಿಸುತ್ತವೆ. ಜನವರಿ 1 ರಿಂದ ಜೂನ್ 30, 2023 ರವರೆಗೆ, ಹಾನಿಕಾರಕ ಸುಳ್ಳು ಮಾಹಿತಿಗಾಗಿ ಜಾಗತಿಕವಾಗಿ ಕ್ರಮ ಜರುಗಿಸಿದ ಪ್ರಕರಣಗಳ ಒಟ್ಟು ಸಂಖ್ಯೆ (ಚುನಾವಣಾ ಸಮಗ್ರತೆಗೆ ಅಪಾಯ ಸೇರಿದಂತೆ) ಒಟ್ಟಾರೆ ಕ್ರಮ ಜರುಗಿಸಿದ ವಿಷಯದ 0.0038% ಆಗಿದ್ದು, ನಮ್ಮ ವೇದಿಕೆಯಲ್ಲಿ ಹಾನಿಯ ಅತಿ ಕಡಿಮೆ ಸಾಧ್ಯತೆಯ ವರ್ಗಗಳ ಅಡಿಯಲ್ಲಿ ಬರುತ್ತದೆ ಎನ್ನುವುದನ್ನು ನಮ್ಮ ಅತ್ಯಂತ ಇತ್ತೀಚಿನ ಡೇಟಾವು ಸೂಚಿಸುತ್ತದೆ.

2024 ರಲ್ಲಿ 2024 ರ ಚುನಾವಣೆಗಳಲ್ಲಿ AI ನ ವಂಚನೆಯ ಬಳಕೆಯ ವಿರುದ್ಧ ಹೋರಾಡಲು ತಂತ್ರಜ್ಞಾನ ಒಪ್ಪಂದಕ್ಕೆ ಸಹಿದಾರರಾಗಿ, ನಮ್ಮ ವೇದಿಕೆ ಸಮಗ್ರತೆ ಪ್ರಯತ್ನಗಳಿಗೆ ಉತ್ಪನ್ನ ಮುನ್ನಡೆ ವಿಧಾನವನ್ನು ತರುವುದನ್ನು ನಾವು ಮುಂದುವರಿಸಲಿದ್ದೇವೆ.

2. ಸ್ಪಷ್ಟ ಮತ್ತು ವಿಚಾರಪೂರ್ಣ ನೀತಿಗಳು

ನಮ್ಮ ಉತ್ಪನ್ನ ಸುರಕ್ಷತಾ ಕ್ರಮಗಳಿಗೆ ಪೂರಕವಾಗಿ, ಚುನಾವಣೆಯಂತಹ ಉನ್ನತ ಮಟ್ಟದ ಕಾರ್ಯಕ್ರಮಗಳ ಸನ್ನಿವೇಶದಲ್ಲಿ ಸುರಕ್ಷತೆ ಮತ್ತು ಸಮಗ್ರತೆಯನ್ನು ಮುನ್ನಡೆಸಲು ಕಾರ್ಯನಿರ್ವಹಿಸುವ ನೀತಿಗಳ ಶ್ರೇಣಿಯನ್ನು ನಾವು ಅನುಷ್ಠಾನಗೊಳಿಸಿದ್ದೇವೆ. ಉದಾಹರಣೆಗೆ, ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಹಾನಿಕಾರಕ ಸುಳ್ಳು ಮಾಹಿತಿ, ದ್ವೇಷ ಭಾಷಣ ಮತ್ತು ಬೆದರಿಕೆಗಳು ಅಥವಾ ಹಿಂಸೆಗೆ ಕರೆ ನೀಡುವುದನ್ನು ಸುಸ್ಪಷ್ಟವಾಗಿ ನಿಷೇಧಿಸುತ್ತವೆ. 

ಚುನಾವಣೆಗೆ ಸಂಬಂಧಿಸಿದ ಹಾನಿಕಾರಕ ವಿಷಯಕ್ಕೆ ಸಂಬಂಧಿಸಿದಂತೆ, ನಮ್ಮ ಬಾಹ್ಯ ನೀತಿಗಳು ಸದೃಢವಾಗಿವೆ ಮತ್ತು ಮಾಹಿತಿ ಸಮಗ್ರತೆಯ ಕ್ಷೇತ್ರದಲ್ಲಿನ ಪ್ರಮುಖ ಸಂಶೋಧಕರಿಂದ ಮಾಹಿತಿ ಪಡೆಯುತ್ತಿವೆ. ಅವು ನಿಷೇಧಿಸಿರುವ ಹಾನಿಕಾರಕ ವಿಷಯದ ನಿರ್ದಿಷ್ಟ ವರ್ಗಗಳನ್ನು ವಿವರಿಸುತ್ತವೆ, ಈ ಕೆಳಗಿನವು ಸೇರಿದಂತೆ:

