ವಿಶ್ವ ದಯೆಯ ದಿನದಂದು ಗೌರವ ಮತ್ತು ಸಹಾನುಭೂತಿಯನ್ನು ಪ್ರದರ್ಶಿಸುವುದು
ನವೆಂಬರ್ 13, 2023
ವಿಶ್ವ ದಯೆಯ ದಿನದಂದು ಗೌರವ ಮತ್ತು ಸಹಾನುಭೂತಿಯನ್ನು ಪ್ರದರ್ಶಿಸುವುದು
ನವೆಂಬರ್ 13, 2023
ಇಂದು ವಿಶ್ವ ದಯೆಯ ದಿನವಾಗಿದೆ, ಮತ್ತು ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ – ನಮ್ಮ ಎಲ್ಲ ಸಂವಹನಗಳಲ್ಲಿ ಗೌರವ, ಸಹಾನುಭೂತಿ ಮತ್ತು ಅನುಕಂಪದೊಂದಿಗೆ ನಡೆದುಕೊಳ್ಳುವ ಮೂಲಕ ಸಕಾರಾತ್ಮಕ ವಿಚಾರಗಳು ಮತ್ತು ಕ್ರಮಗಳನ್ನು ಪ್ರೋತ್ಸಾಹಿಸಲು ಇದು ಅತ್ಯುತ್ತಮ ಸಂದರ್ಭವಾಗಿದೆ. ದಯೆ Snap ಕಂಪನಿಯ ಮೌಲ್ಯವಾಗಿದೆ. ಇದು ನಮ್ಮ ವ್ಯವಹಾರಕ್ಕೆ ಅವಶ್ಯಕವಾಗಿದೆ ಮತ್ತು ನಮ್ಮ ಸುರಕ್ಷತಾ ಕೆಲಸದಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಬೇಸರದ ವಿಷಯವೆಂದರೆ, ನಕಾರಾತ್ಮಕ ಅಥವಾ ಕರುಣೆಯಿಲ್ಲದ ನಡವಳಿಕೆಯೊಂದಿಗೆ ವಿವಿಧ ಆನ್‌ಲೈನ್ ಸುರಕ್ಷತೆಯ ಸಮಸ್ಯೆಗಳು ಆರಂಭವಾಗಬಹುದು.
ಒಂದು ಉದಾಹರಣೆ ಎಂದರೆ, ಪರಸ್ಪರ ಒಪ್ಪಿಗೆಯಿಲ್ಲದೆ ಆನ್‌ಲೈನ್‌ನಲ್ಲಿ ಖಾಸಗಿ ಚಿತ್ರಣಗಳ ಸೃಷ್ಟಿ ಮತ್ತು ಹಂಚಿಕೊಳ್ಳುವಿಕೆ — ಇದು ಪ್ಲ್ಯಾಟ್‌ಫಾರ್ಮ್‌ಗಳು ಮತ್ತು ಸೇವೆಗಳಾದ್ಯಂತ ದುರದೃಷ್ಟಕರ ಮತ್ತು ಬೆಳೆಯುತ್ತಿರುವ ಪ್ರವೃತ್ತಿಯಾಗಿದೆ.
