ನಿಮ್ಮ ಗೌಪ್ಯತೆಯನ್ನು ಈ ಕೆಳಗೆ ವಿವರಿಸಲಾಗಿದೆ

ಗೌಪ್ಯತೆ ನೀತಿಗಳು ಬಹಳ ದೀರ್ಘವಾಗಿರುತ್ತವೆ — ಮತ್ತು ಸಾಕಷ್ಟು ಗೊಂದಲಮಯವಾಗಿವೆ. ಅದಕ್ಕಾಗಿಯೇ ನಮ್ಮ ಗೌಪ್ಯತಾ ನೀತಿಯನ್ನು ಸಂಕ್ಷಿಪ್ತ, ಸ್ಪಷ್ಟ ಮತ್ತು ಓದುವುದಕ್ಕೆ ಸುಲಭವಾಗಿಸಲು ನಾವು ನಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದೇವೆ!

ನೀವು ನಮ್ಮ ಸಂಪೂರ್ಣ ಗೌಪ್ಯತಾ ನೀತಿಯನ್ನು ಓದಬೇಕು, ಆದರೆ ನೀವು ಕೆಲವೇ ನಿಮಿಷಗಳನ್ನು ಹೊಂದಿರುವಾಗ ಅಥವಾ ನಂತರ ಏನನ್ನಾದರೂ ನೆನಪಿಟ್ಟುಕೊಳ್ಳಲು ಬಯಸಿದಾಗ, ನೀವು ಯಾವಾಗಲೂ ಈ ಸಾರಾಂಶವನ್ನು ನೋಡಬಹುದು - ಆದ್ದರಿಂದ ನೀವು ಕೆಲವೇ ನಿಮಿಷಗಳಲ್ಲಿ ಕೆಲವು ಮೂಲಭೂತ ಅಂಶಗಳನ್ನು ಕಲಿಯಬಹುದು ಅಥವಾ ನೆನಪಿಸಿಕೊಳ್ಳಬಹುದು.

Snap ನಲ್ಲಿ ನಾವು ಏನು ಮಾಡುತ್ತೇವೆ

Snapನಲ್ಲಿ ಜನರು ತಮ್ಮನ್ನು ತಾವು ವ್ಯಕ್ತಪಡಿಸಲು, ಆ ಕ್ಷಣದಲ್ಲಿ ಜೀವಿಸಲು, ಪ್ರಪಂಚದ ಬಗ್ಗೆ ಕಲಿಯಲು ಮತ್ತು ಒಟ್ಟಿಗೆ ಮೋಜು ಮಾಡಲು ಅವಕಾಶ ನೀಡುವುದು ನಮ್ಮ ಉದ್ದೇಶವಾಗಿದೆ.

ನಮ್ಮ ಸೇವೆಗಳನ್ನು ಒದಗಿಸಲು ಮತ್ತು ಅವುಗಳನ್ನು ಇನ್ನಷ್ಟು ಉತ್ತಮವಾಗಿಸಲು, ನೀವು Snapchat, Bitmoji ಮತ್ತು ನಮ್ಮ ಇತರ ಸೇವೆಗಳನ್ನು ಬಳಸಿದಾಗ ನಿಮ್ಮ ಅನುಭವವನ್ನು ವೈಯಕ್ತೀಕರಿಸಲು ನಿಮ್ಮ ಕುರಿತು ನಾವು ಒಂದಿಷ್ಟು ಸಂಗತಿಗಳನ್ನು ತಿಳಿದುಕೊಳ್ಳುತ್ತೇವೆ. ಉದಾಹರಣೆಗೆ, ಇದು ನಿಮ್ಮ ಜನ್ಮದಿನ ಎಂದು ನಮಗೆ ತಿಳಿದಿದ್ದರೆ, ಸಂಭ್ರಮಾಚರಣೆ ಮಾಡಲು ನೆರವಾಗುವುದಕ್ಕೆ ನೀವು ಮತ್ತು ನಿಮ್ಮ ಸ್ನೇಹಿತರಿಗೆ ನಾವು ಒಂದು ಲೆನ್ಸ್ ಕಳುಹಿಸಬಹುದು! ಅಥವಾ, ನೀವು ಬೀಚ್‌ನಲ್ಲಿ ಒಂದು ದಿನ ಕಳೆಯುತ್ತಿರುವುದನ್ನು ನಾವು ನೋಡಿದರೆ, ನಿಮ್ಮ Bitmoji ಯು ಈ ಸಂದರ್ಭಕ್ಕಾಗಿ ಅಲಂಕರಿಸಲ್ಪಡುತ್ತದೆ ಎಂದು ನಾವು ಖಚಿತಪಡಿಸಿಕೊಳ್ಳಬಹುದು. ಚೆನ್ನಾಗಿದೆ, ಅಲ್ಲವೇ?