  • ಕಾರ್ಯವಿಧಾನದ ಹಸ್ತಕ್ಷೇಪ: ಪ್ರಮುಖ ದಿನಾಂಕಗಳು ಮತ್ತು ಸಮಯ ಅಥವಾ ಭಾಗವಹಿಸುವಿಕೆಗೆ ಅರ್ಹತೆಯ ಅಗತ್ಯಗಳಂತಹ ನೈಜ ಚುನಾವಣೆ ಅಥವಾ ನಾಗರಿಕ ಕಾರ್ಯವಿಧಾನಗಳಿಗೆ ಸಂಬಂಧಿಸಿದ ತಪ್ಪುಮಾಹಿತಿ;

  • ಭಾಗವಹಿಸುವಿಕೆಯ ಹಸ್ತಕ್ಷೇಪ: ಚುನಾವಣೆಯಲ್ಲಿ ಅಥವಾ ನಾಗರಿಕ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆಯನ್ನು ತಡೆಯಲು ವೈಯಕ್ತಿಕ ಸುರಕ್ಷತೆಗೆ ಬೆದರಿಕೆಯೊಡ್ಡುವ ಅಥವಾ ವದಂತಿಗಳನ್ನು ಹರಡುವುದನ್ನು ಒಳಗೊಂಡಿರುವ ವಿಷಯ;

  • ವಂಚನೆಯ ಅಥವಾ ಕಾನೂನುಬಾಹಿರ ಭಾಗವಹಿಸುವಿಕೆ: ಒಂದು ನಾಗರಿಕ ಪ್ರಕ್ರಿಯೆಯಲ್ಲಿ ಭಾಗವಹಿಸಲು ತಮ್ಮನ್ನು ತಪ್ಪಾಗಿ ಪ್ರತಿನಿಧಿಸಿಕೊಳ್ಳಲು ಅಥವಾ ಅಕ್ರಮವಾಗಿ ಮತ ಚಲಾಯಿಸಲು ಅಥವಾ ಮತಪತ್ರ ನಾಶಪಡಿಸಲು ಜನರನ್ನು ಪ್ರೋತ್ಸಾಹಿಸುವ ವಿಷಯ; ಮತ್ತು

  • ನಾಗರಿಕ ಪ್ರಕ್ರಿಯೆಗಳ ಅಮಾನ್ಯಗೊಳಿಸುವಿಕೆ: ಉದಾಹರಣೆಗೆ, ಚುನಾವಣಾ ಫಲಿತಾಂಶಗಳ ಕುರಿತು ಸುಳ್ಳು ಅಥವಾ ದಾರಿತಪ್ಪಿಸುವ ದಾವೆಗಳ ಆಧಾರದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಯನ್ನು ಅಮಾನ್ಯಗೊಳಿಸುವ ಉದ್ದೇಶದ ವಿಷಯ.

ದ್ವೇಷ ಭಾಷಣ, ಸ್ತ್ರೀದ್ವೇಷ, ಗುರಿಯಾಗಿಸಿದ ಕಿರುಕುಳ ಅಥವಾ ಸೋಗುಹಾಕುವಿಕೆ ಸೇರಿದಂತೆ, ಹಾನಿಯ ಇತರ ವರ್ಗಗಳೊಂದಿಗೆ ಚುನಾವಣಾ ಅಪಾಯಗಳು ಸಾಮಾನ್ಯವಾಗಿ ಸಂಧಿಸುವ ವಿಧಾನಗಳನ್ನು ನಮ್ಮ ಮಾಡರೇಷನ್ ತಂಡವು ಅರ್ಥಮಾಡಿಕೊಂಡಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಆಂತರಿಕ ಮಾರ್ಗದರ್ಶನವನ್ನು ಕೂಡ ಒದಗಿಸುತ್ತೇವೆ.

