Snap & The Alliance to Prevent Drug Harms
July 11, 2024
Snap & The Alliance to Prevent Drug Harms
July 11, 2024
ಅಕ್ರಮ ಆನ್‌ಲೈನ್ ಮಾದಕ ಪದಾರ್ಥ ಚಟುವಟಿಕೆಯನ್ನು ನಿರ್ಮೂಲನೆ ಮಾಡಲು ಮತ್ತು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಕಡೆಯಲ್ಲಿ ಅರಿವು ಮೂಡಿಸುವ ಮತ್ತು ತಿಳುವಳಿಕೆ ನೀಡುವ ಪ್ರಯತ್ನಗಳನ್ನು ದ್ವಿಗುಣಗೊಳಿಸಲು ಗಮನ ಕೇಂದ್ರೀಕರಿಸಿರುವ ಒಂದು ಸರ್ಕಾರ ಮತ್ತು ಖಾಸಗಿ ಪಾಲುದಾರಿಕೆಯ ಪ್ರಯತ್ನವಾಗಿರುವ, ಮಾದಕ ಪದಾರ್ಥಗಳ ಹಾನಿಯನ್ನು ತಡೆಯುವ ಮೈತ್ರಿಕೂಟದ ಆರಂಭದ ಸಂದರ್ಭ ಸರ್ಕಾರ ಮತ್ತು ವಿಶ್ವ ಸಂಸ್ಥೆ (UN) ಜೊತೆಗೆ ಎರಡು ಸಹವರ್ತಿ ತಂತ್ರಜ್ಞಾನ ಕಂಪನಿಗಳ ಜೊತೆಗೂಡಿ ಕೈಜೋಡಿಸುತ್ತಿರುವುದಕ್ಕೆ ಇಂದು Snap ಹೆಮ್ಮೆ ಪಡುತ್ತದೆ.
ಇಂದು ಈ ಹಿಂದೆ ನ್ಯೂಯಾರ್ಕ್‌ನಲ್ಲಿ UN ಗೆ U.S. ನಿಯೋಗದ ಸಮಾರಂಭದಲ್ಲಿ, Snap, U.S. ವಿದೇಶಾಂಗ ಇಲಾಖೆ ಮತ್ತು Meta ಹಾಗೂ X ನ ಸಹೋದ್ಯೋಗಿಗಳು ಈ ಉಪಕ್ರಮದ ಸ್ಥಾಪಕ ಸದಸ್ಯರಾಗಿ ಸಹಿ ಮಾಡಿದ್ದು, ಇದನ್ನು ಮಾದಕ ಪದಾರ್ಥ ಮತ್ತು ಅಪರಾಧಗಳ ಕುರಿತ UN ಕಚೇರಿಯು (UNODC) ಮುನ್ನಡೆಸಲಿದೆ.
UN ಗೆ U.S. ರಾಯಭಾರಿ ಲಿಂಡಾ ಥಾಮಸ್-ಗ್ರೀನ್‌ಫೀಲ್ಡ್, ರಾಯಭಾರಿ ಕ್ರಿಸ್ಟೋಫರ್ ಲು, ಉಪ ಸಹಾಯಕ ಕಾರ್ಯದರ್ಶಿ ಮ್ಯಾಗಿ ನಾರ್ಡಿ ಮತ್ತು UNODC ಹಾಗೂ ಸಹವರ್ತಿ ತಂತ್ರಜ್ಞಾನ ಕಂಪನಿಗಳ ಪ್ರತಿನಿಧಿಗಳಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತ, ನಮ್ಮ ಸಂಘಟಿತ, ಸಾಮೂಹಿಕ ಕ್ರಮದ ಅಗತ್ಯವಿರುವ, ಇಡೀ ಸಮಾಜವನ್ನು ಆವರಿಸಿರುವ ಮಹತ್ವದ ಸಮಸ್ಯೆಯ ವಿರುದ್ಧ ಹೋರಾಡಲು ಇತರ ತಂತ್ರಜ್ಞಾನ ಪ್ಲ್ಯಾಟ್‌ಫಾರ್ಮ್ಸ್ ಮತ್ತು ಸೇವೆಗಳನ್ನು ನಾವು ಪ್ರೋತ್ಸಾಹಿಸುತ್ತೇವೆ.
