Snapchat ಮಿತಗೊಳಿಸುವಿಕೆ, ಜಾರಿಗೊಳಿಸುವಿಕೆ ಮತ್ತು ಮೇಲ್ಮನವಿಗಳು

ಕಮ್ಯುನಿಟಿ ಮಾರ್ಗಸೂಚಿಗಳ ವಿವರಣೆಯ ಸರಣಿ

ಅಪ್‌ಡೇಟ್ ಮಾಡಲಾಗಿದೆ: ಆಗಸ್ಟ್ 2023

Snapchat ನಾದ್ಯಂತ, ನಮ್ಮ ಸಮುದಾಯದ ಸುರಕ್ಷತಾ ಹಿತಾಸಕ್ತಿಗಳನ್ನು ಗೌರವಿಸುತ್ತಲೇ ಸುರಕ್ಷತೆಯನ್ನು ಹೆಚ್ಚಿಸುವುದಕ್ಕೆ ನಾವು ಬದ್ಧರಾಗಿದ್ದೇವೆ. ನಾವು ಹಾನಿಗಳ ವಿರುದ್ಧ ಹೋರಾಟಲು ಸಮತೋಲಿತ, ಅಪಾಯ-ಆಧರಿತ ವಿಧಾನವನ್ನು ಅನುಸರಿಸುತ್ತೇವೆ — ಪಾರದರ್ಶಕ ಕಂಟೆಂಟ್ ಮಾಡರೇಷನ್ ಅಭ್ಯಾಸಗಳು, ಸ್ಥಿರ ಮತ್ತು ಸಮಾನ ಜಾರಿಗೊಳಿಸುವಿಕೆ ಮತ್ತು ನಮ್ಮ ನೀತಿಗಳನ್ನು ನ್ಯಾಯಸಮ್ಮತವಾಗಿ ಅನ್ವಯಿಸುವುದಕ್ಕಾಗಿ ನಮ್ಮನ್ನು ಉತ್ತರದಾಯಿಗಳನ್ನಾಗಿಸಲು ಸ್ಪಷ್ಟ ಸಂವಹನೆಯನ್ನು ಸಂಯೋಜಿಸುತ್ತೇವೆ.


ಕಂಟೆಂಟ್ ಮಾಡರೇಷನ್


ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಾವು Snapchat ಅನ್ನು ವಿನ್ಯಾಸಗೊಳಿಸಿದ್ದೇವೆ ಮತ್ತು ಹಾನಿಕಾರ ಕಂಟೆಂಟ್ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುವಲ್ಲಿ ಈ ವಿನ್ಯಾಸ ಪ್ರಮುಖವಾಗಿದೆ. ಪರಿಶೀಲಿಸದ ಪ್ರಕಾಶಕರು ಅಥವಾ ವ್ಯಕ್ತಿಗಳು ದ್ವೇಷ, ತಪ್ಪುಮಾಹಿತಿ ಅಥವಾ ಹಿಂಸಾತ್ಮಕ ಕಂಟೆಂಟ್ ಅನ್ನು ಪ್ರಸಾರ ಮಾಡಲು ಅವಕಾಶ ಹೊಂದಿರುವ ಮುಕ್ತ ವಾರ್ತಾ ಫೀಡ್ ಅನ್ನು Snapchat ಆಫರ್ ಮಾಡುವುದಿಲ್ಲ. 

ಈ ವಿನ್ಯಾಸ ಸುರಕ್ಷತಾ ಕ್ರಮಗಳ ಜೊತೆಗೆ, ಸಾರ್ವಜನಿಕ ಪೋಸ್ಟ್‌ಗಳಲ್ಲಿ ಸಂಭಾವ್ಯತಃ ಅನುಚಿತ ಕಂಟೆಂಟ್ ಅನ್ನು ಪರಿಶೀಲಿಸಲು--ಮೆಷಿನ್ ಲರ್ನಿಂಗ್‌ ಟೂಲ್‌ಗಳು ಮತ್ತು ನೈಜ ಜನರ ಸಮರ್ಪಿತ ತಂಡಗಳು ಸೇರಿದಂತೆ--ನಮ್ಮ ಸಾರ್ವಜನಿಕ ಕಂಟೆಂಟ್ ತಾಣಗಳನ್ನು (ಉದಾಹರಣೆಗೆ ಸ್ಪಾಟ್‌ಲೈಟ್, ಸಾರ್ವಜನಿಕ ಕಥೆಗಳು ಮತ್ತು ಮ್ಯಾಪ್‌ಗಳು) ಮಾಡರೇಟ್ ಮಾಡಲು ನಾವು ಸ್ವಯಂಚಾಲಿತ ಟೂಲ್‌ಗಳು ಮತ್ತು ಮಾನವರ ವಿಮರ್ಶೆಯ ಸಂಯೋಜನೆಯನ್ನು ಬಳಸುತ್ತೇವೆ. 