ನಮ್ಮ ಎಲ್ಲ ನೀತಿಗಳು ನಮ್ಮ ವೇದಿಕೆಯಲ್ಲಿನ ಯಾವುದೇ ಸ್ವರೂಪದ ವಿಷಯಕ್ಕೆ, ಅದು ಬಳಕೆದಾರ ರಚಿಸಿದ್ದಾಗಿರಲಿ ಅಥವಾ AI ರಚಿಸಿದ್ದಾಗಿರಲಿ, ಎಲ್ಲವಕ್ಕೂ ಅನ್ವಯಿಸುತ್ತವೆ. 1 ಅವರ ಪ್ರಾಮುಖ್ಯತೆಯನ್ನು ಪರಿಗಣಿಸದೆ ಎಲ್ಲ ನೀತಿಗಳು ಎಲ್ಲ Snapchatter ಗಳಿಗೆ ಸಮಾನವಾಗಿ ಅನ್ವಯಿಸುತ್ತವೆ ಎನ್ನುವುದನ್ನು ಕೂಡ ನಾವು ಖಚಿತಪಡಿಸಿಕೊಳ್ಳುತ್ತೇವೆ. ಎಲ್ಲ ಪ್ರಕರಣಗಳಲ್ಲಿ, ಹಾನಿಕಾರಕ ವಂಚನೆಯ ವಿಷಯಕ್ಕೆ ನಮ್ಮ ವಿಧಾನವು ನೇರವಾಗಿದೆ: ನಾವು ಅದನ್ನು ತೆಗೆದುಹಾಕುತ್ತೇವೆ. ಅದಕ್ಕೆ ನಾವು ಶೀರ್ಷಿಕೆ ನೀಡುವುದಿಲ್ಲ, ಅದನ್ನು ನಾವು ಕಡಿಮೆ ಕೆಳಮಟ್ಟಕ್ಕಿಳಿಸುವುದಿಲ್ಲ; ನಾವು ಅದನ್ನು ತೆಗೆದುಹಾಕುತ್ತೇವೆ. ನಮ್ಮ ವಿಷಯ ನಿಯಮಗಳನ್ನು ಉಲ್ಲಂಘಿಸುವ Snapchatter ಗಳು ಒಂದು ಅಡ್ಡಗೆರೆ ಮತ್ತು ಎಚ್ಚರಿಕೆ ಸಂದೇಶವನ್ನು ಸ್ವೀಕರಿಸುತ್ತಾರೆ; ಅವರು ಅಂತಹ ಉಲ್ಲಂಘನೆಗಳನ್ನು ಮುಂದುವರಿಸಿದರೆ, ಅವರು ತಮ್ಮ ಖಾತೆ ಸವಲತ್ತುಗಳನ್ನು ಕಳೆದುಕೊಳ್ಳಬಹುದು (ಅದಾಗ್ಯೂ ಎಲ್ಲ Snapchatter ಗಳಿಗೆ ನಮ್ಮ ಕ್ರಮ ಜಾರಿಗೊಳಿಸುವಿಕೆ ನಿರ್ಧಾರ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಸ ನೀಡಲಾಗುತ್ತದೆ). 

3. ರಾಜಕೀಯ ಜಾಹೀರಾತುಗಳಿಗೆ ಕಾರ್ಯನಿಷ್ಠೆಯ ವಿಧಾನ

ಪ್ರಜಾಪ್ರಭುತ್ವದ ಚುನಾವಣೆಗಳಿಗೆ ಸಂಬಂಧಿಸಿ ರಾಜಕೀಯ ಜಾಹೀರಾತು ನೀಡುವಿಕೆಗೆ ಅನುಮತಿ ನೀಡುವ ವೇದಿಕೆಯಾಗಿ, ಚುನಾವಣೆಯ ಸಮಗ್ರತೆಗೆ ಅಪಾಯಗಳನ್ನು ನಿವಾರಿಸಲು ನಾವು ಕಠಿಣ ಅಭ್ಯಾಸಗಳನ್ನು ಅಳವಡಿಸಲು ಕಾಳಜಿ ವಹಿಸಿದ್ದೇವೆ. ಅತ್ಯಂತ ಗಮನಾರ್ಹವಾಗಿ, Snapchat ನಲ್ಲಿ ಪ್ರತಿ ರಾಜಕೀಯ ಜಾಹೀರಾತನ್ನು ಮಾನವರಿಂದ ಪರಿಶೀಲಿಸಲಾಗುತ್ತದೆ ಮತ್ತು ನಮ್ಮ ವೇದಿಕೆಯಲ್ಲಿ ಅದನ್ನು ಇರಿಸುವುದಕ್ಕೆ ಅರ್ಹವಾಗುವುದಕ್ಕೆ ಮುನ್ನ ಅದರ ವಾಸ್ತವಾಂಶ ಪರಿಶೀಲಿಸಲಾಗುತ್ತದೆ. ಈ ಪ್ರಯತ್ನಗಳಿಗೆ ಬೆಂಬಲವಾಗಿ, ಜಾಹೀರಾತುದಾರರ ದಾವೆಗಳನ್ನು ರುಜುವಾತುಪಡಿಸಬಹುದೇ ಎನ್ನುವ ಕುರಿತು ಸ್ವತಂತ್ರ, ಪಕ್ಷಪಾತರಹಿತ ಮೌಲ್ಯಮಾಪನಗಳನ್ನು ಒದಗಿಸಲು Poynter ಮತ್ತು ಇತರ ಅಂತಾರಾಷ್ಟ್ರೀಯ ವಾಸ್ತವಾಂಶ ಪರಿಶೀಲನೆ ನೆಟ್‌ವರ್ಕ್ ಸದಸ್ಯ ಸಂಘಟನೆಗಳೊಂದಿಗೆ ನಾವು ಅಗತ್ಯವಿರುವಂತೆ ಪಾಲುದಾರಿಕೆ ಮಾಡಿಕೊಳ್ಳುತ್ತೇವೆ. ರಾಜಕೀಯ ಜಾಹೀರಾತುಗಳಿಗೆ ನಮ್ಮ ವಿಮರ್ಶೆಯ ಪ್ರಕ್ರಿಯೆಯು ವಂಚನೆಯ ಚಿತ್ರಗಳು ಅಥವಾ ವಿಷಯವನ್ನು ರಚಿಸಲು AI ನ ಯಾವುದೇ ದಾರಿ ತಪ್ಪಿಸುವ ಬಳಕೆಗಾಗಿ ಸಮಗ್ರ ಪರಿಶೀಲನೆಯನ್ನು ಒಳಗೊಂಡಿರುತ್ತದೆ.

