ಗೌಪ್ಯತಾ ನೀತಿ

ಜಾರಿ ದಿನಾಂಕ: ಆಗಸ್ಟ್ 15, 2023

Snap Inc. ಇದೊಂದು ತಂತ್ರಜ್ಞಾನ ಕಂಪೆನಿಯಾಗಿದೆ. Snapchat, Bitmoji, Spectacles ಮತ್ತು ಇತರ ಹಾರ್ಡ್‌ವೇರ್, ಜಾಹೀರಾತು ನೀಡುವಿಕೆ, ವಾಣಿಜ್ಯ ಮತ್ತು ಈ ಗೌಪ್ಯತಾ ನೀತಿಗೆ ಜೋಡಣೆಯಾಗಿರುವ ಇತರವುಗಳು ಸೇರಿದಂತೆ — ನಮ್ಮ ಉತ್ಪನ್ನ ಮತ್ತು ಸೇವೆಗಳು — ನಿಮ್ಮನ್ನು ಅಭಿವ್ಯಕ್ತಪಡಿಸಲು, ಆ ಕ್ಷಣದಲ್ಲಿ ಜೀವಿಸಲು, ಜಗತ್ತಿನ ಕುರಿತು ತಿಳಿದುಕೊಳ್ಳಲು ಮತ್ತು ಜೊತೆಯಾಗಿ ವಿನೋದಿಸಲು ವೇಗವಾದ, ವಿನೋದಮಯವಾದ ಮತ್ತು ವೈಯಕ್ತಿಕಗೊಳಿಸಿದ ವಿಧಾನಗಳನ್ನು ಒದಗಿಸುತ್ತವೆ! 

ನೀವು ಈ ಸೇವೆಗಳನ್ನು ಬಳಸುವಾಗ, ನಮ್ಮೊಂದಿಗೆ ನೀವು ಕೆಲವು ಮಾಹಿತಿಯನ್ನು ಹಂಚಿಕೊಳ್ಳುತ್ತೀರಿ. ಹಾಗಾಗಿ ನಾವು ಸಂಗ್ರಹಿಸುವ ಮಾಹಿತಿ, ಅದನ್ನು ಹೇಗೆ ಬಳಸುತ್ತೇವೆ, ಅದನ್ನು ಹೇಗೆ ಹಂಚಿಕೊಳ್ಳುತ್ತೇವೆ ಮತ್ತು ನೀವು ಹೊಂದಿರುವ ನಿಯಂತ್ರಣಗಳ ಕುರಿತು ನಾವು ಮುಂಚಿತವಾಗಿ ತಿಳಿಸಲು ಬಯಸುತ್ತೇವೆ.

ಇದು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಮಾಡಲು ಹಾಗೂ ಕಷ್ಟಕರ ಭಾಷೆಯನ್ನು ಮತ್ತು ಕಾನೂನಾತ್ಮಕ ಶಬ್ದಗಳನ್ನು ಆದಷ್ಟೂ ಕಡಿಮೆ ರೀತಿಯಲ್ಲಿ ಬಳಸಿ ಈ ಗೌಪ್ಯತಾ ನೀತಿಯನ್ನು ಬರೆಯಲು ನಾವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದ್ದೇವೆ. ನೀವು ನಂತರ ಏನನ್ನಾದರೂ ಪರಿಶೀಲಿಸಲು ಬಯಸಿದರೆ, ನೀವು ಯಾವಾಗಲೂ ನಮ್ಮ ಗೌಪ್ಯತೆ ಕೇಂದ್ರವನ್ನು ನೋಡಬಹುದು. ನಾವು ನಮ್ಮ ಗೌಪ್ಯತೆಯ ಪದ್ದತಿಗಳ ಸಾರಾಂಶಗಳನ್ನು ನೀವು ಸುಲಭವಾಗ ಅರ್ಥಮಾಡಿಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಿದ್ದೇವೆ. ಉದಾಹರಣೆಗೆ, ನಮ್ಮ ಉತ್ಪನ್ನದ ಪ್ರಕಾರ ಗೌಪ್ಯತೆ ಪುಟವು ಉತ್ಪನ್ನ ನಿರ್ದಿಷ್ಟವಾದ ಮಾಹಿತಿ ಮತ್ತು ಸಲಹೆ ಮತ್ತು ತಂತ್ರಗಳೊಂದಿಗೆ ಬೆಂಬಲ ಪುಟಗಳಿಗೆ ಲಿಂಕ್‌ಗಳನ್ನು ಒದಗಿಸುತ್ತದೆ. ಇನ್ನೂ ಈ ಕುರಿತು ಸಂದೇಹಗಳಿವೆಯ? ನಮ್ಮನ್ನು ಸಂಪರ್ಕಿಸಿ ಅಷ್ಟೇ.

ನಾವು ಸಂಗ್ರಹಿಸುವ ಮಾಹಿತಿ

ನಾವು ಸಂಗ್ರಹಿಸುವ ಮಾಹಿತಿಯಲ್ಲಿ ಮುಖ್ಯವಾಗಿ ಮೂರು ಮೂಲ ವರ್ಗಗಳಿವೆ:

  • ನೀವು ಒದಗಿಸುವ ಮಾಹಿತಿ.

  • ನೀವು ನಮ್ಮ ಸೇವೆಗಳನ್ನು ಬಳಸುವಾಗ ನಾವು ಪಡೆಯುವ ಮಾಹಿತಿ.

  • ಮೂರನೇ ವ್ಯಕ್ತಿಗಳಿಂದ ನಾವು ಪಡೆಯುವ ಮಾಹಿತಿ.

ಈ ಪ್ರತಿ ವರ್ಗಗಳ ಬಗ್ಗೆ ಇಲ್ಲಿ ಸ್ವಲ್ಪ ಹೆಚ್ಚು ಮಾಹಿತಿ ಇದೆ.

ನೀವು ಒದಗಿಸುವ ಮಾಹಿತಿ

ನಮ್ಮ ಸೇವೆಗಳೊಂದಿಗೆ ನೀವು ಸಂವಹನ ನಡೆಸಿದಾಗ, ನೀವು ನಮಗೆ ಒದಗಿಸುವ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ. ಉದಾಹರಣೆಗೆ, ನಮ್ಮ ಹಲವು ಸೇವೆಗಳಿಗೆ ನೀವು ಒಂದು ಖಾತೆಯನ್ನು ಸೆಟಪ್ ಮಾಡುವುದು ಅಗತ್ಯವಾಗಿರುತ್ತದೆ, ಹಾಗಾಗಿ ನಾವು ನಿಮ್ಮ ಹೆಸರು, ಬಳಕೆದಾರರ ಹೆಸರು, ಪಾಸ್‌ವರ್ಡ್, ಇಮೇಲ್ ವಿಳಾಸ, ಫೋನ್ ಸಂಖ್ಯೆ ಮತ್ತು ಜನ್ಮದಿನಾಂಕದಂತಹ ನಿಮ್ಮ ಕುರಿತ ಕೆಲವು ಪ್ರಮುಖ ವಿವರಗಳನ್ನು ಸಂಗ್ರಹಿಸಬೇಕಾಗುತ್ತದೆ. ನಿಮ್ಮ ಪ್ರೊಫೈಲ್ ಚಿತ್ರ ಅಥವಾ Bitmoji ಅವತಾರ್‌ನಂಥ, ನಮ್ಮ ಸೇವೆಗಳಲ್ಲಿ ಸಾರ್ವಜನಿಕವಾಗಿ ಕಾಣಿಸುವ ಕೆಲವು ಹೆಚ್ಚುವರಿ ಮಾಹಿತಿ ಒದಗಿಸುವಂತೆಯೂ ನಾವು ನಿಮ್ಮನ್ನು ಕೇಳಬಹುದು. ಮತ್ತು ಒಂದು ವೇಳೆ ಏನನ್ನಾದರೂ, ಅಂದರೆ ಇತ್ತೀಚಿನ ಸ್ನೀಕರ್ಸ್‌ನಂತಹದನ್ನು ಖರೀದಿಸಲು ನೀವು ನಮ್ಮ ವಾಣಿಜ್ಯ ಉತ್ಪನ್ನಗಳನ್ನು ಬಳಸುತ್ತಿದ್ದರೆ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆ ಮತ್ತು ಸಂಬಂಧಿಸಿದ ಖಾತೆ ಮಾಹಿತಿಯಂತಹ ನಿಮ್ಮ ಪಾವತಿ ಮಾಹಿತಿಗಾಗಿ ನಾವು ಕೇಳಬಹುದು.

ಖಂಡಿತವಾಗಿ, Snap ಗಳು ಮತ್ತು ಚಾಟ್‌ಗಳು, My AI ನೊಂದಿಗಿನ ಸಂಭಾಷಣೆಗಳು, ಸ್ಪಾಟ್‌ಲೈಟ್‌ ಸಲ್ಲಿಕೆಗಳು, ಸಾರ್ವಜನಿಕ ಪ್ರೊಫೈಲ್ ಮಾಹಿತಿ, ನೆನಪುಗಳು ಮುಂತಾದವುಗಳಂತಹ ನಮ್ಮ ಸೇವೆಯ ಮೂಲಕ ನೀವು ಕಳುಹಿಸಿದ ಯಾವುದೇ ಮಾಹಿತಿಯನ್ನು ಕೂಡ ನಮಗೆ ಒದಗಿಸುತ್ತೀರಿ. ನಿಮ್ಮ Snap ಗಳು, ಚಾಟ್‌ಗಳು ಮತ್ತು ಇತರ ಯಾವುದೇ ವಿಷಯವನ್ನು ನೋಡಿದ ಬಳಕೆದಾರರು ಆ ವಿಷಯವನ್ನು ಯಾವಾಗಲೂ ಉಳಿಸಬಹುದು ಅಥವಾ ಆ್ಯಪ್‌ನ ಹೊರಗಡೆ ನಕಲಿಸಬಹುದು ಎನ್ನುವುದನ್ನು ಯಾವಾಗಲೂ ಗಮನದಲ್ಲಿಟ್ಟುಕೊಳ್ಳಿ. ಹಾಗಾಗಿ, ಇಂಟರ್‌ನೆಟ್‌ಗೆ ಸಾರ್ವತ್ರಿಕವಾಗಿ ಅನ್ವಯಿಸುವ ಅದೇ ಸಾಮಾನ್ಯ ತಿಳುವಳಿಕೆಯು ನಮ್ಮ ಸೇವೆಗಳಿಗೂ ಅನ್ವಯಿಸುತ್ತದೆ: ಮತ್ತೊಬ್ಬರು ಉಳಿಸುವುದನ್ನು ಅಥವಾ ಹಂಚಿಕೊಳ್ಳುವುದನ್ನು ನೀವು ಬಯಸದಿರುವ ಸಂದೇಶಗಳನ್ನು ಕಳುಹಿಸಬೇಡಿ ಅಥವಾ ವಿಷಯವನ್ನು ಹಂಚಿಕೊಳ್ಳಬೇಡಿ.

ನೀವು ಬೆಂಬಲವನ್ನು ಸಂಪರ್ಕಿಸಿದಾಗ ಅಥವಾ ಬೇರೆ ಯಾವುದೇ ವಿಧಾನದಲ್ಲಿ ನಮ್ಮೊಂದಿಗೆ ಸಂವಹನ ನಡೆಸಿದಾಗ, ನೀವು ಒದಗಿಸುವ ಅಥವಾ ನಿಮ್ಮ ಪ್ರಶ್ನೆ ಬಗೆಹರಿಸಲು ನಮಗೆ ಅಗತ್ಯವಿರುವ ಯಾವುದೇ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ.