StopNCII ನ ಹ್ಯಾಶ್ ಡೇಟಾಬೇಸ್ ಉಪಯೋಗಿಸಿಕೊಂಡು Snapchat ನಲ್ಲಿ ಒಪ್ಪಿಗೆಯಿಲ್ಲದ ಖಾಸಗಿ ಚಿತ್ರಣಗಳ (NCII) ಹರಡುವಿಕೆಯನ್ನು ತಡೆಗಟ್ಟಲು ಸಹಾಯ ಮಾಡುವುದಕ್ಕೆ Snap ಇತ್ತೀಚೆಗೆ SWGfL ನ StopNCII ಸಹಯೋಗದೊಂದಿಗೆ ಕೈಜೋಡಿಸಿದೆ. "ಹ್ಯಾಶ್-ಮ್ಯಾಚಿಂಗ್" ಎಂಬುದರ ಮೂಲಕ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯದ, ಕಾನೂನುಬಾಹಿರ ಚಿತ್ರಗಳು ಮತ್ತು ವೀಡಿಯೊಗಳ, ಪತ್ತೆ ಮಾಡುವಿಕೆ, ತೆಗೆದುಹಾಕುವಿಕೆ ಮತ್ತು ವರದಿ ಮಾಡುವಿಕೆಯ ನಮ್ಮ ದೀರ್ಘಕಾಲದ ಮತ್ತು ನಿರಂತರ ಕೆಲಸದ ರೀತಿಯಲ್ಲೇ, NCII ಚಿತ್ರಗಳ "ಹ್ಯಾಶ್"ಗಳಿಗೆ ಮೀಸಲಾದ ಡೇಟಾಬೇಸ್ ಅನ್ನು StopNCII ಒದಗಿಸುತ್ತದೆ. ಲಭ್ಯವಿರುವ ಚಿತ್ರಣಗಳನ್ನು ಈ ಹ್ಯಾಶ್‌ಗಳೊಂದಿಗೆ ಹೋಲಿಕೆ ಮಾಡಲು ಸ್ಕ್ಯಾನ್ ಮಾಡುವ ಮೂಲಕ, ಉಲ್ಲಂಘಿಸುವ ಚಿತ್ರಣಗಳ ಆನ್‌ಲೈನ್ ಹರಡುವಿಕೆಯನ್ನು ನಿಲ್ಲಿಸಲು ನಾವು ಸಹಾಯ ಮಾಡಬಹುದು ಮತ್ತು ತಮ್ಮ ಅತ್ಯಂತ ಖಾಸಗಿ ಮತ್ತು ವೈಯಕ್ತಿಕ ಡೇಟಾದ ಮೇಲೆ ಮರುನಿಯಂತ್ರಣ ಸಾಧಿಸುವ ಸಂತ್ರಸ್ತರ ಪ್ರಯತ್ನಗಳನ್ನು ಬೆಂಬಲಿಸಬಹುದು.
"ಒಪ್ಪಿಗೆಯಿಲ್ಲದೆ ಖಾಸಗಿ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವುದರ ವಿರುದ್ಧದ ಹೋರಾಟದಲ್ಲಿ StopNCII ನಲ್ಲಿ Snap ನಮ್ಮೊಂದಿಗೆ ಕೈಜೋಡಿಸುತ್ತಿರುವುದರ ಕುರಿತು ನಮಗೆ ಸಂತಸವಾಗಿದೆ" ಎಂದು UK ಮೂಲದ ಎನ್‌ಜಿಒ SWGfL ನ ಸಿಇಒ ಡೇವಿಡ್ ರೈಟ್ ಹೇಳಿದರು. "ಡಿಸೆಂಬರ್ 2021 ರಲ್ಲಿ ನಾವು ಲಾಂಚ್ ಮಾಡಿದಾಗಿನಿಂದ, ನಿಯಂತ್ರಣವನ್ನು ಮರುಪಡೆಯಲು ಮತ್ತು ಅವರ ಭಯವನ್ನು ದೂರವಾಗಿಸಿಕೊಳ್ಳಲು ನಾವು ಸಂತ್ರಸ್ತರನ್ನು ಸಬಲಗೊಳಿಸಿದ್ದೇವೆ. ನಮ್ಮ ಯಶಸ್ಸು Snap ನಂತಹ ಪ್ಲ್ಯಾಟ್‌ಫಾರ್ಮ್ಸ್ ಜೊತೆಗಿನ ಸಹಯೋಗದ ಮೇಲೆ ಅವಲಂಬಿತವಾಗಿದೆ, ಏಕೆಂದರೆ ಜಾಗತಿಕವಾಗಿ ಹೆಚ್ಚಿನ ಭಾಗವಹಿಸುವಿಕೆಯು ಸಂತ್ರಸ್ತರಿಗೆ ಕಡಿಮೆ ಭಯಕ್ಕೆ ಕಾರಣವಾಗುತ್ತದೆ."