ಪಾರದರ್ಶಕತೆಯನ್ನು ಬೆಂಬಲಿಸಲು, ಒಂದು ಜಾಹೀರಾತು ಅದಕ್ಕೆ ಪಾವತಿ ಮಾಡಿದವರು ಯಾರು ಎನ್ನುವುದನ್ನು ಸ್ಪಷ್ಟವಾಗಿ ಬಹಿರಂಗಪಡಿಸಬೇಕು. ಮತ್ತು ನಮ್ಮ ರಾಜಕೀಯ ಜಾಹೀರಾತು ನೀತಿಗಳ ಅಡಿಯಲ್ಲಿ, ವಿದೇಶಿ ಸರ್ಕಾರಗಳು ಅಥವಾ ಚುನಾವಣೆ ನಡೆಯುತ್ತಿರುವ ಸ್ಥಳದ ಹೊರಗಿನ ದೇಶದಲ್ಲಿನ ಇರುವ ವ್ಯಕ್ತಿಗಳು ಅಥವಾ ಘಟಕಗಳು ಜಾಹೀರಾತುಗಳಿಗೆ ಪಾವತಿ ಮಾಡಲು ನಾವು ಅವಕಾಶ ನೀಡುವುದಿಲ್ಲ. ಯಾವ ರಾಜಕೀಯ ಜಾಹೀರಾತುಗಳನ್ನು ಪ್ರಸಾರ ಮಾಡಲು ಅನುಮೋದಿಸಲಾಗಿದೆ ಎಂದು ನೋಡುವುದು ಸಾರ್ವಜನಿಕ ಹಿತಾಸಕ್ತಿಯ ವಿಷಯವಾಗಿದೆ ಎಂದು ನಾವು ನಂಬಿದ್ದೇವೆ ಮತ್ತು ಗುರಿಯಾಗಿಸುವಿಕೆ, ವೆಚ್ಚಗಳು ಮತ್ತು ಇತರ ಒಳನೋಟಗಳ ಕುರಿತ ಮಾಹಿತಿಯನ್ನು ಒಳಗೊಂಡ ರಾಜಕೀಯ ಜಾಹೀರಾತುಗಳ ಲೈಬ್ರರಿಯನ್ನು ನಾವು ಇರಿಸಿಕೊಂಡಿದ್ದೇವೆ.  

ಈ ಎಲ್ಲ ಪ್ರಕ್ರಿಯೆಗಳೊಂದಿಗೆ ಅನುಸರಣೆಯನ್ನು ಖಚಿತಪಡಿಸಲು, ನಮ್ಮ ವಾಣಿಜ್ಯ ವಿಷಯ ನೀತಿಗಳು ಸಾಂಪ್ರದಾಯಿಕ ಜಾಹೀರಾತು ಫಾರ್ಮ್ಯಾಟ್‌ಗಳ ಹೊರಗೆ ಪಾವತಿಸಿದ ರಾಜಕೀಯ ವಿಷಯವನ್ನು ಪ್ರಚಾರ ಮಾಡದಂತೆ ಪ್ರಭಾವಿಗಳನ್ನು ತಡೆಯುತ್ತವೆ. ಇದು ಎಲ್ಲ ಪಾವತಿಸಿದ ರಾಜಕೀಯ ವಿಷಯವು ನಮ್ಮ ಜಾಹೀರಾತು ಪರಿಶೀಲನಾ ಅಭ್ಯಾಸಗಳು ಮತ್ತು ಹಕ್ಕುನಿರಾಕರಣೆ ಅಗತ್ಯಗಳಿಗೆ ಒಳಪಟ್ಟಿದೆ ಎನ್ನುವುದನ್ನು ಖಚಿತಪಡಿಸುತ್ತದೆ.