ನೀವು ನಮ್ಮ ಸೇವೆಗಳನ್ನು ಬಳಸಿದಾಗ ನಾವು ಪಡೆಯುವ ಮಾಹಿತಿ

ನೀವು ನಮ್ಮ ಸೇವೆಗಳನ್ನು ಬಳಸುವಾಗ, ನೀವು ಯಾವ ಸೇವೆಗಳನ್ನು ಬಳಸುತ್ತೀರಿ ಮತ್ತು ಅವುಗಳನ್ನು ಹೇಗೆ ಬಳಸುತ್ತೀರಿ ಎಂಬುದರ ಕುರಿತು ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಉದಾಹರಣೆಗೆ, ನೀವು ನಿರ್ದಿಷ್ಟ ಕಥೆಯನ್ನು ವೀಕ್ಷಿಸಿದಿರಿ, ಸ್ಪಾಟ್‌ಲೈಟ್‌ನಲ್ಲಿ ಬೆಕ್ಕಿನ ವೀಡಿಯೊಗಳನ್ನು ವೀಕ್ಷಿಸಿದಿರಿ, ಒಂದಿಷ್ಟು ಸಮಯಾವಧಿಗೆ ನಿರ್ದಿಷ್ಟ ಜಾಹೀರಾತನ್ನು ನೋಡಿದಿರಿ, Snap ಮ್ಯಾಪ್ ಅನ್ವೇಷಿಸಿದಿರಿ ಮತ್ತು ಕೆಲವು Snap ಗಳನ್ನು ಕಳುಹಿಸಿದಿರಿ ಎನ್ನುವುದು ನಮಗೆ ತಿಳಿದಿರಬಹುದು. ನೀವು ನಮ್ಮ ಸೇವೆಗಳನ್ನು ಬಳಸುವಾಗ ನಾವು ಸಂಗ್ರಹಿಸುವ ಮಾಹಿತಿಯ ಪೂರ್ಣ ವಿವರಣೆ ಇಲ್ಲಿದೆ:

  • ಬಳಕೆಯ ಮಾಹಿತಿ. ನಮ್ಮ ಸೇವೆಗಳನ್ನು ಬಳಸಿಕೊಂಡು ನೀವು ನಡೆಸುವ ಚಟುವಟಿಕೆಯ ಬಗ್ಗೆ ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಉದಾಹರಣೆಗೆ, ನಾವು ಇದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬಹುದು:

    • ನಮ್ಮ ಸೇವೆಗಳೊಂದಿಗೆ ನೀವು ಹೇಗೆ ಸಂವಹನ ನಡೆಸುತ್ತೀರಿ, ಉದಾಹರಣೆಗೆ ನೀವು ಯಾವ ಫಿಲ್ಟರ್‌ಗಳು ಅಥವಾ ಲೆನ್ಸ್‌ಗಳನ್ನು ನೋಡಿದಿರಿ ಅಥವಾ Snap ಗಳಿಗೆ ಅನ್ವಯಿಸಿದಿರಿ, ಯಾವ ಕಥೆಗಳನ್ನು ನೀವು ವೀಕ್ಷಿಸುತ್ತೀರಿ, ನೀವು Spectacles ಬಳಸುತ್ತಿದ್ದೀರಾ, My AI ಜೊತೆಗೆ ನಿಮ್ಮ ಸಂವಹನ ಅಥವಾ ನೀವು ಯಾವ ಹುಡುಕಾಟ ಪ್ರಶ್ನೆಗಳನ್ನು ಸಲ್ಲಿಸುತ್ತೀರಿ.

    • ಇತರ Snapchatter ಗಳ ಜೊತೆ ನೀವು ಹೇಗೆ ಸಂವಹನ ನಡೆಸುತ್ತೀರಿ, ಉದಾಹರಣೆಗೆ ಅವರ ಹೆಸರುಗಳು, ನಿಮ್ಮ ಸಂವಹನಗಳ ಸಮಯ ಮತ್ತು ದಿನಾಂಕ, ನಿಮ್ಮ ಸ್ನೇಹಿತರೊಂದಿಗೆ ನೀವು ವಿನಿಮಯ ಮಾಡಿಕೊಳ್ಳುವ ಸಂದೇಶಗಳ ಸಂಖ್ಯೆ, ನೀವು ಅತ್ಯಂತ ಹೆಚ್ಚು ಸಂದೇಶಗಳನ್ನು ಯಾವ ಸ್ನೇಹಿತರೊಂದಿಗೆ ವಿನಿಮಯ ಮಾಡಿಕೊಳ್ಳುತ್ತೀರಿ ಮತ್ತು ಸಂದೇಶಗಳೊಂದಿಗಿನ ನಿಮ್ಮ ಸಂವಹನಗಳು (ಉದಾಹರಣೆಗೆ ನೀವು ಒಂದು ಸಂದೇಶ ತೆರೆದಾಗ ಅಥವಾ ನೀವು ಸ್ಕ್ರೀನ್‌ಶಾಟ್ ಅನ್ನು ಸೆರೆಹಿಡಿದಿರಿ ಎಂದು ನಾವು ಪತ್ತೆಮಾಡಿದಾಗ).

  • ವಿಷಯ ಮಾಹಿತಿ. ನೀವು ನಮ್ಮ ಸೇವೆಗಳನ್ನು ಬಳಸುವಾಗ, ನೀವು ಕ್ಯಾಮೆರಾ ಅಥವಾ ಕ್ರಿಯೇಟಿವ್ ಟೂಲ್ಸ್ ಜೊತೆಗೆ ತೊಡಗಿಕೊಳ್ಳಬಹುದು ಮತ್ತು ಕಥೆಗಳು, Snap ಗಳು ಮತ್ತು ಇನ್ನಷ್ಟು ಸೇರಿದಂತೆ ವಿವಿಧ ಬಗೆಯ ವಿಷಯವನ್ನು ರಚಿಸಬಹುದು ಮತ್ತು ಹಂಚಿಕೊಳ್ಳಬಹುದು. ನಮ್ಮ ಸೇವೆಗಳಲ್ಲಿ ನೀವು ರಚಿಸುವ ಅಥವಾ ಒದಗಿಸುವ ವಿಷಯ ಹಾಗೂ ಕ್ಯಾಮೆರಾ ಮತ್ತು ಕ್ರಿಯೇಟಿವ್ ಟೂಲ್ಸ್ ಜೊತೆಗೆ ನಿಮ್ಮ ತೊಡಗಿಕೊಳ್ಳುವಿಕೆಯ ಕುರಿತು ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಕೆಲವು ವಿಷಯಕ್ಕಾಗಿ, ಚಿತ್ರ, ವೀಡಿಯೊ ಮತ್ತು ಆಡಿಯೊದ ವಿಷಯ ಆಧರಿಸಿದ ಮಾಹಿತಿಯನ್ನು ಇದು ಒಳಗೊಂಡಿರಬಹುದು. ಉದಾಹರಣೆಗೆ, ನೀವು ಬಾಸ್ಕೆಟ್‌ಬಾಲ್ ಆಡುತ್ತಿರುವ ಸ್ಪಾಟ್‌ಲೈಟ್‌ Snap ಅನ್ನು ನೀವು ಪೋಸ್ಟ್ ಮಾಡಿದರೆ, ಬಾಸ್ಕೆಟ್‌ಬಾಲ್ ಕುರಿತು ನಾವು ಇತರ ಸ್ಪಾಟ್‌ಲೈಟ್‌ Snap ಗಳನ್ನು ನಾವು ನಿಮಗೆ ತೋರಿಸಬಹುದು. ಮೆಟಾಡೇಟಾ ಸೇರಿದಂತೆ, ವಿಷಯದ ಕುರಿತ ಇತರ ಮಾಹಿತಿಯನ್ನು ಕೂಡ ನಾವು ಸಂಗ್ರಹಿಸಬಹುದು — ಇದು ಸ್ವತಃ ವಿಷಯವನ್ನು ಕುರಿತಾದ, ಅದನ್ನು ಪೋಸ್ಟ್ ಮಾಡಿದ ದಿನಾಂಕ ಮತ್ತು ಸಮಯ ಹಾಗೂ ಅದನ್ನು ಯಾರು ವೀಕ್ಷಿಸಿದರು ಎಂಬಂತಹ ಮಾಹಿತಿಯಾಗಿದೆ. 

  • ಸಾಧನ ಮಾಹಿತಿ. ನೀವು ಬಳಸುವ ಸಾಧನಗಳು ಮತ್ತು ಅದರ ಬಗ್ಗೆ ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಉದಾಹರಣೆಗೆ, ನಾವು ಇವುಗಳನ್ನು ಸಂಗ್ರಹಿಸಬಹುದು:

    • ಹಾರ್ಡ್‌ವೇರ್ ಮಾದರಿ, ಆಪರೇಟಿಂಗ್ ಸಿಸ್ಟಮ್ ಆವೃತ್ತಿ, ಸಾಧನ ಮೆಮೊರಿ, ಜಾಹೀರಾತು ಗುರುತಿಸುವಿಕೆಗಳು, ಅನನ್ಯ ಅಪ್ಲಿಕೇಶನ್ ಗುರುತಿಸುವಿಕೆಗಳು, ಸ್ಥಾಪಿಸಲಾದ ಅಪ್ಲಿಕೇಶನ್‌ಗಳು, ಆ್ಯಪ್‌ಗಳು ಸಾಧನ ಗುರುತಿಸುವಿಕೆಗಳು, ಸಾಧನ ಬಳಕೆಯ ಡೇಟಾ, ಬ್ರೌಸರ್ ಪ್ರಕಾರ, ಸ್ಥಾಪಿಸಲಾದ ಕೀಬೋರ್ಡ್‌ಗಳು, ಭಾಷೆ, ಬ್ಯಾಟರಿ ಮಟ್ಟ ಮತ್ತು ಸಮಯ ವಲಯ ಮುಂತಾದ ನಿಮ್ಮ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಕುರಿತು ಮಾಹಿತಿ;

    • ಸಾಧನ ಸಂವೇದಕಗಳಾದ ಅಕ್ಸೆಲೆರೊಮೀಟರ್‌ಗಳು, ಗೈರೊಸ್ಕೋಪ್‌ಗಳು, ದಿಕ್ಸೂಚಿಗಳು, ಮೈಕ್ರೊಫೋನ್‌ಗಳು ಮತ್ತು ಹೆಡ್‌ಫೋನ್‌ಗಳಿಗೆ ನೀವು ಸಂಪರ್ಕಿಸಿದ್ದೀರಾ ಎಂಬಂತಹ ಮಾಹಿತಿ; ಮತ್ತು

    • ಮೊಬೈಲ್ ಫೋನ್ ಸಂಖ್ಯೆ, ಸೇವಾ ಪೂರೈಕೆದಾರ, IP ವಿಳಾಸ ಮತ್ತು ಸಿಗ್ನಲ್ ಸಾಮರ್ಥ್ಯದಂತಹ ನಿಮ್ಮ ವೈಯರ್‌ಲೆಸ್ ಮತ್ತು ಮೊಬೈಲ್ ನೆಟ್‌ವರ್ಕ್ ಸಂಪರ್ಕಗಳ ಬಗ್ಗೆ ಮಾಹಿತಿಗಳು.

  • ಸಾಧನದ ಪೋನ್‌ಬುಕ್. ನಮ್ಮ ಸೇವೆಗಳು ಸ್ನೇಹಿತರೊಂದಿಗೆ ಸಂವಹನ ನಡೆಸುವ ಕುರಿತಾಗಿರುವುದರಿಂದ, ನಾವು — ನಿಮ್ಮ ಅನುಮತಿಯೊಂದಿಗೆ — ನಿಮ್ಮ ಸಂಪರ್ಕಗಳು ಮತ್ತು ಸಂಬಂಧಿಸಿದ ಮಾಹಿತಿಗಳಂತಹ ಮಾಹಿತಿಯನ್ನು ನಿಮ್ಮ ಸಾಧನದ ಫೋನ್‌ಬುಕ್‌ನಿಂದ ಸಂಗ್ರಹಿಸಬಹುದು.

  • ಕ್ಯಾಮೆರಾ, ಫೋಟೋಗಳು ಮತ್ತು ಆಡಿಯೋ. ನಮ್ಮ ಹಲವು ಸೇವೆಗಳಿಗೆ ನಿಮ್ಮ ಸಾಧನದ ಕ್ಯಾಮೆರಾ, ಫೋಟೋಗಳು ಮತ್ತು ಮೈಕ್ರೋಫೋನ್‌ನಿಂದ ಚಿತ್ರಗಳು ಮತ್ತು ಇತರ ಮಾಹಿತಿಯನ್ನು ನಾವು ಸಂಗ್ರಹಿಸಬೇಕಾಗುತ್ತದೆ. ಉದಾಹರಣೆಗೆ, ನಿಮ್ಮ ಕ್ಯಾಮೆರಾ ಅಥವಾ ಫೋಟೋಗಳಿಗೆ ನಮಗೆ ಪ್ರವೇಶವಿಲ್ಲದಿದ್ದರೆ, ನಿಮ್ಮ ಕ್ಯಾಮೆರಾ ರೋಲ್‌ನಿಂದ Snaps ಕ್ಥಳುಹಿಸಲು ಅಥವಾ ಫೋಟೋಗಳನ್ನು ಅಪ್‌ಲೋಡ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.

  • ಸ್ಥಳ ಮಾಹಿತಿ. ನೀವು ನಮ್ಮ ಸೇವೆಗಳನ್ನು ಬಳಸುವಾಗ ನಾವು ನಿಮ್ಮ ಸ್ಥಳದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬಹುದು. ನಿಮ್ಮ ಅನುಮತಿಯೊಂದಿಗೆ, GPS ಸಂಕೇತಗಳಂತಹ ವಿಧಾನಗಳನ್ನು ಒಳಗೊಂಡ ನಿಮ್ಮ ನಿಖರ ಸ್ಥಳದ ಕುರಿತ ಮಾಹಿತಿಯನ್ನು ಕೂಡ ನಾವು ಸಂಗ್ರಹಿಸಬಹುದು.