ಉದಾಹರಣೆಗೆ, ಹೆಚ್ಚು ವಿಸ್ತಾರವಾದ Snapchat ಸಮುದಾಯದೊಂದಿಗೆ ಹಂಚಿಕೊಳ್ಳಲು ಕ್ರಿಯೇಟರ್‌ಗಳು ಸೃಜನಶೀಲ ಮತ್ತು ಮನರಂಜನೆಯ ವೀಡಿಯೊಗಳನ್ನು ಸಲ್ಲಿಸಬಹುದಾದ ಸ್ಪಾಟ್‌ಲೈಟ್‌ನಲ್ಲಿ, ಯಾವುದೇ ವಿತರಣೆ ಪಡೆಯುವುದಕ್ಕೆ ಮುನ್ನ ಎಲ್ಲ ಕಂಟೆಂಟ್ ಅನ್ನು ಮೊದಲು ಸ್ವಯಂಚಾಲಿತವಾಗಿ ಕೃತಕ ಬುದ್ಧಿಮತ್ತೆಯಿಂದ ಪರಿಶೀಲಿಸಲಾಗುತ್ತದೆ. ಒಂದು ಕಂಟೆಂಟ್ ತುಣುಕು ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಾಗ, ವಿಸ್ತಾರವಾದ ಪ್ರೇಕ್ಷಕರನ್ನು ತಲುಪಲು ಅದಕ್ಕೆ ಅವಕಾಶ ನೀಡುವುದಕ್ಕೆ ಮೊದಲು ಮಾನ ಮಾಡರೇಟರ್‌ಗಳಿಂದ ಅದನ್ನು ವಿಮರ್ಶಿಸಲಾಗುತ್ತದೆ. ಸ್ಪಾಟ್‌ಲೈಟ್‌ನಲ್ಲಿ ಕಂಟೆಂಟ್ ಮಾಡರೇಟ್ ಮಾಡುವ ಈ ಹಂತಗಳ ವಿಧಾನವು, ತಪ್ಪುಮಾಹಿತಿ ಹರಡುವಿಕೆ, ದ್ವೇಷ ಭಾಷಣ ಅಥವಾ ಇತರ ಸಂಭಾವ್ಯತಃ ಹಾನಿಕಾರಕ ಕಂಟೆಂಟ್ನ ಅಪಾಯವನ್ನು ಕಡಿಮೆ ಮಾಡುತ್ತದೆ, ಅದರ ಜೊತೆಗೆ ಎಲ್ಲರಿಗೂ ವಿನೋದಮಯ, ಸಕಾರಾತ್ಮಕ ಮತ್ತು ಸುರಕ್ಷಿತ ಅನುಭವವನ್ನು ಉತ್ತೇಜಿಸುತ್ತದೆ. 