ಖಂಡಿತವಾಗಿ, U.S. ಮಾದಕ ಪದಾರ್ಥ ನಿರ್ಮೂಲನೆ ಆಯೋಗವು ತಮ್ಮ ವೆಬ್‌ಸೈಟ್‌ನಲ್ಲಿ ತಿಳಿಸಿರುವಂತೆ, ಅಪರಾಧಿ ಮಾದಕ ಪದಾರ್ಥದ ಜಾಲಗಳು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲು, ಹೊಸ ಮಾರುಕಟ್ಟೆಗಳನ್ನು ರಚಿಸಲು ಮತ್ತು ಹೊಸ ಗ್ರಾಹಕರನ್ನು ಗುರಿಯಾಗಿಸಲು ಸಾಮಾಜಿಕ ಮಾಧ್ಯಮ ಪ್ಲ್ಯಾಟ್‌ಫಾರ್ಮ್ಸ್ ಅನ್ನು ದುರ್ಬಳಕೆ ಮಾಡುತ್ತಿವೆ. ಖಂಡಿತವಾಗಿ, U.S. ನಲ್ಲಿನ ಫೆಂಟನಿಲ್ ಬಿಕ್ಕಟ್ಟು ಸಾಂಕ್ರಾಮಿಕ ಪ್ರಮಾಣಕ್ಕೆ ತಲುಪಿದೆ. ಈ ದೇಶದಲ್ಲಿನ 1,00,000 ಕ್ಕೂ ಅಧಿಕ ಜನರು ಕಳೆದ 12 ತಿಂಗಳುಗಳಲ್ಲಿ ಮಾದಕ ಪದಾರ್ಥದ ಅತಿಯಾದ ಸೇವನೆಯಿಂದ ಸಾವನ್ನಪ್ಪಿದ್ದು, ಇದರಲ್ಲಿ ಫೆಂಟನಿಲ್ ಪ್ರಮುಖ ಪಾಲು ಹೊಂದಿದೆ. ವಿಷಾದದ ಸಂಗತಿಯೆಂದರೆ, ಆ ಕೆಲವು ದುರಂತಗಳಿಗೆ ಸಂಬಂಧಿಸಿದ ಹೃದಯವಿದ್ರಾವಕ ವಿವರಗಳನ್ನು ನಾವು ಆಲಿಸಿದ್ದೇವೆ. ಪೋಷಕರು ಮತ್ತು ಕುಟುಂಬಗಳಿಗೆ, Snap ನಲ್ಲಿರುವ ನಮಗೆ ಮತ್ತು ನಮ್ಮ ಜಾಗತಿಕ ಸಮಾಜಕ್ಕೆ – ಇದು ಭಯಾನಕವಾಗಿದೆ.
ತಮ್ಮ ನೈಜ ಸ್ನೇಹಿತರೊಂದಿಗೆ ಸಂವಹನ ನಡೆಸುವ ವಿಷಯಕ್ಕೆ ಬಂದರೆ, U.S. ಮತ್ತು ವಿಶ್ವಾದ್ಯಂತದ ಹಲವಾರು ದೇಶಗಳಲ್ಲಿ ಹದಿಹರೆಯದವರು ಮತ್ತು ಯುವಜನರಿಗೆ Snapchat ಆದ್ಯತೆಯ ಪ್ಲ್ಯಾಟ್‌ಫಾರ್ಮ್ ಆಗಿದೆ. ಈ ದೇಶದಲ್ಲಿ 13-ರಿಂದ-24 ವರ್ಷ ವಯಸ್ಸಿನ 90% ಜನರನ್ನು Snapchat ತಲುಪುತ್ತಿದೆ. ಈ ದುರ್ಬಲ ಮತ್ತು ಪ್ರಭಾವಗೊಳಿಸಬಹುದಾದ ಪ್ರೇಕ್ಷಕರನ್ನು ತಲುಪಲು ದುಷ್ಟರು ನಮ್ಮ ಪ್ಲ್ಯಾಟ್‌ಫಾರ್ಮ್ ಅನ್ನು ದುರ್ಬಳಕೆ ಮಾಡಲು ಮತ್ತು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎನ್ನುವುದನ್ನು ನಾವು ತಿಳಿದಿದ್ದೇವೆ.