Snap NCII ಅನ್ನು ನಿರ್ಬಂಧಿಸುತ್ತದೆ ಮತ್ತು ಇದನ್ನು ನಮ್ಮ ಬೆದರಿಸುವಿಕೆ ಮತ್ತು ಕಿರುಕುಳ ವಿರೋಧಿ ನಿಯಮಗಳಲ್ಲಿ ಸ್ಪಷ್ಟವಾಗಿಸುತ್ತದೆ. ಈ ನಿಷೇಧಗಳು, ಲೈಂಗಿಕವಾಗಿ ಸುಸ್ಪಷ್ಟ, ಸೂಚ್ಯವಾದ ಅಥವಾ ನಗ್ನ ಚಿತ್ರಗಳನ್ನು ಇತರ ಬಳಕೆದಾರರಿಗೆ ಕಳುಹಿಸುವುದು ಸೇರಿದಂತೆ, "ಎಲ್ಲ ಸ್ವರೂಪದ ಲೈಂಗಿಕ ಕಿರುಕುಳಕ್ಕೆ" ವಿಸ್ತರಿಸುತ್ತವೆ ಎಂದು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಸ್ಪಷ್ಟವಾಗಿ ತಿಳಿಸುತ್ತದೆ. ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ಈ ವಿಷಯ ಅಥವಾ ನಡವಳಿಕೆಯನ್ನು ನಾವು ಬಯಸುವುದಿಲ್ಲ; ನೈಜ ಅಭಿವ್ಯಕ್ತಿಯ ಆನಂದದಲ್ಲಿ ಹಂಚಿಕೊಳ್ಳುವಿಕೆ ಮತ್ತು ಸಂತಸಪಡುವುದಕ್ಕಾಗಿ ತಾಣವಾಗಿರುವ Snapchat ನ ಗುರಿಯೊಂದಿಗೆ ಇದು ಹೊಂದಾಣಿಕೆಯಾಗುವುದಿಲ್ಲ. ಒಪ್ಪಿಗೆಯಿಲ್ಲದೆ ಖಾಸಗಿ ಚಿತ್ರಗಳ ಸೃಷ್ಟಿ, ಹಂಚಿಕೊಳ್ಳುವಿಕೆ ಅಥವಾ ವಿತರಣೆ ಸೇರಿದಂತೆ, ಒಂದು ವೇಳೆ ಯಾರಾದರೂ ನಮ್ಮ ನೀತಿಗಳ ಸಂಭಾವ್ಯ ಉಲ್ಲಂಘನೆಯನ್ನು ಅನುಭವಿಸುತ್ತಿದ್ದರೆ ಅಥವಾ ಕಾಣುತ್ತಿದ್ದರೆ, ತಕ್ಷಣವೇ ನಮಗೆ ಹಾಗೂ ಸಂಭಾವ್ಯತಃ ಸ್ಥಳೀಯ ಅಧಿಕಾರಿಗಳಿಗೂ ಕೂಡ ಅದನ್ನು ವರದಿ ಮಾಡುವಂತೆ ನಾವು ಅವರನ್ನು ಪ್ರೋತ್ಸಾಹಿಸುತ್ತೇವೆ.