ಅದೇ ರೀತಿ, ಪ್ರಕಾಶಕರ ಕಥೆಗಳು ಅಥವಾ ಶೋಗಳಂತಹ ಮೀಡಿಯಾ ಕಂಪನಿಗಳು ಸಿದ್ಧಪಡಿಸಿರುವ ಸಂಪಾದಕೀಯ ಕಂಟೆಂಟ್ ಅನ್ನು ಕಂಟೆಂಟ್ ಮಾರ್ಗಸೂಚಿಗಳ ಗುಚ್ಛಕ್ಕೆ ಒಳಪಡಿಸಲಾಗುತ್ತದೆ—ಇದು ತಪ್ಪು ಮಾಹಿತಿಯ ಹರಡುವಿಕೆ, ದ್ವೇಷ ಭಾಷಣ, ಪಿತೂರಿ ಸಿದ್ಧಾಂತಗಳು, ಹಿಂಸೆ ಮತ್ತು ಹಾನಿಕಾರಕ ಕಂಟೆಂಟ್‌ನ ಹಲವು ಇತರ ವರ್ಗಗಳನ್ನು ನಿಷೇಧಿಸುತ್ತದೆ, ಸುರಕ್ಷತೆ ಮತ್ತು ಸಮಗ್ರತೆಗಾಗಿ ಈ ಪಾಲುದಾರರನ್ನು ಉನ್ನತ ಮಾನದಂಡಗಳಿಗೆ ಒಳಪಡಿಸುತ್ತದೆ. ಹೆಚ್ಚುವರಿಯಾಗಿ, ಹಾನಿಕಾರಕ ಕಂಟೆಂಟ್ ಗುರುತಿಸಲು ನೆರವು ಪಡೆದುಕೊಳ್ಳುವುದಕ್ಕೆ--ಕಥೆಗಳು ರೀತಿಯ--ಇತರ ಸಾರ್ವಜನಿಕ ಅಥವಾ ಹೆಚ್ಚು ಗೋಚರತೆಯ ತಾಣಗಳಲ್ಲಿ ಸಕ್ರಿಯ ಹಾನಿ-ಪತ್ತೆ ತಂತ್ರಜ್ಞಾನಗಳನ್ನು ಬಳಸುತ್ತೇವೆ ಮತ್ತು ಹುಡುಕಾಟ ಫಲಿತಾಂಶಗಳಲ್ಲಿ ಹಾನಿಕಾರಕ ಕಂಟೆಂಟ್ (ಉದಾಹರಣೆಗೆ ಅಕ್ರಮ ಮಾದಕಪದಾರ್ಥ ಅಥವಾ ಇತರ ಅಕ್ರಮ ಕಂಟೆಂಟ್ ಜಾಹೀರಾತು ನೀಡಲು ಪ್ರಯತ್ನಿಸುತ್ತಿರುವ ಖಾತೆಗಳು) ಮರಳುವುದನ್ನು ತಡೆಯಲು ನಾವು ಕೀವರ್ಡ್ ಫಿಲ್ಟರಿಂಗ್ ಬಳಸುತ್ತೇವೆ.  

ನಮ್ಮ ಎಲ್ಲ ಉತ್ಪನ್ನ ತಾಣಗಳಾದ್ಯಂತ, ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಸಂಭಾವ್ಯತಃ ಉಲ್ಲಂಘನೆಗಾಗಿ ಬಳಕೆದಾರರು ಖಾತೆಗಳು ಮತ್ತು ಕಂಟೆಂಟ್ ಅನ್ನು ವರದಿ ಮಾಡಬಹುದು. ವರದಿಯನ್ನು ಮೌಲ್ಯಮಾಪನ ಮಾಡಲು; ನಮ್ಮ ನೀತಿಗಳ ಅನುಸಾರ ಸೂಕ್ತ ಕ್ರಮ ಕೈಗೊಳ್ಳಲು; ಮತ್ತು ವರದಿ ಮಾಡಿದ ಪಕ್ಷಕ್ಕೆ--ಸಾಮಾನ್ಯವಾಗಿ ಕೆಲವು ಗಂಟೆಗಳ ಒಳಗೆ ಫಲಿತಾಂಶದ ಕುರಿತು ಸೂಚನೆ ನೀಡಲು ತರಬೇತಾಗಿರುವ ನಮ್ಮ ವಿಶ್ವಾಸ ಮತ್ತು ಸುರಕ್ಷತಾ ತಂಡಕ್ಕೆ ನೇರವಾಗಿ ಒಂದು ಗೌಪ್ಯ ವರದಿ ಸಲ್ಲಿಸುವುದನ್ನು ನಾವು Snapchatter ಗಳಿಗೆ ಸುಲಭವಾಗಿಸಿದ್ದೇವೆ. ಹಾನಿಕಾರಕ ಕಂಟೆಂಟ್ ಅಥವಾ ನಡವಳಿಕೆಯನ್ನು ವರದಿ ಮಾಡುವ ಕುರಿತು ಹೆಚ್ಚಿನ ಮಾಹಿತಿಗಾಗಿ, ನಮ್ಮ ಬೆಂಬಲ ಸೈಟ್‌ನಲ್ಲಿ ಈ ಸಂಪನ್ಮೂಲಕ್ಕೆ ಭೇಟಿ ನೀಡಿ. ಹಾನಿಕಾರಕ ಕಂಟೆಂಟ್ ಅನ್ನು ಗುರುತಿಸಲು ಮತ್ತು ತೆಗೆದುಹಾಕಲು ಮತ್ತು Snapchat ನಲ್ಲಿ ಯೋಗಕ್ಷೇಮ ಮತ್ತು ಸುರಕ್ಷತೆಯನ್ನು ಉತ್ತೇಜಿಸಲು ನಾವು ಮಾಡುತ್ತಿರುವ ಪ್ರಯತ್ನಗಳ ಕುರಿತು ನೀವು ಇಲ್ಲಿ ಇನ್ನಷ್ಟನ್ನು ಕೂಡ ತಿಳಿದುಕೊಳ್ಳಬಹುದು.