4. ಸಹಭಾಗಿತ್ವದ, ಸಮನ್ವಯದ ಕಾರ್ಯಾಚರಣೆಗಳು

Snap ನಲ್ಲಿ ನಮ್ಮ ಚುನಾವಣಾ ಸಮಗ್ರತೆ ಸುರಕ್ಷತಾ ಕ್ರಮಗಳನ್ನು ಕಾರ್ಯಾಚರಣೆಗೊಳಿಸಲು ನಾವು ಅತ್ಯಂತ ಸಹಭಾಗಿತ್ವದ ವಿಧಾನವನ್ನು ಅನುಸರಿಸುತ್ತೇವೆ. ಆಂತರಿಕವಾಗಿ, 2024 ರಲ್ಲಿ ವಿಶ್ವಾದ್ಯಂತ ಚುನಾವಣೆಗಳಿಗೆ ಸಂಬಂಧಿಸಿದಂತೆ ಎಲ್ಲ ಪ್ರಸ್ತುತ ಬೆಳವಣಿಗೆಗಳ ಮೇಲೆ ನಿಗಾ ಇರಿಸಲು ಸುಳ್ಳುಮಾಹಿತಿ, ರಾಜಕೀಯ ಜಾಹೀರಾತು ನೀಡುವಿಕೆ ಮತ್ತು ಸೈಬರ್ ಸುರಕ್ಷತೆ ತಜ್ಞರು ಸೇರಿದಂತೆ, ನಾವು ಒಂದು ವಿವಿಧ ಗುಂಪುಗಳ ಚುನಾವಣಾ ಸಮಗ್ರತೆ ತಂಡವನ್ನು ರಚಿಸಿದ್ದೇವೆ. ವಿಶ್ವಾಸ ಮತ್ತು ಸುರಕ್ಷತೆ, ವಿಷಯ ಮಾಡರೇಷನ್, ಎಂಜಿನಿಯರಿಂಗ್, ಉತ್ಪನ್ನ, ಕಾನೂನು, ನೀತಿ, ಗೌಪ್ಯತೆ ಕಾರ್ಯಾಚರಣೆಗಳು, ಭದ್ರತೆ ಮತ್ತು ಇತರವುಗಳಿಂದ ಪ್ರತಿನಿಧಿಗಳೊಂದಿಗೆ, ಈ ಗುಂಪಿನಲ್ಲಿ ಪ್ರಾತಿನಿಧ್ಯದ ವಿಸ್ತಾರವು ವೇದಿಕೆ ಸಮಗ್ರತೆಯನ್ನು ಸುರಕ್ಷಿತವಾಗಿಡಲು ನಾವು ತೆಗೆದುಕೊಳ್ಳುವ ಸಮಗ್ರ ಕಂಪನಿಯ ವಿಧಾನವನ್ನು ಪ್ರತಿಬಿಂಬಿಸುತ್ತದೆ.

ನಮ್ಮ ವಿಷಯ ಮಾಡರೇಷನ್ ಮತ್ತು ಜಾರಿಗೊಳಿಸುವಿಕೆಯಾದ್ಯಂತ, Snap ಕಾರ್ಯಾಚರಣೆ ಮಾಡುವ ಎಲ್ಲ ದೇಶಗಳೊಂದಿಗೆ ಅನುಗುಣವಾಗಿರಲು ಭಾಷೆಯ ಸಾಮರ್ಥ್ಯಗಳನ್ನು ನಿರ್ವಹಿಸುತ್ತೇವೆ. ಅಧಿಕ ಅಪಾಯದ ಜಾಗತಿಕ ಘಟನೆಗಳ ಸಂದರ್ಭದಲ್ಲಿ ಚುರುಕಾದ ಕಾರ್ಯಾಚರಣೆಯನ್ನು ಖಚಿತಪಡಿಸಲು, ನಾವು ಬಿಕ್ಕಟ್ಟು ಪ್ರತಿಕ್ರಿಯೆ ಪ್ರೊಟೋಕಾಲ್ ಅನ್ನು ಕೂಡ ಜಾರಿಗೊಳಿಸಿದ್ದೇವೆ.

ಈ ಸಮನ್ವಯದ ಮನೋಭಾವವು ಬಾಹ್ಯ ಸಹಯೋಗಗಳಿಗೂ ವಿಸ್ತರಿಸುತ್ತದೆ. ಸಲಹೆ, ಸಂಶೋಧನಾ ಒಳನೋಟಗಳನ್ನು ಪಡೆಯಲು ಮತ್ತು ಕಳವಳಗಳನ್ನು ಆಲಿಸಲು ಅಥವಾ ಘಟನೆಯ ದೂರನ್ನು ಸ್ವೀಕರಿಸಲು ನಾವು ನಿಯಮಿತವಾಗಿ ಪ್ರಜಾಪ್ರಭುತ್ವ ಪಾಲುದಾರರು ಮತ್ತು ನಾಗರಿಕ ಸಮಾಜದ ಸಂಘಟನೆಗಳೊಂದಿಗೆ ತೊಡಗಿಕೊಳ್ಳುತ್ತೇವೆ. (ಈ ಉದ್ದೇಶಗಳಿಗಾಗಿ ನಿಮ್ಮ ಪತ್ರಕ್ಕೆ ಸಹಿ ಮಾಡಿದ ಹಲವರು ನಮ್ಮ ಮೌಲ್ಯಯುತ ಪಾಲುದಾರರಾಗಿ ಉಳಿದಿದ್ದಾರೆ.) ವೇದಿಕೆ ಸಮಗ್ರತೆಯ ನಮ್ಮ ವಿಧಾನದ ಕುರಿತು ನಾವು ಆಗಾಗ್ಗೆ ಸರ್ಕಾರಗಳು ಮತ್ತು ಚುನಾವಣಾ ಅಧಿಕಾರಿಗಳಿಗೆ ಸಂಕ್ಷಿಪ್ತ ವಿವರ ನೀಡುತ್ತೇವೆ. ನಾವು ಬಹು ಪಾಲುದಾರರ ಉಪಕ್ರಮಗಳಲ್ಲಿಯೂ ಸಹ ಭಾಗವಹಿಸುತ್ತೇವೆ, ಉದಾಹರಣೆಗೆ, ಈ ವರ್ಷ ನಾವು ಮಾಡಿದಂತೆ, ತಂತ್ರಜ್ಞಾನ ಕಂಪನಿಗಳಿಗಾಗಿ ಐಚ್ಛಿಕ ಚುನಾವಣಾ ಸಮಗ್ರತೆ ಮಾರ್ಗಸೂಚಿಗಳನ್ನು ರೂಪಿಸಲು ಸಹಾಯ ಮಾಡುವುದಕ್ಕಾಗಿ ನಾಗರಿಕ ಸಮಾಜ, ಚುನಾವಣಾ ಅಧಿಕಾರಿಗಳು ಮತ್ತು ಸಹ ಉದ್ಯಮ ಪಾಲುದಾರರ ಜೊತೆ ಕೆಲಸ ಮಾಡುವುದು. ಮತ್ತು ನಾಗರಿಕ ಪ್ರಕ್ರಿಯೆಗಳಿಗೆ ಡಿಜಿಟಲ್ ಅಪಾಯಗಳನ್ನು ನಿವಾರಿಸುವುದನ್ನು ಬೆಂಬಲಿಸುವಲ್ಲಿ ಎಲ್ಲ ಪಾಲುದಾರರೊಂದಿಗೆ ರಚನಾತ್ಮಕವಾಗಿ ತೊಡಗಿಕೊಳ್ಳಲು ಹೆಚ್ಚುವರಿ ಅವಕಾಶಗಳನ್ನು ನಾವು ಸ್ವಾಗತಿಸುತ್ತೇವೆ. 

