ತಮ್ಮ ನೈಜ ಸ್ನೇಹಿತರೊಂದಿಗೆ ಸುರಕ್ಷಿತವಾಗಿ ಸಂವಹನ ನಡೆಸಲು Snapchatter ಗಳಿಗೆ ಸಹಾಯ ಮಾಡುವುದು

ಜನವರಿ 17, 2024

ಆರಂಭದಿಂದಲೂ, ಇತರ ಪ್ಲ್ಯಾಟ್‌ಫಾರ್ಮ್ಸ್‌ನಲ್ಲಿ ಜನರು ಅನುಭವಿಸುತ್ತಿದ್ದ ಹಲವಾರು ಒತ್ತಡಗಳಿಲ್ಲದೆ ತಮ್ಮ ಆತ್ಮೀಯ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಜೊತೆಗೆ ಸಂಪರ್ಕಗೊಳ್ಳಲು ಅವರಿಗೆ ಸಹಾಯ ಮಾಡುವುದಕ್ಕಾಗಿ ಸಾಂಪ್ರದಾಯಿಕ ಸಾಮಾಜಿಕ ಮಾಧ್ಯಮಗಳಿಗಿಂತ ಭಿನ್ನವಾಗಿ ನಾವು Snapchat ಅನ್ನು ವಿನ್ಯಾಸಗೊಳಿಸಿದ್ದೇವೆ. ಬಹುತೇಕ ಹದಿಹರೆಯದವರು ಅಷ್ಟೇನೂ ಪರಿಚಿತರಲ್ಲದದವರೊಂದಿಗೆ ಬೃಹತ್ ಸಂಪರ್ಕಜಾಲಗಳನ್ನು ನಿರ್ಮಿಸುವ ಅಥವಾ ಭಾರೀ ಸಂಖ್ಯೆಯ ಜನರ ಗುಂಪಿನೊಂದಿಗೆ ವಿಚಾರಗಳನ್ನು ಹಂಚಿಕೊಳ್ಳುವುದ ಬದಲಾಗಿ, ಸ್ನೇಹಿತರ ಸಣ್ಣ ವಲಯದೊಂದಿಗೆ ಮಾತನಾಡಲು ಮೆಸೇಜಿಂಗ್ ಸೇವೆಯಾಗಿ Snapchat ಅನ್ನು ಬಳಸುತ್ತಾರೆ. ಉದಾಹರಣೆಗೆ, US ನ ಹದಿಹರೆಯದವರು ಸರಾಸರಿ ಕೇವಲ ಐವರು ಸ್ನೇಹಿತರೊಂದಿಗೆ ಸಂವಹನ ನಡೆಸಲು Snapchat ಅನ್ನು ಬಳಸುತ್ತಾರೆ. 

ಎಲ್ಲ Snapchatter ಗಳಿಗೆ - ಮತ್ತು ವಿಶೇಷವಾಗಿ ನಮ್ಮ ಸಮುದಾಯದ 13-17 ವಯಸ್ಸಿನ ಒಳಗಿನ ಅತಿ ಕಿರಿಯ ಸದಸ್ಯರಿಗೆ ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣವನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಸುರಕ್ಷತೆ ಮತ್ತು ಗೌಪ್ಯತೆಗೆ ನಮ್ಮ ವಿಧಾನವು ನಮ್ಮ ವೇದಿಕೆಯ ವಿಶಿಷ್ಟ ವಿನ್ಯಾಸದೊಂದಿಗೆ ಆರಂಭವಾಗುತ್ತದೆ ಮತ್ತು ಹದಿಹರೆಯದ Snapchatter ಗಳಿಗೆ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದೆ. 

ಆನ್‌ಲೈನ್ ಅಪಾಯಗಳು ಉದ್ಭವಿಸುವುದು ಮುಂದುವರಿದಿರುವಂತೆ, ಆ ರಕ್ಷಣೆಗಳನ್ನು ನಾವು ನಿರಂತರವಾಗಿ ವಿಮರ್ಶಿಸುತ್ತಿದ್ದೇವೆ ಮತ್ತು ಬಲಪಡಿಸುತ್ತಿದ್ದೇವೆ, ಅವುಗಳಲ್ಲಿ ಈ ಕೆಳಗಿನವು ಸೇರಿವೆ:

  • ಅನಪೇಕ್ಷಿತ ಸಂಪರ್ಕದ ವಿರುದ್ಧ ಸುರಕ್ಷತಾ ಕ್ರಮಗಳು. ಹದಿಹರೆಯದವರು Snapchat ನಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂವಹನ ನಡೆಸುತ್ತಿರುವಾಗ, ಅದು ಅವರಿಗೆ ನೈಜವಾಗಿ ಪರಿಚಿತರಾಗಿರುವವರಾಗಿರಬೇಕು ಎಂದು ನಾವು ಬಯಸುತ್ತೇವೆ, ಹಾಗಾಗಿ ಅಪರಿಚಿತರು ಅವರನ್ನು ಕಂಡುಹಿಡಿಯುವುದನ್ನು ನಾವು ಕಷ್ಟಕರವಾಗಿಸುತ್ತೇವೆ. ಇದನ್ನು ಮಾಡುವುದಕ್ಕಾಗಿ:

    • ಇಬ್ಬರು ನೇರವಾಗಿ ಸಂವಹನ ನಡೆಸುವುದನ್ನು ಆರಂಭಿಸುವುದಕ್ಕೆ ಮುನ್ನ ಅವರು ಪರಸ್ಪರ ಸ್ನೇಹಿತರು ಎಂದು ಅಂಗೀಕರಿಸುವುದನ್ನು ಅಥವಾ ಈಗಾಗಲೇ ಫೋನ್ ಸಂಪರ್ಕಗಳಾಗಿರುವುದನ್ನು ನಾವು ಅಗತ್ಯಪಡಿಸುತ್ತೇವೆ.

    • ಸಾಮಾನ್ಯ ಸ್ನೇಹಿತರು ಅಥವಾ ಸಂಪರ್ಕಗಳನ್ನು ಹೊಂದಿಲ್ಲದ ಹೊರತು ಇನ್ನೊಬ್ಬ ವ್ಯಕ್ತಿಗೆ ಹುಡುಕಾಟ ಫಲಿತಾಂಶಗಳಲ್ಲಿ ಹದಿಹರೆಯದವರು ಯಾದೃಚ್ಛಿಕವಾಗಿ ಕಾಣಿಸಿಕೊಳ್ಳದಂತೆ ನಾವು ತಡೆಯುತ್ತೇವೆ. 

    • ಪರಸ್ಪರ ಸ್ನೇಹಿತರಾಗಿಲ್ಲದ ಒಬ್ಬರು ಹದಿಹರೆಯದವರೊಂದಿಗೆ ಚಾಟ್ ಮಾಡಲು ಪ್ರಯತ್ನಿಸಿದರೆ ಅವರಿಗೆ ಒಂದು ಪಾಪ್-ಅಪ್ ಎಚ್ಚರಿಕೆಯನ್ನು ತೋರಿಸುತ್ತೇವೆ.

  • ಸಾರ್ವಜನಿಕ ಸಾಮಾಜಿಕ ಹೋಲಿಕೆ ವೈಶಿಷ್ಟ್ಯಗಳನ್ನು ನಿರ್ಬಂಧಿಸುವುದು. ಜನರು ತಮ್ಮ ನೈಜ ಬದುಕಿನಲ್ಲಿ ಸಂವಹನ ನಡೆಸುವ ರೀತಿಯಲ್ಲೇ, ತಮ್ಮ ನೈಜ ಸ್ನೇಹಿತರೊಂದಿಗೆ ತಮ್ಮ ನೈಜ ಭಾವನೆಗಳನ್ನು ವ್ಯಕ್ತಪಡಿಸಲು ಆರಾಮದಾಯಕ ಅನ್ನಿಸುವುದಕ್ಕೆ ಸಹಾಯ ಮಾಡಲು Snapchat ಇದೆ. ಆದಕಾರಣ, Snapchat ಮಿತಿಯಿರದ ಫೀಡ್‌ಗಳಿಗೆ ತೆರೆದುಕೊಳ್ಳುವುದಿಲ್ಲ ಮತ್ತು ಜನರು ಮುಖತಃ ಅಥವಾ ಫೋನ್‌ನಲ್ಲಿ ಮಾತನಾಡುವ ರೀತಿಯನ್ನು ಅನುಕರಿಸುವಂತೆ ಸಂದೇಶಗಳು ಡಿಫಾಲ್ಟ್ ಆಗಿ ಅಳಿಸಲ್ಪಡುತ್ತವೆ. ಇದರ ಜೊತೆಗೆ, ನಾವು:

    • ನೀವು ನಿಮ್ಮ ಸ್ನೇಹಿತರ ಜೊತೆಗೆ ಸಂವಹನ ನಡೆಸಿದಾಗ ನಾವು ಸಾರ್ವಜನಿಕ ಕಾಮೆಂಟ್‌ಗಳು ಅಥವಾ ಲೈಕ್‌ಗಳನ್ನು ಆಫರ್ ಮಾಡುವುದಿಲ್ಲ.