Snap ನಲ್ಲಿ ಗೌಪ್ಯತೆ ಜಾರಿಗೊಳಿಸುವಿಕೆ

ನಮ್ಮ ನೀತಿಗಳು ಸ್ಥಿರ ಮತ್ತು ನ್ಯಾಯೋಚಿತ ಜಾರಿಗೊಳಿಸುವಿಕೆಯನ್ನು ಉತ್ತೇಜಿಸುವುದು Snap ನಲ್ಲಿ ನಮಗೆ ಬಹಳ ಮುಖ್ಯವಾಗಿದೆ. ಈ ಕಾರಣಕ್ಕಾಗಿ, ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಾಗಿ ಸೂಕ್ತ ದಂಡಗಳನ್ನು ನಿರ್ಧರಿಸಲು ನಾವು ಕೆಲವು ಅಂಶಗಳ ಸಂಯೋಜನೆಯನ್ನು ಪರಿಗಣಿಸುತ್ತೇವೆ. ಈ ಅಂಶಗಳ ಅತ್ಯಂತ ಪ್ರಮುಖ ಆಯಾಮಗಳೆಂದರೆ ಹಾನಿಯ ತೀವ್ರತೆ ಮತ್ತು ಹಿಂದಿನ ಉಲ್ಲಂಘನೆಗಳ Snapchatter ನಿಂದ ಯಾವುದೇ ಸಂಬಂಧಿತ ಇತಿಹಾಸ.

ಅದೇ ಮಟ್ಟದ ಗಂಭೀರತೆಗೆ ಏರದಿರುವ ಇತರ ವಿಧಗಲ ಉಲ್ಲಂಘನೆಗಳಿಂದ ಅತ್ಯಂತ ತೀವ್ರ ಹಾನಿಗಳನ್ನು ಪ್ರತ್ಯೇಕಿಸಲು ನಾವು ಅಪಾಯ-ಆಧರಿತ ವಿಧಾನವನ್ನು ಅನ್ವಯಿಸುತ್ತೇವೆ. ತೀವ್ರ ಹಾನಿಗಳ ನಮ್ಮ ಜಾರಿಗೊಳಿಸುವಿಕೆ ಮತ್ತು ಆ ವರ್ಗಕ್ಕೆ ಸೇರುವ ಉಲ್ಲಂಘನೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ನಾವು ಈ ಸಂಪನ್ಮುಲವನ್ನು ಅಭಿವೃದ್ಧಿಪಡಿಸಿದ್ದೇವೆ.

ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನ ಉಲ್ಲಂಘಿಸಲು ಅಥವಾ ತೀವ್ರ ಹಾನಿಯನ್ನು ಉಂಟುಮಾಡಲು ಬಳಸಲಾಗುತ್ತಿದೆ ಎಂದು ನಾವು ನಿರ್ಧರಿಸುವ ಖಾತೆಗಳನ್ನು ತಕ್ಷಣವೇ ನಿಷ್ಕ್ರಿಯಗೊಳಿಸಲಾಗುತ್ತದೆ. ಉದಾಹರಣೆಗಳಲ್ಲಿ, ಗಂಭೀರ ಬೆದರಿಸುವಿಕೆ ಅಥವಾ ಕಿರುಕುಳ, ಸೋಗುಹಾಕುವಿಕೆ, ವಂಚನೆ, ತೀವ್ರವಾದ ಅಥವಾ ಭಯೋತ್ಪಾದನಾ ಚಟುವಟಿಕೆಯ ಉತ್ತೇಜನ ಅಥವಾ ಇಲ್ಲದಿದ್ದಲ್ಲಿ ಅಕ್ರಮ ಚಟುವಟಿಕೆಯಲ್ಲಿ ತೊಡಗಲು Snap ಅನ್ನು ಬಳಸುವುದರಲ್ಲಿ ತೊಡಗಿರುವ ಖಾತೆಗಳು ಸೇರಿವೆ.

ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಇತರ ಎಲ್ಲ ಉಲ್ಲಂಘನೆಗಳಿಗಾಗಿ, Snap ಮೂರು ಭಾಗಗಳ ಜಾರಿಗೊಳಿಸುವಿಕೆ ಪ್ರಕ್ರಿಯೆಯನ್ನು ಅನ್ವಯಿಸುತ್ತದೆ:

  • ಹಂತ ಒಂದು: ಉಲ್ಲಂಘಿಸುವ ಕಂಟೆಂಟ್ ಅನ್ನು ತೆಗೆದುಹಾಕಲಾಗುತ್ತದೆ.