ಹೊಸ Snap ಸಂಶೋಧನೆ
ಕೇವಲ Snapchat ನಲ್ಲಿ ಮಾತ್ರವಲ್ಲ — ಎಲ್ಲ ಪ್ಲ್ಯಾಟ್‌ಫಾರ್ಮ್ಸ್ ಮತ್ತು ಸೇವೆಗಳಾದ್ಯಂತ — ನಡೆಸಲಾದ ನಮ್ಮ ಇತ್ತೀಚಿನ ಸಂಶೋಧನೆಯು 18 ರಿಂದ 24 ವರ್ಷ ವಯಸ್ಸಿನ 54% ಯುವಜನರು, ಈ ವರ್ಷಾರಂಭದಲ್ಲಿ ಖಾಸಗಿ ಚಿತ್ರಗಳಿಗೆ ಎದುರಾದರು ಮತ್ತು ಶೇಕಡಾ ಮೂರನೇ ಒಂದು ಭಾಗಕ್ಕಿಂತ ಹೆಚ್ಚು (35%) ಜನರನ್ನು ಆನ್‌ಲೈನ್‌ನಲ್ಲಿ ಲೈಂಗಿಕ ಚಿತ್ರಗಳು ಅಥವಾ ವೀಡಿಯೊಗಳನ್ನು ಹಂಚಿಕೊಳ್ಳುವಂತೆ ಕೇಳಲಾಯಿತು ಎನ್ನುವುದನ್ನು ತೋರಿಸುತ್ತದೆ. ಸುಮಾರು ಅರ್ಧದಷ್ಟು (47%) ಮಂದಿ ತಾವು ಅನಪೇಕ್ಷಿತ ಲೈಂಗಿಕ ಚಿತ್ರಣಗಳನ್ನು ಸ್ವೀಕರಿಸಿದ್ದಾಗಿ ಹೇಳಿದರು ಮತ್ತು 16% ಅಂತಹ ಕಂಟೆಂಟ್ ಹಂಚಿಕೊಂಡಿದ್ದನ್ನು ಒಪ್ಪಿಕೊಂಡರು. ನಿಜವಾಗಿಯೂ ಅಂತಹ ಚಿತ್ರಣಗಳನ್ನು ಹಂಚಿಕೊಂಡವರು ತಮ್ಮ ನಡವಳಿಕೆಯನ್ನು ಕಡಿಮೆ ವರದಿ ಮಾಡಿರುವ ಸಾಧ್ಯತೆಯಿದೆ, ಏಕೆಂದರೆ ಖಾಸಗಿ ಚಿತ್ರಗಳು ಮತ್ತು ವೀಡಿಯೊಗಳನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದವರ ಪ್ರಮಾಣ ಅವುಗಳನ್ನು ಹಂಚಿಕೊಂಡಿದ್ದೇವೆ ಎಂದು ಹೇಳಿದವರ ಪ್ರಮಾಣಕ್ಕಿಂತ ಮೂರು ಪಟ್ಟಿದೆ.
ಈ ತಿಳುವಳಿಕೆಗಳು ಆರು ದೇಶಗಳಲ್ಲಿ ನಮ್ಮ ಎರಡನೇ ವರ್ಷದ Snap ಡಿಜಿಟಲ್ ಯೋಗಕ್ಷೇಮ ಸಂಶೋಧನೆಯಿಂದ ಪಡೆದುಕೊಂಡವಂತಹವು: ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಭಾರತ, UK ಮತ್ತು U.S. ಸತತವಾಗಿ ಎರಡನೇ ವರ್ಷ, ನಾವು ಹದಿಹರೆಯದವರು (13-17 ವರ್ಷ ), ಯುವಕರು (18-24 ವರ್ಷ) ಮತ್ತು 13 ಮತ್ತು 19 ವರ್ಷ ವಯಸ್ಸಿನ ನಡುವಿನ ಹದಿಹರೆಯದವರ ಪೋಷಕರನ್ನು ಅವರ ಆನ್‌ಲೈನ್ ಚಟುವಟಿಕೆಗಳ ಕುರಿತು ಸಮೀಕ್ಷೆ ಮಾಡಿದೆವು. ಸಮೀಕ್ಷೆಯು 2023 ರ ಏಪ್ರಿಲ್ 28 ರಿಂದ ಮೇ 23 ರವರೆಗೆ ನಡೆಯಿತು. ನಾವು ಒಟ್ಟು 9,010 ಭಾಗಿಗಳ ಅಭಿಪ್ರಾಯ ಸಂಗ್ರಹಿಸಿದೆವು ಮತ್ತು ಅವರ ಪ್ರತಿಕ್ರಿಯೆಗಳು ಸುಮಾರಾಗಿ ಫೆಬ್ರವರಿಯಿಂದ ಏಪ್ರಿಲ್‌ವರೆಗಿನ ಆನ್‌ಲೈನ್ ಅನುಭವಗಳ ಕುರಿತಾಗಿದ್ದವು. ಫೆಬ್ರವರಿಯಲ್ಲಿ 2024 ರ ಸುರಕ್ಷಿತ ಇಂಟರ್‌ನೆಟ್ ದಿನದಂದು ನಾವು ಎಲ್ಲ ಜಾಗತಿಕ ತಿಳುವಳಿಕೆಯನ್ನು ಪ್ರಕಟಿಸಲಿದ್ದೇವೆ ಆದರೆ ವಿಶ್ವ ದಯೆಯ ದಿನದಂದು ಈ ಡೇಟಾವನ್ನು ಮುನ್ನೋಟ ಮಾಡುತ್ತಿದ್ದೇವೆ.