  • ಕುಕೀಗಳು ಮತ್ತು ಇತರ ತಂತ್ರಜ್ಞಾನಗಳಿಂದ ಸಂಗ್ರಹಿಸುವ ಮಾಹಿತಿ. ಹೆಚ್ಚಿನ ಆನ್‌ಲೈನ್ ಸೇವೆಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಂತೆ, ನಿಮ್ಮ ಚಟುವಟಿಕೆ, ಬ್ರೌಸರ್ ಮತ್ತು ಸಾಧನದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ನಾವು ಕುಕೀಗಳು ಮತ್ತು ಇತರ ತಂತ್ರಜ್ಞಾನಗಳನ್ನು ವೆಬ್ ಬೀಕನ್‌ಗಳು, ವೆಬ್ ಸಂಗ್ರಹಣೆ ಮತ್ತು ಅನನ್ಯ ಜಾಹೀರಾತು ಗುರುತಿಸುವಿಕೆಗಳನ್ನು ನಾವು ಬಳಸಬಹುದು. ನಮ್ಮ ಪಾಲುದಾರರ ಮೂಲಕ ನಾವು ನೀಡುವ ಸೇವೆಗಳೊಂದಿಗೆ ನೀವು ಸಂವಹನ ನಡೆಸಿದಾಗ ಮಾಹಿತಿಯನ್ನು ಸಂಗ್ರಹಿಸಲು ನಾವು ಈ ತಂತ್ರಜ್ಞಾನಗಳನ್ನು ಬಳಸಬಹುದು, ಉದಾ. ಜಾಹೀರಾತು ಮತ್ತು ವಾಣಿಜ್ಯ ವೈಶಿಷ್ಟ್ಯತೆಗಳು. ಉದಾಹರಣೆಗೆ, ನಿಮಗೆ ಅತ್ಯಂತ ಪ್ರಸ್ತುತವಾದ ಜಾಹೀರಾತುಗಳನ್ನು ತೋರಿಸುವಾಗ ಇತರ ವೆಬ್‌ಸೈಟ್‌ಗಳಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ನಾವು ಬಳಸಬಹುದು. ಹೆಚ್ಚಿನ ವೆಬ್ ಬ್ರೌಸರ್‌ಗಳನ್ನು ಪೂರ್ವನಿಯೋಜಿತವಾಗಿ ಕುಕೀಗಳನ್ನು ಸ್ವೀಕರಿಸಲು ಹೊಂದಿಸಲಾಗಿದೆ. ನೀವು ಬಯಸಿದರೆ, ನಿಮ್ಮ ಬ್ರೌಸರ್ ಅಥವಾ ಸಾಧನದಲ್ಲಿನ ಸೆಟ್ಟಿಂಗ್‌ಗಳ ಮೂಲಕ ನೀವು ಸಾಮಾನ್ಯವಾಗಿ ಬ್ರೌಸರ್ ಕುಕೀಗಳನ್ನು ತೆಗೆದುಹಾಕಬಹುದು ಅಥವಾ ತಿರಸ್ಕರಿಸಬಹುದು. ಕುಕೀಗಳನ್ನು ತೆಗೆದುಹಾಕುವುದು ಅಥವಾ ತಿರಸ್ಕರಿಸುವುದು ನಮ್ಮ ಸೇವೆಗಳ ಲಭ್ಯತೆ ಮತ್ತು ಕ್ರಿಯಾತ್ಮಕತೆಯ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ನೆನಪಿನಲ್ಲಿಡಿ. ನಮ್ಮ ಸೇವೆಗಳಲ್ಲಿ ಮತ್ತು ನಿಮ್ಮ ಆಯ್ಕೆಗಳಲ್ಲಿ ನಾವು ಮತ್ತು ನಮ್ಮ ಪಾಲುದಾರರು ಕುಕೀಗಳನ್ನು ಹೇಗೆ ಬಳಸುತ್ತೇವೆ ಎನ್ನುವುದರ ಕುರಿತು ಇನ್ನಷ್ಟು ಮಾಹಿತಿಗಾಗಿ, ದಯವಿಟ್ಟು ನಮ್ಮ ಕುಕೀ ನೀತಿಯನ್ನು ಪರಿಶೀಲಿಸಿ.

  • ಲಾಗ್ ಮಾಹಿತಿ. ನೀವು ನಮ್ಮ ವೆಬ್‌ಸೈಟ್ ಬಳಸಿದಾಗ ನಾವು ಲಾಗ್ ಮಾಹಿತಿಯನ್ನು ಕೂಡ ಸಂಗ್ರಹಿಸಬಹುದು, ಉದಾಹರಣೆಗೆ:

    • ನೀವು ನಮ್ಮ ಸೇವೆಗಳನ್ನು ಹೇಗೆ ಬಳಸಿದ್ದೀರಿ ಎಂಬುದರ ಬಗ್ಗೆ ಮಾಹಿತಿ;

    • ಸಾಧನದ ಮಾಹಿತಿ, ಉದಾಹರಣೆಗೆ ನಿಮ್ಮ ವೆಬ್ ಬ್ರೌಸರ್ ವಿಧ ಮತ್ತು ಭಾಷೆ;

    • ಆಕ್ಸೆಸ್ ಸಮಯಗಳು;

    • ನೋಡಲಾದ ಪುಟಗಳು;

    • IP ವಿಳಾಸ;

    • ನಿಮ್ಮ ಸಾಧನ ಅಥವಾ ಬ್ರೌಸರ್ ಅನ್ನು ಅನನ್ಯವಾಗಿ ಗುರುತಿಸಬಹುದಾದ ಕುಕೀಸ್ ಅಥವಾ ಇತರ ತಂತ್ರಜ್ಞಾನಗಳೊಂದಿಗೆ ಸಂಬಂಧಿಸಿ ಗುರುತಿಸುವಿಕೆಗಳು; ಮತ್ತು

    • ನಮ್ಮ ವೆಬ್‌ಸೈಟ್ ಅನ್ನು ನ್ಯಾವಿಗೇಟ್ ಮಾಡುವ ಮೊದಲು ಅಥವಾ ನಂತರ ನೀವು ಭೇಟಿ ನೀಡಿದ ಪುಟಗಳು.

  • ನಿಮ್ಮ ಅನುಮತಿಯೊಂದಿಗೆ, ಇತರ ಮಾಹಿತಿ. ನೀವು ನಮ್ಮ ಸೇವೆಗಳೊಂದಿಗೆ ಸಂವಹನ ನಡೆಸಿದಾಗ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಲು ನಾವು ನಿಮ್ಮ ಅನುಮತಿ ಕೇಳುವಂತಹ ಸಂದರ್ಭಗಳು ಇರಬಹುದು. ಉದಾಹರಣೆಗೆ, ನೀವು ನಮ್ಮ ಮೇಡ್ ಫಾರ್ ಮೀ ಪ್ಯಾನೆಲ್‌ನಲ್ಲಿ ಭಾಗವಹಿಸಲು ಬಯಸಿದರೆ ಅಥವಾ ಕೆಲವು ಡೇಟಾವನ್ನು ಸೂಕ್ಷ್ಮ ಎಂದು ಪರಿಗಣಿಸಲಾಗಿರುವ ಅಧಿಕಾರ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದರೆ, ನಾವು ನಿಮ್ಮ ಅನುಮತಿಯನ್ನು ಕೇಳುತ್ತೇವೆ ಮತ್ತು ಯಾವುದಾದರೂ ಇದ್ದಲ್ಲಿ, ಸೂಕ್ಷ್ಮ ಡೇಟಾ ಸೇರಿದಂತೆ ಯಾವ ಡೇಟಾವನ್ನು ನಾವು ಸಂಗ್ರಹಿಸುತ್ತಿದ್ದೇವೆ ಎನ್ನುವ ಕುರಿತು ನಾವು ನಿಮಗೆ ಮುನ್ಸೂಚನೆ ನೀಡುತ್ತೇವೆ. 

ಥರ್ಡ್ ಪಾರ್ಟಿಗಳಿಂದ ನಾವು ಸಂಗ್ರಹಿಸಿದ ಮಾಹಿತಿ

ನಾವು ನಿಮ್ಮ ಬಗ್ಗೆ ಇತರ ಬಳಕೆದಾರರು, ನಮ್ಮ ಅಂಗಸಂಸ್ಥೆಗಳು ಮತ್ತು ಮೂರನೇ ವ್ಯಕ್ತಿಗಳಿಂದ ಮಾಹಿತಿಯನ್ನು ಸಂಗ್ರಹಿಸಬಹುದು. ಕೆಲವು ಉದಾಹರಣೆಗಳು ಇಲ್ಲಿವೆ:

  • ನಿಮ್ಮ Snapchat ಖಾತೆಯನ್ನು ನೀವು ಇನ್ನೊಂದು ಸೇವೆಗೆ ಲಿಂಕ್ ಮಾಡಿದರೆ (Bitmoji ಅಥವಾ ಥರ್ಡ್ ಪಾರ್ಟಿ ಅಪ್ಲಿಕೇಶನ್‌ನಂತಹ), ನೀವು ಆ ಸೇವೆಯನ್ನು ಹೇಗೆ ಬಳಸುವಿರಿ ಎಂಬಂತಹ ಇತರ ಸೇವೆಯಿಂದ ನಾವು ಮಾಹಿತಿಯನ್ನು ಪಡೆಯಬಹುದು.

  • ನಾವು ಜಾಹೀರಾತುದಾರರು, ಆ್ಯಪ್ ಡೆವಲಪರ್‌ಗಳು, ಪ್ರಕಾಶಕರು ಮತ್ತು ಇತರ ತೃತೀಯ ಪಕ್ಷಗಳಿಂದ ಮಾಹಿತಿಯನ್ನು ಪಡೆಯಬಹುದು. ಈ ಮಾಹಿತಿಯನ್ನು ನಾವು, ಜಾಹೀರಾತುಗಳ ಕಾರ್ಯಕ್ಷಮತೆಯನ್ನು ಗುರಿಯಾಗಿಸಲು ಅಥವಾ ಅಳೆಯಲು ನೆರವಾಗುವುದಕ್ಕೆ, ಬೇರೆ ವಿಧಾನಗಳಲ್ಲಿ ಬಳಸಿಕೊಳ್ಳಬಹುದು. ನಮ್ಮ ಗ್ರಾಹಕ ಸೇವಾ ಸೈಟ್‌ನಲ್ಲಿ ಈ ರೀತಿಯ ತೃತೀಯ-ಪಕ್ಷದ ಡೇಟಾದ ನಮ್ಮ ಬಳಕೆಯ ಕುರಿತು ನೀವು ಇನ್ನಷ್ಟು ತಿಳಿದುಕೊಳ್ಳಬಹುದು.

  • ಒಂದು ವೇಳೆ ಇನ್ನೊಬ್ಬ ಬಳಕೆದಾರ ತಮ್ಮ ಸಂಪರ್ಕ ಪಟ್ಟಿಯನ್ನು ಅಪ್‌ಲೋಡ್ ಮಾಡಿದರೆ, ನಾವು ನಿಮ್ಮ ಕುರಿತು ಸಂಗ್ರಹಿಸಿದ ಇತರ ಮಾಹಿತಿಯ ಜೊತೆಗೆ ಆ ಬಳಕೆದಾರರ ಸಂಪರ್ಕ ಪಟ್ಟಿಯಿಂದ ನಿಮ್ಮ ಕುರಿತ ಮಾಹಿತಿಯನ್ನು ಸಂಯೋಜಿಸಬಹುದು.

  • ನೀವು ನಮಗೆ ನಿಮ್ಮ ಸಂಪರ್ಕ ಮಾಹಿತಿಯನ್ನು ಒದಗಿಸಿದರೆ, ಇತರ ಮೆಸೇಜಿಂಗ್ ಫ್ಲ್ಯಾಟ್‌ಫಾರ್ಮ್‌ಗಳಲ್ಲಿ ನಾವು ನಿಮ್ಮೊಂದಿಗೆ ಸಂವಹನ ನಡೆಸಬಹುದೇ ಎನ್ನುವುದನ್ನು ನಿರ್ಧರಿಸಲು ನಾವು ಆ ಮಾಹಿತಿ ಮತ್ತು ತೃತೀಯ ಪಕ್ಷಗಳಿಂದ ಪಡೆದುಕೊಂಡ ಮಾಹಿತಿಯನ್ನು ಬಳಸಬಹುದು. 