5. Snapchatter ಗಳನ್ನು ಸಬಲಗೊಳಿಸಲು ಟೂಲ್‌ಗಳು ಮತ್ತು ಸಂಪನ್ಮೂಲಗಳನ್ನು ಒದಗಿಸುವುದು

Snap ನಲ್ಲಿ, ನಾಗರಿಕ ತೊಡಗಿಕೊಳ್ಳುವಿಕೆಯು ಸ್ವಯಂ-ಅಭಿವ್ಯಕ್ತಿಯ ಅತ್ಯಂತ ಶಕ್ತಿಶಾಲಿ ಸ್ವರೂಪಗಳಲ್ಲಿ ಒಂದಾಗಿದೆ ಎಂದು ನಾವು ಯಾವಾಗಲೂ ನಂಬಿದ್ದೇವೆ. ಜನರು ತಮ್ಮನ್ನು ಅಭಿವ್ಯಕ್ತಪಡಿಸಲು ನೆರವಾಗುವ ಮತ್ತು ಹೊಸ ಮತ್ತು ಮೊದಲ ಬಾರಿಯ ಮತದಾರರೊಂದಿಗೆ ಗಮನಾರ್ಹ ತಲುಪುವಿಕೆ ಹೊಂದಿರುವ ವೇದಿಕೆಯಾಗಿ, ತಮ್ಮ ಸ್ಥಳೀಯ ಚುನಾವಣೆಯಲ್ಲಿ ಅವರು ಎಲ್ಲಿ ಮತ್ತು ಹೇಗೆ ಮತದಾನ ಮಾಡಬಹುದು ಎನ್ನುವುದು ಸೇರಿದಂತೆ, ಸುದ್ದಿ ಮತ್ತು ಪ್ರಪಂಚದ ಘಟನೆಗಳ ಕುರಿತು ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಗೆ ಪ್ರವೇಶ ಪಡೆಯಲು ನಮ್ಮ ಸಮುದಾಯಕ್ಕೆ ಸಹಾಯ ಮಾಡುವುದನ್ನು ನಾವು ಆದ್ಯತೆಯಾಗಿಸಿಕೊಂಡಿದ್ದೇವೆ.

2024 ರಲ್ಲಿ, ವರ್ಷದುದ್ದಕ್ಕೂ ಸ್ಥಿರವಾಗಿದ್ದ ಮೂರು ಆಧಾರಸ್ತಂಭಗಳ ಮೇಲೆ ಈ ಪ್ರಯತ್ನಗಳು ಗಮನ ಕೇಂದ್ರೀಕರಿಸಲಿವೆ: 

  • ಶಿಕ್ಷಣ: Discover ನಲ್ಲಿ ನಮ್ಮ ವಿಷಯ ಮತ್ತು ಪ್ರತಿಭಾ ಪಾಲುದಾರಿಕೆಗಳ ಮೂಲಕ ಚುನಾವಣೆಗಳು, ಅಭ್ಯರ್ಥಿಗಳು ಮತ್ತು ಸಮಸ್ಯೆಗಳ ಕುರಿತು ವಾಸ್ತವಿಕ ಮತ್ತು ಪ್ರಸ್ತುತ ವಿಷಯವನ್ನು ಒದಗಿಸುವುದು.