    • ಸಾರ್ವಜನಿಕ ಗುಂಪುಗಳನ್ನು ಶಿಫಾರಸು ಮಾಡುವುದಿಲ್ಲ, ಇದು ಹಾನಿಕಾರಕ ನಡವಳಿಕೆಗಳಿಗೆ ಆಕಸ್ಮಿಕವಾಗಿ ಎದುರಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.

    • ಸಾರ್ವಜನಿಕ ಸ್ನೇಹಿತರ ಪಟ್ಟಿಗಳನ್ನು ಆಫರ್ ಮಾಡುವುದಿಲ್ಲ.

  • ಕಂಟೆಂಟ್‌ನ ಸದೃಢ ಮಾಡರೇಷನ್. Snapchat ನಲ್ಲಿ ಯಾವುದನ್ನು ಪೋಸ್ಟ್ ಮಾಡಬಹುದು ಅಥವಾ ವರ್ಧಿಸಬಹುದು ಎನ್ನುವ ಕುರಿತು ನಾವು ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದ್ದೇವೆ. ಉದಾಹರಣೆಗೆ, ಸ್ಪಾಟ್‌ಲೈಟ್‌ನಲ್ಲಿ ಕಂಟೆಂಟ್ ಬೃಹತ್ ಪ್ರೇಕ್ಷಕರನ್ನು ತಲುಪುವುದಕ್ಕೆ ಮುನ್ನ, ಅದು ಮಾನವರು ಮತ್ತು ಸ್ವಯಂಚಾಲಿತ ವಿಮರ್ಶೆಯ ಮೂಲಕ ಹಾದುಹೋಗುತ್ತದೆ. ಆ್ಯಪ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ನಾವು ಆಫರ್ ಮಾಡುವುದಿಲ್ಲ ಮತ್ತು ತಪ್ಪುಮಾಹಿತಿ ಅಥವಾ ಹಾನಿಕಾರಕ ಕಂಟೆಂಟ್ ಹರಡುವುದಕ್ಕೆ ಪ್ರಚೋದಿಸುವ ರೀತಿ ನಾವು ನಮ್ಮ ಆಲ್ಗಾರಿದಂಗಳನ್ನು ಪ್ರೋಗ್ರಾಂ ಮಾಡುವುದಿಲ್ಲ. ಅನುಚಿತ ಸಾರ್ವಜನಿಕ ಕಂಟೆಂಟ್‌ಗೆ ಒಡ್ಡಿಕೊಳ್ಳುವುದರಿಂದ ಹದಿಹರೆಯದವರನ್ನು ರಕ್ಷಿಸುವುದಕ್ಕೆ ನೆರವಾಗಲು ನಾವು ಕೆಳಗಿನವುಗಳನ್ನೂ ಮಾಡುತ್ತೇವೆ:

    • ನಮ್ಮ ನೀತಿಗಳನ್ನು ಉಲ್ಲಂಘಿಸುವ ಕಂಟೆಂಟ್ ತೆಗೆದುಹಾಕುತ್ತೇವೆ. 

    • ಹದಿಹರೆಯದವರಿಗಾಗಿ ಲೈಂಗಿಕ ವಿಚಾರದ ಮತ್ತು ಸೂಕ್ಷ್ಮ ಕಂಟೆಂಟ್ ಅನ್ನು ಫಿಲ್ಟರ್ ಮಾಡುತ್ತೇವೆ.

    • ನಮ್ಮ ಕೌಟುಂಬಿಕ ಕೇಂದ್ರ ಟೂಲ್‌ಗಳನ್ನು ಬಳಸಿಕೊಂಡು ತಮ್ಮ ಹದಿಹರೆಯದ ಮಕ್ಕಳಿಗೆ ಇನ್ನೂ ಕಟ್ಟುನಿಟ್ಟಾದ ಕಂಟೆಂಟ್ ನಿಯಂತ್ರಣಗಳನ್ನು ಹೊಂದಿಸಲು ಪೋಷಕರಿಗೆ ಅನುವು ಮಾಡಿಕೊಡುತ್ತೇವೆ.