2021 ರಿಂದ, ಫೆಂಟನಿಲ್‌ನಿಂದ ಸಂಭವಿಸುತ್ತಿರುವ ದುರಂತಗಳು U.S. ನಲ್ಲಿ ಏರಿಕೆಯಾಗುತ್ತಿರುವುದರಿಂದ, ಅಂತಹ ಚಟುವಟಿಕೆಗಾಗಿ ನಮ್ಮ ಪ್ಲ್ಯಾಟ್‌ಫಾರ್ಮ್ ದುರ್ಬಳಕೆಯನ್ನು ತಡೆಯಲು Snap ಹೋರಾಡುತ್ತಿದೆ. ಮಾದಕ ಪದಾರ್ಥದ ವಿತರಕರು ಕಾರ್ಯನಿರ್ವಹಿಸದಂತೆ ಮತ್ತು ಮಾದಕ ಪದಾರ್ಥದ ವಿಷಯವನ್ನು ಪ್ರಸಾರ ಮಾಡದಂತೆ ಅವರಿಗೆ Snapchat ಅನ್ನು ಪ್ರತಿಕೂಲ ವಾತಾವರಣವಾಗಿಸುವುದಕ್ಕಾಗಿ ನಾವು ಕಂಪನಿಯಾದ್ಯಂತದ ಒಂದು ಕಾರ್ಯತಂತ್ರವನ್ನು ಅಳವಡಿಸಿಕೊಂಡಿದ್ದೇವೆ. ಇದರಲ್ಲಿ ಅಕ್ರಮ ಮಾದಕ ಪದಾರ್ಥ ವಿಷಯ ಮತ್ತು ಮಾದಕ ಪದಾರ್ಥ-ಸಂಬಂಧಿತ ಚಟುವಟಿಕೆಯನ್ನು ಪೂರ್ವಭಾವಿಯಾಗಿ ಪತ್ತೆ ಮಾಡಲು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಮತ್ತು ನಿಯೋಜಿಸುವುದು; ಕಾನೂನು ಜಾರಿ ಸಂಸ್ಥೆಗಳಿಗಾಗಿ ನಮ್ಮ ಬೆಂಬಲವನ್ನು ಹೆಚ್ಚಿಸುವುದು ಮತ್ತು ಒಂದು ತನಿಖೆಯನ್ನು ನಡೆಸುವ ನಿರೀಕ್ಷೆಯಲ್ಲಿ ಕಾನೂನು ಜಾರಿ ಸಂಸ್ಥೆಗಳಿಗೆ ಪೂರ್ವಭಾವಿಯಾಗಿ ಉಲ್ಲೇಖಗಳನ್ನು ಮಾಡುವುದು; ನಮ್ಮ ಆ್ಯಪ್‌ನಲ್ಲಿ Snapchatter ಗಳ ಜೊತೆ ಮತ್ತು ಇತರ ಸಾರ್ವಜನಿಕರೊಂದಿಗೆ ನೇರವಾಗಿ ಈ ಸಂಭಾವ್ಯತಃ ಮಾರಣಾಂತಿಕ ಅಪಾಯಗಳು ಮತ್ತು ಹಾನಿಗಳ ಕುರಿತು ಜಾಗೃತಿ ಮೂಡಿಸುವುದು ಸೇರಿವೆ.