  • ನಮ್ಮ ಸೇವೆಯ ನಿಯಮಗಳು ಮತ್ತು ಕಮ್ಯುನಿಟಿ ಮಾರ್ಗಸೂಚಿಗಳ ಸಂಭಾವ್ಯ ಉಲ್ಲಂಘನೆಕಾರರ ಕುರಿತು, ವೆಬ್‌ಸೈಟ್ ಪ್ರಕಾಶಕರು, ಸಾಮಾಜಿಕ ನೆಟ್‌ವರ್ಕ್ ಪೂರೈಕೆದಾರರು, ಕಾನೂನು ಜಾರಿ ಸಂಸ್ಥೆ ಮತ್ತು ಇತರರು ಸೇರಿದಂತೆ, ತೃತೀಯ ಪಕ್ಷಗಳಿಂದ ನಾವು ಮಾಹಿತಿಯನ್ನು ಸ್ವೀಕರಿಸಬಹುದು.

ನಾವು ಮಾಹಿತಿಯನ್ನು ಹೇಗೆ ಬಳಸುತ್ತೇವೆ

ಸಂಗ್ರಹಿಸಿದ ಮಾಹಿತಿಯನ್ನು ನಾವು ಏನು ಮಾಡುತ್ತೇವೆ? ವಿವರವಾದ ಉತ್ತರಕ್ಕಾಗಿ, ಇಲ್ಲಿಗೆ ಹೋಗಿ. ಸಂಕ್ಷಿಪ್ತ ಉತ್ತರ: ನಾವು ನಿರಂತರವಾಗಿ ಶ್ರಮವಹಿಸಿ ಸುಧಾರಿಸಿದ ವಿವಿಧ ಉತ್ಪನ್ನಗಳು ಮತ್ತು ಸೇವೆಗಳನ್ನು ನಿಮಗೆ ಒದಗಿಸುತ್ತೇವೆ. ನಾವು ಅದನ್ನು ಹೇಗೆ ಮಾಡುತ್ತೇವೆ ಎಂಬುದು ಇಲ್ಲಿದೆ:

  • ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸುವುದು, ನಿರ್ವಹಿಸುವುದು, ಸುಧಾರಿಸುವುದು, ತಲುಪಿಸುವುದು ಮತ್ತು ರಕ್ಷಿಸುವುದು.

  • ವಯುಕ್ತಿಕರಿಸಲು, ಮತ್ತು ನಮ್ಮ ಜಾಹೀರಾತು ಸೇವೆಯನ್ನು ಉತ್ತಮಗೊಳಿಸಲು, ಜಾಹೀರಾತು ತಲುಪುವುದಕ್ಕೆ ಸಹಾಯ ಮಾಡಲು, ಮತ್ತು ಜಾಹೀರಾತು ಅಳೆಯಲು, ಅಲ್ಲದೆ ನಿಮ್ಮ ಕಂಟೆಂಟ್ ಮತ್ತು ಸ್ಥಳ ಮಾಹಿತಿ (ಮತ್ತೆ ನೆನಪಿಸುವುದೇನೆಂದರೆ, ನೀವು ನಿಮ್ಮ ಸ್ಥಳ ಮಾಹಿತಿಯನ್ನು ಸಂಗ್ರಹಿಸಲು ಅವಕಾಶ ನೀಡಿದರೆ ಮಾತ್ರ), ಚಾಲ್ತಿಯಲ್ಲಿದ್ದಾಗ ಮತ್ತು ಇಲ್ಲದಿರುವಾಗ. ನಾವು ಇದನ್ನು ಮಾಡಲು ನಿಮ್ಮ ಸಾಧನದಲ್ಲಿ ಮೂರನೇ ಪಕ್ಷಕಾರ ಆಪ್‌ಗಳು ಮತ್ತು ವೆಬ್‌ಸೈಟ್‌ಗಳ ನಿಮ್ಮ ಬಳಕೆಯ ಬಗ್ಗೆ ಮಾಹಿತಿಯನ್ನೂ ಸಂಗ್ರಹಿಸಬಹುದು. ಹೆಚ್ಚು ತಿಳಿಯಿರಿ. ನಮ್ಮ ಜಾಹೀರಾತು ಪಾಲಿಸುವ ರೂಡಿಗಳು ಮತ್ತು ನಿಮ್ಮ ಆಯ್ಕೆಗಳ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಮಾಹಿತಿಯ ಮೇಲೆ ನಿಯಂತ್ರಣ ವಿಭಾಗವನ್ನುನೋಡಿ.

  • ನಿಮ್ಮ Snapchat ಅನುಭವಕ್ಕೆ ಪ್ರಸಂಗವನ್ನು ಸೇರಿಸಿ, ಉದಾಹರಣೆಗೆ, ನಿಮ್ಮ ಸ್ಥಳದ ಆಧಾರದ ಮೇಲೆ ಹುಡುಕಬಹುದಾದ ಲೇಬಲ್‌ಗಳು (ಖಂಡಿತ, ನೀವು ನಿಮ್ಮ ಸ್ಥಳವನ್ನು ಸಂಗ್ರಹಿಸಲು ನಮಗೆ ಅನುಮತಿ ನೀಡಿದ್ದರೆ) ಮತ್ತು ನಿಮ್ಮ ಫೋಟೊ ಅಥವಾ ವೀಡಿಯೊದ ವಿಷಯಗಗಳನ್ನು (ಉದಾ., ನಿಮ್ಮ ಫೋಟೊದಲ್ಲಿ ಒಂದು ನಾಯಿ ಇದ್ದರೆ, "ನಾಯಿ" ಪದದಿಂದ ಮೆಮೊರಿಗಳಲ್ಲಿ ಇದನ್ನು ಹುಡುಕಬಹುದು) ಟ್ಯಾಗ್ ಮಾಡುವುದು.

  • ನಮ್ಮ ಸೇವೆಗಳನ್ನು ಇತರೆ ಸೇವೆಗಳ ನಡುವೆ, ಸ್ನೇಹಿತರನ್ನು ಶಿಫಾರಸ್ಸು ಮಾಡುವುದು, ಸ್ನಾಪ್ ಮ್ಯಾಪ್ನಲ್ಲಿ ಸ್ಥಳಗಳ ಶಿಫಾರಸು, ಪ್ರೊಫೈಲ್ ಮಾಹಿತಿ, ಅಥವಾ ಕೆಮಿಯೋ ಸ್ಟಿಕ್ಕರ್ಸ್, ಸ್ನಾಪ್ ಚಾಟರ್ಸ್ Snapchatನಲ್ಲಿ ಒಬ್ಬರನ್ನೊಬ್ಬರು ಕಂಡುಕೊಳ್ಳುವುದು, ಸೇರಿಸಿಕೊಳ್ಳುವುದುಮತ್ತು ತೃತೀಯ-ಪಕ್ಷದ ಆಪ್ ಮತ್ತು ಸೇವೆಗಳು, ನಿಮ್ಮ ಕಂಟೆಂಟ್ ಮತ್ತು ಚಟುವಟಿಕೆಗಳ ಮೂಲಕ ನಿಮ್ಮ ಆಸಕ್ತಿಯನ್ನು ತಿಳಿದುಕೊಳ್ಳುವುದು ಅಥವಾ ನಾವು ನಿಮಗೆ ತೋರಿಸುವ ಕಂಟೆಂಟ್ ಅನ್ನು, ಜಾಹೀರಾತನ್ನೂ ಕೂಡಾ ಸೇರಿಸಿ, ವಯುಕ್ತಿಕರಣಗೊಳಿಸುವುದು.

  • ವೈಯಕ್ತೀಕರಣ, ಜಾಹೀರಾತು, ವರ್ಧಿತ ವಾಸ್ತವ, ನ್ಯಾಯಸಮ್ಮತತೆ ಮತ್ತು ಒಳಗೊಳ್ಳುವಿಕೆ, ಮತ್ತು ನಿಂದನೆ ಅಥವಾ ಇತರ ಸೇವಾ ನಿಯಮಗಳ ಉಲ್ಲಂಘನೆಯನ್ನು ತಡೆಗಟ್ಟಲು ಸೇರಿದಂತೆ ನಮ್ಮ ಅಲ್ಗಾರಿದಮ್‌ಗಳು ಮತ್ತು ಯಂತ್ರ ಕಲಿಕೆಯ ಮಾದರಿಗಳನ್ನು ಅಭಿವೃದ್ಧಿಪಡಿಸಿ ಮತ್ತು ಸುಧಾರಿಸುವುದು.

  • Snapchatter ಮತ್ತು ಗ್ರಾಹಕರ ಹಿತಾಸಕ್ತಿಗಳು, ಸೇರಿದಂತೆ ನಮ್ಮ ಸೇವೆಗಳನ್ನು ಬಳಸುವ ವಿಧಾನಗಳನ್ನು ಕುರಿತಂತೆ ಸಂಶೋಧನೆಯನ್ನು ಮಾಡುವುದು.

  • ಇತರೆ ಮೆಸೇಜಿಂಗ್ ಪ್ಲ್ಯಾಟ್‌ಫಾರ್ಮ್ಸ್ ಗಳಲ್ಲಿ ನೀವು ನಿಮ್ಮೊಂದಿಗೆ ಸಂಪರ್ಕಿಸಲು ನೀಡುವ ಮಾಹಿತಿಯನ್ನು ಬಳಸುವುದು.

  • ನಮ್ಮ ಉತ್ಪನ್ನಗಳು ಮತ್ತು ಸೇವೆಗಳ ಭದ್ರತೆ ಮತ್ತು ಸುರಕ್ಷತೆಯನ್ನು ವರ್ಧಿಸಿ.

  • ನಿಮ್ಮ ಗುರುತನ್ನು ಪರಿಶೀಲಿಸಿ ಮತ್ತು ವಂಚನೆ ಅಥವಾ ಇತರ ಅನಧಿಕೃತ ಅಥವಾ ಕಾನೂನುಬಾಹಿರ ಚಟುವಟಿಕೆಯನ್ನು ತಡೆಯಿರಿ.

  • ನಮ್ಮ ಸೇವೆಗಳನ್ನು ಮತ್ತು ಅವುಗಳೊಂದಿಗಿನ ನಿಮ್ಮ ಅನುಭವವನ್ನು ಹೆಚ್ಚಿಸಲು ನಾವು ಕುಕೀಸ್ ಮತ್ತು ಇತರ ತಂತ್ರಜ್ಞಾನದಿಂದ ಸಂಗ್ರಹಿಸಿದ ಮಾಹಿತಿಯನ್ನು ಬಳಸುವುದು.

  • ನಮ್ಮ ಸೇವೆಯ ನಿಯಮಗಳು ಮತ್ತು ಇತರ ಬಳಕೆಯ ನೀತಿಗಳನ್ನು ಉಲ್ಲಂಘಿಸುವ ನಡವಳಿಕೆಯ ವಿರುದ್ಧ ಕ್ರಮ ಜಾರಿ ಮಾಡುವುದು, ಅದನ್ನು ತನಿಖೆ ಮಾಡುವುದು ಮತ್ತು ವರದಿ ಮಾಡುವುದು, ಕಾನೂನು ಜಾರಿ ಸಂಸ್ಥೆಯ ವಿನಂತಿಗಳಿಗೆ ಸ್ಪಂದಿಸಿ ಮತ್ತು ಕಾನೂನು ಅಗತ್ಯಗಳ ಅನುಸರಣೆ ಮಾಡುವುದು.

  • ಇಮೇಲ್, SMS ಅಥವಾ ಇತರ ಸಂದೇಶ ಕಳುಹಿಸುವ ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಂತೆ ಸಂವಹನಗಳನ್ನು ಕಳುಹಿಸಲು ನಿಮಗೆ ಅನುಮತಿಸಲಾಗಿದೆ. ಉದಾಹರಣೆಗೆ, ಬೆಂಬಲ ವಿಚಾರಣೆಗಳಿಗೆ ಪ್ರತಿಕ್ರಿಯಿಸಲು ಅಥವಾ ನಮ್ಮ ಉತ್ಪನ್ನಗಳು, ಸೇವೆಗಳು ಮತ್ತು ಪ್ರಚಾರದ ಕೊಡುಗೆಗಳ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲು ನಾವು ಇಮೇಲ್, SMS ಅಥವಾ ಇತರ ಸಂದೇಶ ಕಳುಹಿಸುವ ಪ್ಲಾಟ್‌ಫಾರ್ಮ್‌ಗಳನ್ನು ಬಳಸಬಹುದು.

  • ಪ್ರವೃತ್ತಿಗಳು ಮತ್ತು ಬಳಕೆಗಳ ಮೇಲ್ವಿಚಾರಣೆ ಮತ್ತು ವಿಶ್ಲೇಷಣೆ.