  • Snapchatter ಗಳನ್ನು ಬೆಂಬಲಿಸಲು ತ್ವರಿತ ಕ್ರಮ ತೆಗೆದುಕೊಳ್ಳುವುದು. ಇನ್ನೊಂದು ಖಾತೆಯನ್ನು ತ್ವರಿತವಾಗಿ ಬ್ಲಾಕ್ ಮಾಡಲು ಮತ್ತು ಕಳವಳದ ಕಂಟೆಂಟ್ ಅಥವಾ ಖಾತೆಗಳನ್ನು ನಮಗೆ ವರದಿ ಮಾಡಲು ಯಾವುದೇ Snapchatter ಗೆ ಅನುವು ಮಾಡಿಕೊಡುವ ಸರಳ ಟೂಲ್‌ಗಳನ್ನು ನಾವು ಒದಗಿಸುತ್ತೇವೆ. ನಾವು ಪಡೆಯುವ ಪ್ರತಿಯೊಂದು ವರದಿಯನ್ನು ವಿಮರ್ಶಿಸಲು ಮತ್ತು ತ್ವರಿತ ಕ್ರಮ ಕೈಗೊಳ್ಳಲು ದಿನದ ಇಪ್ಪತ್ತನಾಲ್ಕು ತಾಸು ಕಾರ್ಯ ನಿರ್ವಹಿಸುವ ಜಾಗತಿಕ ತಂಡವನ್ನು ನಾವು ಹೊಂದಿದ್ದೇವೆ. ಇದರ ಜೊತೆಗೆ, ಈ ಕೆಳಗಿನವುಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ:

    • Snapchat ನಲ್ಲಿ ಸಂಭಾಷಣೆಗಳು ಡೀಫಾಲ್ಟ್ ಆಘಿ ಅಳಿಸಲ್ಪಡುತ್ತವಾದರೂ, ಆನಂತರವೂ ಡೇಟಾ ಉಳಿಸಿಕೊಳ್ಳಲು ಮತ್ತು ಕಾನೂನು ಜಾರಿ ಸಂಸ್ಥೆಗಳ ತನಿಖೆಗಳನ್ನು ಬೆಂಬಲಿಸಲು ನಮಗೆ ಸಾಧ್ಯವಾಗುತ್ತದೆ. ಉದಾಹರಣೆಗೆ, ಕಾನೂನುಬಾಹಿರ ನಡವಳಿಕೆಯನ್ನು ಒಳಗೊಂಡ ಕಂಟೆಂಟ್ ಅನ್ನು ನಾವು ತೆಗೆದುಹಾಕಿದಾಗ, ಅದನ್ನು ನಾವು ವಿಸ್ತರಿತ ಅವಧಿಯವರೆಗೆ ಉಳಿಸಿಕೊಳ್ಳುತ್ತೇವೆ.

    • ವರದಿ ಮಾಡುವಿಕೆ ನಿಜಕ್ಕೂ ಮುಖ್ಯವಾಗಿದೆ - ಕಳವಳಕಾರಿ ಕಂಟೆಂಟ್ ಅನ್ನು ತ್ವರಿತವಾಗಿ ವಿಮರ್ಶಿಸಲು ಅದು ನಮಗೆ ಅನುವು ಮಾಡಿಕೊಡುತ್ತದೆ. ಅದು ನಮ್ಮ ನೀತಿಗಳನ್ನು ಉಲ್ಲಂಘಿಸುತ್ತದೆ ಎಂದು ನಮಗೆ ಕಂಡುಬಂದರೆ, ನಾವು ಅದನ್ನು ತೆಗೆದುಹಾಕುತ್ತೇವೆ. ನಮಗೆ ಒಂದು ವರದಿ ಕಳುಹಿಸಲು ನೀವು Snapchat ಅಕೌಂಟ್ ಹೊಂದಿರಬೇಕಾಗಿಲ್ಲ — ಪೋಷಕರು ಸೇರಿದಂತೆ ಯಾರಾದರೂ ಬಳಸಬಹುದಾದ ಆನ್‌ಲೈನ್ ಟೂಲ್ಸ್ ಅನ್ನು ನಾವು ಒದಗಿಸುತ್ತೇವೆ. 

    • ಒಬ್ಬದ ಜೀವಕ್ಕೆ ಅಪಾಯ ಉಂಟಾಗಬಹುದಾದ ಸನ್ನಿವೇಶದಲ್ಲಿ, ಕಾನೂನು ಜಾರಿ ಸಂಸ್ಥೆಗೆ ನಾವು ಪೂರ್ವಭಾವಿಯಾಗಿ ಘಟನೆಯ ವರದಿ ಮಾಡುತ್ತೇವೆ.  