  • ಹಂತ ಎರಡು: Snapchatter ಅವರ ಕಂಟೆಂಟ್ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ, ಅವರ ಕಂಟೆಂಟ್ ಅನ್ನು ತೆಗೆದುಹಾಕಲಾಗಿದೆ ಮತ್ತು ಪುನರಾವರ್ತಿತ ಉಲ್ಲಂಘನೆಯು ಅವರ ಖಾತೆಯನ್ನು ನಿಷ್ಕ್ರಿಯಗೊಳಿಸುವುದು ಸೇರಿದಂತೆ, ಹೆಚ್ಚುವರಿ ಜಾರಿಗೊಳಿಸುವಿಕೆ ಕ್ರಮಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಸೂಚಿಸುವ ಅಧಿಸೂಚನೆಯನ್ನು ಸ್ವೀಕರಿಸುತ್ತಾರೆ.

  • ಹಂತ ಮೂರು: Snapchatter ಖಾತೆಯ ವಿರುದ್ಧ ನಮ್ಮ ತಂಡ ಗುರುತು ಮಾಡುವಿಕೆಯನ್ನು ದಾಖಲಿಸುತ್ತಾರೆ.

ಒಂದು ಗುರುತು ಮಾಡುವಿಕೆಯು ನಿರ್ದಿಷ್ಟ Snapchatter ನಿಂದ ಉಲ್ಲಂಘನೆಗಳನ್ನು ದಾಖಲಿಸುತ್ತದೆ. ಪ್ರತಿ ಗುರುತು ಮಾಡುವಿಕೆಯು Snapchatter ಗೆ ಸೂಚನೆ ನೀಡುವಿಕೆಯನ್ನು ಒಳಗೊಂಡಿರುತ್ತದೆ; ನಿರ್ದಿಷ್ಟ ಸಮಯಾವಧಿಯಲ್ಲಿ ತುಂಬಾ ಗುರುತು ಮಾಡುವಿಕೆಯನ್ನು Snapchatter ಪಡೆದುಕೊಂಡರೆ, ಅವರ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

ಈ ಗುರುತು ಮಾಡುವಿಕೆ ವ್ಯವಸ್ಥೆಯು Snap ತನ್ನ ನೀತಿಗಳನ್ನು ಸ್ಥಿರವಾಗಿ ಮತ್ತು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಬಳಕೆದಾರರಿಗೆ ಎಚ್ಚರಿಕೆ ಹಾಗೂ ತಿಳುವಳಿಕೆ ನೀಡುವ ರೀತಿಯಲ್ಲಿ ಅನ್ವಯಿಸುತ್ತಿದೆ ಎನ್ನುವುದನ್ನು ಖಚಿತಪಡಿಸುತ್ತದೆ. ನಮ್ಮ ಮೌಲ್ಯಗಳು ಮತ್ತು ಧ್ಯೇಯವನ್ನು ಬಿಂಬಿಸುವ ರೀತಿಗಳಲ್ಲಿ Snapchat ಬಳಸುವುದನ್ನು ಪ್ರತಿಯೊಬ್ಬರೂ ಆನಂದಿಸಬಹುದು ಎನ್ನುವುದನ್ನು ಖಚಿತಪಡಿಸುವುದು ನಮ್ಮ ನೀತಿಗಳ ಪ್ರಾಥಮಿಕ ಗುರಿಯಾಗಿದೆ; ಆ ಗುರಿಯನ್ನು ಹೆಚ್ಚಿನ ಮಟ್ಟದಲ್ಲಿ ಬೆಂಬಲಿಸಲು ನೆರವಾಗುವುದಕ್ಕೆ ನಾವು ಈ ಜಾರಿಗೊಳಿಸುವಿಕೆ ಕಾರ್ಯಚೌಕಟ್ಟನ್ನು ಅಭಿವೃದ್ಧಿಪಡಿಸಿದ್ದೇವೆ.  