  • ನೋಂದಣಿ: ತೃತೀಯ-ಪಕ್ಷದ ವಿಶ್ವಾಸಾರ್ಹ ನಾಗರಿಕ ಮೂಲಸೌಕರ್ಯವನ್ನು ಬಳಸಿಕೊಂಡು ಮತದಾನ ಮಾಡಲು ನೋಂದಾಯಿಸಿಕೊಳ್ಳುವಂತೆ Snapchatter ಗಳನ್ನು ಪ್ರೋತ್ಸಾಹಿಸುವುದು. 

  • ತೊಡಗಿಕೊಳ್ಳುವಿಕೆ: ನಾಗರಿಕ ಪ್ರಕ್ರಿಯೆಗಳ ಕುರಿತು ಆ್ಯಪ್‌ನಲ್ಲಿ ಉತ್ಸಾಹ ಮತ್ತು ಲವಲವಿಕೆಯನ್ನು ಸೃಷ್ಟಿಸುವುದು ಮತ್ತು ಮತದಾನಕ್ಕೆ ಮುಂಚೆ/ದಿನದಂದು ಮತದಾನ ಮಾಡುವಂತೆ Snapchatter ಗಳನ್ನು ಪ್ರೋತ್ಸಾಹಿಸುವುದು. 


ಈ ಯೋಜನೆಗಳಲ್ಲಿ ಹಲವು ಪ್ರಸ್ತುತ 2024 ಕ್ಕಾಗಿ ಕಾರ್ಯಪ್ರಗತಿಯ ಸ್ಥಿತಿಯಲ್ಲಿವೆ, ಆದರೆ ಮಾಹಿತಿ ಸಂಪನ್ಮೂಲಗಳೊಂದಿಗೆ Snapchatter ಗಳನ್ನು ಸಂಪರ್ಕಪಡಿಸುವುದಕ್ಕೆ ಸಂಬಂಧಿಸಿ ಹಲವಾರು ವರ್ಷಗಳಲ್ಲಿ ನಾವು ಪಡೆದ ಹಲವು ಯಶಸ್ಸುಗಳನ್ನು ಅವು ಇನ್ನಷ್ಟು ಹೆಚ್ಚಿಸಲಿವೆ.

ಸಮಾರೋಪ

ವಿಶ್ವಾದ್ಯಂತದ ಪ್ರಜಾಪ್ರಭುತ್ವಗಳು ಮತ್ತು ಶಕ್ತಿಶಾಲಿ ಹೊಸ ತಂತ್ರಜ್ಞಾನಗಳ ವೇಗವರ್ಧನೆ ಎರಡಕ್ಕೂ ಪರಿಣಾಮದ ಕ್ಷಣದಲ್ಲಿ, ತಮ್ಮ ಮೌಲ್ಯಗಳ ಕುರಿತು ವೇದಿಕೆಗಳು ಪಾರದರ್ಶಕವಾಗಿರುವುದು ಹಿಂದೆಂದಿಗಿಂತಲೂ ಮುಖ್ಯವಾಗಿದೆ. ಮತ್ತು ಈ ವಿಷಯಕ್ಕೆ ಸಂಬಂಧಿಸಿ, ನಮ್ಮ ಮೌಲ್ಯಗಳು ಇದಕ್ಕಿಂತ ಹೆಚ್ಚು ಸ್ಪಷ್ಟವಾಗಿರಲು ಸಾಧ್ಯವಿಲ್ಲ: ನಾಗರಿಕ ಪ್ರಕ್ರಿಯೆಗಳನ್ನು ಕಡೆಗಣಿಸಲು ಬೆದರಿಕೆ ಹಾಕುವ ಅಥವಾ Snapchatter ಗಳ ಸುರಕ್ಷತೆಗೆ ಅಪಾಯವನ್ನು ಒಡ್ಡುವ ನಮ್ಮ ವೇದಿಕೆಯ ಯಾವುದೇ ದುರ್ಬಳಕೆಯನ್ನು ನಾವು ತಿರಸ್ಕರಿಸುತ್ತೇವೆ.  ಇಂದಿನವರೆಗಿನ ನಮ್ಮ ದಾಖಲೆಯ ಕುರಿತು ನಾವು ಹೆಮ್ಮೆಪಡುತ್ತೇವೆ, ಆದರೆ ಚುನಾವಣಾ ಸಂಬಂಧಿತ ಅಪಾಯಗಳಿಗೆ ನಾವು ಜಾಗರೂಕರಾಗಿರಬೇಕು. ಆ ಕುರಿತಂತೆ, ಈ ವಿಷಯಗಳಿಗೆ ಸಂಬಂಧಿಸಿ ನಿಮ್ಮ ರಚನಾತ್ಮಕ ತೊಡಗಿಕೊಳ್ಳುವಿಕೆಗಾಗಿ ನಾವು ನಿಮಗೆ ಮತ್ತೊಮ್ಮೆ ಧನ್ಯವಾದ ಸಲ್ಲಿಸುತ್ತೇವೆ, 