ನಾವು ವೈಯಕ್ತೀಕರಿಸಿದ ಸೇವೆಯನ್ನು ಒದಗಿಸುವ ಮತ್ತೊಂದು ಮಾರ್ಗವೆಂದರೆ ನಾವು ತೋರಿಸುವ ಜಾಹೀರಾತುಗಳ ಮೂಲಕ - ಇದು ನಾವು ವಿನೋದ, ಸುರಕ್ಷಿತ ಮತ್ತು ವಿನೂತನ ಆನ್‌ಲೈನ್‌ ಸ್ಥಳಗಳನ್ನು ಶುಲ್ಕವಿಲ್ಲದೆ ಒದಗಿಸಲು ಸಾಧ್ಯವಾಗುವ ವಿಧಾನಗಳಲ್ಲ ಒಂದಾಗಿದೆ. ನೀವು ಆಸಕ್ತಿ ಹೊಂದಿರುವ ಜಾಹೀರಾತುಗಳನ್ನು ಒದಗಿಸಲು ನಿಮ್ಮ ಬಗ್ಗೆ ನಮಗೆ ತಿಳಿದಿರುವ ಕೆಲವು ವಿಷಯಗಳನ್ನು ನಾವು ಬಳಸುತ್ತೇವೆ. ಉದಾಹರಣೆಗೆ, ನೀವು ಫ್ಯಾಶನ್ ಕುರಿತು ಹಲವಾರು ಕಥೆಗಳನ್ನು ನೋಡುತ್ತಿದ್ದರೆ, ಇತ್ತೀಚಿನ ಜೀನ್ಸ್ ಶೈಲಿಯ ಕುರಿತು ನಾವು ನಿಮಗೆ ಜಾಹೀರಾತುಗಳನ್ನು ತೋರಿಸಬಹುದು. ಅಥವಾ ನೀವು ವೀಡಿಯೋ ಗೇಮ್‌ಗಳಿಗಾಗಿ ಜಾಹೀರಾತುಗಳ ಗುಂಪಿನ ಮೇಲೆ ಕ್ಲಿಕ್ ಮಾಡಿದರೆ, ನಾವು ಆ ಜಾಹೀರಾತುಗಳನ್ನು ಮುಂದುವರಿಸಬಹುದು! ಆದರೆ ನೀವು ಬಹುಶಃ ಇಷ್ಟಪಡದ ಜಾಹೀರಾತುಗಳನ್ನು ನಿಮಗೆ ತೋರಿಸುವುದನ್ನು ತಪ್ಪಿಸಲು ಸಹ ನಾವು ನಿಮ್ಮ ಮಾಹಿತಿಯನ್ನು ಬಳಸುತ್ತೇವೆ. ಉದಾಹರಣೆಗೆ, ನೀವು ಈಗಾಗಲೇ ಚಲನಚಿತ್ರಕ್ಕಾಗಿ ಟಿಕೆಟ್‌ಗಳನ್ನು ಖರೀದಿಸಿದ್ದೀರಿ ಎಂದು ಟಿಕೆಟಿಂಗ್ ಸೈಟ್ ನಮಗೆ ತಿಳಿಸಿದರೆ — ಅಥವಾ ನೀವು ಅವುಗಳನ್ನು Snapchat ಮೂಲಕ ಖರೀದಿಸಿದರೆ — ಅದಕ್ಕಾಗಿ ನಾವು ನಿಮಗೆ ಜಾಹೀರಾತುಗಳನ್ನು ತೋರಿಸುವುದನ್ನು ನಿಲ್ಲಿಸಬಹುದು. ಇನ್ನಷ್ಟು ತಿಳಿಯಿರಿ.