  • ನೀವು Apple ನ TrueDepth ಕ್ಯಾಮೆರಾದೊಂದಿಗೆ Apple ಸಾಧನವನ್ನು ಬಳಸಿದರೆ, ಲೆನ್ಸ್‌ಗಳ ಗುಣಮಟ್ಟವನ್ನು ಸುಧಾರಿಸಲು ನಾವು Apple ನ TrueDepth ಕ್ಯಾಮರಾದಿಂದ ಮಾಹಿತಿಯನ್ನು ಬಳಸಬಹುದು. ಈ ಮಾಹಿತಿಯನ್ನು ನೈಜ ಸಮಯದಲ್ಲಿ ಬಳಸಲಾಗುತ್ತದೆ - ನಾವು ಈ ಮಾಹಿತಿಯನ್ನು ನಮ್ಮ ಸರ್ವರ್‌ಗಳಲ್ಲಿ ಸಂಗ್ರಹಿಸುವುದಿಲ್ಲ ಅಥವಾ ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದಿಲ್ಲ.

ನಾವು ಮಾಹಿತಿಯನ್ನು ಹೇಗೆ ಹಂಚಿಕೊಳ್ಳುತ್ತೇವೆ

ನಾವು ಸಂಗ್ರಹಿಸುವ ಮಾಹಿತಿಯನ್ನು ನಾವು ಯಾಕೆ ಹಂಚಿಕೊಳ್ಳುತ್ತೇವೆ? ಬಹಳಷ್ಟು ಸಲ, ಹಾಗೆ ಮಾಡುವಂತೆ ನೀವು ನಮ್ಮನ್ನು ಕೇಳುವುದರಿಂದ. ಕೆಲವೊಮ್ಮೆ ನಾವು ಮಾಡಬೇಕಾಗುವುದರಿಂದ ಅದನ್ನು ನಾವು ಹಂಚಿಕೊಳ್ಳುತ್ತೇವೆ. ನಾವು ನಿಮ್ಮ ಕುರಿತ ಮಾಹಿತಿಯನ್ನು ಹಂಚಿಕೊಳ್ಳಬಹುದಾದ ವಿಧಾನಗಳು ಇಲ್ಲಿವೆ:

  • ಇತರ Snapchatter ಗಳೊಂದಿಗೆ. ನಾವು ಈ ಕೆಳಗಿನ ಮಾಹಿತಿಯನ್ನು ಇತರ Snapchatters ನೊಂದಿಗೆ ಹಂಚಿಕೊಳ್ಳಬಹುದು:

    • ನಿಮ್ಮ ಬಗ್ಗೆ ಮಾಹಿತಿ, ಅಂದರೆ ನಿಮ್ಮ ಬಳಕೆದಾರ ಹೆಸರು, ಹೆಸರು ಮತ್ತು Bitmoji.

    • ನಮ್ಮ ಸೇವೆಗಳೊಂದಿಗೆ ನೀವು ಹೇಗೆ ಸಂವಹನ ನಡೆಸಿದಿರಿ ಮತ್ತು ನೀವು ತೊಡಗಿಕೊಂಡ ವಿಷಯದ ಕುರಿತ ಮಾಹಿತಿ, ಉದಾಹರಣೆಗೆ ನಿಮ್ಮ Snapchat "ಸ್ಕೋರ್", ನೀವು ಸ್ನೇಹಿತರಾಗಿರುವ Snapchatter ಗಳ ಹೆಸರುಗಳು, Snapchat ನಲ್ಲಿ ನಿಮ್ಮ ಸ್ನೇಹಿತರೊಂದಿಗೆ ನೀವು ಎಷ್ಟು ಆತ್ಮೀಯರಾಗಿದ್ದೀರಿ, Snapchat ನಲ್ಲಿ ನೀವು ಇತ್ತೀಚೆಗೆ ಸಕ್ರಿಯವಾಗಿದ್ದೀರಾ, ನಿಮ್ಮ ಇತ್ತೀಚಿನ ಸ್ಥಳ ಇತಿಹಾಸ (Snap ಮ್ಯಾಪ್‌ನಲ್ಲಿ ನಿಮ್ಮ ನಿಖರ ಸ್ಥಳವನ್ನು ಹಂಚಿಕೊಳ್ಳಲು ನೀವು ಆಯ್ಕೆ ಮಾಡಿದ್ದರೆ) ಮತ್ತು ನಮ್ಮ ಸೇವೆಗಳನ್ನು ಬಳಸಿಕೊಂಡು ಇತರರೊಂದಿಗೆ ನಿಮ್ಮ ಸಂಪರ್ಕಗಳನ್ನು ಅರ್ಥಮಾಡಿಕೊಳ್ಳಲು Snapchatter ಗಳಿಗೆ ಸಹಾಯ ಮಾಡುವ ಇತರ ಮಾಹಿತಿ. ಉದಾಹರಣೆಗೆ, ಹೊಸ ಫ್ರೆಂಡ್ ಕೋರಿಕೆ ನಿಮಗೆ ನಿಜವಾಗಿಯೂ ಪರಿಚಿತರಾಗಿರುವವರಿಂದ ಬರುತ್ತದೆಯೇ ಎನ್ನುವುದು ಸ್ಪಷ್ಟವಿಲ್ಲದ ಕಾರಣ, ನೀವು ಮತ್ತು ವಿನಂತಿಸಿದವರು ಸಾಮಾನ್ಯ Snapchat ಸ್ನೇಹಿತರನ್ನು ಹೊಂದಿದ್ದೀರಾ ಅಥವಾ ಒಂದೇ ಪ್ರದೇಶದಲ್ಲಿದ್ದೀರಾ ಎನ್ನುವುದನ್ನು ನಾವು ಹಂಚಿಕೊಳ್ಳಬಹುದು.

    • ವೀಕ್ಷಣಾ ವಿಧಾನದಲ್ಲಿ ನೀವು ಚಾಟ್‌ಗಳು, Snapಗಳು ಮತ್ತು ಇತರೆ ವಿಷಯಗಳನ್ನು ಸ್ವೀಕರಿಸಲು ಸಹಾಯಕವಾಗುವುದಕ್ಕಾಗಿ ಕಾರ್ಯನಿರ್ವಹಣೆ ವ್ಯವಸ್ಥೆ ಮತ್ತು ಸಾಧನದ ವಿಧಗಳಂತಹ ನಿಮ್ಮ ಸಾಧನದ ಕುರಿತು ಮಾಹಿತಿ.

    • ಹಂಚಿಕೊಳ್ಳಲು ನೀವು ನಮಗೆ ನಿರ್ದೇಶಿಸಿದ ಯಾವುದೇ ಹೆಚ್ಚುವರಿ ಮಾಹಿತಿ. ಉದಾಹರಣೆಗೆ, ತೃತೀಯ-ಪಕ್ಷಕ್ಕೆ ನೀವು ನಿಮ್ಮ Snapchat ಖಾತೆಯನ್ನು ಸಂಪರ್ಕಿಸಿದಾಗ, ಮತ್ತು ಒಂದು ವೇಳೆ ನೀವು Snapchat ನಿಂದ ಮಾಹಿತಿ ಅಥವಾ ಕಂಟೆಂಟ್ ಅನ್ನು ತೃತೀಯ-ಪಕ್ಷದ ಆ್ಯಪ್‌ನೊಂದಿಗೆ ಹಂಚಿಕೊಂಡರೆ ಆಗ Snap ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತದೆ.

    • ಒಂದು ವೇಳೆ ಸಕ್ರಿಯಗೊಳಿಸಿದರೆ, Snap ಮ್ಯಾಪ್‌ನಲ್ಲಿ ನಿಮ್ಮ ಆಯ್ಕೆ ಮಾಡಿದ ಸ್ನೇಹಿತರೊಂದಿಗೆ ನಿಮ್ಮ ನೈಜ-ಸಮಯದ ನಿಖರ ಸ್ಥಳವನ್ನು ನಾವು ಹಂಚಿಕೊಳ್ಳುತ್ತೇವೆ (ಆದರೆ ಅದನ್ನು ಹಂಚಿಕೊಳ್ಳಲು ನೀವು ಆಯ್ಕೆ ಮಾಡಿರುವ ಅವಧಿಗಾಗಿ ಮಾತ್ರ).

    • ನೀವು ಪೋಸ್ಟ್ ಮಾಡುವ ಅಥವಾ ಕಳುಹಿಸುವ ವಿಷಯ. ನಿಮ್ಮ ವಿಷಯವನ್ನು ಎಷ್ಟು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಎಂಬುದು ನಿಮ್ಮ ವೈಯಕ್ತಿಕ ಸೆಟ್ಟಿಂಗ್‌ಗಳು ಮತ್ತು ನೀವು ಬಳಸುತ್ತಿರುವ ಸೇವೆಯ ಪ್ರಕಾರವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ನೀವು ಆಯ್ಕೆ ಮಾಡುವ ಕೇವಲ ಒಬ್ಬ ಸ್ನೇಹಿತನಿಗೆ ಮಾತ್ರ Snap ಅನ್ನು ಕಳುಹಿಸಬಹುದು, ಆದರೆ ನಿಮ್ಮ ಕಥೆಯನ್ನು ನೋಡಲು ನೀವು ಅನುಮತಿಸುವ ಯಾವುದೇ Snapchatter ನಿಮ್ಮ ಕಥೆ Snap ಗಳನ್ನು ನೋಡಬಹುದು.

  • ಎಲ್ಲ Snapchatter ಗಳು, ನಮ್ಮ ವ್ಯವಹಾರ ಪಾಲುದಾರರು ಮತ್ತು ಸಾರ್ವಜನಿಕರೊಂದಿಗೆ. ನಾವು ಈ ಕೆಳಗಿನ ಮಾಹಿತಿಯನ್ನು ಎಲ್ಲಾ Snapchatter‌ ಗಳೊಂದಿಗೆ ಮತ್ತು ನಮ್ಮ ವ್ಯವಹಾರ ಪಾಲುದಾರರು ಮತ್ತು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಬಹುದು:

    • ನಿಮ್ಮ ಹೆಸರು, ಬಳಕೆದಾರರ ಹೆಸರು, ಪ್ರೊಫೈಲ್ ಚಿತ್ರಗಳು, Bitmoji, Snapcode ಮತ್ತು ಸಾರ್ವಜನಿಕ ಪ್ರೊಫೈಲ್‌ನಂತಹ ಸಾರ್ವಜನಿಕ ಮಾಹಿತಿ.

    • ನಿಮ್ಮ ಹೈಲೈಟ್‌ಗಳು, ಕಸ್ಟಮ್ ಸ್ಟಿಕ್ಕರ್‌ಗಳು, ಲೆನ್ಸ್‌ಗಳು, ಎಲ್ಲರೂ ನೋಡಬಹುದಾದವು ಎಂದು ಸೆಟ್ ಮಾಡಲಾಗಿರುವ ಕಥೆ ಸಲ್ಲಿಕೆಗಳು, ಮತ್ತು ಸ್ಪಾಟ್‌ಲೈಟ್, ಅಂತರ್ಗತವಾಗಿ ಸಾರ್ವಜನಿಕ ಸೇವೆಗೆ ನೀವು ಸಲ್ಲಿಸುವ ಯಾವುದೇ ಕಂಟೆಂಟ್, Snap Map ಮತ್ತು ಇತರ ಕ್ರೌಡ್-ಸೋರ್ಸ್ ಮಾಡಿದ ಸೇವೆಗಳಂಥ ಸಾರ್ವಜನಿಕ ವಿಷಯ. ಹುಡುಕಾಟ ಫಲಿತಾಂಶಗಳ ಮೂಲಕ, ವೆಬ್‌ಸೈಟ್‌ಗಳಲ್ಲಿ, ಆ್ಯಪ್‌ಗಳಲ್ಲಿ ಮತ್ತು ಆನ್‌ಲೈನ್ ಮತ್ತು ಆಫ್‌ಲೈನ್ ಬ್ರಾಡ್‌ಕಾಸ್ಟ್‌ಗಳಲ್ಲಿ ಸೇರಿದಂತೆ, ಈ ಕಂಟೆಂಟ್ ಅನ್ನು ಸೇವೆಗಳಲ್ಲಿ ಮತ್ತು ಹೊರಗೆ ಸಾರ್ವಜನಿಕರು ನೋಡಬಹುದು, ಬಳಸಬಹುದು, ಮತ್ತು ಹಂಚಿಕೊಳ್ಳಬಹುದು.

  • ನಮ್ಮ ಅಂಗಸಂಸ್ಥೆಗಳೊಂದಿಗೆ. ನಾವು Snap Inc. ಕಂಪನಿಗಳ ಸಮೂಹದ ಒಳಗಿನ ಘಟಕಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಬಹುದು.

