ನೀವು ಪೋಷಕರಾ? Snapchatter ಗಳನ್ನು ಸುರಕ್ಷಿತವಾಗಿ ಇರಿಸಲು ಸಹಾಯ ಮಾಡುವುದಕ್ಕೆ ನಾವು ಏನು ಮಾಡುತ್ತಿದ್ದೇವೆ ಎನ್ನುವ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

ಸುರಕ್ಷಿತವಾಗಿ Snap ಮಾಡಿ

Snapchat ನಲ್ಲಿ ನಾವು ಹದಿಹರೆಯದವರನ್ನು ಸುರಕ್ಷಿತವಾಗಿ ಇರಿಸಲು ಹೇಗೆ ಕೆಲಸ ಮಾಡುತ್ತಿದ್ದೇವೆ ಎನ್ನುವುದನ್ನು ನೋಡಿ.

ಮೊದಲ ದಿನದಿಂದಲೇ ಗೌಪ್ಯತೆ ಮತ್ತು ಸುರಕ್ಷತೆಯನ್ನು ನಿರ್ಮಿಸಲಾಗಿದೆ.

ಕ್ಯಾಮೆರಾ ತೆರೆಯುತ್ತದೆ, ವಿಷಯದ ಫೀಡ್‌ ಅಲ್ಲ.

Snapchat, ಸಾಂಪ್ರದಾಯಿಕ ಸಾಮಾಜಿಕ ಮಾಧ್ಯಮಗಳಿಗೆ ಪರ್ಯಾಯವಾಗಿದ್ದು—ನಿಮ್ಮ ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ವಿಶ್ವದೊಂದಿಗೆ ನಿಮ್ಮ ಸಂಬಂಧವನ್ನು ವರ್ಧಿಸಲು ಸಹಾಯ ಮಾಡುವ ದೃಶ್ಯ ಸಂದೇಶ ಆ್ಯಪ್ ಆಗಿದೆ. ಆದ ಕಾರಣ Snapchat ನೇರವಾಗಿ ಕ್ಯಾಮೆರಾ ತೆರೆಯುತ್ತದೆ, ವಿಷಯದ ಫೀಡ್ ಅಲ್ಲ ಹಾಗೂ ನಿಜ ಬದುಕಿನಲ್ಲಿ ಈಗಾಗಲೇ ಸ್ನೇಹಿತರಾಗಿರುವ ಜನರೊಂದಿಗೆ ಸಂಪರ್ಕ ಹೊಂದಲು ಗಮನ ಕೇಂದ್ರೀಕರಿಸುತ್ತದೆ. ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳುವ ಅಥವಾ ಲೈಕ್‌ಗಳಿಗಾಗಿ ಸ್ಪರ್ಧಿಸುವ ಒತ್ತಡವಿಲ್ಲದೆ ನಿಮ್ಮನ್ನು ಅಭಿವ್ಯಕ್ತಪಡಿಸಲು ಮತ್ತು ಸ್ನೇಹಿತರೊಂದಿಗೆ ವಿನೋದಿಸಲು, Snapchat ನಿಮಗೆ ಅವಕಾಶ ಕಲ್ಪಿಸುತ್ತದೆ.

ನೈಜ ಬದುಕನ್ನು ಬಿಂಬಿಸುವ ಸಂವಹನ

ಸಂದೇಶಗಳು ಪೂರ್ವನಿಯೋಜಿತವಾಗಿ ಅಳಿಸಲ್ಪಡುವುದರಿಂದ, ಸ್ನೇಹಿತರೊಂದಿಗೆ ನೀವು ಮುಖಾಮುಖಿ ಅಥವಾ ಫೋನ್‌ನಲ್ಲಿ ಸಾಮಾನ್ಯವಾಗಿ ಹೇಗೆ ಸಂವಹನ ನಡೆಸುತ್ತೀರಿ ಎನ್ನುವುದನ್ನು Snapchat ಬಿಂಬಿಸುತ್ತದೆ.

ನಿಮಗಾಗಿ ಸುರಕ್ಷತಾ ಕ್ರಮಗಳು ಮತ್ತು ರಕ್ಷಣೆಗಳು

ಎಲ್ಲರಿಗೂ Snapchat ಸುರಕ್ಷಿತವಾಗಿರಬೇಕು ಎಂದು ನಾವು ಬಯಸುತ್ತೇವೆ. ಯುವ ಜನರಿಗೆ ನಾವು ಹೆಚ್ಚುವರಿ ರಕ್ಷಣೆಗಳನ್ನು ಒದಗಿಸುತ್ತೇವೆ ಮತ್ತು ಪರಿಶೀಲಿಸದ ವಿಷಯ ವೈರಲ್ ಆಗಲು ಬಿಡುವುದಿಲ್ಲ.

ನಮ್ಮ ಮೌಲ್ಯಗಳೊಂದಿಗೆ

ಮುನ್ನಡೆಯುವುದು

ಮೊದಲ ದಿನದಿಂದಲೂ, ನಮ್ಮ ಸಮುದಾಯದ ಗೌಪ್ಯತೆ, ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಿದ ಉತ್ಪನ್ನಗಳನ್ನು ನಾವು ನಿರ್ಮಿಸಿದ್ದೇವೆ.

Policy Center

We created rules and policies that explain the rights and responsibilities of all members of our community.

ಗೌಪ್ಯತೆ ಕೇಂದ್ರ

ನಿಮ್ಮ ನೈಜ ಬದುಕಿನ ಸಂಬಂಧಗಳಲ್ಲಿ ಗೌಪ್ಯತೆಯನ್ನು Snapchat ಬಿಂಬಿಸುತ್ತದೆ. ನಿಮ್ಮ ಗೌಪ್ಯತೆಯ ತತ್ವಗಳನ್ನು ಕ್ರಿಯೆಯಲ್ಲಿ ನೋಡಿ.

ಸುರಕ್ಷತಾ ಕೇಂದ್ರ

ನಮ್ಮ ನೀತಿಗಳು ಮತ್ತು ಆ್ಯಪ್‌ನಲ್ಲಿನ ಸುರಕ್ಷತಾ ವೈಶಿಷ್ಟ್ಯಗಳು Snapchatter ಗಳು ತಮ್ಮನ್ನು ಅಭಿವ್ಯಕ್ತಪಡಿಸಲು ಮತ್ತು ತಮಗೆ ನಿಜ ಜೀವನದಲ್ಲಿ ಪರಿಚಿತರಾಗಿರುವ ಜನರೊಂದಿಗೆ ಸುರಕ್ಷಿತವಾಗಿ ಸಂಪರ್ಕಗೊಳ್ಳಲು ಸಹಾಯ ಮಾಡುತ್ತವೆ.

Transparency Reports

We are committed to being transparent about what we’re doing to keep Snapchatters safer while respecting their privacy.

ಇತ್ತೀಚಿನ ಸುದ್ದಿ