ನಿಮ್ಮ ಮಾಹಿತಿಯನ್ನು ನೀವು ಹೇಗೆ ನಿಯಂತ್ರಿಸುತ್ತೀರಿ

ನಿಮ್ಮ ಖಾತೆಯ ಮಾಹಿತಿಯನ್ನು ನವೀಕರಿಸಲು ಅಥವಾ ನಿಮ್ಮ ಸ್ಟೋರಿಯನ್ನು ಯಾರು ವೀಕ್ಷಿಸಬಹುದು ಅಥವಾ Snap ನಕ್ಷೆಯಲ್ಲಿ ನಿಮ್ಮನ್ನು ನೋಡಬಹುದು ಎಂಬುದನ್ನು ಬದಲಾಯಿಸಲು ಬಯಸುವಿರಾ? ಆ್ಯಪ್‌ನಲ್ಲಿ ನಿಮ್ಮ ಸೆಟ್ಟಿಂಗ್‌ಗಳಿಗೆ ಹೋಗಿ. ಆ್ಯಪ್‌ನಲ್ಲಿ ಕಾಣದ ನಿಮ್ಮ ಮಾಹಿತಿಯ ಕುರಿತು ಕುತೂಹಲವಿದೆಯೇ? ನಿಮ್ಮ ಡೇಟಾ ಡೌನ್‌ಲೋಡ್ ಮಾಡಲು ಇಲ್ಲಿ ಹೋಗಿ. ನೀವು ಎಂದಾದರೂ Snapchat ತೊರೆಯಲು ಮತ್ತು ನಿಮ್ಮ ಖಾತೆಯನ್ನು ಅಳಿಸಲು ಬಯಸಿದರೆ, ಅದಕ್ಕಾಗಿಯೂ ನಾವು ಟೂಲ್‌ಗಳನ್ನು ಹೊಂದಿದ್ದೇವೆ. ಇನ್ನಷ್ಟು ತಿಳಿಯಿರಿ.

ನಾವು ಮಾಹಿತಿಯನ್ನು ಹೇಗೆ ಕಲೆಹಾಕುತ್ತೇವೆ

ಮೊದಲನೆಯದಾಗಿ, ನೀವು ನಮಗೆ ಒದಗಿಸಲು ಆಯ್ಕೆ ಮಾಡುವ ಯಾವುದೇ ಮಾಹಿತಿಯಿಂದ ನಾವು ತಿಳಿದುಕೊಳ್ಳುತ್ತೇವೆ. ಉದಾಹರಣೆಗೆ, ನೀವು Snapchat ಖಾತೆಯನ್ನು ಸೆಟಪ್ ಮಾಡಿದಾಗ, ನಿಮ್ಮ ಜನ್ಮದಿನ, ಇಮೇಲ್ ವಿಳಾಸ ಮತ್ತು ನೀವು ಗುರುತಿಸಿಕೊಳ್ಳಲು ಬಯಸುವ ಅನನ್ಯ ಹೆಸರು — ಅಂದರೆ ನಿಮ್ಮ ಬಳಕೆದಾರ ಹೆಸರು ನಮಗೆ ತಿಳಿಯುತ್ತದೆ.

ಎರಡನೆಯದಾಗಿ, ನೀವು ನಮ್ಮ ಸೇವೆಗಳನ್ನು ಬಳಸಿದಾಗ ನಾವು ನಿಮ್ಮ ಕುರಿತು ತಿಳಿದುಕೊಳ್ಳುತ್ತೇವೆ. ಹಾಗಾಗಿ, ನೀವು ಕ್ರೀಡಾಭಿಮಾನಿ ಎಂದು ನೀವು ನಮಗೆ ಹೇಳದೇ ಇದ್ದರೂ, ನೀವು ಯಾವಾಗಲೂ ಸ್ಪಾಟ್‌ಲೈಟ್‌ನಲ್ಲಿ ಬಾಸ್ಕೆಟ್‌ಬಾಲ್ ಹೈಲೈಟ್‌ಗಳನ್ನು ವೀಕ್ಷಿಸುತ್ತಿದ್ದರೆ ಮತ್ತು ನಿಮ್ಮ Bitmoji ನಿಮ್ಮ ತಂಡದ ಬಣ್ಣಗಳನ್ನು ಧರಿಸಿದ್ದರೆ, ಅದು ಸುರಕ್ಷಿತ ಊಹೆ.