ನೋಟಿಸ್ ಮತ್ತು ಮೇಲ್ಮನವಿ ಪ್ರಕ್ರಿಯೆಗಳು

ತಮ್ಮ ಖಾತೆಯ ವಿರುದ್ಧ ಒಂದು ಕ್ರಮವನ್ನು ಯಾಕೆ ತೆಗೆದುಕೊಳ್ಳಲಾಗಿದೆ ಎನ್ನುವ ಕುರಿತು Snapchatter ಗಳಿಗೆ ಸ್ಪಷ್ಟ ತಿಳುವಳಿಕೆಯನ್ನು ಖಚಿತಪಡಿಸಲು ಮತ್ತು ಜಾರಿಗೊಳಿಸುವಿಕೆಯ ಫಲಿತಾಂಶದ ವಿರುದ್ಧ ಅರ್ಥಪೂರ್ಣವಾಗಿ ವಿವಾದ ಮಾಡುವ ಅವಕಾಶ ಒದಗಿಸಲು, Snapchatter ಗಳ ಹಕ್ಕುಗಳನ್ನು ರಕ್ಷಿಸುವ ಜೊತೆಗೆ ನಮ್ಮ ಸಮುದಾಯದ ಹಿತಾಸಕ್ತಿಗಳನ್ನು ಕಾಯುವ ನೋಟಿಸ್ ಮತ್ತು ಮೇಲ್ಮನವಿಗಳ ಪ್ರಕ್ರಿಯೆಗಳನ್ನು ನಾವು ಸ್ಥಾಪಿಸಿದ್ದೇವೆ.

ಒಂದು ಜಾರಿಗೊಳಿಸುವಿಕೆ ಕ್ರಮವನ್ನು ಯಾಕೆ ತೆಗೆದುಕೊಳ್ಳಲಾಗಿದೆ ಎನ್ನುವುದನ್ನು ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳಲು, ಖಾತೆಯ ವಿರುದ್ಧ ದಂಡಗಳನ್ನು ಜಾರಿಗೊಳಿಸಬೇಕೇ ಎಂದು ಮೌಲ್ಯಮಾಪನ ಮಾಡುವಾಗ ನಾವು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಮತ್ತು ಸೇವೆಯ ನಿಯಮಗಳನ್ನು ಅನ್ವಯಿಸುತ್ತೇವೆ, ಮತ್ತು Discover ಹಾಗೂ ಸ್ಪಾಟ್‌ಲೈಟ್‌ಗೆ ಪೋಸ್ಟ್ ಮಾಡಿರುವ Snap ಗಳನ್ನು ಮಾಡರೇಟ್ ಮಾಡಲು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು, ಸೇವೆಯ ನಿಯಮಗಳು, ಮತ್ತು ಶಿಫಾರಸು ಅರ್ಹತೆಗಾಗಿ ಕಂಟೆಂಟ್ ಮಾರ್ಗಸೂಚಿಗಳು ಅನ್ನು ಅನ್ವಯಿಸುತ್ತೇವೆ ಎನ್ನುವುದನ್ನು ದಯವಿಟ್ಟು ಗಮನದಲ್ಲಿಡಿ.

ನಮ್ಮ ಮೇಲ್ಮನವಿಗಳ ಪ್ರಕ್ರಿಯೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎನ್ನುವ ಕುರಿತ ಮಾಹಿತಿಗಾಗಿ, ನಾವು ಖಾತೆ ಮೇಲ್ಮನವಿಗಳು ಮತ್ತು ಕಂಟೆಂಟ್ ಮೇಲ್ಮನವಿಗಳ ಕುರಿತು ಬೆಂಬಲ ಲೇಖನಗಳನ್ನು ಸಿದ್ಧಪಡಿಸಿದ್ದೇವೆ.

Snapchat ಒಂದು ಖಾತೆ ಲಾಕ್‌ನ ಮೇಲ್ಮನವಿಗೆ ಅನುಮತಿ ಒದಗಿಸಿದಾಗ, Snapchatter ರ ಖಾತೆಗೆ ಪ್ರವೇಶವನ್ನು ಮರುಸ್ಥಾಪಿಸಲಾಗುತ್ತದೆ ಮೇಲ್ಮನವಿ ಯಶಸ್ವಿಯಾಗಿದೆಯೇ ಇಲ್ಲವೇ ಎನ್ನುವ ಕುರಿತು, ಮೇಲ್ಮನವಿ ಸಲ್ಲಿಸಿದ ಪಕ್ಷಕ್ಕೆ ನಮ್ಮ ನಿರ್ಧಾರದ ಬಗ್ಗೆ ಸಕಾಲಿಕ ರೀತಿಯಲ್ಲಿ ನಾವು ಸೂಚನೆ ನೀಡುತ್ತೇವೆ.