ಅವರು ಯಾರೊಂದಿಗೆ ಹಂಚಿಕೊಂಡರು
ಮೂಲತಃ ನೈಜ ಬದುಕಿನಲ್ಲಿ ತಮಗೆ ಪರಿಚಿತರಾಗಿರುವವರೊಂದಿಗೆ ಖಾಸಗಿ ಮತ್ತು ಲೈಂಗಿಕವಾಗಿ ಸೂಚ್ಯವಾದ ಚಿತ್ರಣಗಳನ್ನು ಹಂಚಿಕೊಂಡಿದ್ದಾಗಿ ಹದಿಹರೆಯದವರು ಮತ್ತು ಯುವಜನರು ಹೇಳಿದರು ಎನ್ನುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಆದರೆ, ನಮಗೆ ತಿಳಿದಿರುವಂತೆ, ಆ ಚಿತ್ರಣ ಉದ್ದೇಶಿತ ಸ್ವೀಕೃತಿದಾರನ ಆಚೆಗೆ ವೇಗವಾಗಿ ಹರಡಬಹುದು. ಖಾಸಗಿ ಚಿತ್ರಗಳಲ್ಲಿ ತೊಡಗಿಕೊಂಡಿದ್ದ ನವಪೀಳಿಗೆಯ 42% ಪ್ರತಿಕ್ರಿಯಾದಾರರಲ್ಲಿ (54% ಯುವಜನರು ಮತ್ತು 30% ಹದಿಹರೆಯದವರು), ಸುಮಾರು ಮುಕ್ಕಾಲು ಪಾಲು (73%) ಜನರು ನೈಜ ಬದುಕಿನಲ್ಲಿ ತಮಗೆ ಪರಿಚಿತರಾಗಿರುವವರಿಗೆ ತಾವು ಚಿತ್ರಣ ಕಳುಹಿಸಿದ್ದಾಗಿ ಹೇಳಿದರು, ಇದೇವೇಳೆ 44% ಜನರು ತಮಗೆ ಆನ್‌ಲೈನ್‌ನಲ್ಲಿ ಮಾತ್ರ ಪರಿಚಿತರಾಗಿದ್ದವರಿಗೆ ಖಾಸಗಿ ಚಿತ್ರಗಳು ಅಥವಾ ವೀಡಿಯೊಗಳನ್ನು ಕಳುಹಿಸಿದ್ದರು. ಮೂರನೇ ಒಂದು ಪಾಲಿನಷ್ಟು (33%) ಪ್ರಕರಣಗಳಲ್ಲಿ, ಚಿತ್ರಣ ಅಸಲಿ ಉದ್ದೇಶಿತ ಸ್ವೀಕೃತಿದಾರನ ಆಚೆಗೂ ಹಂಚಿಕೊಳ್ಳಲಾಗಿತ್ತು. ಆನ್‌ಲೈನ್ ಸಂಪರ್ಕಗಳ ಜೊತೆ ಹಂಚಿಕೊಂಡವರ ಫಲಿತಾಂಶಗಳನ್ನು ಕೆಳಗಿನ ಗ್ರಾಫ್ ವಿವರಿಸುತ್ತದೆ.