  • ಪೋಷಕರಿಗಾಗಿ ಟೂಲ್‌ಗಳು ಮತ್ತು ಸಂಪನ್ಮೂಲಗಳು. ನೈಜ-ಜಗತ್ತಿನ ಮಾನವರ ನಡವಳಿಕೆಗಳನ್ನು ಬೆಂಬಲಿಸಲು Snapchat ಅನ್ನು ವಿನ್ಯಾಸಗೊಳಿಸಿರುವ ರೀತಿಯಲ್ಲೇ, ನೈಜ ಬದುಕಿನಲ್ಲಿ ಸುರಕ್ಷತೆಯ ಕುರಿತು ಪೋಷಕರು ಸಂಭಾಷಣೆಗಳನ್ನು ನಡೆಸುವ ರೀತಿಯನ್ನು ಬಿಂಬಿಸಲು ನಾವು ನಿರ್ಮಿಸಿರುವ ಆ್ಯಪ್‌ನಲ್ಲಿನ ಟೂಲ್‌ಗಳನ್ನು ನಾವು ಒದಗಿಸುತ್ತೇವೆ. ನಮ್ಮ ಕೌಟುಂಬಿಕ ಕೇಂದ್ರವು ಕೆಳಗಿನವುಗಳಿಗಾಗಿ ಪೋಷಕರಿಗೆ ಅನುವು ಮಾಡಿಕೊಡುತ್ತದೆ:

    • ತಮ್ಮ ಹದಿಹರೆಯದ ಮಕ್ಕಳು ಯಾರೊಂದಿಗೆ ಸ್ನೇಹಿತರಾಗಿದ್ದಾರೆ ಮತ್ತು ಅವರು ಎಷ್ಟು ಆಗಾಗಾಗ ಮಾತನಾಡುತ್ತಾರೆ ಎಂದು ನೋಡಲು, ಆದರೆ ಅವರ ಸಂಭಾಷಣೆಗಳ ನೈಜ ಸಂದೇಶಗಳನ್ನು ನೋಡಲು ಅವಕಾಶ ನೀಡುವುದಿಲ್ಲ.

    • ಅವರು ಚಿಂತಿತರಾಗಿರಬಹುದಾದ ಇನ್ನೊಬ್ಬ Snapchatter ಕುರಿತು, ಈ ಟೂಲ್‌ಗಳ ಮೂಲಕ ನೇರವಾಗಿ ವರದಿ ಮಾಡಲು.

    • ಅವರ ಹದಿಹರೆಯದ ಮಕ್ಕಳ ಗೌಪ್ಯತೆ ಮತ್ತು ಸುರಕ್ಷತಾ ಸೆಟ್ಟಿಂಗ್‌ಗಳನ್ನು ನೋಡಲು. 


ಈಗ ನಾವೆಲ್ಲರೂ ನಮ್ಮ ಬದುಕಿನ ಗಮನಾರ್ಹ ಭಾಗವನ್ನು ಆನ್‌ಲೈನ್‌ನಲ್ಲಿ ಕಳೆಯುತ್ತಿದ್ದೇವೆ ಮತ್ತು ಆನ್‌ಲೈನ್ ಬೆದರಿಕೆಗಳ ಕುರಿತು ತಿಳಿದುಕೊಳ್ಳಲು ಮತ್ತು ಅವುಗಳನ್ನು ಎದುರಿಸಲು ಸಜ್ಜಾಗಿರುವ ಭಾವನೆಯನ್ನು ಹೊಂದಲು ಹದಿಹರೆಯದವರು ಮತ್ತು ಪೋಷಕರು ಇಬ್ಬರಿಗೂ ಸಹಾಯ ಮಾಡಲು ನಾವು ಬಯಸುತ್ತೇವೆ. ಇಲ್ಲಿ ನಮ್ಮ ಕೆಲಸ ಎಂದಿಗೂ ಮುಗಿಯದಂಥದ್ದು ಮತ್ತು ನಮ್ಮ ರಕ್ಷಣೆಗಳು, ಟೂಲ್‌ಗಳು ಮತ್ತು ಸಂಪನ್ಮೂಲಗಳ ಕುರಿತು ನಮಗೆ ನಿರಂತರ ಮಾಹಿತಿ ನೀಡುವ ಹಲವಾರು ತಜ್ಞರು, ಸುರಕ್ಷತಾ ಗುಂಪುಗಳು ಮತ್ತು ಪೋಷಕರಿಗೆ ನಾವು ಆಭಾರಿಯಾಗಿದ್ದೇವೆ.

ಸುದ್ದಿಗೆ ಹಿಂತಿರುಗಿ