  • ಮೂರನೇ ವ್ಯಕ್ತಿಗಳೊಂದಿಗೆ. ನಾವು ಮಾಹಿತಿಯನ್ನು ಈ ಕೆಳಗಿನ ರೀತಿಯಲ್ಲಿ ಮೂರನೇ ಪಕ್ಷಕಾರರೊಂದಿಗೆ ಹಂಚಿಕೊಳ್ಳಬಹುದು:

    • ನಾವು ಜಾಹೀರಾತುಗಳ ಕಾರ್ಯಕ್ಷಮತೆಯನ್ನು ಜಾಹೀರಾತುಗಳ ಕಾರ್ಯಕ್ಷಮತೆಯನ್ನು ಅಳೆಯಲು ಮತ್ತು ಅತ್ಯುತ್ತಮಗೊಳಿಸಲು ಮತ್ತು ಮೂರನೇ ಪಕ್ಷಕಾರರ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳು ಸೇರಿದಂತೆ ಇನ್ನಷ್ಟು ಸುಸಂಬದ್ಧವಾದ ಜಾಹೀರಾತುಗಳನ್ನು ತಲುಪಿಸುವುದನ್ನು ಸೇರಿದಂತೆ, ಹಣಪಾವತಿಯನ್ನು ಸುಲಲಿತಗೊಳಿಸುವುದನ್ನು ಒಳಗೊಂಡು ನಮ್ಮ ಪರವಾಗಿ ಸೇವೆಗಳನ್ನು ನಿರ್ವಹಿಸುವ ಸೇವಾ ಪೂರೈಕೆದಾರರ ಜೊತೆಗೆ ನಾವು ನಿಮ್ಮ ಬಗ್ಗೆ ಮಾಹಿತಿಗಳನ್ನು ಹಂಚಿಕೊಳ್ಳಬಹುದು.

    • ನಮ್ಮ ಸೇವೆಗಳಲ್ಲಿ ಸೇವೆಗಳು ಮತ್ತು ಕಾರ್ಯವಿಧಾನಗಳನ್ನು ಒದಗಿಸುವ ವ್ಯವಹಾರ ಪಾಲುದಾರರೊಂದಿಗೆ ನಾವು ನಿಮ್ಮ ಕುರಿತ ಮಾಹಿತಿ ಹಂಚಿಕೊಳ್ಳಬಹುದು. ನಮ್ಮ ಸೇವೆಗಳಲ್ಲಿ ಮೂರನೇ ವ್ಯಕ್ತಿಗಳು ಸಂಗ್ರಹಿಸಿದ ಮಾಹಿತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ, ನಮ್ಮ ಬೆಂಬಲ ಸೈಟ್‌ಗೆ ಭೇಟಿ ನೀಡಿ.

    • ವಂಚನೆಯನ್ನು ತಡೆಗಟ್ಟುವುದಕ್ಕೆ ನಮಗೆ ಮತ್ತು ಇತರರಿಗೆ ನೆರವಾಗಲು, ಸಾಧನ ಮತ್ತು ಬಳಕೆ ಮಾಹಿತಿಯಂಥ, ನಿಮ್ಮ ಕುರಿತಾದ ಮಾಹಿತಿಯನ್ನು ನಾವು ಹಂಚಿಕೊಳ್ಳಬಹುದು.

    • ಕಾನೂನು, ಸುರಕ್ಷತೆ, ಮತ್ತು ಭದ್ರತಾ ಕಾರಣಗಳಿಗಾಗಿ ನಿಮ್ಮ ಕುರಿತ ಮಾಹಿತಿಯನ್ನು ನಾವು ಹಂಚಿಕೊಳ್ಳಬಹುದು. ಈ ಕೆಳಗಿನವುಗಳಿಗಾಗಿ ಮಾಹಿತಿಯನ್ನು ಬಹಿರಂಗಪಡಿಸುವುದು ಅಗತ್ಯವೆಂದು ನಾವು ಸಮಂಜಸವಾಗಿ ನಂಬಿದರೆ ನಿಮ್ಮ ಬಗ್ಗೆ ಮಾಹಿತಿಯನ್ನು ನಾವು ಹಂಚಿಕೊಳ್ಳಬಹುದು:

      • ಯಾವುದೇ ಮಾನ್ಯವಾದ ಕಾನೂನು ಪ್ರಕ್ರಿಯೆ, ಸರ್ಕಾರದ ವಿನಂತಿ ಅಥವಾ ಅನ್ವಯವಾಗುವ ಕಾನೂನು, ನಿಯಮ ಅಥವಾ ನಿಯಂತ್ರಣದ ಅನುಸರಣೆ ಮಾಡಲು.

      • ಸಂಭಾವ್ಯ ಸೇವೆಯ ನಿಯಮಗಳು ಮತ್ತು ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳ ತನಿಖೆ, ಪರಿಹಾರೋಪಾಯ ಅಥವಾ ಕ್ರಮ ಜಾರಿ ಮಾಡಲು.

      • ನಮ್ಮ ಮತ್ತು ನಮ್ಮ ಬಳಕೆದಾರರ ಅಥವಾ ಇತರರ ಹಕ್ಕುಗಳು, ಆಸ್ತಿಯ ಸಂರಕ್ಷಣೆ ಅಥವಾ ಸುರಕ್ಷತೆಗಾಗಿ.

      • ಯಾವುದೇ ವಂಚನೆ ಅಥವಾ ಭದ್ರತಾ ಕಾಳಜಿಗಳನ್ನು ಪತ್ತೆ ಮಾಡಿ ಪರಿಹರಿಸಲು.

    • ವಿಲೀನ ಅಥವಾ ಸ್ವಾಧೀನದ ಭಾಗವಾಗಿ ನಾವು ನಿಮ್ಮ ಕುರಿತ ಮಾಹಿತಿಯನ್ನು ಹಂಚಿಕೊಳ್ಳಬಹುದು. Snap Inc. ವಿಲೀನ, ಆಸ್ತಿ ಮಾರಾಟ, ಹಣಕಾಸು, ಲಿಕ್ವಿಡೇಶನ್ ಅಥವಾ ದಿವಾಳಿತನಕ್ಕೆ ಒಳಗಾದರೆ ಅಥವಾ ನಮ್ಮ ವ್ಯವಹಾರದ ಎಲ್ಲಾ ಅಥವಾ ಕೆಲವು ಭಾಗವನ್ನು ಮತ್ತೊಂದು ಕಂಪನಿಯು ಸ್ವಾಧೀನಪಡಿಸಿಕೊಂಡರೆ, ವ್ಯವಹಾರ ಪೂರ್ಣಗೊಳ್ಳುವ ಮೊದಲು ಮತ್ತು ನಂತರ ನಾವು ನಿಮ್ಮ ಮಾಹಿತಿಯನ್ನು ಆ ಕಂಪನಿಯೊಂದಿಗೆ ಹಂಚಿಕೊಳ್ಳಬಹುದು.

  • ವೈಯಕ್ತಿಕವಲ್ಲದ ಮಾಹಿತಿ. ನಮಗೆ ಸೇವೆ ಒದಗಿಸುವ ಅಥವಾ ನಮಗಾಗಿ ಕ್ರೋಢೀಕರಿಸಿದ ವ್ಯವಹಾರ ಉದ್ದೇಶಗಳನ್ನು ನಿರ್ವಹಿಸುವ, ವೈಯಕ್ತಿಕವಾಗಿ ಗುರುತಿಸಲಾಗದ ಅಥವಾ ಗುರುತಿನಿಂದ ಬೇರ್ಪಡಿಸಿದ ಮಾಹಿತಿಯನ್ನು ಒದಗಿಸುವ ತೃತೀಯ ಪಕ್ಷಗಳೊಂದಿಗೆ ಕೂಡ ನಾವು ಹಂಚಿಕೊಳ್ಳಬಹುದು.

ಮೂರನೇ-ವ್ಯಕ್ತಿಯ ವಿಷಯ ಮತ್ತು ಏಕೀಕರಣಗಳು

ನಮ್ಮ ಸೇವೆಗಳು ಮೂರನೇ-ವ್ಯಕ್ತಿಯ ವಿಷಯ ಮತ್ತು ಏಕೀಕರಣಗಳು ಒಳಗೊಂಡಿರಬಹುದು. ಉದಾಹರಣೆಗಳು ಲೆನ್ಸಸ್, ಕ್ಯಾಮೆರಾ ಎಡಿಟಿಂಗ್ ಟೂಲ್ ಗಳು, ಸ್ಕ್ಯಾನ್ ಫಲಿತಾಂಶಗಳನ್ನು ನೀಡಲು, ಮತ್ತು ಯಾವುದೋ ಮೂರನೇ ವ್ಯಕ್ತಿ ಡೆವಲಪರ್ ಗಳ ಸಂಯೋಜನೆಯನ್ನು ಇದು ಒಳಗೊಂಡಿರುತ್ತದೆ. ಈ ಏಕೀಕರಣಗಳ ಮೂಲಕ, ನೀವು ಮೂರನೇ ವ್ಯಕ್ತಿಗೆ ಹಾಗೂ Snap ಗೆ ಮಾಹಿತಿಯನ್ನು ಒದಗಿಸುತ್ತಿರಬಹುದು. ನಿಮ್ಮ ಮಾಹಿತಿಯನ್ನು ಆ ತೃತೀಯ ಪಕ್ಷಗಳು ಹೇಗೆ ಸಂಗ್ರಹಿಸುತ್ತವೆ ಅಥವಾ ಬಳಸುತ್ತವೆ ಎನ್ನುವುದಕ್ಕೆ ನಾವು ಜವಾಬ್ದಾರರಲ್ಲ. ಎಂದಿನಂತೆ, ನಮ್ಮ ಸೇವೆಗಳ ಮೂಲಕ ನೀವು ಸಂವಹನ ಮಾಡುವ ತೃತೀಯ ಪಕ್ಷಗಳೂ ಸೇರಿದಂತೆ, ನೀವು ಭೇಟಿ ನೀಡುವ ಅಥವಾ ಬಳಸುವ ಪ್ರತಿ ಮೂರನೇ-ವ್ಯಕ್ತಿಯ ಸೇವೆಯ ಗೌಪ್ಯತೆ ನೀತಿಗಳನ್ನು ಪರಿಶೀಲಿಸುವಂತೆ ನಾವು ನಿಮಗೆ ಪ್ರೋತ್ಸಾಹಿಸುತ್ತೇವೆ. Snapchat ನಲ್ಲಿನ ಮೂರನೇ-ವ್ಯಕ್ತಿಯ ಸೇವೆಗಳ ಕುರಿತು ನೀವು ಇಲ್ಲಿ ಹೆಚ್ಚು ತಿಳಿದುಕೊಳ್ಳಬಹುದು.

ನಾವು ನಿಮ್ಮ ಮಾಹಿತಿಯನ್ನು ಎಷ್ಟು ಸಮಯದವರೆಗೆ ಇರಿಸಿಕೊಳ್ಳುತ್ತೇವೆ

ಪ್ರಸ್ತುತ ಜೀವನದ ಪ್ರತಿ ಕ್ಷಣವನ್ನು ಸೆರೆಹಿಡಿಯಲು Snapchat ನಿಮಗೆ ಅನುಮತಿಸುತ್ತದೆ. ನಮ್ಮ ಕಡೆಯಿಂದ, ಅಂದರೆ Snapchat ನಲ್ಲಿ ಕಳುಹಿಸಿದ — Snap ಗಳು ಮತ್ತು ಚಾಟ್‌ಗಳಂತಹ — ಬಹುತೇಕ ಸಂದೇಶಗಳು, ನೀವು ನಿಮ್ಮ ಡೀಫಾಲ್ಟ್ ಸೆಟ್ಟಿಂಗ್‌ಗಳನ್ನು ಬದಲಾಯಿಸದ ಅಥವಾ ಏನನ್ನಾದರೂ ಉಳಿಸಲು ಬಯಸದ ಹೊರತು, ಎಲ್ಲ ಸ್ವೀಕೃತಿದಾರರು ಅವುಗಳನ್ನು ತೆರೆದಿದ್ದಾರೆ ಅಥವಾ ಅವು ಅವಧಿ ಮೀರಿವೆ ಎಂದು ನಾವು ಪತ್ತೆಮಾಡಿದ ಬಳಿಕ ನಮ್ಮ ಸರ್ವರ್‌ಗಳಿಂದ ಡೀಫಾಲ್ಟ್ ಆಗಿ ಅಳಿಸಲ್ಪಡುತ್ತವೆ. ಕಥೆ ಪೋಸ್ಟ್‌ಗಳಂತಹ ಇತರ ವಿಷಯವನ್ನು ಹೆಚ್ಚು ಕಾಲ ಸಂಗ್ರಹಿಸಿ ಇಡಲಾಗುತ್ತದೆ. ವಿವಿಧ ಬಗೆಯ ವಿಷಯವನ್ನು ನಾವು ಎಷ್ಟು ಸಮಯ ಸಂಗ್ರಹಣೆ ಮಾಡುತ್ತೇವೆ ಎನ್ನುವ ಕುರಿತ ಇತ್ತೀಚಿನ ಮಾಹಿತಿಗಾಗಿ, ನಮ್ಮ ಗ್ರಾಹಕ ಸೇವಾ ಸೈಟ್ ಪರಿಶೀಲಿಸಿ.