ಹಂಚಿಕೊಳ್ಳದೆ ಇರುವುದನ್ನು ಆಚರಿಸಿ
ನಮ್ಮ ಅಧ್ಯಯನದಲ್ಲಿ, ನಿರ್ಣಾಯಕ ಆಲೋಚನೆ ಮತ್ತು ಆತ್ಮವಿಮರ್ಶೆಯನ್ನು ಹುಟ್ಟುಹಾಕುವ ಆಶಯದಲ್ಲಿ, ಆನ್‌ಲೈನ್‌ನಲ್ಲಿ ಖಾಸಗಿ ಚಿತ್ರಣಗಳನ್ನು ಹಂಚಿಕೊಳ್ಳುವಂತೆ ಕೇಳಲಾದ ಆದರೆ ಹಾಗೆ ಮಾಡದ ಯುವಜನರ ಅನಿಸಿಕೆಗಳನ್ನು ಆಲಿಸಲು ನಾವು ನಿರ್ದಿಷ್ಟವಾಗಿ ಆಸಕ್ತರಾಗಿದ್ದೆವು. ಅವರ ಕಾರಣಗಳು ಹಲವಾರಿದ್ದವು, ಎರಡೂ ವಯೋ ಗುಂಪುಗಳು ಪ್ರಾಥಮಿಕವಾಗಿ ಹಂಚಿಕೊಳ್ಳುವಿಕೆ ತಮಗೆ ಆರಾಮದಾಯಕ ಅನ್ನಿಸುವುದಿಲ್ಲ ಎಂದರು. ಇದರ ಜೊತೆಗೆ, ತಮ್ಮ ಪೋಷಕರು ಅಥವಾ ಆರೈಕೆದಾರರು ಕಂಡುಹಿಡಿಯಬಹುದು ಎನ್ನುವ ಬಗ್ಗೆ ಹದಿಹರೆಯದವರು ಕಳವಳ ಹೊಂದಿದ್ದರು ಮತ್ತು 18 ರಿಂದ 24 ವರ್ಷ ವಯಸ್ಸಿನವರು ಅಂತಹ ಕೃತ್ಯಗಳು ಭವಿಷ್ಯದಲ್ಲಿ ಕಾಲೇಜಿಗೆ ಸೇರುವುದು ಅಥವಾ ಉದ್ಯೋಗ ಹುಡುಕುವುದು ಮುಂತಾದವುಗಳ ಮೇಲೆ ಪರಿಣಾಮ ಬೀರಬಹುದು ಎನ್ನುವ ಕುರಿತು ಹೆಚ್ಚು ಚಿಂತಿತರಾಗಿದ್ದರು. ಹಂಚಿಕೊಳ್ಳದೆ ಇರುವುದಕ್ಕೆ ಪ್ರತಿಕ್ರಿಯೆದಾರರು ನೀಡಿದ ಅಗ್ರ ಕಾರಣಗಳಿಗೆ ಸಂಬಂಧಿಸಿದ ಇನ್ನಷ್ಟು ವಿವರಗಳು:
ಈ ಚಿತ್ರಣ ಹಂಚಿಕೊಳ್ಳಲು ಆರಾಮದಾಯಕ ಅನ್ನಿಸುವುದಿಲ್ಲ: ಯುವ ಜನರು: 55%, ಹದಿಹರೆಯದವರು: 56%
ಚಿತ್ರಣ ಸಾರ್ವಜನಿಕವಾಗುವುದರ ಕುರಿತು ಚಿಂತೆ: ಯುವ ಜನರು: 27%, ಹದಿಹರೆಯದವರು: 25%
ಭವಿಷ್ಯದ ಸಂಭಾವ್ಯತೆಗಳ ಮೇಲೆ ಪರಿಣಾಮ ಬೀರಬಹುದು ಎಂಬ ಕಳವಳ (ಉದಾ., ಕಾಲೇಜಿಗೆ ಸೇರುವುದು, ಉದ್ಯೋಗಗಳು, ಸಂಬಂಧಗಳು): ಯುವ ಜನರು: 23%, ಹದಿಹರೆಯದವರು: 18%
ಉದ್ದೇಶಿತ ಸ್ವೀಕೃತಿದಾರನ ಆಚೆಗೆ ಚಿತ್ರಣ ತಲುಪಬಹುದು ಎಂಬ ಚಿಂತೆ: ಯುವ ಜನರು: 21%, ಹದಿಹರೆಯದವರು: 20%
ಪೋಷಕರು/ಪಾಲಕರು ಕಂಡುಹಿಡಿಯಬಹುದು ಎಂಬ ಚಿಂತೆ: ಯುವಜನರು: 12%, ಹದಿಹರೆಯದವರು: 20%
Snapchat ನ ಟೂಲ್‌ಗಳು ಮತ್ತು ಸಂಪನ್ಮೂಲಗಳು