ತಮ್ಮ ವಿಧೇಯ, 

ಕಿಪ್ ವೇನ್‌ಸ್ಕಾಟ್

ವೇದಿಕೆ ನೀತಿಯ ಮುಖ್ಯಸ್ಥ

ಸುದ್ದಿಗಳಿಗೆ ಹಿಂತಿರುಗಿ

1

Snapchat ನಲ್ಲಿ AI-ಜನರೇಟ್ ಮಾಡಿದ ಅಥವಾ AI-ವರ್ಧಿತ ವಿಷಯವನ್ನು ಹಂಚಿಕೊಳ್ಳುವುದು ನಮ್ಮ ನೀತಿಗಳಿಗೆ ವಿರುದ್ಧವಲ್ಲ ಮತ್ತು ಸ್ವಾಭಾವಿಕವಾಗಿ ಹಾನಿಕಾರಕ ಎಂದು ನಾವು ತಿಳಿದುಕೊಂಡಿರುವ ವಿಷಯ ಅಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಈಗ ಹಲವು ವರ್ಷಗಳಿಂದ, ವಿನೋದದ ಲೆನ್ಸ್‌ಗಳು ಮತ್ತು ಇತರ AR ಅನುಭವಗಳೊಂದಿಗೆ ಚಿತ್ರಣಗಳನ್ನು ಕುಶಲತೆಯಿಂದ ಬದಲಾಯಿಸುವುದರಲ್ಲಿ Snapchatter ಗಳು ಆನಂದ ಕಂಡುಕೊಂಡಿದ್ದಾರೆ ಮತ್ತು ತಮ್ಮನ್ನು ಸೃಜನಾತ್ಮಕವಾಗಿ ಅಭಿವ್ಯಕ್ತಿಪಡಿಸಲು ನಮ್ಮ ಸಮುದಾಯ ಬಳಸಬಹುದಾದ ವಿಧಾನಗಳ ಕುರಿತು ನಾವು ರೋಮಾಂಚಿತರಾಗಿದ್ದೇವೆ. ಅದಾಗ್ಯೂ, ವಿಷಯವು ಮೋಸದಾಯಕವಾಗಿದ್ದರೆ (ಅಥವಾ ಇಲ್ಲದಿದ್ದರೆ ಹಾನಿಕಾರಕವಾಗಿದ್ದರೆ), ಅದರ ಸೃಷ್ಟಿಯಲ್ಲಿ AI ತಂತ್ರಜ್ಞಾನ ವಹಿಸಿರಬಹುದಾದ ಪಾತ್ರದ ಮಟ್ಟವನ್ನು ಪರಿಗಣಿಸದೆ ಖಂಡಿತವಾಗಿ ನಾವು ಅದನ್ನು ತೆಗೆದುಹಾಕುತ್ತೇವೆ.

1

Snapchat ನಲ್ಲಿ AI-ಜನರೇಟ್ ಮಾಡಿದ ಅಥವಾ AI-ವರ್ಧಿತ ವಿಷಯವನ್ನು ಹಂಚಿಕೊಳ್ಳುವುದು ನಮ್ಮ ನೀತಿಗಳಿಗೆ ವಿರುದ್ಧವಲ್ಲ ಮತ್ತು ಸ್ವಾಭಾವಿಕವಾಗಿ ಹಾನಿಕಾರಕ ಎಂದು ನಾವು ತಿಳಿದುಕೊಂಡಿರುವ ವಿಷಯ ಅಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಈಗ ಹಲವು ವರ್ಷಗಳಿಂದ, ವಿನೋದದ ಲೆನ್ಸ್‌ಗಳು ಮತ್ತು ಇತರ AR ಅನುಭವಗಳೊಂದಿಗೆ ಚಿತ್ರಣಗಳನ್ನು ಕುಶಲತೆಯಿಂದ ಬದಲಾಯಿಸುವುದರಲ್ಲಿ Snapchatter ಗಳು ಆನಂದ ಕಂಡುಕೊಂಡಿದ್ದಾರೆ ಮತ್ತು ತಮ್ಮನ್ನು ಸೃಜನಾತ್ಮಕವಾಗಿ ಅಭಿವ್ಯಕ್ತಿಪಡಿಸಲು ನಮ್ಮ ಸಮುದಾಯ ಬಳಸಬಹುದಾದ ವಿಧಾನಗಳ ಕುರಿತು ನಾವು ರೋಮಾಂಚಿತರಾಗಿದ್ದೇವೆ. ಅದಾಗ್ಯೂ, ವಿಷಯವು ಮೋಸದಾಯಕವಾಗಿದ್ದರೆ (ಅಥವಾ ಇಲ್ಲದಿದ್ದರೆ ಹಾನಿಕಾರಕವಾಗಿದ್ದರೆ), ಅದರ ಸೃಷ್ಟಿಯಲ್ಲಿ AI ತಂತ್ರಜ್ಞಾನ ವಹಿಸಿರಬಹುದಾದ ಪಾತ್ರದ ಮಟ್ಟವನ್ನು ಪರಿಗಣಿಸದೆ ಖಂಡಿತವಾಗಿ ನಾವು ಅದನ್ನು ತೆಗೆದುಹಾಕುತ್ತೇವೆ.