ನಾವು ಇತರ ಮಾಹಿತಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸುತ್ತೇವೆ. ಉದಾಹರಣೆಗೆ:

  • ನೀವು ನೀವು ಅವುಗಳನ್ನು ಅಳಿಸಬೇಕೆಂದು ಕೇಳುವವರೆಗೆ ನಿಮ್ಮ ಹೆಸರು, ಫೋನ್ ನಂಬರ್ ಇಮೇಲ್ ವಿಳಾಸ ಮತ್ತು — ಸ್ನೇಹಿತರ ಪಟ್ಟಿಯಂತಹ — ಮೂಲಭೂತ ಖಾತೆಯ ಮಾಹಿತಿಯನ್ನು ಶೇಖರಿಸುತ್ತೇವೆ.

  • ಸ್ಥಳ ಮಾಹಿತಿ ಎಷ್ಟು ನಿಖರವಾಗಿದೆ ಮತ್ತು ನೀವು ಯಾವ ಸೇವೆಗಳನ್ನು ಬಳಸುತ್ತೀರಿ ಎಂಬುದರ ಆಧಾರದ ಮೇಲೆ ಅದನ್ನು ನಾವು ವಿವಿಧ ಸಮಯದವರೆಗೆ ಸಂಗ್ರಹಿಸಿ ಇರಿಸುತ್ತೇವೆ. ಒಂದುವೇಳೆ ಸ್ಥಳ ಮಾಹಿತಿಯು Snap ನೊಂದಿಗೆ ಸಹಭಾಗಿಯಾಗಿದ್ದರೆ — ಅವುಗಳು ಮೆಮೊರಿಗಳಲ್ಲಿ ಸೇವ್ ಆಗಿದ್ದರೆ ಅಥವಾ Snap Map ಅಥವಾ Spotlight ನಲ್ಲಿ ಪೋಸ್ಟ್ ಮಾಡಲ್ಪಟ್ಟಿದ್ದರೆ — ನಾವು Snap ಅನ್ನು ಶೇಖರಿಸಿಟ್ಟಿರುವವರೆಗೆ ಆ ಸ್ಥಳವನ್ನು ನಾವು ಉಳಿಸಿಕೊಳ್ಳುತ್ತೇವೆ. ಚತುರ ಸಲಹೆ: ನಿಮ್ಮ ಡೇಟಾ ಡೌನ್‌ಲೋಡ್ ಮಾಡುವ ಮೂಲಕ ನಾವು ನಿಮ್ಮ ಕುರಿತು ಉಳಿಸಿಕೊಂಡ ಸ್ಥಳ ಡೇಟಾವನ್ನು ನೀವು ನೋಡಬಹುದು.

ನೀವು ಎಂದಾದರೂ Snapchat ಬಳಸುವುದನ್ನು ನಿಲ್ಲಿಸಲು ನಿರ್ಧರಿಸಿದರೆ, ನಿಮ್ಮ ಖಾತೆಯನ್ನು ಅಳಿಸಬೇಕೆಂದು ನಮ್ಮನ್ನು ನೀವು ಕೇಳಬಹುದು. ನೀವು ಒಂದಿಷ್ಟು ಸಮಯ ನಿಷ್ಕ್ರಿಯರಾಗಿದ್ದ ಬಳಿಕ ಕೂಡ ನಿಮ್ಮ ಕುರಿತು ಸಂಗ್ರಹಿಸಿದ ಬಹುತೇಕ ಮಾಹಿತಿಯನ್ನು ನಾವು ಅಳಿಸುತ್ತೇವೆ!

ನಮ್ಮ ಅಳಿಸುವಿಕೆಯ ಅಭ್ಯಾಸಗಳನ್ನು ಸ್ವಯಂಚಾಲಿತವಾಗಿ ನಿರ್ವಹಿಸಲು ನಮ್ಮ ಸಿಸ್ಟಮ್‌ಗಳನ್ನು ವಿನ್ಯಾಸಗೊಳಿಸಲಾಗಿದ್ದರೂ, ಅಳಿಸುವಿಕೆಯು ಒಂದು ನಿರ್ದಿಷ್ಟ ಸಮಯದೊಳಗೆ ಸಂಭವಿಸುತ್ತದೆ ಎಂದು ನಾವು ಭರವಸೆ ನೀಡಲಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಡೇಟಾವನ್ನು ಶೇಖರಿಸಲು ಕಾನೂನು ಅವಶ್ಯಕತೆಗಳಿರಬಹುದು ಮತ್ತು ವಿಷಯವನ್ನು ಸಂರಕ್ಷಿಸಲು ನಮ್ಮನ್ನು ಕೇಳುವ ಮಾನ್ಯ ಕಾನೂನು ಪ್ರಕ್ರಿಯೆಯನ್ನು ನಾವು ಸ್ವೀಕರಿಸಿದರೆ, ನಾವು ದುರುಪಯೋಗ ಅಥವಾ ಇತರ ಸೇವಾ ನಿಯಮಗಳ ಉಲ್ಲಂಘನೆಯ ವರದಿಗಳನ್ನು ಸ್ವೀಕರಿಸಿದರೆ ಅಥವಾ ನಿಮ್ಮ ಖಾತೆ, ನೀವು ರಚಿಸಿದ ವಿಷಯ ಅಥವಾ ಇತರ ಬಳಕೆದಾರರೊಂದಿಗೆ ರಚಿಸಿದ ವಿಷಯವು ಬೇರೆಯವರಿಂದ ಅಥವಾ ನಮ್ಮ ವ್ಯವಸ್ಥೆಯಿಂದ ನಿಂದನೆ ಅಥವಾ ಇತರ ಸೇವಾ ನಿಯಮಗಳ ಉಲ್ಲಂಘನೆಗಾಗಿ ಫ್ಲ್ಯಾಗ್ ಮಾಡಲಾಗಿದ್ದರೆ, ಆ ಅಳಿಸುವಿಕೆಯ ಅಭ್ಯಾಸಗಳನ್ನು ನಾವು ಅಮಾನತುಗೊಳಿಸಬೇಕಾಗಬಹುದು. ಅಂತಿಮವಾಗಿ, ನಾವು ಕೆಲವು ಮಾಹಿತಿಯನ್ನು ಬ್ಯಾಕ್ಅಪ್‌ನಲ್ಲಿ ಸೀಮಿತ ಅವಧಿಗೆ ಅಥವಾ ಕಾನೂನಿನ ಅಗತ್ಯಕ್ಕೆ ಅನುಸಾರವಾಗಿಯೂ ಉಳಿಸಿಕೊಳ್ಳಬಹುದು.

ನಿಮ್ಮ ಮಾಹಿತಿಯ ಮೇಲೆ ನಿಯಂತ್ರಣ

ನಿಮ್ಮ ಮಾಹಿತಿಯ ಮೇಲೆ ನಿಮ್ಮ ನಿಯಂತ್ರಣವಿರಬೇಕೆಂದು ನಾವು ಬಯಸುತ್ತೇವೆ, ಆದ್ದರಿಂದ ನಾವು ನಿಮಗೆ ಈ ಕೆಳಗಿನ ಪರಿಕರಗಳನ್ನು ಒದಗಿಸುತ್ತೇವೆ.

  • ಪ್ರವೇಶ, ತಿದ್ದುಪಡಿ ಮತ್ತು ಪೋರ್ಟಬಿಲಿಟಿ. ನಮ್ಮ ಆ್ಯಪ್‍ಗಳಲ್ಲಿಯೇ ನಿಮ್ಮ ಹೆಚ್ಚಿನ ಮೂಲ ಖಾತೆ ಮಾಹಿತಿಯನ್ನು ನೀವು ಪ್ರವೇಶಿಸಬಹುದು ಮತ್ತು ಎಡಿಟ್ ಮಾಡಬಹುದು. ಪೋರ್ಟಬಲ್ ರೂಪದಲ್ಲಿ ನಮ್ಮ ಆ್ಯಪ್‍ಗಳಲ್ಲಿ ಲಭ್ಯವಿಲ್ಲದ ಮಾಹಿತಿಯ ನಕಲನ್ನು ಪಡೆಯಲು ನೀವು ನನ್ನ ಡೇಟಾವನ್ನು ಡೌನ್‌ಲೋಡ್ ಅನ್ನು ಬಳಸಬಹುದು, ಆದ್ದರಿಂದ ನೀವು ಅದನ್ನು ಸರಿಸಬಹುದು ಅಥವಾ ನೀವು ಎಲ್ಲಿ ಬೇಕಾದರೂ ಸಂಗ್ರಹಿಸಬಹುದು. ನಿಮ್ಮ ಗೌಪ್ಯತೆ ನಮಗೆ ಮುಖ್ಯವಾದ ಕಾರಣ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪ್ರವೇಶಿಸಲು ಅಥವಾ ನವೀಕರಿಸಲು ನಾವು ಅನುಮತಿಸುವ ಮೊದಲು ನಿಮ್ಮ ಗುರುತನ್ನು ಪರಿಶೀಲಿಸಲು ಅಥವಾ ಹೆಚ್ಚುವರಿ ಮಾಹಿತಿಯನ್ನು ಒದಗಿಸಲು ನಾವು ನಿಮ್ಮನ್ನು ಕೇಳುತ್ತೇವೆ. ಹಲವಾರು ಕಾರಣಗಳಿಗಾಗಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪ್ರವೇಶಿಸಲು ಅಥವಾ ನವೀಕರಿಸಲು ನಿಮ್ಮ ವಿನಂತಿಯನ್ನು ನಾವು ತಿರಸ್ಕರಿಸಬಹುದು, ಉದಾಹರಣೆಗೆ, ವಿನಂತಿಯು ಇತರ ಬಳಕೆದಾರರ ಗೌಪ್ಯತೆಗೆ ಅಪಾಯವನ್ನುಂಟುಮಾಡಿದರೆ ಅಥವಾ ಕಾನೂನುಬಾಹಿರವಾಗಿದ್ದರೆ.

  • ಅನುಮತಿಗಳನ್ನು ರದ್ದುಗೊಳಿಸುವುದು. ಹೆಚ್ಚಿನ ಸಂದರ್ಭಗಳಲ್ಲಿ, ನಿಮ್ಮ ಮಾಹಿತಿಯನ್ನು ಬಳಸಲು ನೀವು ನಮಗೆ ಅನುಮತಿಸಿದರೆ, ನಿಮ್ಮ ಸಾಧನವು ಆ ಆಯ್ಕೆಗಳನ್ನು ಒದಗಿಸಿದರೆ ಆ್ಯಪ್‍ನಲ್ಲಿ ಅಥವಾ ನಿಮ್ಮ ಸಾಧನದಲ್ಲಿನ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಮೂಲಕ ನಿಮ್ಮ ಅನುಮತಿಯನ್ನು ನೀವು ರದ್ದುಗೊಳಿಸಬಹುದು. ಸಹಜವಾಗಿ, ನೀವು ಹಾಗೆ ಮಾಡಿದರೆ, ಕೆಲವು ಸೇವೆಗಳು ಪೂರ್ಣ ಕಾರ್ಯವನ್ನು ಕಳೆದುಕೊಳ್ಳಬಹುದು. SMS ಅಥವಾ ಇತರ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಕಳುಹಿಸಲಾದ ಪ್ರಚಾರದ ಇಮೇಲ್‌ಗಳು ಮತ್ತು ಸಂದೇಶಗಳಿಗಾಗಿ, ಅನ್‌ಸಬ್‌ಸ್ಕ್ರೈಬ್ ಲಿಂಕ್ ಅಥವಾ ಅದೇ ರೀತಿಯ ಕಾರ್ಯವಿಧಾನವನ್ನು ಕ್ಲಿಕ್ ಮಾಡುವ ಮೂಲಕ ನೀವು ಹೊರಗುಳಿಯಬಹುದು.