ಅಪರಾಧಿಗಳನ್ನು ನಿರ್ಬಂಧಿಸಲು ಮತ್ತು ನಿರ್ದಿಷ್ಟ Snap ಗಳು (ಫೋಟೋಗಳು ಅಥವಾ ವೀಡಿಯೊಗಳು) ಮತ್ತು ಖಾತೆಗಳನ್ನು ವರದಿ ಮಾಡಲು ಬಳಕೆದಾರರಿಗಾಗಿ Snapchat ಆ್ಯಪ್‌ನಲ್ಲಿನ ಟೂಲ್‌ಗಳನ್ನು ಹೊಂದಿದೆ. Snapchatter ಗಳು ಒಂದು ಕಂಟೆಂಟ್ ತುಣುಕನ್ನು ನಮಗೆ ವರದಿ ಮಾಡಲು ಸರಳವಾಗಿ ಅದರ ಮೇಲೆ ಒತ್ತಿ ಹಿಡಿಯಬಹುದು ಅಥವಾ ನಮ್ಮ ಬೆಂಬಲ ಸೈಟ್‌ನಲ್ಲಿ ಈ ಆನ್‌ಲೈನ್ ಫಾರ್ಮ್ ಭರ್ತಿ ಮಾಡಬಹುದು. ಅವರು Snapchat ಅಕೌಂಟ್ ಹೊಂದಿದ್ದಾರೆಯೇ ಇಲ್ಲವೇ ಎನ್ನುವುದನ್ನು ಪರಿಗಣಿಸದೆ ಫಾರ್ಮ್ ಅನ್ನು ಯಾರು ಬೇಕಿದ್ದರೂ ಸಲ್ಲಿಸಬಹುದು. (Snapchat ನಲ್ಲಿ ವರದಿ ಮಾಡುವಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವ ಕುರಿತು ಇಲ್ಲಿ ಇನ್ನಷ್ಟು ತಿಳಿದುಕೊಳ್ಳಿ.) Snap ನ ವಿಶ್ವಾಸ ಮತ್ತು ಸುರಕ್ಷತೆ ತಂಡಗಳು ವರದಿಗಳನ್ನು ಪರಿಶೀಲಿಸುತ್ತವೆ ಮತ್ತು ಅದಕ್ಕೆ ಸಂಬಂಧಿಸಿ ಕ್ರಮ ತೆಗೆದುಕೊಳ್ಳುತ್ತವೆ, ಈ ತಂಡಗಳು ಜಾಗತಿಕವಾಗಿ 24/7 ಕೆಲಸ ಮಾಡುತ್ತವೆ. ಶಿಸ್ತುಕ್ರಮಗಳಲ್ಲಿ ಅಪರಾಧಿಗೆ ಎಚ್ಚರಿಕೆ ನೀಡುವುದು, ಖಾತೆಯನ್ನು ಅಮಾನತುಗೊಳಿಸುವುದು ಅಥವಾ ಖಾತೆಯನ್ನು ಸಂಪೂರ್ಣವಾಗಿ ಸಮಾಪ್ತಿಗೊಳಿಸುವುದು ಸೇರಿರಬಹುದು.
ನಮ್ಮ ಟೂಲ್‌ಗಳನ್ನು ಬಳಸಿಕೊಳ್ಳುವಂತೆ ಮತ್ತು ಹಾಗೆ ಮಾಡುವುದರಿಂದ ಸಂಪೂರ್ಣ ಸಮುದಾಯಕ್ಕೆ ಉಪಯೋಗವಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುವಂತೆ ನಾವು ಪ್ರತಿಯೊಬ್ಬರಿಗೂ ಒತ್ತಾಯಿಸುತ್ತೇವೆ. ಘಟನೆಗಳು ವರದಿ ಮಾಡುವಿಕೆ ಹಂತಕ್ಕೆ ತಲುಪಬಾರದು ಎಂದು ನಾವು ಬಯಸುತ್ತೇವೆ — ನಾವು StopNCII ನ ಭಾಗವಾಗಲು ಬಯಸಿದ್ದಕ್ಕೆ ಇದು ಇನ್ನೊಂದು ಕಾರಣ, ಆದರೆ ವರದಿ ಮಾಡುವಿಕೆಯು ಪ್ರಮುಖ ಉದ್ದೇಶವನ್ನು ಪೂರೈಸುತ್ತದೆ.