ಮೂರನೆಯದಾಗಿ, ನಾವು ಕೆಲವೊಮ್ಮೆ ನಿಮ್ಮ ಬಗ್ಗೆ ಇತರ ಜನರು ಮತ್ತು ಸೇವೆಗಳಿಂದ ತಿಳಿಯುತ್ತೇವೆ. ಉದಾಹರಣೆಗೆ, ಸ್ನೇಹಿತರ ಸಂಪರ್ಕ ಪಟ್ಟಿಯನ್ನು ಅಪ್‌ಲೋಡ್ ಮಾಡಿದರೆ, ನಿಮ್ಮ ಫೋನ್ ಸಂಖ್ಯೆಯನ್ನು ನಾವು ನೋಡಬಹುದು. ಅಥವಾ, ವೀಡಿಯೊ ಗೇಮ್‌ಗಾಗಿ ಒಂದು ಜಾಹೀರಾತನ್ನು ನೀವು ಟ್ಯಾಪ್ ಮಾಡಿದರೆ, ನೀವು ಅದನ್ನು ಇನ್‌ಸ್ಟಾಲ್ ಮಾಡಿದ್ದೀರಿ ಎಂದು ಜಾಹೀರಾತುದಾರರು ನಮಗೆ ತಿಳಿಸಬಹುದು. ಇನ್ನಷ್ಟು ತಿಳಿಯಿರಿ.

ನಾವು ಮಾಹಿತಿಯನ್ನು ಹೇಗೆ ಹಂಚಿಕೊಳ್ಳುತ್ತೇವೆ

ನಾವು ಮಾಹಿತಿಯನ್ನು ಹಂಚಿಕೊಂಡಾಗ, ಸಾಮಾನ್ಯವಾಗಿ ನೀವು ನಮ್ಮನ್ನು ಕೇಳಿರುವ ಕಾರಣಕ್ಕಾಗಿ ಆಗಿರುತ್ತದೆ — ಉದಾಹರಣೆಗೆ Spotlight ಗೆ ಅಥವಾ Snap ಮ್ಯಾಪ್‌ಗೆ ನೀವು Snap ಸೇರಿಸಲು ಬಯಸಿದಾಗ ಅಥವಾ ಸ್ನೇಹಿತರಿಗೆ ಒಂದು ಚಾಟ್ ಕಳುಹಿಸಲು ಬಯಸಿದಾಗ. ನಿಮ್ಮ ಬಳಕೆದಾರ ಹೆಸರು ಮತ್ತು Snapcode ಗಳಂತಹ ನಿಮ್ಮ ಕೆಲವು ಮಾಹಿತಿಯು ಡೀಫಾಲ್ಟ್ ಆಗಿ ಸಾರ್ವಜನಿಕವಾಗಿ ಲಭ್ಯವಿರುತ್ತದೆ.

Snap ಕಂಪನಿಗಳ ಕುಟುಂಬದೊಳಗೆ, ಸೇವೆಗಳನ್ನು ಒದಗಿಸಲು ನಮಗೆ ಸಹಾಯ ಮಾಡುವ ವ್ಯವಹಾರ ಮತ್ತು ಏಕೀಕೃತ ಪಾಲುದಾರರ ಜೊತೆಗೆ, ಕಾನೂನಿನ ಪ್ರಕಾರ ಅಗತ್ಯವಿದೆ ಎಂದು ನಾವು ಭಾವಿಸಿದಾಗ ಮತ್ತು Snapchatter ಗಳು, ನಮ್ಮ ಮತ್ತು ಇತರರ ಸುರಕ್ಷತೆಯನ್ನು ರಕ್ಷಿಸಲು ಅದು ಅಗತ್ಯವಿದೆ ಎಂದು ನಾವು ಭಾವಿಸಿದಾಗ ಕೂಡ ನಾವು ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ.

ಉಳಿದ ಬಹುತೇಕ ಎಲ್ಲವುದಕ್ಕೂ, ನೀವು ನಿಯಂತ್ರಣ ಹೊಂದಿರುತ್ತೀರಿ! ಇನ್ನಷ್ಟು ತಿಳಿಯಿರಿ.