  • ಅಳಿಸುವಿಕೆ. ನೀವು ಅಜೀವ Snapchatter ಆಗಿ ಉಳಿಯುತ್ತೀರಿ ಎಂದು ನಾವು ಭಾವಿಸುತ್ತೇವೆ, ಕೆಲವು ಕಾರಣಗಳಿಂದಾಗಿ ನೀವು ಎಂದಾದರೂ ನಿಮ್ಮ ಖಾತೆಯನ್ನು ಅಳಿಸಲು ಬಯಸಿದರೆ, ಹೇಗೆ ಎಂಬುದನ್ನು ತಿಳಿಯಲು ಇಲ್ಲಿಗೆ ಹೋಗಿ. ನೀವು ನೆನಪುಗಳಲ್ಲಿ ಉಳಿಸಿದ ಫೋಟೋಗಳು, ನನ್ನ AI ಜೊತೆಗಿನ ನಿಮ್ಮ ಸಂಭಾಷಣೆಗಳು, ಸ್ಪಾಟ್‌ಲೈಟ್ ಸಲ್ಲಿಕೆಗಳು ಮತ್ತು ಹುಡುಕಾಟ ಇತಿಹಾಸದಂತಹ ಕೆಲವು ಮಾಹಿತಿಯನ್ನು ನೀವು ಅಪ್ಲಿಕೇಶನ್‌ನಲ್ಲಿ ಅಳಿಸಬಹುದು.

  • ಜಾಹೀರಾತು ಆದ್ಯತೆಗಳು. ನಿಮ್ಮ ಆಸಕ್ತಿಗಳಿಗೆ ಪ್ರಸ್ತುತವಾಗಿದೆ ಎಂದು ನಾವು ಭಾವಿಸುವ ಜಾಹೀರಾತುಗಳನ್ನು ನಿಮಗೆ ತೋರಿಸಲು ನಾವು ಪ್ರಯತ್ನಿಸುತ್ತೇವೆ. ಈ ಜಾಹೀರಾತುಗಳನ್ನು ಆಯ್ಕೆ ಮಾಡಲು ನಾವು ಮತ್ತು ನಮ್ಮ ಜಾಹೀರಾತು ಪಾಲುದಾರರು ಬಳಸುವ ಮಾಹಿತಿಯನ್ನು ನೀವು ಮಾರ್ಪಡಿಸಲು ಬಯಸಿದರೆ, ನೀವು ಅದನ್ನು ಆ್ಯಪ್‍ನಲ್ಲಿ ಮತ್ತು ನಿಮ್ಮ ಸಾಧನದ ಆದ್ಯತೆಗಳ ಮೂಲಕ ಮಾಡಬಹುದು. ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿಗೆ ಹೋಗಿ.

  • ಟ್ರ್ಯಾಕಿಂಗ್‌. iOS 14.5 ಅಥವಾ ಅದಕ್ಕಿಂತ ಹೆಚ್ಚು ಇತ್ತೀಚಿನ ಸಾಧನಗಳೊಂದಿಗೆ ಕಾರ್ಯನಿರ್ವಹಿಸುವ ಬಳಕೆದಾರರಿಗೆ ಕೆಲವು ನಿರ್ದಿಷ್ಟ ಅವಶ್ಯಕತೆಗಳು ಅನ್ವಯಿಸುತ್ತವೆ. ನಾವು ಅವುಗಳನ್ನು ಇಲ್ಲಿ ನಿರ್ದಿಷ್ಟಪಡಿಸಿದ್ದೇವೆ.

  • ಇತರ Snapchatter ಗಳೊಂದಿಗೆ ಸಂವಹನ. ನೀವು ಯಾರೊಂದಿಗೆ ಸಂವಹನ ನಡೆಸುತ್ತೀರಿ ಎಂಬುದರ ಮೇಲೆ ನೀವು ನಿಯಂತ್ರಣದಲ್ಲಿರುವುದು ನಮಗೆ ಮುಖ್ಯವಾಗಿದೆ. ಅದಕ್ಕಾಗಿಯೇ ನಾವು ಸೆಟ್ಟಿಂಗ್‌ಗಳಲ್ಲಿ ಹಲವಾರು ಪರಿಕರಗಳನ್ನು ನಿರ್ಮಿಸಿದ್ದೇವೆ ಅದು ಇತರ ವಿಷಯಗಳ ಜೊತೆಗೆ, ನಿಮ್ಮ ಕಥೆಗಳನ್ನು ಯಾರು ನೋಡಬೇಕೆಂದು ನೀವು ಬಯಸುತ್ತೀರಿ, ನೀವು Snap ಗಳನ್ನು ನಿಮ್ಮ ಸ್ನೇಹಿತರು, ನಿಮ್ಮ ಸ್ನೇಹಿತರು ಮತ್ತು ಸಂಪರ್ಕಗಳಿಂದ ಅಥವಾ ಎಲ್ಲಾ Snapchatter ಗಳಿಂದ ಸ್ವೀಕರಿಸಲು ನೀವು ಬಯಸುತ್ತೀರಾ ಮತ್ತು ನಿಮ್ಮನ್ನು ಮತ್ತೆ ಸಂಪರ್ಕಿಸದಂತೆ ಮತ್ತೊಂದು Snapchatter ಅನ್ನು ನಿರ್ಬಂಧಿಸಲು ನೀವು ಬಯಸುತ್ತೀರಾ. ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿಗೆ ಹೋಗಿ.

ಅಂತಾರಾಷ್ಟ್ರೀಯ ಡೇಟಾ ವರ್ಗಾವಣೆಗಳು

ಯುನೈಟೆಡ್ ಸ್ಟೇಟ್ಸ್ ಮತ್ತು ನೀವು ವಾಸಿಸುವ ಸ್ಥಳದಿಂದ ಹೊರಗೆ ಇತರ ದೇಶಗಳಿಂದ ನಿಮ್ಮ ವೈಯಕಿಕ್ತ ಮಾಹಿತಿಯನ್ನು ನಾವು ಸಂಗ್ರಹಿಸಬಹುದು, ವರ್ಗಾಯಿಸಬಹುದು ಮತ್ತು ಶೇಖರಿಸಬಹುದು ಮತ್ತು ಪ್ರಕ್ರಿಯೆಗೊಳಿಸಬಹುದು. ನೀವು ವಾಸಿಸುತ್ತಿರುವ ಸ್ಥಳದಿಂದ ಹೊರಗೆ ನಾವು ಮಾಹಿತಿಯನ್ನು ಹಂಚಿಕೊಂಡಾಗಲೆಲ್ಲ, ನಾವು ಹಾಗೆ ಮಾಡುವ ಕಾನೂನು ಅಗತ್ಯವಿರುವಾಗ, ಸೂಕ್ತ ವರ್ಗಾವಣೆ ಕಾರ್ಯವಿಧಾನ ಜಾರಿಯಲ್ಲಿದೆ ಎನ್ನುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ನಾವು ಮಾಹಿತಿ ಹಂಚಿಕೊಳ್ಳುವ ಯಾವುದೇ ತೃತೀಯ ಪಕ್ಷಗಳೂ ಸಹ ಸೂಕ್ತ ವರ್ಗಾವಣೆ ಕಾರ್ಯವಿಧಾನಗಳನ್ನು ಹೊಂದಿವೆ ಎನ್ನುವುದನ್ನೂ ಕೂಡ ನಾವು ಖಚಿತಪಡಿಸಿಕೊಳ್ಳುತ್ತೇವೆ. ನೀವು ಮಾಹಿತಿಯನ್ನು ಮೂರನೇ ಪಕ್ಷಕಾರರೊಂದಿಗೆ ಹಂಚಿಕೊಳ್ಳುವ ವರ್ಗಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಕಂಡುಕೊಳ್ಳಬಹುದು.

ರಾಜ್ಯ ಮತ್ತು ಪ್ರದೇಶ ನಿರ್ದಿಷ್ಟವಾದ ಮಾಹಿತಿ

ನಿಮ್ಮ ರಾಜ್ಯ ಅಥವಾ ಪ್ರದೇಶದಲ್ಲಿ ನೀವು ನಿರ್ದಿಷ್ಟ ಗೌಪ್ಯತೆ ಹಕ್ಕುಗಳನ್ನು ಹೊಂದಿರಬಹುದು. ಉದಾಹರಣೆಗೆ, ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಕ್ಯಾಲಿಫೋರ್ನಿಯಾ ಮತ್ತು ಇತರ ರಾಜ್ಯಗಳ ನಿವಾಸಿಗಳು ನಿರ್ದಿಷ್ಟ ಗೌಪ್ಯತೆ ಹಕ್ಕುಗಳನ್ನು ಹೊಂದಿದ್ದಾರೆ. ಯುರೋಪಿಯನ್ ಆರ್ಥಿಕ ಪ್ರದೇಶ (EEA), UK, ಬ್ರೆಜಿಲ್, ರಿಪಬ್ಲಿಕ್ ಆಫ್ ಕೊರಿಯಾ, ಮತ್ತು ಇತರ ಕಾನೂನುವ್ಯಾಪ್ತಿಗಳ Snapchatter ಗಳೂ ಕೂಡ ನಿರ್ದಿಷ್ಟ ಹಕ್ಕುಗಳನ್ನು ಹೊಂದಿದ್ದಾರೆ. ನಾವು ರಾಜ್ಯ ಮತ್ತು ಪ್ರದೇಶದ ನಿರ್ದಿಷ್ಟ ಬಹಿರಂಗಪಡಿಸುವಿಕೆಗಳ ನವೀಕೃತ ಅವಲೋಕನವನ್ನು ಇಲ್ಲಿಇರಿಸುತ್ತೇವೆ.

ನಮ್ಮ ಪ್ರೇಕ್ಷಕರು

ನಮ್ಮ ಸೇವೆಗಳು 13 ವರ್ಷದೊಳಗಿನ ಯಾರಿಗಾದರೂ ಉದ್ದೇಶಿಸಿಲ್ಲ - ಮತ್ತು ನಾವು ಅವರನ್ನು ನಿರ್ದೇಶಿಸುವುದಿಲ್ಲ. ಮತ್ತು ಅದಕ್ಕಾಗಿಯೇ ನಾವು 13 ವರ್ಷದೊಳಗಿನ ಯಾರಿಂದಲೂ ವೈಯಕ್ತಿಕ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಸಂಗ್ರಹಿಸುವುದಿಲ್ಲ. ಹೆಚ್ಚುವರಿಯಾಗಿ, ನಾವು ಕೆಲವನ್ನು ಹೇಗೆ ಸಂಗ್ರಹಿಸುತ್ತೇವೆ, ಬಳಸುತ್ತೇವೆ ಮತ್ತು ಸಂಗ್ರಹಿಸುತ್ತೇವೆ ಎಂಬುದನ್ನು ಮಿತಿಗೊಳಿಸಬಹುದು 18 ವರ್ಷದೊಳಗಿನ ಬಳಕೆದಾರರ ಮಾಹಿತಿ. ಕೆಲವು ಸಂದರ್ಭಗಳಲ್ಲಿ, ಈ ಬಳಕೆದಾರರಿಗೆ ಕೆಲವು ಸೌಲಭ್ಯಗಳನ್ನು ಒದಗಿಸಲು ನಮಗೆ ಸಾಧ್ಯವಾಗುವುದಿಲ್ಲ ಎಂದರ್ಥ.

ಗೌಪ್ಯತಾ ನೀತಿಯಲ್ಲಿಯ ನವೀಕರಣಗಳು

ನಾವು ಈ ಗೌಪ್ಯತೆ ನೀತಿಯನ್ನು ಕಾಲಕಾಲಕ್ಕೆ ಬದಲಾಯಿಸಬಹುದು. ಆದರೆ ನಾವು ಹಾಗೆ ಮಾಡಿದಾಗ, ನಾವು ನಿಮಗೆ ಯಾವುದಾದರೂ ರೀತಿಯಲ್ಲಿ ತಿಳಿಸುತ್ತೇವೆ. ಕೆಲವೊಮ್ಮೆ, ನಮ್ಮ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ಗೌಪ್ಯತೆ ನೀತಿಯ ಮೇಲ್ಭಾಗದಲ್ಲಿರುವ ದಿನಾಂಕವನ್ನು ಪರಿಷ್ಕರಿಸುವ ಮೂಲಕ ನಾವು ನಿಮಗೆ ತಿಳಿಸುತ್ತೇವೆ. ಇತರ ಸಮಯಗಳಲ್ಲಿ, ನಾವು ನಿಮಗೆ ಹೆಚ್ಚುವರಿ ನೋಟಿಫಿಕೇಶನ್‌ಗಳನ್ನು ಒದಗಿಸಬಹುದು (ನಮ್ಮ ವೆಬ್‌ಸೈಟ್‌ನ ಮುಖಪುಟದಲ್ಲಿ ಹೇಳಿಕೆಯನ್ನು ಸೇರಿಸುವುದು ಅಥವಾ ಅಪ್ಲಿಕೇಶನ್‌ನಲ್ಲಿನ ನೋಟಿಫಿಕೇಶನ್‌ ಅನ್ನು ನಿಮಗೆ ಒದಗಿಸುವಂತಹ).