ಸೆಕ್ಸ್‌ಟಿಂಗ್ ಮತ್ತು ನಗ್ನ ಚಿತ್ರಗಳನ್ನು ಹಂಚಿಕೊಳ್ಳುವ ಕುರಿತ ನಮ್ಮ ಹೊಸ ಸುರಕ್ಷತಾ ಸ್ನ್ಯಾಪ್‌ಶಾಟ್ ಸಂಚಿಕೆ ಪರಿಶೀಲಿಸುವಂತೆ ಕೂಡ ನಾವು ಯುವಜನರು ಮತ್ತು ಎಲ್ಲ Snapchatter ಗಳಿಗೆ ಪ್ರೋತ್ಸಾಹಿಸುತ್ತೇವೆ. ಆ್ಯಪ್‌ನಲ್ಲಿ “ಸುರಕ್ಷತಾ ಸ್ನ್ಯಾಪ್‌ಶಾಟ್” ಹುಡುಕಿ. ವಿವಿಧ ಲೈಂಗಿಕ ಅಪಾಯಗಳ ಕುರಿತು ನಾವು ಇತ್ತೀಚೆಗೆ ಒಟ್ಟು ನಾಲ್ಕು ಹೊಸ ಸಂಚಿಕೆಗಳನ್ನು ಸೇರಿಸಿದ್ದೇವೆ. ಎಲ್ಲವನ್ನೂ ಕಾಣೆಯಾದವರು ಮತ್ತು ದೌರ್ಜನ್ಯಕ್ಕೊಳಗಾದ ಮಕ್ಕಳಿಗಾಗಿ U.S. ರಾಷ್ಟ್ರೀಯ ಕೇಂದ್ರವು ಪರಾಮರ್ಶಿಸಿದೆ ಹಾಗೂ ಅವು ಒಂದು ಕ್ಷಣ ವಿರಾಮ ತೆಗೆದುಕೊಳ್ಳುವುದು, ಒಬ್ಬರ ಪ್ರೇರಣೆಯನ್ನು ಪ್ರಶ್ನಿಸುವುದು ಮತ್ತು ನಿರ್ಣಾಯಕ ಆಲೋಚನೆಯನ್ನು ಎತ್ತಿ ತೋರಿಸುತ್ತವೆ.
ನಮ್ಮ ಸಂಶೋಧನೆಯ ಕುರಿತು ಹಾಗೂ ಸೃಜನಶೀಲತೆ ಮತ್ತು ಸಂಪರ್ಕಕ್ಕಾಗಿ Snapchat ಅನ್ನು ಹೆಚ್ಚು ಸುರಕ್ಷಿತ, ಹೆಚ್ಚು ಆರೋಗ್ಯಕರ ಮತ್ತು ಹೆಚ್ಚು ವಿನೋದಮಯ ವಾತಾವರಣವಾಗಿಸುವ ನಮ್ಮ ಜಾರಿಯಲ್ಲಿರುವ ಕೆಲಸದ ಕುರಿತು ಇನ್ನಷ್ಟು ಹಂಚಿಕೊಳ್ಳಲು ನಾವು ಎದುರು ನೋಡುತ್ತೇವೆ. ಅಲ್ಲಿಯವರೆಗೆ, ವಿಶ್ವ ದಯೆಯ ದಿನದ ಶುಭಾಶಯಗಳು ಮತ್ತು ಕೇವಲ ನವೆಂಬರ್ 13 ರಂದು ಮಾತ್ರವಲ್ಲ ವರ್ಷದುದ್ದಕ್ಕೂ ದಯಾಶೀಲರಾಗಿರುವ ಗುರಿ ಹಾಕಿಕೊಳ್ಳೋಣ.
- ಜಾಕ್ವೆಲಿನ್ ಬೌಚೆರೆ, Snap ಸುರಕ್ಷತಾ ಪ್ಲಾಟ್ಫಾರ್ಮ್ ನ ಜಾಗತಿಕ ಮುಖ್ಯಸ್ಥೆ