2022 ರ ಆರಂಭದಲ್ಲಿ, ನಮ್ಮ ಆಂತರಿಕ ಪ್ರಯತ್ನಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ, ನಮ್ಮ ಪ್ಲ್ಯಾಟ್‌ಫಾರ್ಮ್ಸ್ ಆದ್ಯಂತ ಅಕ್ರಮ ಮಾದಕ ಪದಾರ್ಥ-ಸಂಬಂಧಿತ ವಿಷಯ ಮತ್ತು ಚಟುವಟಿಕೆಗೆ ಸಂಬಂಧಿಸಿದ ಸಮಾನ ನಮೂನೆಗಳು ಮತ್ತು ಸಂಕೇತಗಳನ್ನು ಅನ್ವೇಷಿಸಲು ನಾವು Meta ಸಂಪರ್ಕಿಸಿದೆವು. ಎರಡು ವರ್ಷಗಳ ನಂತರ, ಹೊಸ ಮೈತ್ರಿಕೂಟದ ಮೂರು ಗುರಿಗಳಲ್ಲಿ ಮೊದಲನೆಯದನ್ನು ಸಾಧಿಸುವ ನಿಟ್ಟಿನಲ್ಲಿ, ತಂತ್ರಜ್ಞಾನ ಕಂಪನಿಗಳಿಗೆ ಆ ಪ್ರೊಗ್ರಾಂ ಕೇಂದ್ರಭೂಮಿಕೆಯಾಗಿ ಕಾರ್ಯನಿರ್ವಹಿಸಲಿದೆ:
ಅಕ್ರಮ ಮತ್ತು ಹಾನಿಕಾರಕ ಆನ್‌ಲೈನ್ ಮಾದಕ ಪದಾರ್ಥ ಚಟುವಟಿಕೆಯನ್ನು ನಿರ್ಮೂಲನೆ ಮಾಡಲು ಉದ್ಯಮಗಳು ಪರಸ್ಪರ ಅತ್ಯುತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವುದು
ಸಿಂಥೆಟಿಕ್ ಮಾದಕ ಪದಾರ್ಥಗಳ ಔಷಧೇತರ ಬಳಕೆಯನ್ನು ತಡೆಗಟ್ಟಲು — ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ — ಜಾಗೃತಿ ಮೂಡಿಸುವ ಮತ್ತು ತಿಳುವಳಿಕೆ ನೀಡುವ ಪ್ರಯತ್ನಗಳು
ಅತಿಯಾದ ಸೇವನೆ ತಡೆಯುವಿಕೆ ಮತ್ತು ಚಿಕಿತ್ಸೆ ಆಯ್ಕೆಗಳನ್ನು ಬಯಸುತ್ತಿರುವವರಿಗಾಗಿ ಬೆಂಬಲ ಎರಡಕ್ಕೂ ನೆರವು ಒದಗಿಸಲು ಅಭಿಯಾನಗಳು ಮತ್ತು ಟೂಲ್‌ಗಳಿಗೆ ಸಂಬಂಧಿಸಿ ವಲಯಗಳ ನಡುವೆ ಸಹಭಾಗಿತ್ವ
Snap ನಲ್ಲಿ, ಈ ಕ್ಷೇತ್ರದಲ್ಲಿನ ನಮ್ಮ ಕೆಲಸವನ್ನು ಎಂದಿಗೂ ಮುಗಿಸಲಾಗದು ಎಂದು ನಾವು ಸಾಮಾನ್ಯವಾಗಿ ಹೇಳುತ್ತಿರುತ್ತೇವೆ, ಆದರೆ ಈ ಮೈತ್ರಿಕೂಟದ ಸಾಮೂಹಿಕ ಇಚ್ಛಾಶಕ್ತಿಯು ಸರಿಯಾದ ದಿಕ್ಕಿನಲ್ಲಿ ದಿಟ್ಟ ಮತ್ತು ಗಮನಾರ್ಹ ಹೆಜ್ಜೆಯಾಗಲಿದೆ ಎನ್ನುವುದರಿಂದ ನಾವು ಸ್ಫೂರ್ತಿಗೊಂಡಿದ್ದೇವೆ.
— ಜಾಕ್ವೆಲಿನ್ ಬೌಚೆರೆ, ಪ್ಲ್ಯಾಟ್‌ಫಾರ್ಮ್ ಸುರಕ್ಷತೆಯ Snap ಜಾಗತಿಕ ಮುಖ್ಯಸ್ಥೆ