ಎಷ್ಟು ಸಮಯದವರೆಗೆ ನಾವು ಮಾಹಿತಿಯನ್ನು ಇರಿಸಿಕೊಳ್ಳುತ್ತೇವೆ

Snapchat ಎನ್ನುವುದು ಈ ಕ್ಷಣದಲ್ಲಿ ಬದುಕುವ ಬಗ್ಗೆಯಾಗಿದೆ. ಆದಕಾರಣ ನೀವು ಸ್ನೇಹಿತರಿಗೆ Snap ಅಥವಾ ಚಾಟ್ ಅನ್ನು ಕಳುಹಿಸಿದಾಗ, ಅದನ್ನು ವೀಕ್ಷಿಸಿದ ಬಳಿಕ ಅಥವಾ ಅದರ ಅವಧಿ ಮೀರಿದ ಬಳಿಕ (ನಿಮ್ಮ ಸೆಟ್ಟಿಂಗ್‌ಗಳನ್ನು ಆಧರಿಸಿ) ಡಿಫಾಲ್ಟ್ ಆಗಿ ಅದನ್ನು ಅಳಿಸಲು ನಮ್ಮ ಸಿಸ್ಟಂ ಅನ್ನು ವಿನ್ಯಾಸಗೊಳಿಸಲಾಗಿದೆ. ಆದರೂ, ನೀವು ಅಥವಾ ಸ್ನೇಹಿತರು ನಮ್ಮನ್ನು ಕೇಳಿದಾಗ ನಾವು ಸಂದೇಶಗಳನ್ನು ಇರಿಸಿಕೊಳ್ಳಬಹುದು, ಉದಾಹರಣೆಗೆ ನೀವು ಚಾಟ್‌ನಲ್ಲಿ ಸಂದೇಶವನ್ನು ಉಳಿಸಿದಾಗ ಅಥವಾ ಮೆಮೊರಿಗಳಿಗೆ Snap ಉಳಿಸಿದಾಗ.

ಮತ್ತು ನೆನಪಿಡಿ: Snapchatter ಗಳು ಯಾವಾಗಲೂ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು!

ಇತರ ಮಾಹಿತಿಯನ್ನು ದೀರ್ಘ ಕಾಲ ಇರಿಸಿಕೊಳ್ಳಬಹುದು. ಉದಾಹರಣೆಗೆ, ನೀವು ನಮಗೆ ಅದನ್ನು ಅಳಿಸುವಂತೆ ವಿನಂತಿಸುವವರೆಗೆ ನಿಮ್ಮ ಖಾತೆಯ ಮೂಲಭೂತ ಮಾಹಿತಿಯನ್ನು ನಾವು ಶೇಖರಣೆ ಮಾಡುತ್ತೇವೆ. ಮತ್ತು ನೀವು ಇಷ್ಟಪಡುವ ಮತ್ತು ಇಷ್ಟಪಡದೆ ಇರುವ ವಿಷಯಗಳ ಕುರಿತು ನಾವು ನಿರಂತರವಾಗಿ ಮಾಹಿತಿಯನ್ನು ಸಂಗ್ರಹಿಸುತ್ತೇವೆ ಮತ್ತು ಅಪ್‌ಡೇಟ್ ಮಾಡುತ್ತೇವೆ, ಇದರಿಂದಾಗಿ ನಾವು ನಿಮಗೆ ಇನ್ನಷ್ಟು ಉತ್ತಮವಾದ ಕಂಟೆಂಟ್ ಮತ್ತು ಜಾಹೀರಾತುಗಳನ್ನು ಒದಗಿಸಬಹುದು. ಇನ್ನಷ್ಟು ತಿಳಿಯಿರಿ.

ನೀವು ಇನ್ನಷ್ಟನ್ನು ಹೇಗೆ ತಿಳಿದುಕೊಳ್ಳಬಹುದು

ನಮ್ಮ ಪೂರ್ಣ ಗೌಪ್ಯತಾ ನೀತಿಯನ್ನು ಪರಿಶೀಲಿಸಿ!

ಉತ್ಪನ್ನದ ಪ್ರಕಾರ ಗೌಪ್ಯತೆಯು ನಿರ್ದಿಷ್ಟ ವೈಶಿಷ್ಟ್ಯಗಳ ಕುರಿತು ಇನ್ನಷ್ಟು ಮಾಹಿತಿಯನ್ನು ಒದಗಿಸುತ್ತದೆ, ಮತ್ತು ಆ್ಯಪ್‌ನ ಭಿನ್ನ ಭಾಗಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡುವುದಕ್ಕಾಗಿ ನಾವು ಹಲವಾರು ಬೆಂಬಲ ಪುಟಗಳನ್ನೂ ರಚಿಸಿದ್ದೇವೆ.

ನೀವು ಹುಡುಕುತ್ತಿರುವುದು ಇನ್ನೂ ಸಿಕ್ಕಿಲ್ಲವೇ? ಚಿಂತಿಸಬೇಡಿ, ನಮ್ಮನ್ನು ಸಂಪರ್ಕಿಸಿ ಮತ್ತು ನಮ್ಮ ಸ್ನೇಹಪೂರ್ವಕ ಬೆಂಬಲ ತಂಡವು ನಿಮ್ಮನ್ನು ಸಂಪರ್ಕಿಸುತ್ತದೆ!